ಸಿನಿಮಾಗಳಲ್ಲಿ ಅವಕಾಶಗಳು ಸಿಗಬೇಕೆಂದರೆ ನಿರ್ದೇಶಕರು, ನಿರ್ಮಾಪಕರು ಹೇಳಿದಂತೆ ಕೇಳಬೇಕೆಂದು ಕೆಲ ನಟಿಯರು ಬಹಿರಂಗವಾಗಿ ಹೇಳುತ್ತಿರುವ ಘಟನೆಗಳನ್ನು ನೋಡಿದ್ದೇವೆ.
ಇತ್ತೀಚೆಗೆ ನಟಿ ಸನಮ್ ಶೆಟ್ಟಿ ಕೂಡ ಇಂತಹದ್ದೇ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತಮ್ಮ ಜೀವನದಲ್ಲಿ ಎದುರಾದ ಕಹಿ ಅನುಭವದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.
ಕೆರಿಯರ್‌ನ ಆರಂಭದಲ್ಲಿ ಕೆಲ ನಿರ್ಮಾಪಕರು ನನಗೆ ಅವಕಾಶ ಕೊಡುವುದಾಗಿ ಹೇಳಿ, ತಮ್ಮೊಂದಿಗೆ ಬೆಡ್ ಶೇರ್ ಮಾಡಿಕೊಳ್ಳುವಂತೆ ತೊಂದರೆ ಕೊಟ್ಟಿದ್ದಾರೆಂದು ಈ ನಟಿ ಹೇಳಿಕೊಂಡಿದ್ದಾರೆ.
ಕೋಲಿವುಡ್‌ನಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿರುತ್ತದೆ ಎಂದು ಹೇಳಿರುವ ಸನಮ್ ಶೆಟ್ಟಿ, ಸಂಭಾವನೆಯ ವಿಷಯದಲ್ಲೂ ಬಹಳ ವ್ಯತ್ಯಾಸವಿರುತ್ತದೆ ಎಂದು ಹೇಳಿದ್ದಾರೆ.
ಇಂಡಸ್ಟ್ರಿಯಲ್ಲಿ ಕೆಲ ನಿರ್ಮಾಪಕರು ಫೋನ್ ಮಾಡಿ ಆಫರ್ ಕೊಡ್ತೀವಿ ಅಂತಾ ಕರೆದು, ನಮ್ಮೊಂದಿಗೆ ಕಳೆದರೆ ಅವಕಾಶ ಕೊಡ್ತೀವಿ ಅನ್ನೋ ರೀತಿ ಮಾತನಾಡುತ್ತಾರೆಂದು ಬಾಂಬ್ ಸಿಡಿಸಿದ್ದಾರೆ.
ಇದರಿಂದ ಈ ನಟಿ ಮಾಡಿದ ಹೇಳಿಕೆಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸನಮ್ ಶೆಟ್ಟಿ ಯಾರನ್ನು ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೋ ಎಂದು ಚರ್ಚೆ ನಡೆಸುತ್ತಿದ್ದಾರೆ.
ಅಂಬುಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ನಂತರ ತಮಿಳಿನಲ್ಲಿ ನಟಿಸಿದ್ದಾರೆ. ಶ್ರೀಮಂತುಡು ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾಗಿದ್ದಾರೆ.
ಫ್ಲಾಪ್ ಚಿತ್ರದ ರುಚಿಯನ್ನೇ ನೋಡಿಲ್ಲ ಈ 10 ನಿರ್ದೇಶಕರು: ರಾಜಮೌಳಿಗೆ 25 ವರ್ಷವಂತೆ
ಹೊಸ ಹೇರ್ ಸ್ಟೈಲ್‌ನಲ್ಲಿ ಮಾಧುರಿ ದೀಕ್ಷಿತ್: ರಾತ್ರಿ ವೇಳೆ ಕಪ್ಪು ಕನ್ನಡಕ ಯಾಕೆ?
ಅತಿ ಹೆಚ್ಚು ಎತ್ತರವಿರುವ ನಟಿಯರು ಯಾರು? ಅವರ ಹೈಟ್ ಎಷ್ಟು ಗೊತ್ತೇ?
Raveena tandon: 21 ವರ್ಷಗಳಿಂದ ಪತಿಯೊಂದಿಗೆ ನೆಲೆಸಿರುವ ಈ ಬಂಗಲೆಯ ಬೆಲೆ ಎಷ್ಟು?