ಬಿಗ್‌ಬಾಸ್ ಸ್ಪರ್ಧಿ ರಜತ್ ಕಿಶನ್ ಖಾಸಗಿ ಫೋಟೋ ವೈರಲ್ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹಳೆಯ ಗೆಳತಿಯೇ ಫೋಟೋ ವೈರಲ್ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಫೋಟೋದಲ್ಲಿರುವ ಯುವತಿಯ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಬೇಸರಿಸಿದ್ದಾರೆ. ತಮ್ಮ ಹಿಂದಿನ ಸಂಬಂಧವನ್ನು ಒಪ್ಪಿಕೊಂಡ ರಜತ್, ಈ ರೀತಿಯ ಕೃತ್ಯ ಚೀಪ್ ಮೆಂಟಾಲಿಟಿ ಎಂದಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಖಾಸಗಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ. ಈ ಫೋಟೋ ಬಗ್ಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಕ್ಲಾರಿಟಿ ನೀಡುತ್ತಿದ್ದಾರೆ. ರಜತ್ ಪತ್ನಿ ಅಕ್ಷಿತಾ ಈಗಾಗಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲವೊಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳು ಹಾಗೆ ಉಳಿದು ಬಿಟ್ಟಿದೆ. ಅಷ್ಟಕ್ಕೂ ಯಾರು ವೈರಲ್ ಮಾಡಿದ್ದು? ಹೇಗೆ ಲೀಕ್ ಆಯ್ತು ಎಂದು ರಜತ್ ಸ್ಪಷ್ಟನೆ ನೀಡಿದ್ದಾರೆ.
'ಫೋಟೋ ವೈರಲ್ ಮಾಡಿದವರು ಯಾರು ಅಂತ ನನಗೆ ಗೊತ್ತಿದೆ. ಅವಳು ಒಂದು ಹೆಂಗ್ಸು. ನನ್ನ ಫೋಟೋ ನನ್ನ ಬಗ್ಗೆ ಏನಾದರೂ ಹಾಕಿಕೊಳ್ಳಿ ಆದರೆ ಇದರಲ್ಲಿ ಒಂದು ಹುಡುಗಿ ಜೀವ ಇದೆ. ಆ ಹುಡುಗಿಗೂ ಒಂದು ಹೆಸರು ಇರುತ್ತೆ ಒಂದು ಫ್ಯಾಮಿಲಿ ಇರುತ್ತದೆ. ಇಂತಹ ಚೀಪ್ ಕೆಲಸಕ್ಕೆ ಕೈ ಹಾಕಿರುವವಳು ಕೂಡ ಚೀಪ್ ಮೆಂಟಾಲಿಟಿ ಇರುವವಳು ಅಂತ ಗೊತ್ತಾದಾಗ ಅವರಿಗೆ ಇಲ್ಲಿಂದ ನಮಸ್ಕಾರ ಮಾಡಬೇಕು ಅಷ್ಟೇ. ನನಗೆ ಕೇಳಿದ್ದರೆ ನಾಲ್ಕೈದು ಚೆನ್ನಾಗಿರುವ ಫೋಟೋಗಳನ್ನು ಕಳುಹಿಸುತ್ತಿದ್ದೆ. ಆದರೆ ಇಲ್ಲಿ ಸಮಸ್ಯೆ ಆಗಿದ್ದು ಹುಡುಗಿ ಜೀವನ ಎಳೆದಂತೆ ಆಗುತ್ತದೆ ಎಂದು. ನನ್ನ ಬಗ್ಗೆ ಮಾಡಿಕೊಳ್ಳಿ ಒಂದು ಚೂರು ತಲೆ ನೋವು ಇಲ್ಲ ನನಗೆ ಆದರೆ ಅಲ್ಲೊಂದು ಹುಡುಗಿ ಇದ್ದಾಳೆ ನಮಗೂ ಒಂದು ಫ್ಯಾಮಿಲಿ ಇರುತ್ತದೆ ನಮ್ಮ ಅಭಿಮಾನಿಗಳು ಏನು ಅಂದುಕೊಳ್ಳುತ್ತಾರೆ ಅನ್ನೋದು ನೋಡಬೇಕು. ನಾನು ಏನೂ ಮಾಡಿಲ್ಲ ಅಂತಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಜತ್ ಮಾತನಾಡಿದ್ದಾರೆ.
