ಗಂಡನೇ ಗುರುವಾಗಿ ಕಲಿಸಿದ ಪಾಠ ಯಶಸ್ವಿ; ಗಿಚ್ಚಿ ಗಿಲಿಗಿಲಿ ರನ್ನರ್ ಆದ ತುಕಾಲಿ ಮಾನಸ!
ಗಿಚ್ಚಿ ಗಿಲಿಗಿಲಿ ಸೀಸನ್ 3 ರಲ್ಲಿ ತುಕಾಲಿ ಮಾನಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಆರಂಭದಲ್ಲಿ ನಟನೆಯಲ್ಲಿ ಹಿನ್ನಡೆ ಅನುಭವಿಸಿದ್ದ ಅವರು, ಗಂಡನ ಮಾರ್ಗದರ್ಶನದಲ್ಲಿ ಯಶಸ್ಸು ಕಂಡಿದ್ದಾರೆ. ತುಕಾಲಿ ದಂಪತಿಗಳ ವೇದಿಕೆ ಮೇಲಿನ ತಾಳ್ಮೆ ಮತ್ತು ಹೊಂದಾಣಿಕೆಯನ್ನು ಕುರಿತು ಇನ್ನಷ್ಟು ತಿಳಿಯಿರಿ.
ಬೆಂಗಳೂರು (ಸೆ.16): ಕಳೆದ ಬಿಗ್ ಬಾಸ್ ಸೀಸನ್ 10ರಲ್ಲಿ ಫೈನಲಿಸ್ಟ್ ಆಗಿದ್ದ ಕಾಮಿಡಿಯನ್ ತುಕಾಲಿ ಸಂತೋಷ್ ಅವರೂ, ಅವರ ಪತ್ನಿ ಮಾನಸ ಕೆಲವು ಬಾರಿ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡು ಭಾರಿ ಮುನ್ನೆಲೆಗೆ ಬಂದಿದ್ದರು. ಇದರ ಬೆನ್ನಲ್ಲಿಯೇ ಗಿಚ್ಚಿ ಗಿಲಿಗಿಲಿ ಸೀಸನ್-3ರ ನಾನ್ ಕಾಮೆಡಿಯನ್ ವಿಭಾಗದಲ್ಲಿ ತುಕಾಲಿ ಮಾನಸ ಅವರು ರನ್ನರ್ ಅಪ್ ಆಗಿದ್ದಾರೆ. ಇಲ್ಲಿ ಗಂಡನೇ ಗುರುವಾಗಿ ಕಾಮಿಡಿ ವೇದಿಕೆಯಲ್ಲಿ ಕಲಿಸಿದ ಪಾಠ ಯಶಸ್ವಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಹಲವು ಘಟನಾನುಘಟಿ ಕಾಮೆಡಿಯನ್‌ಗಳು ಸ್ಪರ್ಧಿಸಿದ್ದರು. ಅದರಲ್ಲಿ ಪಾವಗಡ ಮಂಜು, ಹುಲಿ ಕಾರ್ತಿಕ್, ಚಂದ್ರಪ್ರಭ ಮತ್ತು ತುಕಾಲಿ ಸಂತೋಷ್, ವಿನೋದ್ ಗಬ್ರಗಾಲ, ರಾಘವೇಂದ್ರ ಸೇರಿ ಹಲವರಿದ್ದರು. ಆದರೆ, ಇದರಲ್ಲಿ ಹುಲಿ ಕಾರ್ತಿಕ್ ವಿನ್ನರ್ ಆಗಿದ್ದಾರೆ. ಹುಲಿ ಕಾರ್ತಿಕ್‌ಗೆ ಬರೋಬ್ಬರಿ 10 ಲಕ್ಷ ರೂ, ಮೌಲ್ಯದ ಚಿನ್ನದ ಬೆಲ್ಟ್ ಅನ್ನು ಕೊಡಲಾಗಿದೆ. ಇನ್ನು ಈ ಸೀಸನ್‌ನಲ್ಲಿ ನಾನ್ ಕಾಮೆಡಿಯನ್ ಆಗಿ ಬಂದಿದ್ದ ಹಲವರ ಪೈಕಿ ತುಕಾಲಿ ಸಂತು ಅವರ ಪತ್ನಿ ತುಕಾಲಿ ಮಾನಸ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದಾಳೆ. ಈ ಮೂಲಕ 3 ಲಕ್ಷ ರೂ. ಮೌಲದ್ಯ ಬೆಳ್ಳಿಯ ಬೆಲ್ಟ್ ಅನ್ನು ತನ್ನದಾಗಿಸಿಕೊಂಡಿದ್ದಾಳೆ. ನಿಜಕ್ಕೂ ತುಕಾಲಿ ಮಾನಸ ಅವರ ನಟನೆಯಲ್ಲಾದ ಬದಲಾವಣೆ ನೋಡಿದರೆ ನಿಜಕ್ಕೂ ಈ ಪ್ರಶಸ್ತಿಗೆ ಅರ್ಹಳೆಂದು ಕಾಣುತ್ತಿದೆ.
