Asianet Suvarna News Asianet Suvarna News

BBK9 ಒಂದೇ ಮಗು ಸಾಕಾಗಿದೆ; ನಟಿ ಮಯೂರಿಗೆ ಅರುಣ್ ಸಾಗರ್‌ ಕ್ಲಾಸ್!

ಒಂದೇ ಮನೆಯಲ್ಲಿ ನೂರಾರು ವಿಚಾರಗಳನ್ನು ಚರ್ಚ. ಒಂದೇ ಮಗು ಸಾಕು ಎಂದ ಮಯೂರಿಗೆ ಬುದ್ಧಿ ಹೇಳಿದ ಅರುಣ್ ಸಾಗರ್....

Bigg boss kannada Mayuri talks about family planning with Arun sagar vcs
Author
First Published Oct 2, 2022, 10:18 AM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಕೊಂಚ ಡಿಫರೆಂಟ್ ಆಗಿದೆ. ಕಲಾವಿದರ ದೊಡ್ಡ ಗುಂಪಿದ್ದು ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಟ್ಯಾಲೆಂಟ್ ಪ್ರದರ್ಶನ ಮಾಡುತ್ತಿದ್ದಾರೆ. ಅತ್ಯುತ್ತಮ ಮತ್ತು ಕಳಪೆ ಹೆಚ್ಚು ವೋಟ್ ಪಡೆದುಕೊಂಡಿರುವುದು ಅರುಣ್ ಸಾಗರ್. ಮೊದಲ ವಾರ ಎಲಿಮಿನೇಷನ್‌ನಿಂದ ಮೊದಲು ಸೇಫ್ ಆಗಿರುವುದು ಕೂಡ ಅರುಣ್ ಸಾಗರ್. ಹೀಗಾಗಿ ಈ ಮನೆಯ ಬಿಗ್ ಹೈಲೈಟ್‌ ಬಂದು ಅರುಣ್ ಸಾಗರ್ ಎನ್ನಬಹುದು. ಅರುಣ್ ಮಾತುಗಳಲ್ಲಿ ಒಂದು ಅರ್ಥ ಇರುತ್ತದೆ ಎಂದು ಪ್ರತಿಯೊಬ್ಬರು ಸಲಹೆ ಪಡೆಯುತ್ತಾರೆ. 

ಮಯೂರಿ ಮಗು:

10ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಮತ್ತು ಮೂರ್ನಾಲ್ಕು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಮಯೂರಿ ಲಾಕ್‌ಡೌನ್‌ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಲಾಕ್‌ಡೌನ್‌ ಸಮಯದಲೇ ಗಂಡು ಮಗುವಿನೆ ಜನ್ಮ ನೀಡಿದ್ದಾರೆ. ಮದರ್‌ವುಡ್‌ನ ಎಂಜಾಯ್ ಮಾಡುತ್ತಿರುವ ಮಯೂರಿ ಒಂದೂವರೆ ವರ್ಷದ ಮಗುವನ್ನು ಬಿಟ್ಟು ಬಿಗ್ ಬಾಸ್ ರಿಯಾಲಿಟಿ ಶೋಗೆ ಬರುವ ಸಾಹಸ ಮಾಡಿದ್ದಾರೆ. ಹೀಗೆ ಒಂದು ದಿನ ಮನೆ ಸದಸ್ಯರು ಎಷ್ಟು ಮಕ್ಕಳು ಬೇಕು ಎಂದು ಚರ್ಚೆ ಮಾಡುತ್ತಿದ್ದರು ಆಗ ಮಯೂರಿ 'ನನಗೆ ಒಂದಕ್ಕೇ ಸಾಕಾಗಿದೆ. ನನಗೆ ಒಂದೇ ಮಗು ಸಾಕು ಎಂದು ಧೃಢವಾಗಿದ್ದೇನೆ' ಎಂದು ಹೇಳುತ್ತಾರೆ. ಅಲ್ಲಿದ ಪ್ರತಿಯೊಬ್ಬರು ನಿಮ್ಮ ಮಗ ದೊಡ್ಡವನಾದ ಮೇಲೆ ಮತ್ತೊಂದು ಮಗು ಬೇಕು ಅನಿಸುತ್ತದೆ ಆತನಿಗೆ ಜೊತೆಯಾಗಿ ಒಬ್ಬರು ಇರಬೇಕು ಅನಿಸುತ್ತದೆ ಎಂದಿದ್ದಾರೆ. 'ಇಲ್ಲ ಇಲ್ಲ ಯಾರು ಏನೇ ಹೇಳಿದ್ದರು ನಾನು ಕನ್‌ಫರ್ಮ್ ಆಗಿದ್ದೀನಿ' ಎಂದಿದ್ದಾರೆ.

Bigg boss kannada Mayuri talks about family planning with Arun sagar vcs

ಈ ಮಾತುಗಳನ್ನು ಕೇಳಿಸಿಕೊಂಡು ಪಕ್ಕದಲ್ಲಿ ಕುಳಿತಿದ್ದ ಅರುಣ್ ಸಾಗರ್ ಮಯೂರಿ ಕಾಲೆಳೆದಿದ್ದಾರೆ.'ಬಿಗ್ ಬಾಸ್‌ನಿಂದ ಹೊರ ಹೋದ ಮೇಲೆ ಮತ್ತೊಂದು ಮಗು ಮಾಡಿಕೊಳ್ಳುವ ಪ್ಲ್ಯಾನ್ ಮಾಡಿ. ನಮ್ಮ ಅಜ್ಜಿ ಅವರು ಏಳು ಎಂಟು ಹೆತ್ತಿದ್ದರು' ಎಂದು ತಮಾಷೆ ಮಾಡುತ್ತಾರೆ. ಅದಿಕ್ಕೆ ನೇಹಾ 'ಹೌದು ಹೌದು ನಮ್ಮ ಅಜ್ಜಿ ಕೂಡ ಏಳು ಹೆತ್ತಿದ್ದಾರೆ' ಎಂದರು. 

