Asianet Suvarna News Asianet Suvarna News

Bigg Boss OTT; ಹಿಂದೆಯಿಂದ ತಬ್ಬಿ ಕಿಸ್ ಮಾಡ್ತಾರೆ, ಉದಯ್ ವಿರುದ್ಧ ಮಹಿಳಾ ಸ್ಪರ್ಧಿಗಳ ಗಂಭೀರ ಆರೋಪ

ಉದಯ್ ಸೂರ್ಯ ಅವರ ವಿರುದ್ಧ ಸ್ಪರ್ಧಿಗಳಿಂದ ಗಂಭೀರ ಆರೋಪ ಕೇಳಿ ಬಂದಿದೆ. ಉದಯ್ ವರ್ತನೆ ಮಹಿಳಾ ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆಯಂತೆ. ಮಹಿಳಾ ಸ್ಪರ್ಧಿಗಳ ಮಧ್ಯೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. 

Bigg Boss OTT Kannada; female contestants Accusation Udya surya kissing a girls sgk
Author
First Published Aug 19, 2022, 1:05 PM IST

ಬಿಗ್ ಬಾಸ್ ಕನ್ನಡ ಒಟಿಟಿ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಬಾರಿಗೆ ಬಿಗ್ ಬಾಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಒಟಿಟಿ ಮೊದಲ ವಾರ ಯಶಸ್ವಿಯಾಗಿ ಮುಗಿಸಿದ್ದ ಸ್ಪರ್ಧಿಗಳು ಎರಡನೇ ವಾರನು ಕಳೆಯುತ್ತಾ ಬಂತು. ಸ್ಪರ್ಧಿಗಳ ನಡುವೆ ಕಿತ್ತಾಟ, ಜಗವೂ ಜೋರಾಗಿದೆ. ಬಿಗ್ ಬಾಸ್ ಮನೆ ಎರಡನೇ ವಾರವೂ ಸಿಕ್ಕಾಪಟ್ಟೆ ಕಾವೇರಿತ್ತು. ಎಲ್ಲರೂ ತಮ್ಮ ಬೆಸ್ಟ್​​ ಕೊಡೋಕೆ ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಉದಯ್ ಸೂರ್ಯ ಅವರ ವಿರುದ್ಧ ಸ್ಪರ್ಧಿಗಳಿಂದ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಉದಯ್ ವರ್ತನೆ ಮಹಿಳಾ ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆಯಂತೆ. ಮಹಿಳಾ ಸ್ಪರ್ಧಿಗಳ ಮಧ್ಯೆ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ. 

ಅಷ್ಟಕ್ಕೂ ಉದಯ್ ಅಂಥ ತಪ್ಪೇನು ಮಾಡಿದ್ದಾರೆ ಅಂತ ಯೋಚಿಸುತ್ತಿದ್ದೀರಾ. ಉದಯ್ ಮಹಿಳಾ ಸ್ಪರ್ಧಿಗಳಿಗೆ ಹಿಂದೆಯಿಂದ ಬಂದು ಕಿಸ್ ಮಾಡುತ್ತಾರೆ ಎಂದು ಸ್ಪರ್ಧಿಗಳು ಆರೋಪ ಮಾಡಿದ್ದಾರೆ. ಅಕ್ಷತಾ ಜೊತೆ ಆಪ್ತರಾಗಿರುವ ಉದಯ್ ಅಕ್ಷತಾಗೆ ಮಾತ್ರವಲ್ಲದೇ ಉಳಿದ ಸ್ಪರ್ಧಿಗಳಿಗೂ ಕಿಸ್ ಮಾಡಿ ಮಹಿಳಾ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.   

