Bigg Boss Ott Armaan Malik Wife Kritika: ಶಾಪಕ್ಕೆ ಕಲ್ಲು ಒಡೆಯುವ ಶಕ್ತಿ ಇರುತ್ತದೆ. ನೆಗೆಟಿವ್‌ ಮಾತುಗಳಿಂದಲೇ ನನ್ನ ಮಗನ ಆರೋಗ್ಯ ಹಾಳಾಗಿದೆ ಎಂದು ʼಬಿಗ್‌ ಬಾಸ್ʼ‌ ಸ್ಪರ್ಧಿಯೋರ್ವರು ಆರೋಪ ಮಾಡಿದ್ದಾರೆ. “ನನ್ನನ್ನು ಬೇಕಿದ್ರೆ ನಿಂದಿಸಿ, ಆದರೆ ನಮ್ಮ ಮಕ್ಕಳಿಗೆ ಏನೂ ಹೇಳಬೇಡಿ” ಎಂದು ಅವರು ಮನವಿ ಮಾಡಿದ್ದಾರೆ. 

ಮಾತು ಚೆನ್ನಾಗಿರಬೇಕು, ಮಾತು ಸರಿಯಾಗಿರಬೇಕು, ಅಶ್ವಿನಿ ದೇವತೆಗಳು ಅಸ್ತು ಅನ್ನುತ್ತಿರುತ್ತವಂತೆ ಅಂತ ಹೇಳಲಾಗುತ್ತದೆ. “ನನ್ನ ಮಗನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಅವನಿಗೆ ಕಾಯಿಲೆ ಬಂದಿದೆ” ಎಂದು ʼಬಿಗ್‌ ಬಾಸ್ʼ‌ ಸ್ಪರ್ಧಿ ಕೃತಿಕಾ ಮಲಿಕ್‌ ಅವರು ಆರೋಪ ಮಾಡಿದ್ದಾರೆ.

ಜೈದ್‌ಗೆ ಆರೋಗ್ಯ ಸಮಸ್ಯೆ! 
ಯುಟ್ಯೂಬ್‌ನಲ್ಲಿ ವಿಡಿಯೋ ಮಾಡಿ ನೂರು ಕೋಟಿ ರೂಪಾಯಿ ಆಸ್ತಿ ಮಾಡಿರುವ ಅರ್ಮಾನ್‌ ಮಲಿಕ್‌ ʼಹಿಂದಿ ಬಿಗ್‌ ಬಾಸ್‌ʼ ಶೋನಲ್ಲಿಯೂ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಇವರ ಪತ್ನಿಯರು ಕೂಡ ದೊಡ್ಮನೆಯೊಳಗಡೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಈಗ ಎರಡನೇ ಪತ್ನಿ ಕೃತಿಕಾ ಮಲಿಕ್‌ ಮಗ ಜೈದ್‌ಗೆ ಆರೋಗ್ಯ ಸಮಸ್ಯೆ ಉಂಟಾಗಿದೆ.

ನಂಬರ್‌ ಎಂದ್ರೆ ನಾನು, ನಾನೆಂದ್ರೆ ನಂಬರ್‌ ಎನ್ನುತ್ತಲೇ ಆರ್ಯವರ್ಧನ್‌ ಗುರೂಜಿ ಭರ್ಜರಿ ಸ್ಟೆಪ್‌! ತೀರ್ಪುಗಾರರೇ ಶಾಕ್‌

