ಡಬಲ್ ಧಮಾಕಕ್ಕೆ ಚೈತ್ರಾ ಕುಂದಾಪುರ ಶಾಕ್; ಫಿನಾಲೆ ಟಿಕೆಟ್ ಕೈ ತಪ್ಪಿದ್ದರೂ ಸಿಕ್ತು ಮೆಡಲ್

ಟಿಕೆಟ್ ಟು ಫಿನಾಲೆ ವಾರದಲ್ಲಿ ಉತ್ತರ ಪ್ರಶಸ್ತಿ ಪಡೆದ ಚೈತ್ರಾ ಕುಂದಾಪುರ. ಕಳೆಪೆ ಕೊಟ್ಟು ಕಸಕ್ಕೆ ಎಸೆದವರೇ ಹೊಗಳಿದ್ದು ಡಬಲ್ ಆಶ್ಚರ್ಯ.... 

Bigg Boss Chaithra Kundapura gets best performer of 15th week

ಬಿಗ್ ಬಾಸ್ ಸೀಸನ್ 11, 100 ದಿನ ಪೂರೈಸುತ್ತಿದ್ದಂತೆ ಟಿಕೆಟ್ ಟು ಫಿನಾಲೆ ವಾರ ನಡೆದಿದೆ. ಈ ವಾರ ಬಿಗ್ ಬಾಸ್ ಕೊಡುವ ಅತಿ ಕಷ್ಟದ ಟಾಸ್ಕ್‌ಗಳಲ್ಲಿ ಯಾರು ಪಾಸ್ ಆಗಿ ಹಂತದಿಂದ ಹಂತಕ್ಕೆ ಮುಂದಕ್ಕೆ ಹೋಗಿ ಈ ವಾರದ ಕ್ಯಾಪ್ಟನ್ ಆಗುತ್ತಾರೋ ಅವರೇ ಟಿಕೆಟ್‌ ಟು ಫಿನಾಲೆ ಪಡೆಯುತ್ತಾರೆ. ಈ ವಾರ ಕ್ಯಾಪ್ಟನ್ ಪಟ್ಟ ಮತ್ತು ಫಿನಾಲೆ ಟಿಕೆಟ್ ಪಡೆದವರು ಹನುಮಂತು. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ಫಿನಾಲೆ ಮುಟ್ಟಿರುವುದು ಎಲ್ಲರೂ ಆಶ್ಚರ್ಯ ತಂದಿದೆ. ಇನ್ನು ಈ ವಾರ ಉತ್ತಮ ಮತ್ತು ಕಳಪೆ ಚರ್ಚೆ ಜೋರಾಗಿ ನಡೆದಿದೆ. 

ಹೌದು! ಈ ವಾರ ಇಡೀ ಮನೆ ಉತ್ತಮವನ್ನು ಚೈತ್ರರನ್ನು ಆಯ್ಕೆ ಮಾಡಿದ್ದಾರೆ ಹಾಗೂ ಕಳಪೆಗೆ ಉಗ್ರಂ ಮಂಜುರನ್ನು ಆಯ್ಕೆ ಮಾಡಿದ್ದಾರೆ . 'ಈ ವಾರ ಚೈತ್ರಾ ಅವರಲ್ಲಿ ವಾವ್ ಫ್ಯಾಕ್ಟರ್ ತುಂಬ ಕಾಣಿಸಿತ್ತು. ತುಂಬಾ ಚೆನ್ನಾಗಿ ಆಟವಾಡಿದ್ರು. ದುರದೃಷ್ಟವಶಾತ್ ನೀವು ಎರಡು ಟಾಸಕ್‌ ಆಡುವುದಕ್ಕೆ ಆಗಲಿಲ್ಲ. ಒಟ್ಟಾರೆ ಈ ವಾರ ನಿಮ್ಮ ಆಟ ನೋಡಿ ನನಗೆ ವೈಯಕ್ತಿಕವಾಗಿ ತುಂಬ ಖುಷಿ ಆಯ್ತು' ಎಂದದು ರಜತ್ ಹೇಳಿದ್ದಾರೆ. ರಜತ್ ಮಾತುಗಳು ಚೈತ್ರಾರಿಗೆ ನಿಜಕ್ಕೂ ಆಶ್ಚರ್ಯವಾಯ್ತು. 'ತಮ್ಮ ತಂಡದ ನಾಲ್ಕು ಜನರಿಗೆ ಚೈತ್ರಕ್ಕೆ ಕೂಡ ಒಬ್ಬರು. ನಾವು ಅವರನ್ನು ಹೊರಗೆ ಹಾಕಬೇಕಾದ ಸ್ಥಿತಿ ಬಂತು. ಆದರೂ ಕುಗ್ಗದೇ ಮನೆಯವರಿಗೆ ಅಡುಗೆ ಮಾಡಿ ಬಿಡಿಸಿದ್ದಾರೆ. ಮತ್ತೆ ಎಲ್ಲರ ಜೊತೆಗೆ ಸಂತೋಷದಿಂದ ಬೆರೆತಿದ್ದಾರೆ. ಅದಕ್ಕೆ ಅವರಿಗೆ ಉತ್ತಮ' ಎಂದು ಉಗ್ರಂ ಮಂಜು ಹೇಳಿದ್ದಾರೆ. 

