ನಟಿ ನಮ್ರತಾ ಗೌಡರಿಗೆ ರೋಶನ್ ಎಂಬಾತನಿಂದ ಅಸಭ್ಯ ಸಂದೇಶಗಳು ಬಂದಿವೆ. ಡೇಟಿಂಗ್ ಆಫರ್ ನೀಡಿ ಹಣದ ಆಮಿಷವೊಡ್ಡಿದ್ದಾನೆ. ಇಂತಹ ಘಟನೆಗಳು ಹಲವು ನಟಿಯರಿಗೆ, ಸಾಮಾನ್ಯರಿಗೂ ಆಗುತ್ತಿದ್ದು, ಇದನ್ನು ನಿಲ್ಲಿಸಬೇಕೆಂದು ನಮ್ರತಾ ಧ್ವನಿ ಎತ್ತಿದ್ದಾರೆ. "ಕರ್ಣ" ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ನಮ್ರತಾ, ಈ ಘಟನೆಯಿಂದ ಬೇಸರ ವ್ಯಕ್ತಪಡಿಸಿದ್ದಾರೆ.
‘ಕರ್ಣʼ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಮೆರೆಯಲು ರೆಡಿಯಾಗಿರೋ ನಟಿ ನಮ್ರತಾ ಗೌಡ ( Namratha Gowda ) ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿ, ಬೇಸರ ಹೊರಹಾಕಿದ್ದಾರೆ.
ಮಿಸ್ ಯೂಸ್ ಮಾಡ್ಕೊಳ್ಳೋರಿದ್ದಾರೆ!
ಕಲಾವಿದರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಫೋಟೋಶೂಟ್‌ಗಳು ಜೊತೆಗೆ ನಿತ್ಯದ ದಿನಚರಿ ಬಗ್ಗೆಯೋ, ಇನ್ನಿತರ ವೃತ್ತಿಪರ ಅಪ್‌ಡೇಟ್‌ಗಳನ್ನು ಕೂಡ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಅವರಿಗೆ ಲಕ್ಷಗಟ್ಟಲೇ ಫಾಲೋವರ್ಸ್ ಕೂಡ ಇರುತ್ತಾರೆ. ಸೋಶಿಯಲ್ ಮೀಡಿಯಾ ಮೂಲಕ ಕಲಾವಿದರು ವೀಕ್ಷಕರ ಜೊತೆ ಕಾಂಟ್ಯಾಕ್ಟ್‌ನಲ್ಲಿ ಇರುತ್ತಾರೆ. ಇಷ್ಟೆಲ್ಲ ಪ್ರಯೋಜನ ಇರುವಾಗ, ಮಿಸ್ ಯೂಸ್ ಮಾಡಿಕೊಳ್ಳುವವರೂ ಇದ್ದಾರೆ.
ಈಗ ಬಂದಿರೋ ಮೆಸೇಜ್ ಏನು?
ಹೌದು, ನಟಿ ನಮ್ರತಾ ಗೌಡ ಅವರಿಗೆ ರೋಶನ್ ಎನ್ನುವಾತ ಮೆಸೇಜ್ ಮಾಡಿದ್ದಾನೆ. “ನನಗೆ ರಾಜಕಾರಣಿಗಳ ಜೊತೆ ಕಾಂಟ್ಯಾಕ್ಟ್ ಇದೆ. ವಿಐಪಿಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ನೀವು ನಿಮ್ಮ ಫೋನ್ ನಂಬರ್, ಫೋಟೋಗಳನ್ನು ಕಳಿಸುವ ಅಗತ್ಯವಿಲ್ಲ. ಡೇಟಿಂಗ್ ಬುಕ್ ಮಾಡ್ತೀನಿ, ಹೆಚ್ಚು ಹಣ ಕೊಡ್ತೀನಿ. 200% ಯಾರಿಗೂ ಗೊತ್ತಾಗೋದಿಲ್ಲ. ಆಸಕ್ತಿ ಇದ್ದರೆ ಮೆಸೇಜ್ ಮಾಡಿ, vanish mode ಹಾಕಿ” ಎಂದು ರೋಶನ್ ಎನ್ನುವಾತ ಮೆಸೇಜ್ ಮಾಡಿದ್ದಾನೆ. ಈ ಮೆಸೇಜ್‌ನ್ನು ನಾಲ್ಕು ಬಾರಿ ಕಳಿಸಿದ್ದಾನೆ.
ಈ ರೀತಿ ಮೆಸೇಜ್ ನಿಲ್ಲಬೇಕು!
