ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಮಚ್ಚು, ಲಾಂಗ್ ಹಿಡಿದು ಪೋಸ್ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರ ರೀಲ್ಸ್ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರಿಗೆ ಬೇರೆ ಬೇರೆ ಕಾನೂನು ಮಾಡದೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಜೋರಾಗಿದೆ. ಸೋಶಿಯಲ್‌ಮೀಡಿಐಆದಲ್ಲಿ ಲಾಂಗ್‌ ಹಿಡಿದು ಪೋಸ್‌ ನೀಡೋದು, ನಕಲಿ ಪಿಸ್ತೂಲ್‌ ಹಿಡಿದು ರೀಲ್ಸ್‌ ಮಾಡೋದು, ಲಾಂಗ್‌ ಹಿಡಿದುಕೊಂಡು ಬೈಕ್‌ನಲ್ಲಿ ವ್ಹೀಲಿಂಗ್‌ ಮಾಡಿಕೊಂಡು ಹೋಗೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಬೆಂಗಳೂರು ಟ್ರಾಫಿಕ್‌ ಪೊಲೀಸರು ಹಾಗೂ ಬೆಂಗಳೂರು ಪೊಲೀಸರರ ಸೈಬರ್‌ ಸೆಕ್ಯುರಿಟಿ ವಿಂಗ್‌ ಇಂತ ಸೋಶಿಯಲ್‌ ಮೀಡಿಯಾ ರೀಲ್ಸ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುತ್ತದೆ. ಸಾಮಾನ್ಯವಾಗಿ ಮಚ್ಚು, ಲಾಂಗ್‌, ಪಿಸ್ತೂಲ್‌ ಹಿಡಿದು ಪೋಸ್‌ ನೀಡಿದರೆ, ರೀಲ್ಸ್ ಮಾಡಿದರೆ ಅಂಥವರ ವಿರುದ್ಧ 'Few Days Later' ಅನ್ನೋ ರೀಲ್ಸ್‌ ತಾನೂ ಪೋಸ್ಟ್‌ ಮಾಡಿ ಅವರ ಮೇಲೆ ಕ್ರಮವಾಗಿರುವುದರನ್ನು ತಿಳಿಸುತ್ತದೆ.

ಇದೇ ನ್ಯಾಯ ಎಲ್ಲರಿಗೂ ಆಗಬೇಕು. ಸಾಮಾನ್ಯ ಜನರಿಗೊಂದು ನ್ಯಾಯ. ಸೆಲೆಬ್ರಿಟಿಗಳಿಗೆ ಒಂದು ನ್ಯಾಯ ಆಗಬಾರದು. ಇತ್ತೀಚೆಗೆ ಮಂಡ್ಯದಲ್ಲಿ ಸ್ವತಃ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಈ ಬಗ್ಗೆ ಮಾತನಾಡಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಎಂಟರ್‌ಟೇನ್‌ಮೆಂಟ್‌ ರೀಲ್ಸ್ ಪೋಸ್ಟ್‌ ಮಾಡಬಹುದು. ಆದರೆ, ಮಚ್ಚು, ಲಾಂಗು ಹಿಡಿದು ಪೋಸ್ಟ್‌ ಹಾಕಿದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.

