ನೀನು ಏನ್ ಬಲತ್ಕಾರ ಮಾಡಿದ್ಯಾ? ಹೆದರಬೇಡ ಸುಮ್ಮನೆ ಟಾರ್ಗೆಟ್ ಮಾಡ್ತಿದ್ದಾರೆ; ಡ್ರೋನ್ ಪ್ರತಾಪ್‌ಗೆ ಧೈರ್ಯ ಹೇಳಿದ ನೀತು
ಡ್ರೋನ್ ಪ್ರತಾಪ್ ಪರ ನಿಂತ ನೀತು. ದೈರ್ಯ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್....
ಬಿಗ್ ಬಾಸ್ ಸೀಸನ್ 10ರ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದವರು ಡ್ರೋನ್ ಪ್ರತಾಪ್. ಎಕ್ಸ್‌ಪರೀಮೆಂಟ್‌ಗಳ ಮೂಲಕ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಸಖತ್ ಹೆಸರು ಮಾಡಿದ್ದಾರೆ. ಕಾಗೆ ಅಂದ್ರೆ ಪ್ರತಾಪ್ ಹಾಗೆ ಹೀಗೆ ಎಂದು ನೆಗೆಟಿವ್ ಆಗಿ ಹರಿದಾಡುತ್ತಿದ್ದ ಕಾಮೆಂಟ್‌ಗಳಿಗೆ ಪಾಸಿಟಿವ್ ಉತ್ತರ ಕೊಟ್ಟು ಪ್ರತಾಪ್ ಮತ್ತೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ತುಮಕೂರಿನಲ್ಲಿ ಸೋಡಿಯಂ ಸ್ಟೋಟಗೊಳ್ಳಿಸಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಅರೆಸ್ಟ್ ಮಾಡಿದ್ದರು. ಜಾಮೀನು ಪಡೆದು ಹೊರ ಬಂದ ಪ್ರತಾಪ್ ಬೇಸರದಲ್ಲಿದ್ದರು.
ಬಿಗ್ ಬಾಸ್ ಮನೆಯಲ್ಲಿ ಸಪೋರ್ಟ್ ಆಗಿದ್ದವರು ನೀತು ವನಜಾಕ್ಷಿ. ಈ ಸಮದಯಲ್ಲಿ ಪ್ರತಾಪ್ ಜೊತೆ ಮಾತನಾಡಬೇಕು, ಸಪೋರ್ಟ್ ಆಗಿ ನಿಲ್ಲಬೇಕು ಎಂದು ಹುಡುಕಿಕೊಂಡು ಊರಿಗೆ ಹೋಗಿದ್ದಾರೆ.'ಹತ್ಯೆ ಮಾಡಿದ್ಯಾ ನೀನು? ಬಲತ್ಕಾರ ಮಾಡಿದ್ಯಾ? ಮಾಡಿಲ್ಲ ಅಂದ ಮೇಲೆ ಯಾಕೆ ಹೆದರಿಕೊಳ್ಳುತ್ತೀಯಾ? ನಮ್ಮ ಸಮಾಜದಲ್ಲಿ ಎಷ್ಟೋಂದು ಸಮಸ್ಯೆಗಳು ಇದೆ ಅದನ್ನು ಬಿಟ್ಟು ಇದನ್ನ ತೋರಿಸುತ್ತಿದ್ದಾರೆ. ಬೇರೆ ಅವರು ಕೂಡ ವಿಡಿಯೋಗಳನ್ನು ಮಾಡಿದ್ದಾರೆ ತಾನೆ ಅವರನ್ನು ಕೂಡ ಹಿಡಿಯಬೇಕು. ನಿನ್ನನ್ನು ಯಾಕೆ ಪಾಯಿಂಟ್ ಔಟ್ ಮಾಡುತ್ತಿದ್ದಾರೆ ಅಂದ್ರೆ ನಿನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಅಂತ. ಟಾರ್ಗೆಟ್ ಮಾಡಿರುವವರು ಟಾರ್ಗೆಟ್ ಆಗಿರುವವರು ಲಕ್ಷಾಂತ ಜನರಿದ್ದಾರೆ. ಅದಕ್ಕೆ ತಲೆ ಕೆಡಿಸಿಕೊಕೊಳ್ಳುವ ಅವಶ್ಯಕತೆನೇ ಇಲ್ಲ. ಬಿಂದಾಸ್ ಆಗಿರು. ನನಗೆ ಇರಲ್ಲಿ ಏನೋ ತಪ್ಪಿದೆ ಅನಿಸಲಿಲ್ಲ. ಈ ರೀತಿ ಆಗಲೆ ನಡೆದಿದೆ. ಬೇರೆ ಅವರು ಮಾಡಿರುವುದಕ್ಕೆ ಯಾಕೆ ಶಿಕ್ಷೆ ಕೊಟ್ಟಿಲ್ಲ? ಅವಿರಿಗೆ ಯಾಕೆ ಪಾಯಿಂಟ್ ಔಟ್ ಮಾಡುತ್ತಿಲ್ಲ? ಇದನ್ನು ನೋಡಿದರೆ ಇದು ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾನೇ ಅರ್ಥ. ನೀನು ಭಯ ಪಡೋಕೆ ಹೋಗಬೇಡ' ಎಂದು ನೀತು ಧೈರ್ಯ ಹೇಳಿದ್ದಾರೆ.
