Asianet Suvarna News Asianet Suvarna News

ಬಿಗ್‌ಬಾಸ್‌ ಕನ್ನಡ 11ನೇ ಸೀಸನ್‌ ಬೆಂಕಿ ಬಿರುಗಾಳಿ, ಮೊದಲ ಪ್ರೋಮೋ ರಿಲೀಸ್‌!

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ಬೆಂಕಿ ಮತ್ತು ನೀರಿನ ಸಮ್ಮಿಲನದಂತೆ ಕಾಣುವ ಕಣ್ಣಿನ ಲೋಗೋ ಕುತೂಹಲ ಮೂಡಿಸಿದೆ. ತೆಲುಗು ಬಿಗ್‌ಬಾಸ್‌ ಆರಂಭದೊಂದಿಗೆ ಕಲರ್ಸ್ ಕನ್ನಡ ಈ ಪ್ರೋಮೋ ಬಿಡುಗಡೆ ಮಾಡಿದ್ದು, ಕಿಚ್ಚ ಸುದೀಪ್ ಅವರ ಪ್ರೋಮೋಗಾಗಿ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

Bigg Boss Kannada Season 11 first promo released in  colors kannada page gow
Author
First Published Sep 1, 2024, 8:20 PM IST | Last Updated Sep 1, 2024, 8:47 PM IST

ಬಹುನಿರೀಕ್ಷಿತ ಕನ್ನಡ ಕಿರುತೆರೆಯ ಬಹುದೊಡ್ಡ ಶೋ ಬಿಗ್‌ಬಾಸ್‌ ಕನ್ನಡದ 11 ನೇ ಸೀಸನ್‌ ನ ಮೊದಲ ಪ್ರೋಮೋ ರಿಲೀಸ್‌ ಆಗಿದೆ. ಕಣ್ಣಿನ ಲೋಗೋ ಇರುವ ಮೊದಲ ಪ್ರೋಮೋದಲ್ಲಿ ಬೆಂಕಿ, ಬಿಳುಗಾಳಿ ಮಿಂಚು ಗುಡುಗಿನ ಸದ್ದು ಜೋರಾಗಿಯೇ ಇದೆ. 

ಕಣ್ಣಿನ ಲೋಗೋ ಆಕರ್ಷಕವಾಗಿ ಮೂಡಿ ಬಂದಿದೆ. ಬೆಂಕಿ ಮತ್ತು ನೀರಿನ ಸಮ್ಮಿಲನವಾಗಿ ಬಿಗ್‌ಬಾಸ್‌ ಕಣ್ಣು ಕಾಣುತ್ತಿದ್ದು, ಬೆಂಕಿ-ನೀರು ಸಮ್ಮಿಲನವಾದಾಗ ಗುಡುಗು ಮಿಂಚಿನ ಸದ್ದಿನ ಜೊತೆಗೆ ಬೆಂಕಿನ ಕಿಡಿಗಳು ಹಾರುವುದು ಕಾಣಿಸುತ್ತಿದೆ. ಹೀಗಾಗಿ ಹಿಂದಿನ ಎಲ್ಲಾ ಸೀಸನ್‌ ಗಳಿಂದ ಈ ಬಾರಿ ಭಾರೀ ದೊಡ್ಡ ಮಟ್ಟದಲ್ಲಿ ಶೋ ನಡೆಯಲಿದೆ ಎಂಬುದು ಕಾಣುತ್ತಿದೆ.

ಇನ್ನು ಕಿಚ್ಚ ಸುದೀಪ್‌ ಅವರೇ ಈ ಬಾರಿ ಕೂಡ ನಿರೂಪಣೆ ಮಾಡಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಯಾಕೆಂದರೆ ಪ್ರೋಮೋ ರಿಲೀಸ್‌ ಮಾಡುವಾಗ ಕಿಚ್ಚ ಸುದೀಪ ಎಂಬ ಹ್ಯಾಶ್ ಟ್ಯಾಗ್‌ ಬಳಸಲಾಗಿದೆ. ಈ ಮೂಲಕ ಶೋ ನಡೆಸುವವರು ಕಿಚ್ಚನೇ ಈ ಬಾರಿ ಕಾರ್ಯಕ್ರಮ ನಡೆಸಬಲ್ಲ ನಿರೂಪಕ ಎಂಬ ಸುಳಿವು ಬಿಟ್ಟು ಕೊಟ್ಟಿದ್ದಾರೆ. 

ಬಿಗ್ ಬಾಸ್ ತೆಲುಗು 8ರಲ್ಲಿ ಕನ್ನಡ ಕಿರುತೆರೆ ಸ್ಟಾರ್ಸ್ ಸ್ಪರ್ಧಿಗಳು! ಈ ನಾಲ್ವರು ನಿಮಗೆ ನೆನಪಿದ್ದಾರಾ?

ಅತ್ತ ತೆಲುಗಿನ ಬಿಗ್‌ಬಾಸ್‌ ಸೀಸನ್‌ 8 ಆರಂಭವಾಗುತ್ತಿದ್ದಂತೆಯೇ ಇತ್ತ ಕಲರ್ಸ್ ಕನ್ನಡದ ಸಾಮಾಜಿಕ ಜಾಲತಾಣದಲ್ಲಿ ಬಿಬಿಕೆ11ರ  ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಕುತೂಹಲ ಮೂಡಿಸಿದೆ.

