BBK10: ಮನೆಯೊಂದು, ಮನಸ್ಸು ಎರಡು.. ಒಡೆದ 'ದೊಡ್ಮನೆ'ಯಲ್ಲಿ ಹೇಗೆ ನಡೆಯಿತು ಟಾಸ್ಕ್..!?
ಬಿಗ್ ಬಾಸ್ ಮನೆಯಲ್ಲಿನ ಪ್ರೇಮ ಪ್ರಕರಣ ಮುಂದುವರಿಯುತ್ತಿದೆ. ಸಂಗೀತಾ ಮತ್ತು ಕಾರ್ತಿಕ್ ನಡುವೆ ಹುಟ್ಟಿಕೊಂಡಿರುವ ಲವ್ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಅವರನ್ನು ಇಡೀ ಬಿಗ್ ಬಾಸ್ ಮನೆ 'ಅಮರ ಪ್ರೇಮಿಗಳು' ಎಂದೇ ಕರೆಯಲು ಶುರುಮಾಡಿಯಾಗಿದೆ. ಆದರೆ, ಸ್ನೇಹಿತ್-ಈಶಾನಿ ಲವ್ ಸ್ಟೋರಿ ನಿಂತಿದ್ದು, ಅದು ಈಶಾನಿ-ಮೈಕೆಲ್ ಅಜಯ್ ಲವ್ ಸ್ಟೋರಿಯಾಗಿ ಬದಲಾಗಿದೆ ಎನ್ನಬಹುದೇನೋ!

ಬಿಗ್ ಬಾಸ್ ಮನೆ ಎರಡು ಹೋಳಾಗಿರುವುದು ಗೊತ್ತೇ ಇದೆ. ಅಂದರೆ, ಬಿಗ್ ಬಾಸ್ ಮನೆಯಲ್ಲಿ ಎರಡು ಬಣಗಳಾಗಿವೆ. ಒಂದು ಕಾರ್ತಿಕ್ ಮಹೇಶ್ ಬಣವಾದರೆ ಇನ್ನೊಂದು ವಿನಯ್ ಗೌಡ ಬಣ. ಮೊದಮೊದಲು ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರು. ಅದರೆ ಈಗ ಸಂಗೀತಾ ಬದಲು ಆ ಜಾಗಕ್ಕೆ ತನಿಷಾ ಸೇರ್ಪಡೆ ಆಗಿದ್ದಾರೆ. ನಿನ್ನೆ, ತನಿಷಾ-ವಿನಯ್ ಮಧ್ಯೆ ಭಾರೀ ಗಲಾಟೆ ಆಗಿದ್ದು, ವಿನಯ್ ವಿರುದ್ಧ ತನಿಷಾ 'ರೌಡಿಸಂ' ಆರೋಪ ಮಾಡಿದ್ದಾರೆ. ತನಿಷಾಗೆ ಹೆಚ್ಚಿನವರು ಸಪೋರ್ಟ್ ಕೂಡ ಮಾಡಿದ್ದಾರೆ.
ಈಗಾಗಲೇ ಗುಂಪುಗಳಾಗಿ ಒಡೆದಿರುವ ಮನೆಯ ಸದಸ್ಯರಿಗೆ ಇಂದು ಎದುರಾಗುವ ಸವಾಲುಗಳೇನು? ಬಿಗ್ ಬಾಸ್ ನೀಡುವ ಟಾಸ್ಕ್ ಗಳನ್ನು ಅವರು ಹೇಗೆ ಎದುರಿಸುತ್ತಾರೆ? ಟೀಮ್ ವರ್ಕ್ ಡಿಮಾಂಡ್ ಮಾಡುವ ಟಾಸ್ಕ್ ಏನಾದರೂ ಇದ್ದರೆ ಈ ಒಡೆದಿರುವ ಮನೆಯಲ್ಲಿ ಹೇಗೆ ಮಾಡಬಹುದು? ಮುಂತಾದ ಕುತೂಹಲ ಕೆರಳಿಸುವ ಹಲವು ಸಂಗತಿಗಳು ಬಿಗ್ ಬಾಸ್ ಮನೆಯಲ್ಲಿ ಶುರುವಾಗಿವೆ. ಇಂದಿನ ಟಾಸ್ಕ್ ಹೇಗೆ ಮಾಡಿದ್ದಾರೆ ಎಂಬುದನ್ನು ಬಿಗ್ ಬಾಸ್ ವೀಕ್ಷಕರು 'ಜಿಯೋ ಸಿನಿಮಾ'ದಲ್ಲಿ ನೋಡಬಹುದು.