ಆದರೆ, ಈ ಯಾವ ನಿಯಮಗಳ ಬಗ್ಗೆ ಕೊಂಚೂ ಅರಿವು ಹೊಂದಿರದ ಕನ್ನಡದ ಇಬ್ಬರು ಸೆಲೆಬ್ರಿಟಿಗಳು ಸೋಶಿಯಲ್‌ ಮೀಡಿಯಾದಲ್ಲಿ ಮಚ್ಚು ಲಾಂಗ್‌ ಹಿಡಿದು ಪೋಸ್‌ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಇವರ ವಿರುದ್ಧ ಪೊಲೀಸರು 'Few Days Later'ಅನ್ನೋ ಪೋಸ್ಟ್‌ ಹಾಕೋದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಗ್‌ ಬಾಸ್‌ ಸ್ಪರ್ಧಿಗಳಾಗಿದ್ದ ವಿನಯ್‌ ಗೌಡ ಹಾಗೂ ರಜತ್‌ ಕಿಶನ್‌ ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ದರ್ಶನ್‌ ಅವರ ಸಿನಿಮಾಗಳ ಹೆಸರನ್ನು ಪ್ಯಾಂಟ್ ಮೇಲೆ ಬರೆಸಿಕೊಂಡಿರುವ ರಜತ್‌, ಬಿಳ್ಳಿ ಬಣ್ಣದ ಶರ್ಟ್‌ನ ಮೇಲೆ ಡಿಬಾಸ್‌ ಎಂದು ದೊಡ್ಡದಾಗಿ ಬರೆದುಕೊಂಡಿದ್ದಾರೆ. ಇನ್ನೊಂದೆಡೆ ಇದೇ ಮಾದರಿಯ ಸಿಂಪಲ್‌ ಡ್ರೆಸ್‌ನಲ್ಲಿರುವ ವಿನಯ್‌ ಗೌಡ ರೀಲ್ಸ್‌ ಮಾಡಿದ್ದು, ತಮ್ಮ ರೀಲ್ಸ್‌ನಲ್ಲಿ ಲಾಂಗ್‌ಅನ್ನು ಪರಿಪರಿಯಾಗಿ ಅಡಿಸಿದ್ದಾರೆ. ಈ ರೀಲ್ಸ್‌ಅನ್ನು ರಜತ್‌ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆದರೆ, ಇಲ್ಲಿ ಸಣ್ಣ ಮಟ್ಟದ ಎಚ್ಚರಿಕೆ ತೋರಿಸಿರುವ ವಿನಯ್‌ ಗೌಡ ತಮ್ಮ ಅಕೌಂಟ್‌ನಲ್ಲಿ ಇದನ್ನು ಪೋಸ್ಟ್‌ ಮಾಡಿಲ್ಲ.

'ನನ್ನ ಸೋದರ ಏನಾದರೂ ಪ್ರಾಬ್ಲಂ ಎಂದು ಹೇಳಿದಾಗ.. ಕರಿಯಾ..' ಎಂದು ರಜತ್‌ ಈ ರೀಲ್ಸ್‌ಗೆ ಪೋಸ್ಟ್‌ ಬರೆದುಕೊಂಡಿದ್ದಾರೆ. ಇನ್ನು ತಾಶಾ ಡಿಸೈನರ್‌ ಸ್ಟುಡಿಯೋ ಡ್ರೆಸ್‌ಅನ್ನು ಅವರು ಧರಿಸಿದ್ದಾರೆ.

ಲಾಂಗ್ ಹಿಡಿದು ಬಸ್‌ಸ್ಟಾಂಡ್‌ಗೆ ಬಂದ ಮಹಿಳೆ ; ಮುಂದೇನಾಯ್ತು ನೋಡಿ

ಇಸು ಸಾರ್ವಜನಿಕ ಸ್ಥಳದಲ್ಲಿ ಮಾಡದೇ ಇರುವ ವರ್ತನೆ ಆಗಿರಬಹುದು. ಆದರೆ, ಇಂಥ ರೀಲ್ಸ್‌ಗಳನ್ನು ಸೆಲೆಬ್ರಿಟಿಯಾದವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದರಿಂದ ಆಗುವ ಅಪಾಯಗಳ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಇದು ಆಗಬೇಕೆಂದರೆ, ಬೆಂಗಳೂರು ಪೊಲೀಸರು ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಜನರಿಗೆ ಬೇರೆ ಬೇರೆ ಕಾನೂನು ಮಾಡದೇ, ಇಂಥ ವರ್ತನೆ ತೋರಿದ ಎಲ್ಲರ ಮೇಲೂ ಕೇಸ್‌ ಹಾಕಿದರೆ ಸಾಧ್ಯವಾಗಲಿದೆ.

ಕೈಯಲ್ಲಿ ಲಾಂಗ್‌ ಹಿಡಿದು ಬೆಂಗಳೂರು ಹೈವೇಯಲ್ಲಿ ಪುಂಡರ ವ್ಹೀಲಿಂಗ್‌:

View post on Instagram