ತುಕಾಲಿ ಸಂತೋಷ್​ರ ಯಾರಿಗೂ ತಿಳಿಯದ ಎರಡು ಸೀಕ್ರೆಟ್​ಗಳನ್ನು ನಮ್ರತಾ ರಿವೀಲ್​ ಮಾಡೇ ಬಿಟ್ರು!

ಬಿಗ್​ಬಾಸ್​ ಸ್ಪರ್ಧಿ ತುಕಾಲಿ ಸಂತೋಷ್​ ಅವರ ಯಾರಿಗೂ ತಿಳಿಯದ ಎರಡು ಸೀಕ್ರೆಟ್​ಗಳನ್ನು ನಮ್ರತಾ ರಿವೀಲ್​ ಮಾಡಿದ್ದಾರೆ. ಏನದು?
 

Bigg Boss Namrata Gowda has revealed two secrets of  Tukali Santosh suc

ಬಿಗ್​ಬಾಸ್​ ಸೀಸನ್​ 10 ಮುಗಿದು ತಿಂಗಳುಗಳೇ ಆದರೂ, ವೀಕ್ಷಕರೂ ಅದರಿಂದ ಹೊರಬಂದಿಲ್ಲ, ಜೊತೆಗೆ ಬಿಗ್​ಬಾಸ್​ ಸ್ಪರ್ಧಿಗಳಿಗೆ ಈಗ ಭರ್ಜರಿ ಡಿಮ್ಯಾಂಡೂ ಬರುತ್ತಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಈ ಸ್ಪರ್ಧಿಗಳಿಗೆ ಆಹ್ವಾನ ನೀಡಲಾಗುತ್ತಿದೆ. ಅದರಲ್ಲಿಯೂ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿರುವ ಬಹುತೇಕ ರಿಯಾಲಿಟಿ ಷೋಗಳಿಗೆ ಇವರದ್ದೇ ಕಾರುಬಾರು. ಇವರನ್ನು ಕರೆಸಿದರೆ ಕಾರ್ಯಕ್ರಮಗಳಿಗೆ ಟಿಆರ್​ಪಿ ರೇಟ್​ ಹೆಚ್ಚುವುದು ಸಾಮಾನ್ಯವಾಗಿದ್ದರಿಂದ ಬಿಗ್​ಬಾಸ್​ ಸ್ಪರ್ಧಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡ್​. 

ಇನ್ನೇನು ಯುಗಾದಿ ಬರ್ತಾ ಇದೆ. ಈ ಸಂದರ್ಭದಲ್ಲಿ ಕಲರ್ಸ್​ ಕನ್ನಡ ವಾಹಿನಿ ಯುಗಾದಿ ಸೆಲೆಬ್ರೇಷನ್​ ಜೋರಾಗಿ ಮಾಡಿದೆ. ಇದರಲ್ಲಿ ಕೂಡ ಹೈಲೈಟ್​ ಆಗಿರುವುದು ಬಿಗ್​ಬಾಸ್​ ಸೀಸನ್​ 10ನ ಕೆಲವು ಸ್ಪರ್ಧಿಗಳು. ತುಕಾಲಿ ರಮೇಶ್​, ನಮ್ರತಾ ಗೌಡ, ತನಿಷಾ ಸೇರಿದಂತೆ ಕೆಲವು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಕೆಲವು ತಮಾಷೆಯ ಘಟನೆಗಳನ್ನು ಶೇರ್​ ಮಾಡಲಾಗಿದೆ. 

ಕೋಟಿ ಕೋಟಿ ಬೆಲೆಬಾಳೋ ಕಾರು, ಹೋಗ್ತಾ ಬರ್ತಾ ಡ್ರೈವರ್​ ಸೆಲ್ಯೂಟ್​...ಅಬ್ಬಾ...ನಮ್ಗೆ ಇವೆಲ್ಲಾ ಹಿಂಸೆನಪ್ಪಾ...

