ಬಿಗ್ ಬಾಸ್ ಕನ್ನಡ ಸೀಸನ್ 8ರ ರನ್ನರ್ ಅಪ್ ಅರವಿಂದ್ ಕೆ.ಪಿ ಮತ್ತು ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಿವ್ಯಾ ಉರುಡುಗ ತೆಗೆದ ಫೋಟೋವನ್ನು ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಭವ್ಯ ಗೌಡ ಅವರ ಅನುಪಸ್ಥಿತಿಯ ಬಗ್ಗೆ ಕಮೆಂಟ್ ಮಾಡಿದ್ದಾರೆ. ತ್ರಿವಿಕ್ರಮ್ ಮುದ್ದು ಸೊಸೆ ಸೀರಿಯಲ್‌ನಲ್ಲಿ ನಟಿಸಲಿದ್ದಾರೆ ಮತ್ತು ಅರವಿಂದ್ ಕೆ.ಪಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಬಿಗ್ ಬಾಸ್ ಕನ್ನಡ (Bigg Boss Kannada ) ದ ಇಬ್ಬರು ರನ್ನರ್ ಅಪ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ರನ್ನರ್ ಅಪ್ ಅರವಿಂದ್ ಕೆಪಿ (Bigg Boss Kannada Season 8 Runner Up Arvind KP) ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ (Bigg Boss Kannada Season 11 Runner Up Trivikram) ಒಟ್ಟಿಗೆ ಫೋಟೋಕ್ಕೆ ಫೋಸ್ ನೀಡಿದ್ದಾರೆ. ತ್ರಿವಿಕ್ರಮ್ ಹಾಗೂ ಅರವಿಂದ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. 8 -11 ರ ಸೀಸನ್ ನಲ್ಲಿ ಯಾವುದೂ ಬದಲಾಗಿಲ್ಲ ಎಂದು ಶೀರ್ಷಿಕೆ ಹಾಕಲಾಗಿದೆ. ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಈ ಫೋಟೋ ಕ್ಲಿಕ್ಕಿಸಲಾಗಿದೆ. ಈ ಫೋಟೋವನ್ನು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ದಿವ್ಯಾ ಉರುಡುಗ ತೆಗೆದಿದ್ದಾರೆ. ಇನ್ಸ್ಟಾ ಶೀರ್ಷಿಕೆ ಕೆಳಗೆ ಪಿಸಿ ದಿವ್ಯಾ ಉರುಡುಗ ಅಂತ ಬರೆಯಲಾಗಿದೆ.
ಇನ್ಸ್ಟಾಗ್ರಾಮ್ ಈ ಫೋಟೋ ನೋಡಿದ ಫ್ಯಾನ್ಸ್, ಇಬ್ಬರು ರಾಜರು, ಆದ್ರೆ ರಾಣಿಯರು ಮಿಸ್ ಆಗಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ದಿವ್ಯ ಹಾಗೂ ಭವ್ಯ ಫ್ರೇಮ್ ಗೆ ಬಂದಿದ್ರೆ ಚೆನ್ನಾಗಿತ್ತು ಅನ್ನೋದೇ ಬಳಕೆದಾರರ ಅಭಿಪ್ರಾಯ. ಬಹುತೇಕರು, ಭವ್ಯ – ದಿವ್ಯ ಇಲ್ಲದೆ ಫೋಟೋ ಕಂಪ್ಲೀಟ್ ಆಗೋದಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ತ್ರಿವಿಕ್ರಮ್ ಹಾಗೂ ಅರವಿಂದ್ ಅವರನ್ನು ಒಟ್ಟಿಗೆ ನೋಡಿದ ಫ್ಯಾನ್ಸ್, ಇಬ್ಬರು ರಿಯಲ್ ವಿನ್ನರ್ ಅಂದಿದ್ದಾರೆ.
ಕಿರೀಟ ಧರಿಸಿ ಆತ ಬರಬಾರದೆ ಎಂದ ನಿವೇದಿತಾ! ನಟಿಯ ಜೀವನದಲ್ಲಿ 'ರಾಜಕುಮಾರ' ಎಂಟ್ರಿ? ವಿಡಿಯೋ ಇಲ್ಲಿದೆ...
