ಬಿಗ್ ಬಾಸ್ ಸೀಸನ್ 11ರ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ನಿಜಕ್ಕೂ ಗೇಮ್ ಚೇಂಜರ್ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅಲ್ಲದೆ ರಜತ್ ಈಗ ಮತ್ತೊಂದು ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ.
ಕಿಚ್ಚ ಸುದೀಪ್ ಒಮ್ಮೆ ಧರಿಸಿದ್ದ ಗೋಲ್ಡ್ ಬಣ್ಣದ ಜಾಕೆಟ್ ಚೆನ್ನಾಗಿದೆ ಬೇಕು ಎಂದು ರಜತ್ ಕೇಳಿದ್ದರು. ಒಂದು ನಿಮಿಷವೂ ಯೋಚನೆ ಮಾಡದೆ ಕಿಚ್ಚ ಸುದೀಪ್ ಜಾಕೆಟ್ ತೆಗೆದು ಕೊಟ್ಟು ಕಳುಹಿಸಿದ್ದರು.
Image credits: Rajath Kishan Instagram
Kannada
ದುಬಾರಿ ಜಾಕೆಟ್
'ಸುದೀಪ್ ಸರ್ ನೀಡಿರುವ ಜಾಕೆಟ್‌ನ ಬೆಲೆ ಎಷ್ಟು ಅಂತ ನನಗೆ ಗೊತ್ತಿದೆ. ಅದರ ಬೆಲೆ ರಿವೀಲ್ ಮಾಡಬಾರದು ಅಷ್ಟು ದುಬಾರಿ. ರಿವೀಲ್ ಮಾಡಿದ್ದರೆ ಸುದೀಪ್ ಸರ್ ಬೈತಾರೆ' ಎಂದಿದ್ದಾರೆ ರಜತ್.
Image credits: Rajath Kishan Instagram
Kannada
ಜಾಕೆಟ್ ಜೊತೆಗೆ ಓಲೆ
ಸುದೀಪ್ ಕೊಟ್ಟಿರುವ ಜಾಕೆಟ್‌ನ ಡಿಸೈನರ್ ರೆಡಿ ಮಾಡುವುದಕ್ಕೆ ಸುಮಾರು ಒಂದುವರೆ ತಿಂಗಳು ತೆಗೆದುಕೊಂಡಿದ್ದಾರಂತೆ. ಅಲ್ಲದೆ ರಜತ್‌ಗೆ ಹೊಸ ವರ್ಷದಂದು ಒಂದು ಕಿವಿಯಲ್ಲಿದ್ದ ಚಿನ್ನ ಓಲೆ ಕೊಟ್ಟಿದ್ದಾರೆ ಸುದೀಪ್.
Image credits: Rajath Kishan Instagram
Kannada
ಬಂಪರ್ ಗಿಫ್ಟ್
ಸುದೀಪ್ ಕೊಟ್ಟಿರುವ ಚಿನ್ನ/ವಜ್ರದ ಓಲೆ ಬೆಲೆ ಎಲ್ಲಿಯೂ ರಿವೀಲ್ ಆಗಿಲ್ಲ. ಆದರೆ ಒಂದು ಓಲೆಯನ್ನು ರಜತ್‌ಗೆ ಮತ್ತೊಂದು ಓಲೆಯನ್ನು ಚೈತ್ರಾ ಕುಂದಾಪುರಗೆ ಗಿಫ್ಟ್ ಆಗಿ ನೀಡಿದ್ದರು.
Image credits: Rajath Kishan Instagram
Kannada
ಬಾಯ್ಸ್ ವರ್ಸಸ್ ಗರ್ಲ್ಸ್
ಬಿಗ್ ಬಾಸ್ ಸೀಸನ್ 11 ಮುಗಿದ ಮೇಲೆ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ ಆರಂಭವಾಗಿದೆ. ರಜತ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ರಜತ್‌ರವರ ಐದನೇ ರಿಯಾಲಿಟಿ ಶೋ ಇರಬೇಕು.