ಲಕ್ಷ್ಮೀ ಬಾರಮ್ಮ: ಕಾವೇರಿಗೆ ಕೊಡೋ ಚಿಕಿತ್ಸೆ ಬೇರೇಯೇ ಇದೆ, ವೈಷ್ಣವ್ ಕಾರು ನಿಲ್ಲಿಸು..
ವೈಷ್ಣವ್ ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾನೆ. ರಸ್ತೆಯಲ್ಲಿ ಕಾರಿಗೆ ಸಡನ್ನಾಗಿ ಅಡ್ಡಬಂದ ಅಮ್ಮನಿಗೆ 'ಅಮ್ಮನಿಗೆ ಹುಶಾರಿಲ್ಲ. ನಾವು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ, ದಯವಿಟ್ಟು ದಾರಿ ಬಿಡಿ" ಎನ್ನುತ್ತಾನೆ ವೈಷ್ಣವ್.

ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ ಧಾರಾವಾಹಿ 'ಲಕ್ಷ್ಮೀ ಬಾರಮ್ಮ'. ಈ ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ವೈಷ್ಣವ್-ಲಕ್ಷ್ಮೀ ಜೋಡಿ ಸೀರಿಯಲ್ ಪ್ರಿಯರ ಒಂದು ಅಚ್ಚುಮೆಚ್ಚಿನ ಜೋಡಿಯಾಗಿದೆ. ಸದ್ಯ ಈ ಕಥೆಯಲ್ಲಿ ಲಕ್ಷ್ಮೀ ಅತ್ತೆ ಕಾವೇರಿ ಎಚ್ಚರತಪ್ಪಿ ಬಿದ್ದಿದ್ದಾಳೆ. ಅವಳನ್ನು ಮಗ ವೈಷ್ಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ದಾರಿ ಮಧ್ಯೆ ಅಡ್ಡಬಂದವರು ಯಾರು? ಯಾವ ಉದ್ದೇಶದಿಂದ ಅವರು ಅಡ್ಡ ಬಂದಿದ್ದಾರೆ? ತೀವ್ರ ಕುತೂಹಲ ಕೆರಳಿಸುತ್ತಿದೆ ಸೀರಿಯಲ್ ಕಥೆ.
ವೈಷ್ಣವ್ ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾನೆ. ರಸ್ತೆಯಲ್ಲಿ ಕಾರಿಗೆ ಸಡನ್ನಾಗಿ ಅಡ್ಡಬಂದ ಅಮ್ಮನಿಗೆ 'ಅಮ್ಮನಿಗೆ ಹುಶಾರಿಲ್ಲ. ನಾವು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ, ದಯವಿಟ್ಟು ದಾರಿ ಬಿಡಿ" ಎನ್ನುತ್ತಾನೆ ವೈಷ್ಣವ್. ಅದಕ್ಕೆ ಅಮ್ಮ "ನಾನು ನಿಮ್ಮ ದಾರಿಗೆ ಅಡ್ಡ ಬಂದಿದ್ದೇನೆ ಎಂದರೆ ನೀವು ಹೋಗಬೇಕಾದ ಆ ದಾರಿ ಬೇರೆಯೇ ಇರಬೇಕು. ನಿಮ್ಮ ದಾರಿಯನ್ನು ಬದಲಾಯಿಸಲೆಂದೇ ನಾನು ಬಂದಿದ್ದೇನೆ ಅಂದುಕೊಳ್ಳಿ.
ಅಮೃತಧಾರೆ: ಭೂಮಿ ಪ್ರೀತಿಗೆ ಮಾರುಹೋದ್ರಾ ಗೌತಮ್.., ದೂರ ಹಾರಿಹೋಯ್ತಾ ಶಕುಂತಲಾ ನಿದ್ದೆ!
ನಿಲ್ಲಿ, ನಾನು ನಿಮ್ಮ ಕಾವೇರಿ ಅಮ್ಮನನ್ನು ನೋಡುತ್ತೇನೆ, ಅವಳ ಬಗ್ಗೆ ನನಗೆ ಗೊತ್ತಿರುವ ವಿಷಯಗಳು ಕೆಲವು ಇವೆ. ಅದನ್ನು ನಾನು ಅವಳೊಂದಿಗೆ ಮಾತ್ರ ಮಾತನಾಡಬೇಕು. ಕಾರಿನಿಂದ ಕೆಳಗೆ ಇಳಿ ಲಕ್ಷ್ಮೀ.. ನಾನು ಬಂದಿದೀನಿ ಅಂದ್ರೆ ನೀವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಈ ಕಾವೇರಿಗೆ ಕೊಡೋ ಚಿಕಿತ್ಸೆ ಬೇರೇಯೇ ಇದೆ. " ಎಂದು ಹೇಳಿ ಕಾರಿನ ಬಳಿ ಹೋಗುತ್ತಾಳೆ ಅಮ್ಮ.
ಯಶವಂತ್ ಸರದೇಶಪಾಂಡೆ ಲವ್ ಅಫೇರ್: ನಿನಗೆ ಗೊತ್ತಿಲ್ದೇ ನಾವಿಬ್ರು 12 ವರ್ಷ ಅದೆಷ್ಟೋ ತುಂಟಾಟ ಆಡಿದ್ವಿ..!
ಲಕ್ಷ್ಮೀ ಸೇರಿದಂತೆ ವೈಷ್ಣವ್, ಅವನ ತಂದೆ ಎಲ್ಲರೂ ಶಾಕ್ ಆಗುತ್ತಾರೆ. ಆದರೆ, ಕಾರಿನ ಬಳಿ ತೆರಳುವ ಅಮ್ಮ ಏನು ಮಾಡುತ್ತಾಳೆ? ಅಮ್ಮನಿಗೆ ಹುಶಾರ್ ಆಗುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೀವು ಇಂದಿನ ಸಂಚಿಕೆಯನ್ನು ನೋಡಬೇಕು. ಅಂದಹಾಗೆ, ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶನಿವಾರ, ಸಂಜೆ 7.30ಕ್ಕೆ 'ಲಕ್ಷ್ಮೀ ಬಾರಮ್ಮ' ಸೀರಿಯಲ್ ಟೆಲಿಕಾಸ್ಟ್ ಆಗುತ್ತಿದೆ.