ಭವ್ಯಾ ಗೌಡ ಜೊತೆ ಸೇರಿಕೊಂಡ ಮೋಸ ಮಾಡಿದ ಮೋಕ್ಷಿತಾ ಪೈ; ಸಾಕ್ಷಿ ಮುಂದಿಟ್ಟು ವೀಕ್ಷಕರು
ಟಿಕೆಟ್ ಟು ಫಿನಾಲೆ ಪಡೆಯಲು ಮೋಸ ಮಾಡಿದ ಭವ್ಯಾ- ಮೋಕ್ಷಿತಾ. ವಿಡಿಯೋ ಸಾಕ್ಷಿ ಮುಂದಿಟ್ಟು ಬಿಗ್ ಬಾಸ್‌ನ ಪ್ರಶ್ನೆ ಮಾಡಿದ ನೆಟ್ಟಿಗರು...
ಬಿಗ್ ಬಾಸ್ ಸೀಸನ್ 11ರಲ್ಲಿ ಟಿಕೆಟ್ ಟು ಫಿನಾಲೆ ವಾರ ನಡೆಯುತ್ತಿದೆ. ಕಳೆದ ಒಂದು ವಾರಗಳಿಂದ ಬಿಗ್ ಬಾಸ್ ನೀಡಿದ ಟಫ್ ಟಾಸ್ಕ್‌ಗಳನ್ನು ಸ್ಪರ್ಧಿಗಳು ಎದುರಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿ ಹನುಮಂತು ಈ ವಾರದ ಕ್ಯಾಪ್ಟನ್ ಆಗಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾನೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಇದೇ ಮೊದಲು ಫಿನಾಲೆ ವಾರಕ್ಕೆ ಕಾಲಿಟ್ಟಿರುವುದು ಎನ್ನಬಹುದು. ಇನ್ನು ಈ ವಾರ ನೀಡಿದ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಚೈತ್ರಾ ಕುಂದಾಪುರ ಎಂದು ಮನೆ ಮಂದಿ ಹೇಳಿದ್ದಾರೆ. ಆದರೆ ಮೋಕ್ಷಿತಾ ಮತ್ತು ಭವ್ಯಾ ಗೌಡನ ದೂರಲು ಶುರು ಮಾಡಿದ್ದಾರೆ.
ನೀರಿನ ಟಾಸ್ಕ್‌ನಲ್ಲಿ ಭವ್ಯಾ ಗೌಡ- ಮೋಕ್ಷಿತಾ ಪೈ ಜೋಡಿಯಾಗಿದ್ದರು. ಉಗ್ರಂ ಮಂಜು ಮತ್ತು ಗೌತಮಿ ಜೋಡಿಯಾಗಿದ್ದರು. ನೀರಿನ ಟ್ಯಾಂಕ್‌ನಲ್ಲಿ ಒಬ್ಬ ಸ್ಪರ್ಧಿ ಮಲಗಿರಬೇಕು ನೀರು ತುಂಬುತ್ತಿದ್ದಂತೆ ಅದನ್ನು ಮತ್ತೊಬ್ಬ ಸ್ಪರ್ಧಿ ಹೊರ ತೆಗೆದು ಬಕೆಟ್ ತುಂಬಿಸಬೇಕು. ನೀರಿನಲ್ಲಿ ಇರುವ ಸ್ಪರ್ಧಿಗಳು ಕಂಬಿ ಹಿಡಿದು ಮಲಗಿರಬೇಕು ಆದಷ್ಟು ಕಂಬಿ ಮೂಲಕವೇ ಉಸಿರಾಡಬೇಕು ಯಾವಾಗ ಆಗಲ್ಲ ಅನಿಸುತ್ತದೆ ಅವರು ಕಂಬಿ ತೆಗೆದು ಹೊರ ಬರಬೇಕು. ಇಲ್ಲಿ ಕಾಲುಗಳ ಸಪೋರ್ಟ್ ತೆಗೆದುಕೊಳ್ಳುವಂತೆ ಇಲ್ಲ ಎಂದು ಬಿಗ್ ಬಾಸ್ ಹೇಳಿರುತ್ತಾರೆ ಆದರೆ ರಜತ್ ಕ್ಯಾಪ್ಟನ್ ಆಗಿದ್ದು ಕೊಂಚ ಸಪೋರ್ಟ್ ತೆಗೆದುಕೊಳ್ಳಬಹುದು ಎನ್ನುತ್ತಾರೆ.
