Small Screen
ಕುಂದಾಪುರದ ಸುಂದರಿ, ಫೈಯರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಕೈಯಲ್ಲಿ ಇದೀಗ ಬಂಪರ್ ಆಫರ್ ಬಂದಿದೆ. ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಸುಮಾರು 105 ದಿನಗಳ ಕಾಲ ಟಫ್ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ತಮ್ಮದೆ ಛಾಪು ಮೂಡಿಸಿದ್ದರು.
ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಅನುಪಮಾ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೆ ಒಂದು ಪ್ರೋಮೋದಲ್ಲಿ ಮಿಂಚಿದ್ದಾರೆ.
ಮೇಕಪ್ ಮಾಡಿಕೊಳ್ಳದ, ವಸ್ತ್ರಗಳಿಗೆ ಪ್ರಾಮುಖ್ಯತೆ ನೀಡದ ಚೈತ್ರಾ ಕುಂದಾಪುರ ಇದೀಗ ಹೊಸ ಲುಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ವೀಕ್ಷಕರಿಗೆ ಬಿಗ್ ಶಾಕ್.
ಬಿಗ್ ಬಾಸ್ ಮನೆಯಲ್ಲಿ ಬಾಸ್ ಬಾಸ್ ಅಂದುಕೊಂಡು ರಜತ್ ಮತ್ತು ಚೈತ್ರಾ ಕುಂದಾಪುರ ನಡುವೆ ದೊಡ್ಡ ಜಗಳ ಮಾತುಕತೆ ನಡೆಯುತ್ತಿತ್ತು. ಈಗ ಅದೇ ಫೈಟ್‌ನ ಮತ್ತೊಮ್ಮೆ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ನೋಡಬಹುದು.
ಇಷ್ಟು ದಿನ ಭಾಷಣ ಮಾಡಿಕೊಂಡು ಕಾರ್ಯಕ್ರಮಗಳು, ಕಛೇರಿ ಅಂತ ಓಡಾಡುತ್ತಿದ್ದ ಚೈತ್ರಾ ಕುಂದಾಪುರ ಕಿರುತೆರೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ತಮ್ಮ ವೃತ್ತಿ ಬದಲಾವಣೆ ಮಾಡಿದ್ರಾ?
ಬಾಯ್ಸ್ ವರ್ಸಸ್ ಗರ್ಲ್ಸ್‌ನಲ್ಲಿ ಚೈತ್ರಾ ಕುಂದಾಪುರ, ರಜತ್ ಕಿಶನ್, ಹನುಮಂತು, ಧನರಾಜ್, ಐಶ್ವರ್ಯ ಶಿಂಧೋಗಿ,ಶೋಭಾ ಶೆಟ್ಟಿ, ಲಾಯರ್ ಜಗದೀಶ್ ಮತ್ತು ಭವ್ಯಾ ಗೌಡ ಸ್ಪರ್ಧಿಸಲಿದ್ದಾರೆ.