ಸೋಶಿಯಲ್ ಮೀಡಿಯಾ ತಾರೆ ಸೋನು ಶ್ರೀನಿವಾಸ್ ಗೌಡ ತಮ್ಮ ಸಾಕುನಾಯಿಗಳಾದ ಕಿಯಾ ಮತ್ತು ಬ್ರೀಜುಗಳಿಗೆ ಮರಿ ಮಾಡಿಸುವ ಆಸೆ ವ್ಯಕ್ತಪಡಿಸಿದ್ದಾರೆ. ನಾಯಿಗಳ ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ೨೦೨೪ ಕೆಟ್ಟ ವರ್ಷವಾಗಿದ್ದು, ೨೦೨೫ ಉತ್ತಮವಾಗಿರಲಿ ಎಂದು ಆಶಿಸಿದ್ದಾರೆ. ನಾಯಿಗಳೆಂದರೆ ತುಂಬಾ ಪ್ರೀತಿ ಎಂದೂ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಓಟಿಟಿ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಹೊಸ ವರ್ಷವನ್ನು ಸಖತ್ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಹೊಸ ವರ್ಷ ಅಂದ್ಮೇಲೆ ಎಲ್ಲರಿಗೂ ಒಂದೊಂದು ರೆಸಲ್ಯೂಷನ್ ಇರುತ್ತದೆ ಆದರೆ ಸೋನು ಹೇಳಿಕೊಂಡಿರುವ ಆಸೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಏನೋ ಹಣ, ಫಾಲೋವರ್ಸ್ ಚಿನ್ನ ಕೇಳುತ್ತಾರೆ ಅಂದುಕೊಂಡರೆ ಈ ವಮ್ಮ ನಾಯಿ ಬಗ್ಗೆ ಮಾತನಾಡಿದೆ ಎಂದು ಶಾಕ್ ಆಗಿದ್ದಾರೆ. 

ಹೌದು! shih tzu ಜಾತಿಗೆ ಸೇರಿರುವ ಎರಡು ನಾಯಿಗಳನ್ನು ಸೋನು ಮನೆಯಲ್ಲಿ ಸಾಕುತ್ತಿದ್ದಾರೆ. ಒಂದಕ್ಕೆ ಕಿಯಾ ಮತ್ತೊಂದಕ್ಕೆ ಬ್ರೀಜು ಎಂದು ಹೆಸರಿಟ್ಟಿದ್ದಾರೆ. ಸೋನು ಯೂಟ್ಯೂಬ್ ವಿಡಿಯೋ ಮಾಡುವಾಗ ಆಗಾಗ ಬಂದು ತೊಂದರೆ ಕೊಡುವುದನ್ನು ನೋಡಬಹುದು. ಹೊಸ ವರ್ಷದ ದಿನವೂ ಈ ಪುಟ್ಟ ನಾಯಿಗಳ ಜೊತೆ ವಿಡಿಯೋ ಮಾಡಿದ್ದಾರೆ ಅಲ್ಲದೆ ತಮ್ಮ ಆಸೆ ವ್ಯಕ್ತ ಪಡಿಸಿಕೊಂಡಿದ್ದಾರೆ. 'ನಾಯಿಗಳು ಹೆಚ್ಚು ದಿನ ಬದುಕಬೇಕು ಹಾಗೂ ಅವರ ಮನಸ್ಸಿಗೆ ನೋವು ಮಾಡಬಾರದು ಅಂದರೆ ಕ್ರಾಸಿಂಗ್ ಮಾಡಿಸಬೇಕು ಎಂದು ಡಾಕ್ಟರ್ ಹೇಳಿದ್ದಾರೆ. ಹಲವು ನನಗೆ ಮೆಸೇಜ್ ಮಾಡಿ ನಿಮ್ಮ ನಾಯಿಗಳನ್ನು ನಮಗೆ ಕೊಡಿ ಮರಿ ಮಾಡಿಸಿ ಕೊಡುತ್ತೀವಿ ಎನ್ನುತ್ತಿದ್ದರು. ಆಗ ನಾನು ರಿಯಾಕ್ಟ್ ಮಾಡದೆ ಹೇಗೋ ಏನೋ ಅಂದುಕೊಂಡು ಸುಮ್ಮನೆ ಇದ್ದೆ ಆದರೆ ಈಗ ಮಾಡಿಸಲು ಪ್ಲ್ಯಾನ್ ಮಾಡುತ್ತಿದ್ದೀನಿ' ಎಂದು ಸೋನು ಮಾತನಾಡಿದ್ದಾರೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಅನುಷಾ ರೈ; ಪಾರ್ಟಿ ಮಾಡಿಲ್ಲ ಅನ್ನೋದೇ ಖುಷಿ ಎಂದ ನೆಟ್ಟಿಗರು

'ಜನರಿಗೆ ಆಶ್ಚರ್ಯ ಅನಿಸಬಹುದು ಇದೇನಪ್ಪ ಕ್ರಾಸಿಂಗ್ ಮಾಡಿಸುವುದೇ ದೊಡ್ಡದು ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾಳೆ ಎಂದು ಆದರೆ ನನಗೆ ಇವರಿಬ್ಬರ ಮೇಲೆ ತುಂಬಾ ಪ್ರೀತಿ ಇದೆ. ಈ ನಾಯಿಗಳಿಂದ ನಿನ್ನ ಜೀವನ ಹಾಳಾಗುತ್ತದೆ ಎಂದು ನನ್ನ ಅಮ್ಮ ಸದಾ ಬೈಯುತ್ತಾರೆ. ಆದರೆ ನನಗೆ ಇವರು ಖುಷಿ ಕೊಡುತ್ತಾರೆ ನನಗೆ ನಾಯಿಗಳ ವಾಸನೆ ತುಂಬಾ ಇಷ್ಟ' ಎಂದು ಸೋನು ಹೇಳಿದ್ದಾಳೆ. 2024 ನನ್ನ ಜೀವನದ ಅತಿ ಕೆಟ್ಟ ವರ್ಷ ನಾನು ಅಂದುಕೊಂಡಿದ್ದು ಏನೋ ಮಾಡಿಲ್ಲ ಹೀಗಾಗಿ 2025ರಲ್ಲಿ ಜೀವನ ಚೆನ್ನಾಗಿ ಇರದೆ ಎಂದು ವಿಶ್ ಮಾಡುತ್ತೀನಿ ಎಂದಿದ್ದಾರೆ ಸೋನು. 

ಒಂಟಿಯಾಗಿ ಬಾಲಿಗೆ ಹೊರಟ ಅನುಪಮಾ; ಫೋಟೋ ತೆಗೆದಿದ್ದು ಯಾರು ಅಂತಿದ್ದಾರೆ ಫ್ಯಾನ್ಸ್‌