ಅಕ್ಷತಾ ಟಾಸ್ಕ್ ಮುಗಿಸಿದ ಬಳಿಕ ಉದಯ್ ಅವರನ್ನು ಎತ್ತಿಕೊಂಡು ಹೋಗಿ ಕೂರಿಸಿದ್ದಾರೆ. ಬಳಿಕ ಅಕ್ಷತಾಗೆ ಕಿಸ್ ಮಾಡಿ ತುಂಬಾ ಚೆನ್ನಾಗಿ ಆಡಿದ್ದೀಯಾ ಎಂದು ಹೇಳಿದರು. ಬಳಿಕ ವಾಸ್ ರೂಮ್ ಬಳಿಯೂ ಉದಯ್ ಹಾಗೆ ಮಾಡಿದರು. ಉದಯ್ ಸೂರ್ಯ ಹಿಂಬದಿಯಿಂದ ಹೋಗಿ ಅಕ್ಷತಾಗೆ ಹಗ್ ಮಾಡಿದರು. ಅಲ್ಲದೆ, ಕಿವಿಯ ಬಳಿ ಕಿಸ್ ಮಾಡಿದರು. ಈ ಘಟನೆ ಬಗ್ಗೆ ಅಕ್ಷತಾ ಕೊಂಚ ಸಮಯ ಬಿಟ್ಟು ಉದಯ್ ಬಳಿ ಮಾತನಾಡಿದ್ದಾರೆ. 'ನೀವು ಆ ರೀತಿ ಹಗ್ ಮಾಡಬೇಡಿ. ನೋಡುವವರಿಗೆ ಅದು ಬೇರೆಯ ರೀತಿ ಕಾಣುತ್ತದೆ. ಇನ್ಮುಂದೆ ಆ ರೀತಿ ಮಾಡಬೇಡಿ' ಎಂದು ತಿಳಿ ಹೇಳಿದರು. ಇದರಿಂದ ಉದಯ್ ಸೂರ್ಯ ಕೊಂಚ ಡಲ್ ಆದರು. 

Bigg Boss OTT; ತಾರಕಕ್ಕೇರಿದ ಅರ್ಜುನ್ - ರೂಪೇಶ್ ಜಗಳ, ಕಂಗಾಲಾದ ಉಳಿದ ಸ್ಪರ್ಧಿಗಳು

ಕೇವಲ ಅಕ್ಷತಾ ಜೊತೆ ಮಾತ್ರವಲ್ಲದೇ, ಉಳಿದ ಸ್ಪರ್ಧಿಗಳಾದ ಸಾನ್ಯಾ, ನಂದು ಜೊತೆಯೂ ಹೀಗೆ ಮರ್ತನೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಸಾನ್ಯ ಮತ್ತು ನಂದು ಇಬ್ಬರು ಈ ವಿಚಾರದ ಬಗ್ಗೆ ಚರ್ಚೆ ಮಾಡಿದರು. 'ಉದಯ್ ಹಿಂದಿನಿಂದ ಬಂದು ಹಗ್ ಮಾಡಿ, ಕಿವಿಗೆ ಕಿಸ್ ಮಾಡುತ್ತಾರೆ. ಎಷ್ಟು ಹಿಂಸೆ ಆಗುತ್ತದೆ. ನನಗೆ ಮೊನ್ನೆ ಕೋಪವೇ ಬಂತು. ಎಲ್ಲರೂ ಇದ್ದಾರೆ ಎಂದು ನಾನು ರಿಯಾಕ್ಟ್ ಮಾಡಲಿಲ್ಲ' ಎಂದು ಸಾನ್ಯಾ ಹೇಳಿದರು. ನಂದು ಕೂಡ ಈ ಬಗ್ಗೆ ಮಾತನಾಡಿ 'ಅವನು ನನಗೂ ಮೊನ್ನೆ ಅದೇ ರೀತಿ ಮಾಡಿದ್ದ. ಜಶ್ವಂತ್ ಎದುರೇ ಆ ರೀತಿ ಮಾಡಿದ' ಎಂದು ದೂರಿದರು. 

ಉದಯ್ ಈಗ ಬಿಗ್ ಬಾಸ್ ಮನೆಯ ಕೆಲವು ಮಹಿಳ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಮನೆಯ ಕಿಸ್ಸರ್ ಆಗಿರುವ ಉದಯ್ ವಿಚಾರವನ್ನು ಸುದೀಪ್ ಪ್ರಸ್ತಾಪ ಮಾಡುತ್ತಾರಾ ಎಂದು ಕಾದುನೋಡಬೇಕು. 

ರಾಕೇಶ್‌ ಔಟ್‌ ಆರ್ಯವರ್ಧನ್‌ ಇನ್: ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಗುರೂಜಿ!

ಬಿಗ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್. ಇವರಲ್ಲಿ ಇದೀಗ ಕಿರಣ್ ಮನೆಯಿಂದ ಹೊರಬಂದಿದ್ದು ಸದ್ಯ 15 ಸ್ಪರ್ಧಿಗಳು ಇದ್ದಾರೆ. ಇವರಲ್ಲಿ ಈ ವಾರ ಮನೆಯಿಂದ ಹೊರಬರುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. 

Follow Us:
Download App:
  • android
  • ios