ಕೃತಿಕಾ ಮಲಿಕ್‌ ಹೇಳಿದ್ದೇನು? 
ಯುಟ್ಯೂಬ್‌ನಲ್ಲಿ ವಿಡಿಯೋ ಮಾಡಿ ಕೃತಿಕಾ ಈ ವಿಷಯ ಹಂಚಿಕೊಂಡಿದ್ದಾರೆ. “ನೆಗೆಟಿವ್‌ ಕಾಮೆಂಟ್ಸ್‌ಗಳಿಂದಲೇ, ನಿಂದನೆಯಿಂದಲೇ ನನ್ನ ಮಗನ ಆರೋಗ್ಯ ಹಾಳಾಗಿದೆ. ದಯವಿಟ್ಟು ಮಕ್ಕಳಿಗೆ ಈ ರೀತಿ ಬೈಯ್ಯಬೇಡಿ, ನನ್ನ ಮಗನಿಗೆ ಶಾಪ ಹಾಕಬೇಡಿ” ಎಂದು ಹೇಳಿರುವ ಕೃತಿಕಾ ಕಣ್ಣೀರು ಹಾಕಿದ್ದಾರೆ. ಇನ್ನು ಅರ್ಮಾನ್‌ ಮೊದಲ ಪತ್ನಿ ಪಾಯಲ್‌ ಕೂಡ ಮಾತನಾಡಿದ್ದು, “ಶಾಪಗಳಿಂದ ಕಲ್ಲು ಕೂಡ ಒಡೆಯುತ್ತದೆ ಅಂತ ಹೇಳ್ತಾರೆ. ಅದಂತೂ ಸತ್ಯ. ನಮ್ಮ ಮಕ್ಕಳನ್ನು ಇಷ್ಟಪಟ್ಟರೆ ಅವರಿಗೆ ಪ್ರೀತಿ ಕೊಡಿ, ಬೈಬೇಕು ಅಂದ್ರೆ ನನಗೆ ನಿಂದಿಸಿ. ದಯವಿಟ್ಟು ಮಕ್ಕಳಿಗೆ ಶಾಪ ಹಾಕೋದು ಬಿಡಿ, ಅವರು ಏನು ತಪ್ಪು ಮಾಡಿದ್ದಾರೆ” ಎಂದು ಪ್ರಶ್ನೆ ಮಾಡಿದ್ದಾರೆ. 

ಜೈದ್‌ ಆರೋಗ್ಯ ಹದಗೆಡುತ್ತಿದೆ! 
ವಿಟಾಮಿನ್‌ ಡಿ ಕೊರತೆಯಿಂದ ರಿಕೆಟ್‌ ಕಾಯಿಲೆ ಬರುವುದು. ಇದರಿಂದ ಮೂಳೆಗಳು ವೀಕ್‌ ಆಗುತ್ತವೆ. ವಾಕ್‌ ಮಾಡೋದರಿಂದ ಹಿಡಿದು, ದೈಹಿಕ ಚಟುವಟಿಕೆಗಳನ್ನು ಕೂಡ ಮಾಡಲಾಗೋದಿಲ್ಲ. ಇನ್ನು ಜೈದ್‌ ಆರೋಗ್ಯ ಹದಗೆಡುತ್ತಿದ್ದು, ಡಾಕ್ಟರ್‌ ಭೇಟಿ ಆಗುತ್ತಿದ್ದೇವೆ ಎಂದು ಕೃತಿಕಾ ಹೇಳಿದ್ದಾರೆ. 

ಬಿಗ್‌ಬಾಸ್‌ನಲ್ಲಿ ಬೆಡ್‌ರೂಮ್‌ ವಿಡಿಯೋ ಲೀಕ್‌ ಆಗ್ತಿದ್ದಂತೆಯೇ ಅರ್ಮಾನ್‌ ಮಲಿಕ್‌ಗೆ ಪತ್ನಿ ಡಿವೋರ್ಸ್?