ಯಶವಂತ್ ಸರದೇಶಪಾಂಡೆ ಲವ್ ಅಫೇರ್: ನಿನಗೆ ಗೊತ್ತಿಲ್ದೇ ನಾವಿಬ್ರು 12 ವರ್ಷ ಅದೆಷ್ಟೋ ತುಂಟಾಟ ಆಡಿದ್ವಿ..!
ಇನ್ನು, ಬಿಗ್ ಬಾಸ್ ಮನೆಯಲ್ಲಿನ ಪ್ರೇಮ ಪ್ರಕರಣ ಮುಂದುವರಿಯುತ್ತಿದೆ. ಸಂಗೀತಾ ಮತ್ತು ಕಾರ್ತಿಕ್ ನಡುವೆ ಹುಟ್ಟಿಕೊಂಡಿರುವ ಲವ್ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಅವರನ್ನು ಇಡೀ ಬಿಗ್ ಬಾಸ್ ಮನೆ 'ಅಮರ ಪ್ರೇಮಿಗಳು' ಎಂದೇ ಕರೆಯಲು ಶುರುಮಾಡಿಯಾಗಿದೆ. ಆದರೆ, ಸ್ನೇಹಿತ್-ಈಶಾನಿ ಲವ್ ಸ್ಟೋರಿ ನಿಂತಿದ್ದು, ಅದು ಈಶಾನಿ-ಮೈಕೆಲ್ ಅಜಯ್ ಲವ್ ಸ್ಟೋರಿಯಾಗಿ ಬದಲಾಗಿದೆ ಎನ್ನಬಹುದೇನೋ! ಒಟ್ಟಿನಲ್ಲಿ, ಬಿಗ್ ಬಾಸ್ ಸೀಸನ್‌ಗಳು ಮುಂದುವರಿದಂತೆ ಬಿಗ್ ಬಾಸ್ ಮನೆ 'ಮ್ಯಾಟ್ರಿಮೋನಿಯಲ್ ಮನೆ'ಯಾಗಿ ಬದಲಾಗುತ್ತಿದೆ ಎನ್ನಲು ಎಲ್ಲ ಸಾಕ್ಷಿಗಳೂ ಇವೆ.
ಲಕ್ಷ್ಮೀ ಬಾರಮ್ಮ: ಕಾವೇರಿಗೆ ಕೊಡೋ ಚಿಕಿತ್ಸೆ ಬೇರೇಯೇ ಇದೆ, ವೈಷ್ಣವ್ ಕಾರು ನಿಲ್ಲಿಸು..
ಈ ವಾರದ ಆಟದ ರೋಚಕ ಘಳಿಗೆಗಳು, ಅದರ ಫಲಿತಾಂಶ ಎಲ್ಲವನ್ನೂ ಬಿಗ್‌ಬಾಸ್ ಕನ್ನಡದ ಉಚಿತ ನೇರಪ್ರಸಾರ ಮಾಡುತ್ತಿರುವ 'JioCinema'ದಲ್ಲಿ ನೋಡಬಹುದು. ಶುಕ್ರವಾರದ 'ಫನ್ ಫ್ರೈಡೇ' ಸೆಗ್ಮೆಂಟ್‌ನಲ್ಲಿ ಆ ದಿನದ ವಿಶೇಷತೆಗಳನ್ನು (https://jiocinema.onelink.me/fRhd/z17wt8x0) ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ನೋಡಬಹುದು. ಜತೆಗೆ, ಬಿಗ್‌ಬಾಸ್ ಕನ್ನಡ ಶೋನ 24 ಗಂಟೆ ನೇರಪ್ರಸಾರವನ್ನು 'JioCinema'ದಲ್ಲಿ ಉಚಿತವಾಗಿ ನೋಡಬಹುದು. ಶನಿವಾರ-ಭಾನುವಾರದ ವೀಕೆಂಡ್ ಎಪಿಸೋಡ್‌ಗಳನ್ನು Colors Kannada ವಾಹಿನಿಯಲ್ಲಿ ರಾತ್ರಿ 9ಕ್ಕೆ ವೀಕ್ಷಿಸಬಹುದು.