ಭವ್ಯಾ ಗೌಡ ಜೊತೆ ಸೇರಿಕೊಂಡ ಮೋಸ ಮಾಡಿದ ಮೋಕ್ಷಿತಾ ಪೈ; ಸಾಕ್ಷಿ ಮುಂದಿಟ್ಟು ವೀಕ್ಷಕರು
ಏನಿದು ಸೋಡಿಂ ಸ್ಫೋಟ:
ತುಮಕೂರು ಜಿಲ್ಲೆ ಮಧುಗಿರಿಯ ಜನಕಲೋಟಿ ಬಳಿಯ ಫಾರ್ಮ್ ಹೌಸ್ ನೀರಿನ ಕೊಳದಲ್ಲಿ ಸೋಡಿಯಂ ಸ್ಪೋಟಿಸಿದ್ದ ಪ್ರತಾಪ್ ಅವರನ್ನು ಬಂಧಿಸಿದ್ದ ಪೊಲೀಸರು 3 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಇದಾದ ನಂತರ, ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದರಿಂದ 8 ದಿನಗಳ ಕಾಲ ಜೈಲಿನಲ್ಲಿದ್ದು, ನಿನ್ನೆ ಜಾಮೀನು ಮಂಜೂರು ಮಾಡಲಾಗಿತ್ತು.ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡ್ರೋನ್ ಪ್ರತಾಪ್, ದೇಶಾದ್ಯಂತ ನೂರಾರು ಸೋಡಿಯಂಮೆಟಲ್ ಸ್ಪೋಟದ ಎಕ್ಸ್ಪರಿಮೆಂಟ್ ಮಾಡಿದ ವಿಡಿಯೋ ಗಳ ಅಪ್ಲೋಡ್ ಮಾಡಲಾಗಿದೆ. ಅವರನೆಲ್ಲಾ ಏಕೆ ಅರೆಸ್ಟ ಮಾಡಿಲ್ಲ? ಸರ್ಕಾರದಿಂದ ನನ್ನನ್ನೆ ಯಾಕೆ ಟಾರ್ಗೆಟ್ ಮಾಡಿ ಅರೆಸ್ಟ್ ಮಾಡಲಾಯಿತು? ನಮ್ಮ ದೇಶ ಆಗಬಹುದು, ವಿದೇಶ ಆಗಿರಬಹುದು ಎಲ್ಲಾ ಕಡೆ ಇಂತಹ ವಿಡಿಯೋಗಳಿವೆ. ಕಾನೂನು ಎಲ್ಲಾರಿಗೂ ಒಂದೇ. ಒಬ್ಬರಿಗೆ ಒಂದೂಂದು ಕಾನೂನು ಇರೊಲ್ಲ. ನನ್ನ ಒಬ್ಬನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದೀರಿ.? ಬೇರೆಯವರೆಲ್ಲಾ ಸೇಮ್ ಎಕ್ಸ್ಪರೆಮೆಂಟ್ ನಾ, ಕೆಜಿ ಗಟ್ಟಲೆ ಸೋಡಿಯಂ ಬಳಸಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿಡಿಯೋಗಳು ಮೊಬೈಲ್‌ನಲ್ಲಿ ಈಗಲೂ ಸಿಗುತ್ತವೆ. ಯಾರ ಮೇಲೂ ಇಲ್ಲದ ಕ್ರಮ ನನ್ನ ಮೇಲೆ ಏಕೆ ಜರುಗಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಡಬಲ್ ಧಮಾಕಕ್ಕೆ ಚೈತ್ರಾ ಕುಂದಾಪುರ ಶಾಕ್; ಫಿನಾಲೆ ಟಿಕೆಟ್ ಕೈ ತಪ್ಪಿದ್ದರೂ ಸಿಕ್ತು ಮೆಡಲ್