ಬಿಗ್ ಬಾಸ್ ಭವ್ಯಾ ಗೌಡ ಹಳೆ ಫೋಟೋಗಳು ವೈರಲ್; ಹೇರ್‌ಸ್ಟೈಲ್‌ ಕರಾಬು ಎಂದು ಕಾಲೆಳೆದ ನೆಟ್ಟಿಗರು

'ಈ ವಾರ ನನ್ನ ಉತ್ತಮ ಚೈತ್ರಕ್ಕಗೆ. ತುಂಬಾ ಅಚ್ಚರಿಯಾಗಿ ಈ ವಾರ ನೀವು ಕಾಣಿಸಿಕೊಂಡಿದ್ದೀರಿ' ಎಂದು ತ್ರಿವಿಕ್ರಮ್ ಹೇಳಿದ್ದಾರೆ. 'ಆಟದಿಂದ ಯಾವ ರೀತಿ ನೋವಾಗುತ್ತದೆ ಎಂಬುದು ನನಗೆ ಗೊತ್ತಿದೆ. ಅಷ್ಟು ಬೇಜಾರು ಇದ್ರೂನೂ ಬೇಗ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡು ಬಂದು ಅಡುಗೆ ಮನೆಯಲ್ಲಿ ಅಡುಗೆ ಮಾಡಿದರು ಚೈತ್ರಕ್ಕೆ. ಹಾಗಾಗಿ ಈ ವಾರ ಉತ್ತಮ ಚೈತ್ರಾ' ಎಂದು ಮೋಕ್ಷಿತಾ ಹೇಳಿದ್ದಾರೆ. 'ಇಡೀ ಮನೆ ಚೈತ್ರಕ್ಕೆ ಅವರನ್ನು ಡಸ್ಟ್‌ ಬಿನ್‌ಗೆ ಹಾಕಿತ್ತು ಆದರೆ ಈಗ ಮತ್ತೆ ಇಡೀ ಮನೆ ಅವರನ್ನು ಹೊಗಳುತ್ತಿದೆ. ನಮ್ಮ ಮೆಚ್ಚುಗೆಗಿಂತ ಅವರ ಶಿಷ್ಯನ ಮೆಚ್ಚುಗೆ ಅವರಿಗೆ ಸಿಕ್ಕಿದೆ. ಚೈತ್ರ ಅವರಿಗೆ ನನ್ನ ಉತ್ತಮ' ಎಂದು ಧನರಾಜ್ ಹೇಳಿದ್ದಾರೆ. 'ಚೈತ್ರಕ್ಕೆ ನನ್ನ ಉತ್ತ. ಈ ವಾರ ತುಂಬಾ ಚೆನ್ನಾಗಿ ಆಡಿದ್ದಾರೆ' ಎಂದು ಗೌತಮಿ ಹೇಳಿದ್ದಾರೆ. 

ಮೋಕ್ಷಿತಾ ಯಾವತ್ತೂ ಮೈ ಕಾಣೋ ಬಟ್ಟೆ ಹಾಕಿಲ್ಲ; ಫ್ಯಾನ್ಸ್‌ ವೈರಲ್ ಮಾಡಿದ ಫೋಟೋಗಳಿದು

ಫ್ಯಾಮಿಲಿ ರೌಂಡ್‌ನಲ್ಲಿ ಚೈತ್ರಾ ಕುಂದಾಪುರ ತಾಯಿ ಬಂದು ನನ್ನ ಮಗಳೇ ನನಗೆ ಉತ್ತಮ್ಮ ಎಂದು ಗೋಲ್ಡ್ ಮೆಡಲ್ ಹಾಕಿದ್ದರು. ಈಗ ಇಡೀ ಮನೆ ಚೈತ್ರ ಕುಂದಾಪುರಗೆ ಉತ್ತಮ ಕೊಟ್ಟಿದ್ದಾರೆ. ಹೀಗಾಗಿ ಡಬಲ್ ಧಮಾಕ್ ಹೊಡೆದಿದ್ದಾರೆ. 'ನನಗೆ ಈ ವಾರ ಎರಡು ಉತ್ತಮ ಸಿಕ್ಕಿದೆ. ಒಂದು ಜಗತ್ತಿನ ಉತ್ತಮ ಆಗಿರುವ ಅಮ್ಮನಿಂದ ಉತ್ತಮ ಮಗಳು ಅನಿಸಿಕೊಂಡೆ. ನನ್ನ ಬದುಕಿನ ಅದೃಷ್ಟ ದೇವತೆ ನನ್ನ ಅಮ್ಮ. ನೀನು ಬಂದು ಹೋದ ಮೇಲೆ ನನಗೆ ಇಲ್ಲಿ ಉತ್ತರಮ ಸಿಕ್ಕಿದೆ' ಎಂದು ಚೈತ್ರಾ ಹೇಳಿದ್ದಾರೆ. 

ಬಿಗ್ ಬಾಸ್ ಗೌತಮಿ ಬಾಯಲ್ಲಿ ಪದೇ ಪದೇ ಕೇಳಿ ಬರುವ ವನದುರ್ಗ ದೇವಿ ಎಲ್ಲಿದೆ? ಅದ್ಭುತ ಪವಾಡಗಳ ಸ್ಥಳವಿದು

Latest Videos
Follow Us:
Download App:
  • android
  • ios