ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರು ಸ್ಪರ್ಧಿ. ಈಗ ಅಶ್ವಿನಿ ಬಗ್ಗೆ ವಾಹಿನಿಯವರು ಏನು ಹೇಳಿದರು ಎನ್ನೋದನ್ನು ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ್ರು ಮಾತನಾಡಿರೋ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಶ್ವಿನಿ ಗೌಡ ಅವರು ನಟಿ ಹಾಗೂ ಉದ್ಯಮಿಯೂ ಹೌದು, ಅಷ್ಟೇ ಅಲ್ಲದೆ ಕನ್ನಡ ರಕ್ಷಣಾ ವೇದಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಅಶ್ವಿನಿ ಗೌಡ ಅವರ ಆಟದ ಬಗ್ಗೆ ಕರವೇ ಅಧ್ಯಕ್ಷ ನಾರಾಯಣಗೌಡ್ರು ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗ್ತಿದೆ.
ಬಿಗ್ ಬಾಸ್ ಮುಚ್ಚಬೇಕಿತ್ತು!
ಅಶ್ವಿನಿ ಗೌಡ ಇಲ್ಲ ಅಂದಿದ್ರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಶೋವನ್ನು ಮುಚ್ಚಬೇಕಾಗಿತ್ತು ಎಂದು ವಾಹಿನಿಯ ಮುಖ್ಯಸ್ಥರೇ ಹೇಳಿದ್ದರು ಎಂದು ನಾರಾಯಣಗೌಡ್ರು ಹೇಳಿದ್ದಾರೆ. ಈ ಮಾತನ್ನು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಅಂದಹಾಗೆ ವಾಹಿನಿಯಾಗಲೀ, ವಾಹಿನಿಯ ಸಿಬ್ಬಂದಿಯಾಗಲೀ ಈ ಬಗ್ಗೆ ಮಾತನಾಡಿಲ್ಲ.
ಡಿಮ್ಯಾಂಡ್ ತಿಳಿಸಿ
ಅಂದಹಾಗೆ ಬಿಗ್ ಬಾಸ್ ಫಿನಾಲೆ ತಲುಪಿರುವ ಅಶ್ವಿನಿ ಗೌಡ ಅವರಿಗೆ “ನಿಮ್ಮ ಡಿಮ್ಯಾಂಡ್ ಇದ್ದರೆ ತಿಳಿಸಿ” ಎಂದು ಹೇಳಲಾಗಿತ್ತು. ಆಗ ಅವರು ಕರವೇ ಅಧ್ಯಕ್ಷ ನಾರಾಯಣಗೌಡ್ರು ಬರಬೇಕು ಎಂದು ಹೇಳಿದ್ದರು. ಇನ್ನು ಒಂದು ವಾರದಲ್ಲಿ ನಾರಾಯಣಗೌಡ್ರು ಮಗನ ಮದುವೆ ಇದ್ದು, ಇನ್ನೂ ಸಾಕಷ್ಟು ಜನರಿಗೆ ಮದುವೆ ಆಹ್ವಾನ ಪತ್ರಿಕೆ ಕೊಡಬೇಕು ಎಂದು ಅವರು ಹೋಗೋದಿಲ್ಲ ಎಂದು ಹೇಳಿದ್ದಾರೆ.
ಅಶ್ವಿನಿ ಗೌಡಗೆ ಕನ್ನಡ ಬರೋದಿಲ್ಲ?
ಕರವೇಯಲ್ಲಿ ಆಕ್ಟಿವ್ ಆಗಿರುವ ಅಶ್ವಿನಿ ಗೌಡ ಅವರು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದು, ಅವರಿಗೆ ಕನ್ನಡ ಬರೆಯೋಕೆ ಬರೋದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದು ಸಾಬೀತಾಗಿದೆ. ಈ ಬಗ್ಗೆ ಕೂಡ ಮಾತನಾಡಿರೋ ನಾರಾಯಣಗೌಡ್ರು, “ಅಶ್ವಿನಿ ಗೌಡ ತಂದೆ ಶ್ರೀಮಂತರು, ಹೀಗಾಗಿ ಮಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ್ದರು. ಅವರು ಕರವೇಗೆ ಬರುವಾಗ ನೀವು ಯಾವ ಮಾಧ್ಯಮದಲ್ಲಿ ಓದಿದ್ದೀರಿ ಎಂದು ನಾನು ಪ್ರಶ್ನೆ ಮಾಡಿರಲಿಲ್ಲ. ಇನ್ನೊಂದು ಕಡೆ ಅವರ ಉದ್ದೇಶ ಏನು ಎಂದು ಕೇಳಿದ್ದೆ. ಆಗ ಅವರು ಕನ್ನಡದ ಮೇಲೆ ಅಭಿಮಾನ ಇದೆ, ನಾನು ಕನ್ನಡತಿ ಎಂದು ಹೇಳಿದ್ದರು” ಎಂದಿದ್ದಾರೆ.
ವಿಮರ್ಶೆ
ಅಶ್ವಿನಿ ಗೌಡ ಅವರು ಆಟದ ಭರದಲ್ಲಿ ಒಂದೆರಡು ಮಾತುಗಳನ್ನು ಆಡಿರೋದು, ಅನೇಕರಿಗೆ ಬೇಸರ ಉಂಟು ಮಾಡಿದೆ. ಈ ಬಗ್ಗೆ ದೊಡ್ಡ ಚರ್ಚೆಯಾಗಿದೆ. ಇನ್ನೊಂದು ಕಡೆ ಅಶ್ವಿನಿ ಗೌಡ ಅವರು ಛಲ ಬಿಡದೆ ಆಟ ಆಡಿದ್ದು, ಮಾತನಾಡಿದ್ದು ಕೂಡ ಪ್ರಶಂಸನೀಯ.
ಬಿಗ್ ಬಾಸ್ ಗೆಲ್ಲುತ್ತಾರಾ?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರು ಗೆಲ್ಲುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.


