Asianet Suvarna News Asianet Suvarna News

ಇದು ಬಿಗ್‌ ಎಕ್ಸ್ ಕ್ಲೂಸಿವ್‌, ಬಿಗ್‌ಬಾಸ್‌ 8ಗೆ ಕಾಲಿಡುತ್ತಿರುವ 14 ಮಂದಿ ಇವರೇ!

ಬಿಗ್ ಬಾಸ್ ತೆಲುಗು ಸೀಸನ್ 8 ರ ಸ್ಪರ್ಧಿಗಳ ಸಂಪೂರ್ಣ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 14 ಮಂದಿ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ.  ಇದು ಏಷ್ಯಾನೆಟ್‌ ತೆಲುಗಿನ ಬಿಗ್‌ ಎಕ್ಸ್ ಕ್ಲೂಸಿವ್‌ ಸುದ್ದಿ.

Bigg Boss Telugu Season 8 contestants list revealed here is deatils  gow
Author
First Published Sep 1, 2024, 4:53 PM IST | Last Updated Sep 1, 2024, 4:53 PM IST

ತೆಲುಗಿನ ಬಿಗ್ ಬಾಸ್ ಸೀಸನ್‌ 8  ಇಂದಿನಿಂದ ಸ್ಟಾರ್‌ ಮಾದಲ್ಲಿ ಆರಂಭವಾಗಲಿದೆ. ಈಗಾಗಲೇ ಶೂಟಿಂಗ್ ಮುಗಿದಿದೆ. ಇದೀಗ ಭಾಗವಹಿಸಲಿರುವ ಸ್ಪರ್ಧಿಗಳ ಸಂಪೂರ್ಣ ಪಟ್ಟಿ  ಬಿಡುಗಡೆಯಾಗಿದೆ. ಒಟ್ಟು 14 ಮಂದಿ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದು, ಏಷ್ಯಾನೆಟ್‌ ತೆಲುಗು ಮಾಧ್ಯಮದಿಂದ ಈ ಎಕ್ಸ್‌ಕ್ಲೂಸಿವ್‌ ಸುದ್ದಿ ಬಂದಿದೆ.

ತೆಲುಗು ನಟ ನಾಗಾರ್ಜುನ ನಿರೂಪಣೆಯ ಬಿಗ್ ಬಾಸ್ ತೆಲುಗು 8 ನೇ ಸೀಸನ್ ಕುರಿತ Asianet Telugu  ಎಕ್ಸಕ್ಲೂಸಿವ್‌ ಅಪ್‌ಡೇಟ್‌ ಇದು. ಈ ಬಾರಿ ಸೀಸನ್ ಬಗ್ಗೆ ಸಾಕಷ್ಟು ಕುತೂಹಲಕಾರಿ ಸುದ್ದಿಗಳು ಹರಿದಾಡುತ್ತಿವೆ. ಈಗಾಗಲೇ ಕೆಲವು ಹೆಸರುಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ಮರೆಯಾದ ದಿಟ್ಟ ಭೂಮಿಕಾ, ಮಂಕಾದ ಸೀತಾರಾಮ ಟಿಆರ್‌ಪಿಯಲ್ಲಿ ಹಿನ್ನಡೆ , ಕಲರ್ಸ್ ಹಿಂದಿಕ್ಕಿದ ಜೀ!

ಆದರೆ ಬಿಗ್ ಬಾಸ್ 8 ರಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ಸಂಪೂರ್ಣ ಪಟ್ಟಿಯನ್ನು ಏಷ್ಯಾನೆಟ್ ಪಡೆದುಕೊಂಡಿದೆ. ಒಟ್ಟು 14 ಮಂದಿ ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ಪೈಕಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ಸೆಲೆಬ್ರಿಟಿಗಳು ಕೆಲವರು ಇದ್ದಾರೆ. ಇನ್ನು ಕೆಲವರು ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ. ಇನ್ನು ಕೆಲವರು ಈಗಷ್ಟೇ ಗುರುತಿಸಿಕೊಳ್ಳುತ್ತಿರುವ ಸ್ಪರ್ಧಿಗಳಾಗಿದ್ದಾರೆ. 

ಬಿಗ್ ಬಾಸ್ ತೆಲುಗು ಸೀಸನ್ 8 ರ ಸ್ಪರ್ಧಿಗಳ ಪಟ್ಟಿ ಇಂತಿದೆ.
1. ಅಫ್ರಿದಿ 
2. ಯಶ್ಮಿ ಗೌಡ  (ಕನ್ನಡತಿ)
3. ಹಾಸ್ಯನಟ ಅಭಯ್ 
4. ನರ್ತಕಿ ನೈನಿಕಾ
5. ನಟ ಆದಿತ್ಯ ಓಂ 
6. ಮಾಡೆಲ್‌ ವಿಷ್ಣುಪ್ರಿಯ 
7. ಪೃಥ್ವಿರಾಜ್ 
8. ಮಣಿಕಂಠ
9. ನಟಿ ಸೋನಿಯಾ ಆಕುಲಾ
10. ನಟ ಕಿರಾಕ್ ಸೀತಾ
11. ರೇಡಿಯೋ ಜಾಕಿ ಶೇಖರ್ ಭಾಷ 
12. ಬೆಜವಾಡ ಬೇಬಕ್ಕ 
13.  ನಿಖಿಲ್ ಮಲಿಯಕ್ಕಲ್ (ಕನ್ನಡಿಗ)
14. ಪ್ರೇರಣಾ ಕಂಬಂ (ಕನ್ನಡತಿ)

