BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ತಾಯಿಗೆ ಗಿಫ್ಟ್‌ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಉಳಿದ ಸ್ಪರ್ಧಿಗಳು ಕೂಡ ಕಾರಣವನ್ನು ಹೇಳಿ ಗಿಫ್ಟ್‌ ನೀಡಿದ್ದಾರೆ. ಏನದು? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ (Bigg Boss Kannada Season 12 ) ಸ್ಪರ್ಧಿಗಳು, ಉಳಿದವರಿಗೆ ಗಿಫ್ಟ್‌ ನೀಡುತ್ತಿದ್ದಾರೆ. ಆ ವೇಳೆ ಗಿಲ್ಲಿ ನಟನ ತಾಯಿಗೆ ಅಶ್ವಿನಿ ಗೌಡ ಅವರು ಗಿಫ್ಟ್‌ ನೀಡಿದ್ದಾರೆ. ಅಶ್ವಿನಿ ಗೌಡ ಅವರು ಧ್ರುವಂತ್‌ ಅವರಿಗೆ ಪರ್ಫ್ಯೂಮ್‌ ಕೊಡ್ತೀನಿ ಎಂದಿದ್ದಾರೆ.

ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೋ

“ಮೂರನೇ ವಾರ ಫಿನಾಲೆ ವೇಳೆ, ಕ್ಯಾಪ್ಟನ್ಸಿ ವೇಳೆ ಗಿಲ್ಲಿ ನಟನಿಂದ ಅವಕಾಶಗಳು ಹೋಗಿವೆ, ಜಗಳ ಆಗಿವೆ. ತಂದೆ-ತಾಯಿ ಬಂದಾಗ ಅವರು ಗಿಲ್ಲಿ ಬಗ್ಗೆ ಮಾತನಾಡ್ತಾರೆ, ಗಿಲ್ಲಿ ಬಗ್ಗೆ ಕನೆಕ್ಟ್‌ ಆದೆ. ನಾನು ಗಿಲ್ಲಿಯನ್ನು ನೋಡುವ ದೃಷ್ಟಿಕೋನ ಬೇರೆ ಇರುತ್ತದೆ. ಗಿಲ್ಲಿ ತಂದೆ-ತಾಯಿ ನನಗೆ ಇಷ್ಟ ಆಗ್ತಾರೆ, ಅಪ್ಪ-ಅಮ್ಮನನ್ನು ನೋಡಿಕೋ” ಎಂದು ಹೇಳುತ್ತಾರೆ.

ಗಿಲ್ಲಿ ನಟ, ಕಾವ್ಯ ಶೈವ ಗಿಫ್ಟ್‌ ಏನು?

ಗಿಲ್ಲಿ ನಟ ಅವರು ಕಾವ್ಯ ಶೈವಗೆ ಬ್ರೇಸ್‌ಲೈಟ್‌ ಕೊಟ್ಟಿದ್ದಾರೆ. “ನನ್ನಿಂದ ಕಾವ್ಯ ಎನ್ನೋದು ಸುಳ್ಳು. ಆರಂಭದಲ್ಲಿ ನಾನು ತುಂಬ ಹೆದರಿದ್ದೆ. ಅಶ್ವಿನಿ ಗೌಡ ಅವರು ನಾಮಿನೇಟ್‌ ಮಾಡಿದಾಗ, ನಾನು ಆಡಿದ ಮಾತಿಗೆ ಅಶ್ವಿನಿ ಅವರ ಕಾಲಿಗೆ ಬೀಳೋಕೆ ಹೋಗಿದ್ದೆ. ನಾನು ತಪ್ಪು ಮಾಡಿದಾಗ ತಪ್ಪು ಮಾಡಿದ್ದೀಯಾ ಎಂದು ಹೇಳಿದ್ದೆ. ಗೊತ್ತೋ, ಗೊತ್ತಿಲ್ಲದೆ ರೇಗಿಸಿದ್ದೀನಿ” ಎಂದು ಹೇಳಿದ್ದಾರೆ.

ಕಾವ್ಯ ಶೈವ ಏನಂದ್ರು?

ಕಾವ್ಯ ಶೈವ ಮಾತನಾಡಿದ್ದು, “ಧನುಷ್‌ ಗೌಡ ಅವರು ನನಗೆ ಹೊರಗಡೆ ಪರಿಚಯ ಇದ್ದರು. ಸ್ಪರ್ಧಿಯಾಗಿ, ಒಳ್ಳೆಯ ಸ್ನೇಹಿತನಾಗಿ ನನ್ನ ಜೊತೆ ಇದ್ದರು. ನಾನೇ ಧನುಷ್‌ಗೆ ಮೇಕಪ್‌ ಮಾಡುತ್ತಿದ್ದೆ” ಎಂದು ಕನ್ಸೀಲರ್‌ ಪ್ಯಾಲೆಟ್‌ ನೀಡಿದ್ದಾರೆ.

ಧ್ರುವಂತ್‌ ಅವರು, “ಕಳೆದ ಹತ್ತು ವರ್ಷಗಳ ಹಿಂದೆ ನಾನು, ಅಶ್ವಿನಿ ಅವರು ಧಾರಾವಾಹಿಯಲ್ಲಿ ನಟಿಸಿದ್ದೆವು, ಅವರ ಮಗುವಿಗೆ ಬೆಂಬಲ ಕೊಟ್ಟ ಹಾಗೆ, ನನಗೂ ಬೆಂಬಲ ಕೊಡುತ್ತ ಬಂದಿದ್ದಾರೆ” ಎಂದಿದ್ದಾರೆ.

ರಕ್ಷಿತಾ ಶೆಟ್ಟಿ ಅವರು, “ನನಗೆ ಯಾರು ಅಣ್ಣ ಇಲ್ಲ. ಇಲ್ಲಿ ರಘು ಅಣ್ಣನಿಗೆ ಗಿಫ್ಟ್‌ ಕೊಡೋಕೆ ನನ್ನ ಬಳಿ ಏನೂ ಇಲ್ಲ. ನನಗೆ ಏನೇ ಕಷ್ಟ ಬಂದರೂ ಕೂಡ ಅವರಿಗೆ ಫೋನ್‌ ಮಾಡಿದರೆ ಬಗೆಹರಿಸುತ್ತಾರೆ ಎಂಬ ನಂಬಿಕೆ ಇದೆ” ಎಂದು ರಘು ಅಣ್ಣನಿಗೆ ಹೇಳಿದ್ದಾರೆ.

ರಕ್ಷಿತಾ ಶೆಟ್ಟಿ ಅವರು, ರಾಶಿಕಾ ಶೆಟ್ಟಿ ಅವರಿಗೆ ದ್ವೇಷ ಇಲ್ಲ, ನನ್ನ ತಂಗಿ ಇರಿಟೇಟ್‌ ಮಾಡಿದಾಗ ಕಷ್ಟ ಆಗುತ್ತದೆ, ಹಾಗೆಯೇ ರಾಶಿಕಾ ಶೆಟ್ಟಿ ಅವರನ್ನು ಅಕ್ಕ ಆಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.