Asianet Suvarna News Asianet Suvarna News

ಡಂಕಿ ನಟಿ ತಾಪ್ಸಿ ಪನ್ನು ನಟ ಶಾರುಖ್ ಖಾನ್ ಬಗ್ಗೆ ಹೀಗೆ ಹೇಳಿದ್ರು; ಊಹಿಸಲೂ ಅಸಾಧ್ಯವಾದ ಮಾತುಗಳು!

ಶೂಟಿಂಗ್ ಶುರುವಾದಾಗ ನಾನು ನನ್ನ ಪಾತ್ರದ, ಅಭಿನಯದ ಬಗ್ಗೆ ಅಷ್ಟೇ ಗಮನ ಕೇಂದ್ರೀಕರಿಸಿದೆ. ಏಕೆಂದರೆ, ಶಾರುಖ್ ಖಾನ್ ಅವರೊಬ್ಬರು ಗ್ರೇಟ್ ಸ್ಟಾರ್. ಅಂಥವರ ಬಗ್ಗೆ ನಾನು ಏನಾದರೂ ಯೋಚಿಸುವುದು ವೇಸ್ಟ್ ಆಫ್ ಟೈಮ್ ಅಂತ ನಾನು ಬಲ್ಲೆ. 

I can not explain about shah rukh khan comfortable zone in my words says Taapsee Pannu srb
Author
First Published Dec 31, 2023, 1:24 PM IST


ಬಹುಭಾಷಾ ಬೆಡಗಿ ತಾಪ್ಸಿ ಪನ್ನು ಈ ವರ್ಷದ ಕೊನೆಯಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಡಂಕಿ ಸಿನಿಮಾ ಬಿಡುಗಡೆ ಬಳಿಕ ತಾಪ್ಸಿ ಬಗ್ಗೆ ಸಾಕಷ್ಟು ನ್ಯೂಸ್‌ಗಳು ಸಹಜವಾಗಿ ಹರಿದಾಡುತ್ತಿವೆ. ಶಾರುಖ್‌ ಖಾನ್ ನಟನೆಯ ಡಂಕಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ತಾಪ್ಸಿ ಪನ್ನು, ಈ ಚಿತ್ರದ ಸ್ಲೋ ಕಲೆಕ್ಷನ್‌ಅನ್ನು ಕೂಡ ಎಂಜಾಯ್ ಮಾಡುತ್ತಿದ್ದಾರೆ. ಡಂಕಿ ಚಿತ್ರದ ಬಳಿಕ ಅವರಿಗೆ ಸಾಕಷ್ಟು ಕರೆಗಳು, ಮೆಸೇಜ್‌ಗಳು ಬರುತ್ತಿವೆಯಂತೆ. ಈ ಬಗ್ಗೆ ನಟಿ ತಾಪ್ಸಿ ಖುಷಿ ಹಂಚಿಕೊಂಡಿದ್ದಾರೆ. 

ಡಂಕಿ ನಟಿ ಮಾತನಾಡಿ 'ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಸರ್ ಕಾಂಬಿನೇಷನ್‌ನ ಡಂಕಿ ಸಿನಿಮಾ ಬಿಡುಗಡೆಯಾದ ಬಳಿಕ ನನಗೆ ಫ್ಯಾನ್ಸ್ ಕಡೆಯಿಂದ ಬಹಳಷ್ಟು ಕಾಲ್‌ಗಳು, ಮೆಸೇಜ್‌ಗಳು ಬರುತ್ತಿವೆ. ಸಿನಿಮಾ ಸಾಕಷ್ಟು ಗಳಿಕೆ ಮಾಡಿದೆ ಎಂಬ ಸುದ್ದಿಯಿದೆ. ಬೇರೆಯವರ ವಿಷಯ ನನಗೆ ಗೊತ್ತಿಲ್ಲ, ನನಗಂತೂ ನನ್ನ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿ ಬಹಳಷ್ಟು ಕರೆಗಳು, ಮೆಸೇಜ್‌ಗಳು ಬರುತ್ತಿವೆ. ವರ್ಷದ ಕೊನೆಯ ದಿನಗಳು ನನಗಂತೂ ತುಂಬಾ ಖುಷಿ ನೀಡುತ್ತಿವೆ. ನನ್ನ ಪಾಲಿಗೆ ಡಂಕಿ ಸಿನಿಮಾ ಯಶಸ್ವಿಯಾಗಿದೆ' ಎಂದಿದ್ದಾರೆ ನಟಿ ತಾಪ್ಸಿ ಪನ್ನು. 