ಈಗಷ್ಟೇ ಬಿಗ್ ಬಾಸ್ ಸೀಸನ್ 11 ಮುಗಿಸಿ ಸುದ್ದಿಯಲ್ಲಿರೋರು ತ್ರಿವಿಕ್ರಮ್. ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಅವರಿಗೆ ಸಾಕಷ್ಟು ಪ್ರೀತಿ ಅಭಿಮಾನಿಗಳಿಂದ ಸಿಗ್ತಿದೆ. ಹಾಗೆಯೇ ಒಂದಾದ್ಮೇಲೆ ಒಂದು ಆಫರ್ ಬರ್ತಿದೆ. ತ್ರಿವಿಕ್ರಮ್ ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಬ್ಯುಸಿಯಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಮುದ್ದು ಸೊಸೆ ಸೀರಿಯಲ್ ನಲ್ಲಿ ತ್ರಿವಿಕ್ರಮ್ ಕಾಣಿಸಿಕೊಳ್ಳಲಿದ್ದಾರೆ. ಅದ್ರ ಪ್ರೋಮೋ ಶೂಟ್ ವಿಡಿಯೋವನ್ನು ತ್ರಿವಿಕ್ರಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಕರ್ನಾಟಕ ಬುಲ್ಡೋಜರ್ಸ್ ನಲ್ಲಿ ಆಡ್ತಿರುವ ತ್ರಿವಿಕ್ರಮ್, ಕ್ರಿಕೆಟ್ ನಲ್ಲೂ ತಾವು ಕಮ್ಮಿ ಇಲ್ಲ ಎಂಬುದನ್ನು ತೋರಿಸ್ತಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ತಿರುವ ತ್ರಿವಿಕ್ರಮ್ ಜೊತೆ ಎಲ್ಲೂ ಭವ್ಯ ಗೌಡ ಕಾಣಿಸಿಕೊಳ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಭವ್ಯ ಗೌಡ ಜೊತೆಯೇ ಇದ್ದು, ಸೂಪರ್ ಜೋಡಿ ಪಟ್ಟಿಗೆ ಸೇರಿದ್ದರು ತ್ರಿವಿಕ್ರಮ್ – ಭವ್ಯ. ಆದ್ರೆ ಈಗ ಎಲ್ಲ ಕಡೆ ಭವ್ಯ ಮಿಸ್ ಆಗಿರೋದು ಫ್ಯಾನ್ಸ್ ಗೆ ಸ್ವಲ್ಪ ಬೇಸರ ತರಿಸಿದೆ.
ಬೆಡ್ ಶೇರ್ ಮಾಡಿದ್ರೆ ಚಾನ್ಸ್ ಕೊಡ್ತಾರಂತೆ! ಕರಾಳ ಸತ್ಯ ಬಿಚ್ಚಿಟ್ಟ ನಟಿ
ಇತ್ತ ಬಿಗ್ ಬಾಸ್ 8ರ ರನ್ನರ್ ಅಪ್ ಆಗಿರುವ ಅರವಿಂದ ಕೆಪಿ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆ ಇದೆ. ನಟ ಡಾಲಿ ಧನಂಜಯ ಮದುವೆಗೆ ಬಂದಿದ್ದ ಅರವಿಂದ್ ಕೆಪಿ, ದಿವ್ಯಾ ಉರುಡುಗ ಜೊತೆ ಮದುವೆ ಯಾವಾಗ ಎಂಬ ಪ್ರಶ್ನೆಗೆ ನಗ್ತಾನೆ, ಶೀಘ್ರ ಎಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಹಾಗೂ ಅರವಿಂದ್ ಪ್ರೀತಿ ಚಿಗುರಿತ್ತು. ಮನೆಯಿಂದ ಹೊರಗೆ ಬಂದ್ಮೇಲೂ ಇಬ್ಬರು ಒಟ್ಟಿಗಿದ್ದಾರೆ. ದೀರ್ಘಕಾಲದಿಂದ ಪ್ರೀತಿ ಸಂಬಂಧದಲ್ಲಿರುವ ಅವರು ಮದುವೆ ಯಾವಾಗಾಗ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಇದ್ದೇ ಇದೆ. ದಿವ್ಯಾ ಉರುಡುಗ ಪ್ರತಿಯೊಂದು ಕೆಲಸಕ್ಕೆ ಅರವಿಂದ್ ಬೆಂಬಲವಾಗಿ ನಿಂತಿದ್ದಾರೆ. ಅರವಿಂದ್ ಜೊತೆ ದಿವ್ಯಾ ನಿಂತಿದ್ದು, ಸ್ಯಾಂಡಲ್ವುಡ್ ಪರ್ಫೆಕ್ಟ್ ಜೋಡಿ ಪಟ್ಟ ಈಗಾಗಲೇ ಇವರಿಗೆ ಸಿಕ್ಕಿದೆ. ದಿವ್ಯಾ ಉರುಡುಗ ಸೀರಿಯಲ್ ನಲ್ಲಿ ಬ್ಯುಸಿಯಿದ್ದಾರೆ.