ಈ ಮೆಸೇಜ್ ನೋಡಿ ನಮ್ರತಾ ಗೌಡ ಅವರಿಗೆ ಬೇಸರ ತಂದಿದೆ. ಇಂದು ಏನೇ ಪೋಸ್ಟ್ ಮಾಡಿದರೂ ಕೂಡ ನೆಗೆಟಿವ್ ಆಗಿ ಕಾಮೆಂಟ್ ಮಾಡೋರು ಇದ್ದಾರೆ. ಅಷ್ಟೇ ಅಲ್ಲದೆ ಮೆಸೇಜ್‌ನಲ್ಲಿ ಈ ರೀತಿ ಆಫರ್ ಕೂಡ ನೀಡುತ್ತಾರೆ. ಎಷ್ಟೋ ನಟಿಯರು, ಸಾಮಾನ್ಯ ಜನರಿಗೂ ಕೂಡ ಈ ರೀತಿ ಆಗುತ್ತದೆ, ಹೀಗೆಲ್ಲ ಮೆಸೇಜ್ ಮಾಡೋದು ನಿಲ್ಲಬೇಕು ಎಂದು ನಮ್ರತಾ ಗೌಡ ಅವರು ಈ ಬಾರಿ ಧ್ವನಿ ಎತ್ತಿದ್ದಾರೆ.
ಚಿತ್ರರಂಗದಲ್ಲಿ ಬ್ಯುಸಿ!
ನಮ್ರತಾ ಗೌಡ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಭಾಗವಹಿಸಿದ್ದರು. ಫಿನಾಲೆವರೆಗೂ ಅವರು ಇದ್ದರು. ಆ ನಂತರದಲ್ಲಿ ಅವರು ʼಕೋಣʼ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಇವೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ಇರೋ ನಮ್ರತಾ ಗೌಡ ಅವರು ಫಿಟ್‌ನೆಸ್ ಕಡೆಗೆ ಗಮನವನ್ನು ಕೊಟ್ಟೇ ಕೊಡ್ತಾರೆ. ಇನ್ನು ವಿವಿಧ ರೀತಿಯಲ್ಲಿ ಫೋಟೋಶೂಟ್‌ಗಳನ್ನು ಕೂಡ ಮಾಡಿಸುತ್ತಿರುತ್ತಾರೆ.
ಟ್ರಾವೆಲ್ ಇಷ್ಟಪಡುವ ನಮ್ರತಾ ಗೌಡ ಅವರು ಆಗಾಗ ಸುತ್ತಮುತ್ತಲಿನ ಸ್ಥಳಗಳಿಗೆ, ವಿದೇಶಗಳಿಗೂ ಪ್ರವಾಸಕ್ಕೆ ಹೋಗುತ್ತಾರೆ. ಅಲ್ಲಿನ ಸುಂದರ ಸ್ಥಳಗಳ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಸ್ವಂತ ಯುಟ್ಯೂಬ್ ಚಾನೆಲ್ ಹೊಂದಿರೋ ಇವರು ಸಾಕಷ್ಟು ವಿಷಯಗಳನ್ನು ವಿಡಿಯೋ ಮಾಡಿ ಶೇರ್ ಮಾಡುತ್ತಿರುತ್ತಾರೆ. ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೆ ಸಿನಿಮಾಗಳಲ್ಲಿ ನಟಿಸಿರೋ ನಮ್ರತಾ ಗೌಡ ಅವರು, ಸ್ವಂತ್ ಕಾರ್, ಮನೆ ಖರೀದಿ ಮಾಡಿದ್ದರು. ಎಲ್ಲವೂ ಸಾಲ ಮಾಡಿಯೇ ಮಾಡಿದ್ದೇನೆ, ದುಡಿಯುತ್ತಿದ್ದೇನೆ, ದುಡಿದು ತೀರಿಸುವೆ ಎಂದು ನಮ್ರತಾ ಗೌಡ ಅವರು ಹೇಳಿದ್ದಾರೆ. ಈಗ ನಟ ಕಿರಣ್ ರಾಜ್ ಅವರಿಗೆ ನಮ್ರತಾ ಗೌಡ ಹೀರೋಯಿನ್ ಆಗಿದ್ದು, ʼಕರ್ಣʼ ಧಾರಾವಾಹಿ ( Karna Serial ) ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಶುರುವಾಗಿದೆ. ಅಂದಹಾಗೆ ಈಗಾಗಲೇ ಪ್ರೋಮೋಗಳು ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಕುತೂಹಲ ಸೃಷ್ಟಿ ಮಾಡಿದೆ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಸಂಚಲನ ಮೂಡಿಸುವ ಸೀರಿಯಲ್ ಬರೋದಂತೂ ಪಕ್ಕಾ ಎನ್ನಬಹುದು.