ಡಂಕಿ ಸಿನಿಮಾ ವೇಳೆ ಶೂಟಿಂಗ್‌ನಲ್ಲಿ ನಟ ಶಾರುಖ್‌ ಖಾನ್ ಅವರೊಂದಿಗೆ ನಟಿ ತಾಪ್ಸಿ ಪನ್ನು ಸಾಕಷ್ಟು ಸಮಯ ಕಳೆದಿದ್ದಾರೆ. ಶಾರುಖ್ ಖಾನ್ ಜತೆ ನಿಮ್ಮ ಒಡನಾಟ ಹೇಗಿತ್ತು, ಅವರ ಬಗ್ಗೆ ನೀವು ಏನು ಹೇಳುತ್ತೀರಿ ಎಂದು ತಾಪ್ಸಿ ಅವರನ್ನು ಕೇಳಲು 'ನಾನು ಅವರ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕು ಎಂದರೆ 'ಅವರೊಬ್ಬರು ಗಮನಿಸಲೇಬೇಕಾದ ವ್ಯಕ್ತಿ ಎಂದು ಸ್ಪಷ್ಟವಾಗಿ ಹೇಳಬಲ್ಲೆ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮತ್ತು ಮಾತನಾಡಿಸಲು ನಾನು ಸಾಕಷ್ಟು  ಸಮಯ ತೆಗೆದುಕೊಂಡೆ. ಏಕೆಂದರೆ, ಬಹಳಷ್ಟು ಸಿನಿಮಾಗಳಲ್ಲಿ ನಾಯಕರಾಗಿ ತೆರೆಯ ಮೇಲೆ ಮಿಂಚಿದ್ದ ನಟ ನನ್ನ ಎದುರಿಗೇ ಕುಳಿತಿರುವಾಗ-ನಿಂತಿರುವಾಗ ಸಡನ್ನಾಗಿ ಮಾತುಕತೆಗೆ ಇಳಿಯಲು ಸಾಧ್ಯವಾಗುವುದಿಲ್ಲ. 

ಡಿವೋರ್ಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಇಷಾ ಕೊಪ್ಪೀಕರ್; ಇಂದರ್ ಕುಮಾರ್ ನೆನಪು ಮರೆಯಾಗಿಲ್ಲವೇ?

ಶೂಟಿಂಗ್ ಶುರುವಾದಾಗ ನಾನು ನನ್ನ ಪಾತ್ರದ, ಅಭಿನಯದ ಬಗ್ಗೆ ಅಷ್ಟೇ ಗಮನ ಕೇಂದ್ರೀಕರಿಸಿದೆ. ಏಕೆಂದರೆ, ಶಾರುಖ್ ಖಾನ್ ಅವರೊಬ್ಬರು ಗ್ರೇಟ್ ಸ್ಟಾರ್. ಅಂಥವರ ಬಗ್ಗೆ ನಾನು ಏನಾದರೂ ಯೋಚಿಸುವುದು ವೇಸ್ಟ್ ಆಫ್ ಟೈಮ್ ಅಂತ ನಾನು ಬಲ್ಲೆ. ಏಕೆಂದರೆ ಹೇಗೂ ಅವರ ಜತೆ, ಅವರ ಎದುರು ನಾನು ನಟಿಸಲೇಬೇಕು. ಹಾಗಿರುವಾಗ ಸಹಜವಾಗಿ ಸಮಯ-ಸಂದರ್ಭ ಬಂದಾಗ ಮಾತುಕತೆ ನಡೆದೇ ನಡೆಯುತ್ತದೆ. ನಾನು ಸಂದರ್ಭವನ್ನು ಎದುರು ನೋಡುತ್ತಾ ಇರುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ನನಗೆ ಗೊತ್ತಿತ್ತು. 

ಪ್ರಭಾಸ್-ಶಾರುಖ್ ಫ್ಯಾನ್ಸ್ ಸೋಷಿಯಲ್ ವಾರ್ ಬಗ್ಗೆ ಕೊನೆಗೂ ಬಾಯ್ಬಿಟ್ಟ ಪ್ರಶಾಂತ್‌ ನೀಲ್!

ಸ್ವಲ್ಪ ದಿನಗಳ ಬಳಿಕ ಶಾರುಖ್ ಖಾನ್ ನನ್ನ ಮುಖ ನೋಡಿದಾಗ, ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ನನಗೆ ಅವರಲ್ಲೊಬ್ಬ ಡೀಸೆಂಟ್ ವ್ಯಕ್ತಿ ಕಂಡರು. ಪ್ರೇಮಿಯಂತಹ ನೋಟ, ಆದರೆ ಆ ನೋಟದಲ್ಲಿ ಇರುವ ಪ್ರಬುದ್ಧತೆ ಕಂಡು ನಾನು ಬೆರಗಾಗಿಬಿಟ್ಟೆ. ಅಗತ್ಯವಿದ್ದಾಗ ನನ್ನನ್ನು ನೋಡಿ ಅವರು ಮಾತನಾಡುತ್ತಿದ್ರು, ಎನಾದ್ರೂ ಸಲಹೆ ಸೂಚನೆ ಕೊಡುತ್ತಿದ್ದರು ಅಷ್ಟೇ. ಅವರ ಜತೆ ನಟಿಸಿರುವುದು ನನಗೆ ನಿಜಾವಾಗಿಯೂ ಬೇರೆಯದೇ ಅನುಭವ ನೀಡಿದೆ. ನಾನೀಗ ಅದಕ್ಕೂ ಮೊದಲಿನ ತಾಪ್ಸಿಯಾಗಿ ಉಳಿದಿಲ್ಲ' ಎಂದಿದ್ದಾರೆ ನಟಿ ತಾಪ್ಸಿ ಪನ್ನು. 

ವಿಲನ್ ಪಾತ್ರ ಮಾಡಲಾರೆ ಅಂದಿದ್ರೂ ಒಪ್ಕೊಂಡ್ರಾ; ತಲೈವರ್ 171 ಚಿತ್ರಕ್ಕೆ ಸ್ಟಾರ್ ಹೀರೋನೇ ವಿಲನ್ನಾ!

Follow Us:
Download App:
  • android
  • ios