ಬಿಗ್​ಬಾಸ್​ನಲ್ಲಿ ಸದಾ ತಮಾಷೆ ಎಂದರೆ ನೆನಪಾಗುವುದು ತುಕಾಲಿ ಸಂತೋಷ್​. ಅವರನ್ನು ವೇದಿಕೆ ಮೇರೆ ಬರಮಾಡಿಕೊಂಡಿರುವ ಆ್ಯಂಕರ್​, ಅವರ ಕುರಿತು ಏನಾದರೂ ಬೇರೆಯವರಿಗೆ ಆಗದ ವಿಷಯವನ್ನು ಹೇಳುವಂತೆ ನಮ್ರತಾ ಅವರಿಗೆ ಕೇಳಿದ್ದಾರೆ. ಆಗ ನಮ್ರತಾ, ತುಕಾಲಿ ಅವರ ಕುರಿತು ಎರಡು ತಮಾಷೆಯ ವಿಷಯಗಳನ್ನು ಹೇಳಿದ್ದಾರೆ. ಅದೇನೆಂದರೆ, ತುಕಾಲಿ ಅವರಿಗೆ ಗ್ಯಾಸ್​​ ಪ್ರಾಬ್ಲೆಮ್​ ಜಾಸ್ತಿ. ಬಿಗ್​ಬಾಸ್​​ ಮನೆಯಲ್ಲಿಯೂ ಅವರು ಯಾವಾಗ ಬೇಕೆಂದ್ರೆ ಆವಾಗ ಗ್ಯಾಸ್ ಬಿಡ್ತಾ ಇದ್ರು. ಅದಕ್ಕೆ ಅವರ ಪಕ್ಕದಲ್ಲಿ ಇರೋದೇ ಕಷ್ಟವಾಗಿತ್ತು ಎಂದಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಮತ್ತೊಂದು ವಿಷಯ ಏನೆಂದರೆ, ತುಕಾಲಿ 2-3 ದಿನಕ್ಕೆ ಒಮ್ಮೆ ಸ್ನಾನ ಮಾಡುತ್ತಾರೆ. ಬಿಗ್​ಬಾಸ್​​ನಲ್ಲಿ ಇರುವಾಗ ಹೀಗೆ ಮಾಡುತ್ತಿದ್ರು. ಸ್ನಾನ ಮಾಡಲು ಹೇಳಿದ್ರೆ ಯಾಕೆ ಒತ್ತಾಯ ಮಾಡ್ತೀರಿ ಅಂತ ಕೇಳ್ತಾ ಇದ್ರು ಎಂದಿದ್ದಾರೆ.

ಇದೇ ವೇಳೆ ನಮ್ರತಾ ಗೌಡ, ಎಲ್ಲಾ ಬಿಗ್​ಬಾಸ್​​ ಸ್ಪರ್ಧಿಗಳನ್ನು ಯುಗಾದಿಗೆ ತಮ್ಮ ಮನೆಗೆ ಕರೆದಿರುವುದಾಗಿ ಹೇಳಿದ್ದಾರೆ. ಬಿಗ್​ಬಾಸ್​​ ಮನೆಯೊಳಕ್ಕೆ ಇರುವ ಸಮಯದಲ್ಲಿ ಯಾರೂ ಚೆನ್ನಾಗಿ ಮಾತನಾಡಲಿಲ್ಲ. ಅದಕ್ಕಾಗಿ ಈಗಾದ್ರೂ ಮಾತನಾಡುತ್ತಾರಾ ನೋಡಲು ಎಲ್ಲರನ್ನೂ ಕರೆದಿರುವುದಾಗಿ ಹೇಳಿದ್ದಾರೆ. 

6ನೇ ಕ್ಲಾಸ್​​ನಲ್ಲಿ ಯಕ್ಷ ಪಯಣ: ಯಕ್ಷಗಾನ ಧಾರಿಯಾದ ರಿಷಬ್​ ಶೆಟ್ಟಿಯ ಅಪರೂಪದ ಫೋಟೋ ವೈರಲ್​


Latest Videos
Follow Us:
Download App:
  • android
  • ios