ಡಬಲ್ ಧಮಾಕಕ್ಕೆ ಚೈತ್ರಾ ಕುಂದಾಪುರ ಶಾಕ್; ಫಿನಾಲೆ ಟಿಕೆಟ್ ಕೈ ತಪ್ಪಿದ್ದರೂ ಸಿಕ್ತು ಮೆಡಲ್
ರಜತ್ ಹೇಳಿದ ಮಾತನ್ನು ಉಗ್ರಂ ಮಂಜು ಪಾಲಿಸುತ್ತಾರೆ ಆದರೆ ನೀರು ಹೆಚ್ಚಾದ ಕಾರಣ ಹೊರ ಬರುತ್ತಾರೆ. ಈ ಟಾಸ್ಕ್‌ನಲ್ಲಿ ಮೋಕ್ಷಿತಾ ಮತ್ತು ಭವ್ಯಾ ಗೌಡ ಗೆಲ್ಲುತ್ತಾರೆ. ಆದರೆ ಇಲ್ಲಿ ಮೋಕ್ಷಿತಾ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ತೋರಿಸಿರುವ ದೃಶ್ಯಗಳ ಪ್ರಕಾರ ಮೋಕ್ಷಿತಾ ಕಾಲುಗಳನ್ನು ಮಡಚಿಕೊಂಡು ಸಪೋರ್ಟ್ ತೆಗೆದುಕೊಂಡಿದ್ದಾರೆ. ರಜತ್ ಹೇಳಿರುವುದು ಕಾಲುಗಳನ್ನು ಕಂಬಿಗೆ ತಗುಲಿಸಬಹುದು ಸಪೋರ್ಟ್ ತೆಗೆದುಕೊಳ್ಳಬಹುದು ಎಂದು ಆದರೆ ಮೋಕ್ಷಿತಾ ಒಂದು ಕಾಲು ಕಂಬಿಗೆ ಮತ್ತೊಂದು ಕಾಲ ಮಡಚಿಕೊಂಡು ಆರಾಮ್ ಆಗಿ ಕುಳಿತಿದ್ದರು. ಒಳೆ ಏನಾಗುತ್ತಿದೆ ಎಂದು ನೋಡಲು ಇತರ ಸ್ಪರ್ಧಿಗಳಿಗೆ ಆಗಲ್ಲ ಆದರೆ ಬಿಬಿ ಇಟ್ಟಿರುವ ಕ್ಯಾಮೆರಾವನ್ನು ವೀಕ್ಷಕರ ನೋಡಬಹುದಿತ್ತು. ಹೀಗಾಗಿ ಇಷ್ಟು ದಿನ ಭವ್ಯಾ ಗೌಡ ಮೋಸ ಮಾಡುತ್ತಿದ್ದಳು ಈಗ ಅವಳೊಟ್ಟಿಗೆ ಮೋಕ್ಷಿತಾ ಸೇರಿಕೊಂಡಿದ್ದಾಳೆ ಎಂದು ವೀಕ್ಷಕರು ಕಾಲೆಳೆದಿದ್ದಾರೆ.
ಬಿಗ್ ಬಾಸ್ ಭವ್ಯಾ ಗೌಡ ಹಳೆ ಫೋಟೋಗಳು ವೈರಲ್; ಹೇರ್‌ಸ್ಟೈಲ್ ಕರಾಬು ಎಂದು ಕಾಲೆಳೆದ ನೆಟ್ಟಿಗರು