ಈ ಮೂಲಕ ಮೂವರಿಗೆ ಈ ಬಾರಿ ಚಾನ್ಸ್ ಸಿಕ್ಕಿರುವುದು ಪಕ್ಕಾ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಿದ್ಯಾ ವಿನಾಯಕ' ಧಾರಾವಾಹಿಯಲ್ಲಿ ಯಶ್ಮಿ ಗೌಡ ನಟಿಸಿದ್ದರು. ನಿಖಿಲ್ ಮಲಿಯಕ್ಕಲ್ ಕಲರ್ಸ್ ಸೂಪರ್‌ ನ ಮನೆಯೇ ಮಂತ್ರಾಲಯ ಎಂಬ ಧಾರವಾಹಿಯಲ್ಲಿ ನಟಿಸಿದ್ದರು. ಪ್ರೇರಣಾ ಕಂಬಂ ಕೂಡ ಕನ್ನಡತಿ ಈ ಹಿಂದೆ ಕನ್ನಡ ಬಿಗ್‌ ಬಾಸ್‌ ಮಿನಿ ಸೀಸನ್‌ ನಲ್ಲಿ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡದ ರಂಗನಾಯಕಿ ಧಾರವಾಹಿಯಲ್ಲಿ ಮಿಂಚಿದ್ದರು. ಇವರೆಲ್ಲರೂ ಈಗ ತೆಲುಗಿನಲ್ಲಿ ಫೇಮಸ್‌ ಆಗಿದ್ದಾರೆ.

ಹಸಿರು ಲೆಹೆಂಗಾದಲ್ಲಿ ಅಭಿಮಾನಿಗಳು ಕಣ್ಣು ಮಿಟುಕಿಸುವಂತೆ ಮಾಡಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್!

ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳು ಇವರೇ. ವೈಲ್ಡ್ ಕಾರ್ಡ್ ಮೂಲಕ ಒಬ್ಬರು ಅಥವಾ ಇಬ್ಬರನ್ನು ಸೀಸನ್ ಮಧ್ಯದಲ್ಲಿ ಕರೆತರುವ ಸಾಧ್ಯತೆ ಇದೆ. ವೈಲ್ಡ್ ಕಾರ್ಡ್ ಎಂಟ್ರಿ ಪ್ರತಿ ಸೀಸನ್‌ನಲ್ಲೂ ನಾವು ನೋಡುತ್ತಲೇ ಇರುತ್ತೇವೆ. ವಿಷ್ಣು ಪ್ರಿಯಾ, ಓಂ ಆದಿತ್ಯ, ಅಭಯ್ ಮುಂತಾದವರು ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ಸ್ಪರ್ಧಿಗಳಾಗಿದ್ದಾರೆ.

ಆದರೆ ಬಿಗ್ ಬಾಸ್ ಸೀಸನ್ 8 ರ ಲಾಂಚ್ ಈವೆಂಟ್‌ ನಲ್ಲಿ ಒಂದು ಕುತೂಹಲಕಾರಿ ಅಂಶ ನಡೆಯಲಿದೆ ಎನ್ನಲಾಗುತ್ತಿದೆ. ಪ್ರತಿ ಸೀಸನ್‌ನಲ್ಲೂ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಮನೆಯೊಳಗೆ ಕಳುಹಿಸುವುದನ್ನು ನೋಡಿದ್ದೇವೆ. ಆದರೆ ಈ ಸೀಸನ್‌ನಲ್ಲಿ ಜೋಡಿಯಾಗಿ  ಮನೆಯೊಳಗೆ ಕಳುಹಿಸಲಾಗುತ್ತದೆ ಎನ್ನಲಾಗುತ್ತಿದೆ. ಅದಕ್ಕೆ ತಕ್ಕಂತೆ 7 ಜನ ಪುರುಷ ಸ್ಪರ್ಧಿಗಳು. 7 ಜನ ಮಹಿಳಾ ಸ್ಪರ್ಧಿಗಳು ಇದ್ದಾರೆ.  

ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಪ್ರತಿ ವಾರ ಮನೆಯೊಳಗೆ ಈ ಹಿಂದಿನ ಸೀಸನ್‌ನ ಮಾಜಿ ಸ್ಪರ್ಧಿಗಳು ಬಂದು ಮನೆಯ ಸದಸ್ಯರೊಂದಿಗೆ ಮೋಜು ಮಾಡಲಿದ್ದಾರೆ. ಈ ಮೂಲಕ ಶೋ ಅನ್ನು ಇನ್ನಷ್ಟು ಕುತೂಹಲಕಾರಿಯಾಗಿ ಮಾಡಲು ಬಿಗ್ ಬಾಸ್ ನಿರ್ಮಾಪಕರು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
 

Latest Videos
Follow Us:
Download App:
  • android
  • ios