ಗಿಚ್ಚಿಗಿಲಿಗಿಲಿ ಸೀಸನ್ 3 ವಿನ್ನರ್ ಆದ ಹುಲಿ ಕಾರ್ತಿಕ್, ರನ್ನರ್ ತುಕಾಲಿ ಮಾನಸ, ಗೆದ್ದ ಹಣವೆಷ್ಟು?
ಆರಂಭದಲ್ಲಿ ನಟನೆಯೇ ಬರುತ್ತಿರಲಿಲ್ಲ: ಗಿಚ್ಚಿ ಗಿಲಿಗಿಲಿ ಆರಂಭದಲ್ಲಿ ನಟನೆಯೇ ಬರುತ್ತಿರಲಿಲ್ಲ. ಒಂದು ಡೈಲಾಗ್ ಕೂಡ ನೆನಪು ಉಳಿಯುತ್ತಿರಲಿಲ್ಲ. ಹೀಗಾಗಿ, ಕಾಮಿಡಿ ವೇದಿಕೆಯಲ್ಲಿ ಮಾನಸ ಸೂಟ್ ಆಗುವುದಿಲ್ಲ ಎಂದೇ ಭಾವಿಸುವಂತಾಗಿತ್ತು. ಆದರೆ, ನಾಲ್ಕೈದು ವಾರಗಳು ಕಳೆದ ನಂತರ ಮಾನಸ ಅವರಲ್ಲಿ ಭಾರೀ ಬದಲಾವಣೆ ಕಂಡುಬಂದಿತ್ತು. ಉದ್ದುದ್ದ ಡೈಲಾಗ್, ಸೂಕ್ತ ಡ್ರೆಸ್ಸಿಂಗ್ ಸೆನ್ಸ್, ಸಮಯಕ್ಕೆ ತಕ್ಕಂತೆ ಡೈಲಾಗ ಡೆಲಿವರಿ ಸೇರಿದಂತೆ ಹಾಸ್ಯ ಕಲಾವಿದರೆ ಅಗತ್ಯವಿರುವ ಹಾವ ಭಾವಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇದನ್ನು ನೋಡಿದ ವೀಕ್ಷಕರು ಮಾನಸ ಅವರಲ್ಲಿ ಉಂಟಾದ ಬದಲಾವಣೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಗಂಡನೇ ಗುರುವಾಗಿ ಕಲಿಸಿದ ಪಾಠ ಯಶಸ್ವಿ: ತಾಯಿಯೇ ಮೊದಲ ಗುರು ಎಂದು ಗಾದೆ ಮಾತು ಹೇಳುತ್ತೇವೆ. ಅದೇ ರೀತಿ ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಆದರೆ, ತುಕಾಲಿ ಮಾನಸ ಅವರ ವಿಚಾರದಲ್ಲಿ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇದ್ದಾನೆ ಎಂದು ಹೇಳಬಹುದು. ತುಕಾಲಿ ಮಾನಸ ಅವರ ಹಾಸ್ಯ ನಟನೆಯ ಕಲಿಕೆ, ಪ್ರದರ್ಶನ ಹಾಗೂ ಇತರೆ ಕಾರ್ಯಗಳ ಹಿಂದೆ ನಿಜವಾಗಿಯೂ ತುಕಾಲಿ ಸಂತೋಷ್ ಶ್ರಮ ಸಾಕಷ್ಟಿದೆ. ತಾನೂ ಕೂಡ ಒಬ್ಬ ಕಂಟೆಸ್ಟೆಂಟ್ ಆಗಿ ಪ್ರಾಕ್ಟೀಸ್ ಮಾಡುತ್ತಾ ತನ್ನ ಹೆಂಡತಿ ಮಾನಸಗೂ ಪ್ರತಿನಿತ್ಯ ನಟನೆಯ ಪಾತ್ರವನ್ನು ಹೇಳಿಕೊಡುವ ಗುರುವಾಗಿ ಆಕೆಯ ಗಂಡನಾಗಿ ತುಕಾಲಿ ಸಂತೋಷ್ ಪಾತ್ರ ನಿರ್ವಹಣೆ ಮಾಡಿದ್ದಾನೆ. ಇದರ ಫಲವೇ ಗಿಚ್ಚಿ ಗಿಲಿಗಿಲಿ ರನ್ನರ್ ಅಪ್ ಆಗಲು ಕಾರಣವಾಗಿದೆ ಎಂದು ಹೇಳಬಹುದು.
ತುಕಾಲಿ ಸಂತೋಷ್ರ ಯಾರಿಗೂ ತಿಳಿಯದ ಎರಡು ಸೀಕ್ರೆಟ್ಗಳನ್ನು ನಮ್ರತಾ ರಿವೀಲ್ ಮಾಡೇ ಬಿಟ್ರು!
ತುಕಾಲಿ ದಂಪತಿಯ ತಾಳ್ಮೆ ನಿಜಕ್ಕೂ ಮಾದರಿ: ಯಾವುದೇ ಟಿವಿ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಾಗ ಸಹಜವಾಗಿ ಹೊಂದಾಣಿಕೆ ಹೆಚ್ಚಾಗಿರುತ್ತದೆ. ಕೆಲವು ಬಾರಿ ಇಲ್ಲಿ ನಡೆಯುವ ಕೆಲವೊಂದು ಘಟನೆಗಳು ಇಬ್ಬರ ನಡುವೆ ವೈಮನಸ್ಸಿಗೂ ಕಾರಣವಾಗಬಹುದು. ತುಕಾಲಿ ಸಂತೋಷ್ ಅವರನ್ನು ವೇದಿಕೆ ಮೇಲೆ ಸಾಕಷ್ಟು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರೂ, ಸ್ವತಃ ಹೆಂಡತಿ ತುಕಾಲಿ ಮಾನಸ ಅವರೂ ಕೋಪ ಮಾಡಿಕೊಂಡಿದ್ದರು. ಆದರೆ, ಇದ್ಯಾವುದಕ್ಕೂ ತುಕಾಲಿ ಸಂತು ತಲೆ ಕೆಡಿಕೊಳ್ಳದೇ ತಾಳ್ಮೆಯಿಂದಲೇ ಹೆಂಡತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಬುದ್ಧಿ ಹೇಳುತ್ತಾ ಬಂದಿದ್ದಾನೆ. ಅದರ ಪ್ರತಿಫಲ ಒಂದು ಕಾಮಿಡಿ ವೇದಿಕೆಯಲ್ಲಿ ಹೇಗಿರಬೇಕು ಎಂಬ ಜ್ಞಾನ ತುಕಾಲಿ ಮಾನಸ ಅವರಿಗೆ ಬಂದಿದೆ. ಯಾರು ತಮ್ಮ ದಾಂಪತ್ಯದ ಬಗ್ಗೆ ಎಷ್ಟೇ ಗೇಲಿ ಮಾಡಿದರೂ ಎಲ್ಲವನ್ನೂ ನಗುತ್ತಲೇ ಸ್ವೀಕಾರ ಮಾಡಿಕೊಂಡು ನಗುತ್ತಲೇ ಜೀವನ ನಡೆಸುತ್ತಿದ್ದಾರೆ.