Asianet Suvarna News Asianet Suvarna News

ನಿಮ್ಮ ನಿಜವಾದ ಮನೆ ಅಲ್ಲೆಲೋ ಇದೆ, ನಿಮ್ಮ ದೇಹವೂ ನಿಮ್ಮದಲ್ಲ; ಕಂಗನಾ ರಣಾವತ್

ನಾನು ಈ ವರ್ಷ ಮೈಲುಗಟ್ಟಲೆ ