ಚಂದನ್ ಶೆಟ್ಟಿಯಿಂದ ವಿಚ್ಛೇದನದ ನಂತರ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಅವರ ಹಾಟ್ ರೀಲ್ಸ್‌ಗಳಿಗೆ ಟೀಕೆಗಳು ಬರುತ್ತಿದ್ದರೂ, ವೀಕ್ಷಣೆ ಹೆಚ್ಚಾಗುತ್ತಿದೆ. ಹೊಸ ರೀಲ್ಸ್‌ನಲ್ಲಿ, ಗೆಳೆಯನೊಬ್ಬ ತನ್ನನ್ನು ಎತ್ತರಕ್ಕೆ ಏರಿಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಉದ್ದನೆಯ ಉಗುರುಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರ ಬಿಕಿನಿ ಫೋಟೋಶೂಟ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗಾಯಕ ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ಮೇಲೆ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದ ಸೆನ್ಸೇಷನಲ್ ಆಗಿರುವುದು ಗೊತ್ತಿರುವ ವಿಷಯವೇ. ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿರುವ ಬಟ್ಟೆಗಳನ್ನು ಹಾಕುತ್ತಲೇ ಕಮೆಂಟಿಗರಿಗೆ ಉಗಿಯಲು ಸಾಕಷ್ಟು ಅವಕಾಶ ಕಲ್ಪಿಸುತ್ತಿದ್ದಾರೆ. ತಮ್ಮ ಡಿಕ್ಷನರಿಯಲ್ಲಿ ಇದ್ದ ಬೈಗುಳಗಳನ್ನೆಲ್ಲಾ ಕಮೆಂಟ್ ಬಾಕ್ಸ್ನಲ್ಲಿ ತುಂಬುತ್ತಲೇ, ಈಕೆಯ ವಿಡಿಯೋ ಮಾತ್ರ ನೋಡಲು ಬಿಡುವುದಿಲ್ಲ ಒಂದಿಷ್ಟು ಕಮೆಂಟಿಗ ಅಭಿಮಾನಿಗಳು. ಅದೇ ನಿವೇದಿತಾಗೆ ವರದಾನ. ಆಕೆಗೂ ಗೊತ್ತು, ಎಷ್ಟು ಹಾಟ್ ಆಗಿ ರೀಲ್ಸ್ ಮಾಡುತ್ತೇನೋ, ಅಷ್ಟು ಬೈಯುತ್ತಲೇ ತಮ್ಮ ವಿಡಿಯೋ, ರೀಲ್ಸ್ ನೋಡುತ್ತಾರೆ ಎನ್ನುವುದು. ಹಾಟ್ ಆದಷ್ಟೂ ವ್ಯೂಸ್ ಜಾಸ್ತಿಯಾಗುತ್ತದೆ ಎನ್ನುವುದು ಇಂಥ ಹಲವು ನಟಿಯರು ಇದಾಗಲೇ ಅರಿತುಕೊಂಡಿದ್ದಾರೆ. ಏಕೆಂದರೆ, ಸಭ್ಯತೆ, ಸಂಸ್ಕೃತಿ, ಸನ್ನಡತೆ... ಹೀಗೆ ಕಮೆಂಟ್ಗಳಲ್ಲಿ ಭಾಷಣ ಬಿಗಿಯುವ ಕಮೆಂಟಿಗರು ಯಾವುದೇ ಸಭ್ಯತೆಯ ರೀಲ್ಸ್ಗಳನ್ನು, ಉತ್ತಮ ಸಂದೇಶ ನೀಡುವ ವಿಷಯಗಳನ್ನು ವೀಕ್ಷಿಸುವುದು ಎಷ್ಟು ಎಂದು ಅವರಿಗೇ ಗೊತ್ತು.
ಇಂತಿಪ್ಪ ನಿವೇದಿತಾ ಇದೀಗ ಹೊಸದೊಂದು ರೀಲ್ಸ್ ಮಾಡಿದ್ದಾರೆ. ಆದರೆ ಅದಕ್ಕೆ ಅವರು ನೀಡಿರುವ ಶೀರ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ. ನನ್ನ ಆತ್ಮೀಯ ಗೆಳೆಯ ಎಷ್ಟೊಂದು ಎತ್ತರಕ್ಕೆ ಏರಿಸಿದನೆಂದರೆ, ಈಗ ನಾನು ಒಬ್ಬ ವ್ಯಕ್ತಿ ಸಿಂಹಾಸನ, ಕಿರೀಟ ಮತ್ತು ಅದಕ್ಕೆ ಹೊಂದಿಕೆಯಾಗುವ ಇಡೀ ರಾಜ್ಯವನ್ನು ಧರಿಸಿಕೊಂಡು ಬರಬೇಕೆಂದು ನಿರೀಕ್ಷಿಸುತ್ತೇನೆ ಎಂದಿದ್ದಾರೆ. ಈ ಮಾತಿನ ಅರ್ಥ ತಿಳಿಯದೇ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ನಿವೇದಿತಾ ಜೀವನದಲ್ಲಿ ಮತ್ತ್ಯಾರದೋ ಎಂಟ್ರಿ ಆಗಿದೆ ಎಂದು ಅಭಿಮಾನಿಗಳು ಊಹೆ ಮಾಡಿಕೊಳ್ಳುತ್ತಿದ್ದಾರೆ. ಚಂದನ್ ಶೆಟ್ಟಿ ಬಚಾವಾದ, ಈಗ ಇನ್ನಾವ ಬಕರಾ ಬರುತ್ತಾನೋ ಎಂದು ಕೆಲವರು ಅತೀ ಎನ್ನಿಸುವಂಥ ಕಮೆಂಟ್ ಕೂಡ ಮಾಡುತ್ತಿದ್ದಾರೆ.
ಶೆಡ್ಗೆ ಬರಬೇಕಿಲ್ಲ.. ಇಲ್ಲೇ ಫಿನಿಷ್! ಕೆಟ್ಟ ಕಮೆಂಟ್ ಮಾಡೋರಿಗೆ ನಿವೇದಿತಾ ಕೊಟ್ರಾ ಎಚ್ಚರಿಕೆ- ಹಾಗಂತ ಬಿಡ್ತಾರಾ?
ಇದೀಗ ನಿವೇದಿತಾ ಅವರು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದುದ್ದ ಉಗುರು ಬಿಟ್ಟುಕೊಂಡು ಅದನ್ನೇ ಫೋರ್ಕ್ ಮಾಡಿಕೊಂಡು ಮುದ್ದೆಯನ್ನೂ ತಿಂದಿರುವ ನಿವೇದಿತಾ, ಈಗ ಅಲ್ಲಿರುವ ಗಂಡಸರಿಗೆ ಓಪನ್ ಚಾಲೆಂಜ್ ಮಾಡಿ ಸದ್ದು ಮಾಡುತ್ತಿದ್ದರು. ಇಷ್ಟು ಉದ್ದದ ಉಗುರನ್ನು ಯಾಕೆ ಬಿಟ್ಟುಕೊಂಡಿರುವುದು ಎಂದು ಪ್ರಶ್ನಿಸಿದಾಗ, ನೀವು ಹತ್ತಿರ ಬಂದರೆ ಹೀಗೆ ಚುಚ್ಚೋಣ ಎಂದು ಸೆಲ್ಫ್ ಡಿಫೆನ್ಸ್ ಎಂದು ಉದ್ದ ಬಿಟ್ಟುಕೊಂಡಿದ್ದೇನೆ ಎಂದಿದ್ದರು. ಇಷ್ಟು ಉದ್ದದ ಉಗುರು ಬಿಟ್ಟು ಈಗ ರಾಜಕುಮಾರನ ಬರುವಿಕೆಗೆ ನಟಿ ಕಾಯ್ತಿದ್ದಾಳೆ ಎನ್ನುತ್ತಿದ್ದಾರೆ ಫ್ಯಾನ್ಸ್
ನಿವೇದಿತಾ ಗೌಡ, ಈಗ ಎಲ್ಲಾ ಹಂತವನ್ನೂ ಮೀರಿ ಹೋಗಿದ್ದಾರೆ ಎಂದು ಇಲ್ಲಿಯವರೆಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗೊಂಬೆಯಂತೆ ಮುದ್ದುಮುದ್ದಾಗಿ, ಡಿಸೆಂಟ್ ಆಗಿದ್ದ ನಿವ್ವಿ ಇದ್ಯಾಕೆ ಬಿಕಿನಿ ಮಟ್ಟಿಗೆ ಇಳಿದಳು ಎಂದು ಕೇಳುವವರೇ ಎಲ್ಲಾ. ಕೆಲ ದಿನಗಳಿಂದ ಬಿಕಿನಿಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿಕೊಳ್ತಿರೋ ನಿವೇದಿತಾ, ಇದೀಗ ಮಂಚದ ಮೇಲೇರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ! ಇದನ್ನು ನೋಡಿದ ನೆಟ್ಟಿಗರು, ಫೋಟೋಶೂಟ್ ಮಾಡಿದ ಪುಣ್ಯಾತ್ಮ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ! ಹೋದಲ್ಲಿ, ಬಂದಲ್ಲಿ ಬಿಕಿನಿ ಫೋಟೋಶೂಟ್ ಮಾಡಿಸಿಕೊಳ್ಳಲು ಯಾವ ಫೋಟೋಗ್ರಾಫರ್ ಅನ್ನು ಅಪಾಯಿಂಟ್ ಮಾಡಿಕೊಂಡಿದ್ದಿ ಎಂದು ಕೇಳ್ತಿರೋ ನೆಟ್ಟಿಗರು, ಮಂಚದ ಫೋಟೋಶೂಟ್ ಸಮಯದಲ್ಲಿ ಮುಂದೆ ಇರೋದು ಯಾರು ಎಂದೆಲ್ಲಾ ಪ್ರಶ್ನಿಸಿದ್ದರು. ಆದರೆ ಈಗ ಶಾಕ್ ಆಗಿದೆ. ನಾಳೆ ಮತ್ತೆ ಇನ್ನೇನೋ ಎನ್ನುವ ಚಿಂತೆಯೂ ಕಾಡುತ್ತಿದೆ ಅಭಿಮಾನಿಗಳಿಗೆ!
ಅರಗಿಸಿಕೊಳ್ಳಲಾಗದ ಶಾಕ್ ಕೊಟ್ಟ ನಿವೇದಿತಾ! 24 ಗಂಟೆಗಳಲ್ಲಿ ಸುನಾಮಿ ಎಚ್ಚರಿಸಿದ ಕಮೆಂಟಿಗರು- ಅಂಥದ್ದೇನಿದೆ ನೋಡಿ!