ಬಿಗ್ ಬಾಸ್ ನಂತರ ಬಂಪರ್ ಆಫರ್ ಪಡೆದ ಚೈತ್ರಾ ಕುಂದಾಪುರ; ವೀಕ್ಷಕರು ಫುಲ್ ಶಾಕ್
'ನಮ್ದು ಹಳೆ ಕಥೆಗಳು ಇದೆ ಜೀವನದಲ್ಲಿ. ನಾವು ಮನುಷ್ಯರು. ಎಷ್ಟೋ ಸನ್ನಿವೇಷದಲ್ಲಿ ದೇವರು ತಪ್ಪು ಮಾಡುತ್ತಾರೆ ಇನ್ನು ಮನುಷ್ಯರು ತಪ್ಪು ಮಾಡಲ್ವಾ? ದಯವಿಟ್ಟು ಯೋಚನೆ ಮಾಡಿ ಈ ರೀತಿ ಕೆಲಸ ಮಾಡಿ. ನನಗೆ ತಲೆ ಕೆಟ್ಟಿ ನಿಮ್ಮ ವಿರುದ್ಧವಾಗಿ ನಿಂತುಕೊಂಡರೆ ನಿಮ್ಮ ಕಥೆಗಳನ್ನು ಬಿಚ್ಚ ಬೇಕಾಗುತ್ತದೆ. ನನಗೆ ಇದರಿಂದ ಸಮಸ್ಯೆ ಏನೂ. ಎಕ್ಸ್ ಇದ್ದಿದ್ದೇ ಉಂಟು ಮಾಡಿದ್ದೇ ಉಂಟು ಅದರಲ್ಲಿ ಸತ್ಯ ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ. ನೇರವಾಗಿ ನನ್ನನ್ನು ಕೇಳಿದ್ದರೆ ಹೌದು ಎಕ್ಸ್ ಇದ್ದಾರೆ ಎಂದು ಒಪ್ಪಿಕೊಳ್ಳುತ್ತಿದ್ದೆ. ನನಗೆ ನೂರಾರು ಜನ ಎಕ್ಸ್ ಇದ್ದಾರೆ ನಿಮಗೆ ಸಮಸ್ಯೆ ಏನು? ನನ್ನ ಜೀವನ ನನ್ನ ಇಷ್ಟ ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋದು ಚೆನ್ನಾಗಿ ಗೊತ್ತಿದೆ. ಇದ್ದಕ್ಕಿದ್ದಂತೆ ನಾನು ಫೇಮ್‌ಗೆ ಬಂದು ಬಿಟ್ಟಿ ಹೆಸರು ಮಾಡಿದೆ ಅಂತ ಈ ರೀತಿ ಕೆಲಸ ಮಾಡುವುದು ತಪ್ಪು. ತುಂಬಾ ಚೀಪ್ ಮೆಂಟಾಲಿಟಿ ಇರುವವರ ಬಗ್ಗೆ ಏನು ಮಾಡಲು ಆಗುತ್ತದೆ? ಕೀಳಕ್ಕೆ ಕೆಲಸ ಇಲ್ಲ ಅವರಿಗೆ. ಮತ್ತೊಬ್ಬರು ಬೆಳೆಯುತ್ತಿದ್ದಾರೆ ಹೆಸರು ಮಾಡುತ್ತಿದ್ದಾರೆ ಅಂದ್ರೆ ತಡೆದುಕೊಳ್ಳಲು ಆಗಲ್ಲ' ಎಂದು ರಜತ್ ಹೇಳಿದ್ದಾರೆ.
ಸುದೀಪ್ ಗಿಫ್ಟ್ ಕೊಟ್ಟ ಜಾಕೆಟ್ ಬೆಲೆ ಕೇಳಿ ಶಾಕ್ ಆದ ಬಿಗ್ ಬಾಸ್ ರಜತ್ ಕಿಶನ್!