BBK9 ಐಶ್ವರ್ಯ ಪಿಸ್ಸೆ ದಯವಿಟ್ಟು ನನ್ನ ಪ್ರೀತ್ಸೆ ಎಂದ ಪ್ರಪೋಸ್ ಮಾಡಿದ ನವಾಜ್!

ಕಣ್ಣೀರಿಟ್ಟ ಮಯೂರಿ:

ಅರ್ಯವರ್ಧನ್ ಕಿಚನ್ ಡಿಪಾರ್ಟ್‌ಮೆಂಟ್‌ ನೋಡಿಕೊಳ್ಳುತ್ತಿದ್ದಾರೆ. ಅಡುಗೆ ಮಾತ್ರ ಸೂಪರೋ ಸೂಪರ್ ಎನ್ನುತ್ತಾರೆ ಸ್ಪರ್ಧಿಗಳು. ಅಡುಗೆ ರೆಡಿಯಾದ ಕ್ಷಣ ಮಯೂರಿ ಊಟ ಮುಗಿಸಿಕೊಳ್ಳುತ್ತಾರೆ. ಮನೆ ಎಲ್ಲಾ ಸದಸ್ಯರು ಒಂದು ರೌಂಡ್ ಊಟ ಮಾಡಿದ ನಂತರ ಉಳಿದ ಊಟವನ್ನು ತಿನ್ನಲು ಮಯೂರಿ ಹೋಗುತ್ತಾರೆ. ಇದನ್ನು ಗಮನಿಸಿರುವ ನೇಹಾ 'ಮಯೂರಿನೇ ಬೆಸ್ಟ್‌. ಮೊದ್ಲೆ ಒಂದು ರೌಂಡ್ ಊಟ ಮಾಡುತ್ತಾರೆ ಆಮೇಲೆ ಎಲ್ಲರದ್ದು ಮುಗಿದ ಮೇಲೆ ಮತ್ತೊಂದು ರೌಂಡ್ ಮಾಡುತ್ತಾರೆ' ಎಂದು ಹಾಸ್ಯ ಮಾಡುತ್ತಾರೆ. ಇದಕ್ಕೆ ಬೇಸರ ಮಾಡಿಕೊಂಡು ಮಯೂರಿ ಕಣ್ಣೀರಿಡುತ್ತಾರೆ.

'ನಾನು ಈ ಮನೆಗೆ ಬಂದಿದ್ದು ಆಟ ಆಡೋಕೆ. ರಿಲೇಷನ್‌ಶಿಪ್‌ ಇಟ್ಕೊಳ್ಳೋಕೆ ಅಲ್ಲ. ಒಂದು ಪುಟ್ಟ ಮಗುವನ್ನು ಬಿಟ್ಟು ನಾನು ಇಲ್ಲಿ ಸಂಬಂಧ ಬೆಳೆಸೋಕೆ ಬಂದಿಲ್ಲ. ನಾನು ಕೂಡ ಆಟ ಆಡೋಕೆ ಬಂದಿರೋದು' ಎಂದು ಹೇಳುತ್ತಾರೆ.

BBK9: ಮನೆಯ ಮೊದಲ ಕ್ಯಾಪ್ಟನ್ ಆದ ವಿನೋದ್ ಗೊಬ್ರಗಾಲ, ಅತ್ಯುತ್ತಮ ಅರುಣ್-ಕಳಪೆ ರೂಪೇಶ್!

ಈ ಬಿಗ್ ಬಾಸ್ ಆವೃತ್ತಿಯಲ್ಲಿ ಈಗಾಗಲೇ ಒಮ್ಮೆ ಪಾಲ್ಗೊಂಡಿದ್ದ ಸ್ಪರ್ಧಿಗಳು ಹಾಗೂ ಇತ್ತೀಚೆಗೆ ಒಟಿಟಿ ಬಿಗ್ ಬಾಸ್‌ನಲ್ಲಿ ಗೆದ್ದ ನಾಲ್ಕು ಸ್ಪರ್ಧಿಗಳು ಹಾಗೂ ಕೆಲವು ಹೊಸ ಮುಖಗಳು ಸೇರಿರುವುದು ವಿಶೇಷ. ಎಂದಿನಂತೆ ಸ್ಯಾಂಡಲ್‌ವುಡ್ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿದ್ದು, ಅಭಿಮಾನಿಗಳು ವಾರದ ಕಥೆ ಕಿಚ್ಚನ ಜೊತೆ ನೋಡಲು ಕಾತುರರಾಗಿರುತ್ತಾರೆ. ಮೊದಲ ಆವೃತ್ತಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ವೀಕ್ಷಕರ ಹೃದಯ ಗೆದ್ದ ಅರುಣ್ ಸಾಗರ್‌ಗೆ ಲಕ್ ಕೈ ಹಿಡಿದಿರಲಿಲ್ಲ. ಅದಕ್ಕೆ ಈ ಸಾರಿ ಗೆಲ್ಲೋದು ಅವರೇ ಎಂದು ಊಹಿಸುತ್ತಿದ್ದಾರೆ.

Follow Us:
Download App:
  • android
  • ios