ಅರ್ಮಾನ್‌ ಮಲಿಕ್‌ಗೆ ಇಬ್ಬರು ಪತ್ನಿಯರು! 
ಅರ್ಮಾನ್‌ ಮಲಿಕ್‌ ಹಾಗೂ ಪಾಯಲ್‌ ಪರಿಚಯ ಆಗಿ ಏಳು ದಿನಕ್ಕೆ ಈ ಜೋಡಿ ಮದುವೆಯಾಗಿತ್ತು. ಇವರಿಗೆ ಚಿರಾಯು ಎಂಬ ಮಕ್ಕಳಿದ್ದಾರೆ. ಪಾಯಲ್‌ ಸ್ನೇಹಿತೆ ಕೃತಿಕಾ ನೋಡಿ ಅರ್ಮಾನ್‌ಗೆ ಲವ್‌ ಆಯ್ತು. ಇವರಿಬ್ಬರು ಕೂಡ ಪ್ರೀತಿ ಹುಟ್ಟಿ ಏಳು ದಿನಕ್ಕೆ ಮದುವೆಯಾದರು. ಗಂಡ ಎರಡನೇ ಮದುವೆ ಆದನು ಅಂತ ಪಾಯಲ್‌ ಮನೆ ಬಿಟ್ಟು ಒಂದು ವರ್ಷ ದೂರ ಇದ್ದರು. ಅದಾದ ನಂತರ ಮತ್ತೆ ಇವರೆಲ್ಲರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. 

ಇಬ್ಬರ ಹೆಂಡಿರ ಮುದ್ದಿನ ಗಂಡ; ಪತಿ ಎರಡನೇ ಮದ್ವೆಯಾಗಿದ್ದಕ್ಕೆ ಕಣ್ಣೀರಿಟ್ಟ ಪಾಯಲ್‌ ಮಲಿಕ್‌

ಕೃತಿಕಾ ಹಾಗೂ ಪಾಯಲ್‌ ಇಬ್ಬರೂ ಏಕಕಾಲಕ್ಕೆ ಗರ್ಭಿಣಿಯಾಗಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಅರ್ಮಾನ್‌ ಈ ವಿಷಯವನ್ನು ಹೇಳಿದಾಗ ಸಾಕಷ್ಟು ಟ್ರೋಲ್‌ ಆಗಿತ್ತು. ಇನ್ನು ಕೃತಿಕಾ ಜೈದ್‌ಗೆ ಜನ್ಮ ನೀಡಿದ್ದರೆ, ಪಾಯಲ್‌ ಇಬ್ಬರು ಅವಳಿ ಮಕ್ಕಳಿಗೆ ( ತೂಬಾ, ಅಯಾನ್‌ ) ಜನ್ಮ ನೀಡಿದ್ದಾರೆ. ಈ ಕುಟುಂಬ ನಿತ್ಯದ ದಿನಚರಿಯೆಲ್ಲವನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತದೆ. ವಿಡಿಯೋ ರೆಕಾರ್ಡ್‌ ಮಾಡೋದರಿಂದ, ಎಡಿಟ್‌ ಆಗಿ, ಅಪ್‌ಲೋಡ್‌ ಆಗುವವರೆಗೂ ಉದ್ಯೋಗಿಗಳಿದ್ದಾರೆ. ಒಂದು ದೊಡ್ಡ ಫ್ಲ್ಯಾಟ್‌ನಲ್ಲಿ ವಾಸ ಮಾಡುವ ಇವರು ತಮ್ಮ ಉದ್ಯೋಗಿಗಳಿಗೂ ಕೂಡ ಸಿಕ್ಕಾಪಟ್ಟೆ ಸೌಕರ್ಯ ನೀಡಿದ್ದಾರಂತೆ.

ʼಬಿಗ್‌ ಬಾಸ್‌ ಒಟಿಟಿʼಯಲ್ಲಿಯೂ ಈ ಮೂವರು ಭಾಗವಹಿಸಿದ್ದರು. ಪಾಯಲ್‌ ಮೊದಲು ಔಟ್‌ ಆಗಿದ್ದು, ಅರ್ಮಾನ್‌ ಎರಡನೇ ಬಾರಿಗೆ ಔಟ್‌ ಆಗಿದ್ದಾರೆ. ಇನ್ನು ಫಿನಾಲೆವರೆಗೆ ಕೃತಿಕಾ ಇದ್ದರು. ಯುಟ್ಯೂಬ್‌ ಒಂದೇ ಅಲ್ಲದೆ ಬೇರೆ ಬೇರೆ ಉದ್ಯೋಗಗಳಲ್ಲಿಯೂ ಈ ಕುಟುಂಬ ಆಕ್ಟಿವ್‌ ಆಗಿದೆ.