ಈ ಮೂಲಕ ಇಂದಿನಿಂದಲೇ ಬಿಗ್‌ ಬಾಸ್‌ ಕಾವನ್ನು ಹೆಚ್ಚಿಸಿದೆ ಕಲರ್ಸ್ ಕನ್ನಡ ಇನ್ನು  ಕಿಚ್ಚ ಸುದೀಪ್ ಅವರಿರುವ ಪ್ರೋಮೋ ಯಾವಾಗ ರಿಲೀಸ್‌ ಆಗಲಿದೆ ಎಂಬುದನ್ನು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಜಸ್ಟ್ ಮೊದಲ ಪ್ರೋಮೋ ರಿಲೀಸ್‌ ಆಗಿದ್ದು, ಅನೇಕರು ಕಾತುರದಿಂದ ಕಾಯುತ್ತಿದ್ದೇವೆ ಎಂದು ಕಮೆಂಟ್‌ ಮಾಡಿದ್ದಾರೆ.

ಇದು ಬಿಗ್‌ ಎಕ್ಸ್ ಕ್ಲೂಸಿವ್‌, ಬಿಗ್‌ಬಾಸ್‌ 8ಗೆ ಕಾಲಿಡುತ್ತಿರುವ 14 ಮಂದಿ ಇವರೇ!

 

 

ಇನ್ನು ಇವೆಲ್ಲದರ ನಡುವೆ ಬಿಗ್‌ಬಾಸ್‌ ಆರಂಭವಾಗುವುದಕ್ಕೂ ಮುನ್ನ ವಾರಾಂತ್ಯದ ಶೋಗಳಾದ , ಗಿಚ್ಚಿಗಿಲಿ, ರಾಜಾರಾಣಿ ಸದ್ಯದಲ್ಲೇ ಮುಗಿಯಲಿದೆ. ಅದರ ನಂತರ ಅನುಬಂಧ ಅವಾರ್ಡ್ ಕಾರ್ಯಕ್ರಮ ಕೂಡ ನಡೆಯಲಿದ್ದು, ಸೆಪ್ಟೆಂಬರ್‌ ಕೊನೆಗೆ ಅನುಬಂಧ ಅವಾರ್ಡ್ ಪ್ರಸಾರವಾಗಲಿದೆ. ಸೆಪ್ಟೆಂಬರ್‌  28 ಅಥವಾ 29 ಇಲ್ಲವೇ  ಅಕ್ಟೋಬರ್ ಮೊದಲವಾರ ಅಂದರೆ 5 ಮತ್ತು 6 ರಂದು ಬಿಗ್‌ಬಾಸ್‌ ಆರಂಭವಾಗುವುದು ಬಹುತೇಕ ಪಕ್ಕಾ ಎನ್ನಲಾಗಿದೆ.

ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಸಂಭಾವ್ಯರ ಪಟ್ಟಿ ಹರಿದಾಡುತ್ತಿದೆ. ಇನ್ನು ಈ ಬಾರಿ ಶೋ ನಲ್ಲಿ ಯಾರೆಲ್ಲ ಇರಬಹುದು ಎಂಬ ಲೆಕ್ಕಾಚಾರದಲ್ಲಿ , ಗಿಚ್ಚಿಗಿಲಿ ಗಿಲಿ ಖ್ಯಾತಿಯ ರಾಘವೇಂದ್ರ ಅಲಿಯಾಸ್ ರಾಗಿಣಿ,  ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ನಟಿ ಅಶ್ವಿನಿ, ನಟ ಪಂಕಜ್ ನಾರಾಯಣ್, ಗೀತಾ ಸೀರಿಯಲ್ ನಟಿ ಶರ್ಮಿತಾ ಗೌಡ, ನಟಿ ಮೋಕ್ಷಿತಾ ಪೈ, ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿರುವ ವರ್ಷಾ ಕಾವೇರಿ, ನಟ ಗೌತಮಿ ಜಾದವ್ , ಸುಕೃತಾ ನಾಗ್, ನಟ ಚೇತನ್ ಚಂದ್ರ, ಗಿಚ್ಚಿಗಿಲಿ ಗಿಲಿ ಚಂದ್ರಪ್ರಭ, ನಟ ತ್ರಿವಿಕ್ರಮ್ , ನಟ ವರುಣ್ ಆರಾಧ್ಯ, ನಟ ತರುಣ್ ಚಂದ್ರ, ಕೆಂಡಸಂಪಿಗೆ ನಟ ಆಕಾಶ್, ನಟಿ ಅಮಿತಾ ಸದಾಶಿವ, ನಟಿ ತನ್ವಿ ಬಾಲರಾಜ್, ಗಾಯಕಿ ಆಶಾ ಭಟ್, ಶನಿ ಸೀರಿಯಲ್ ನಲ್ಲಿ ಫೇಮಸ್ ಆಗಿದ್ದ ನಟ ಸುನೀಲ್ ಸೇರಿ ಹಲವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಳೆದ ಬಿಗ್‌ಬಾಸ್‌ ಸೀಸನ್‌ 10 ಅತ್ಯಂತ ಹೆಚ್ಚು ಟಿಆರ್‌ಪಿ ತಂದುಕೊಟ್ಟು ಕಲರ್ಸ್ ಕನ್ನಡ ಮತ್ತು ಬಿಗ್‌ಬಾಸ್‌ ನಡೆಸುವ ಪ್ರೊಡಕ್ಷನ್ ಹೌಸ್‌ಗೆ ಭರ್ಜರಿ ಲಾಭ ತಂದಿತ್ತು. ಕಾರ್ತಿಕ್ ಮಹೇಶ್ ವಿನ್ನರ್ ಮತ್ತು ಡ್ರೋಣ್ ಪ್ರತಾಪ್ ರನ್ನರ್ ಅಪ್‌  ,ನಟಿ ಸಂಗೀತಾ ಶೃಂಗೇರಿ ಮೂರನೇ ಸ್ಥಾನ ಪಡೆದಿದ್ದರು.

Latest Videos
Follow Us:
Download App:
  • android
  • ios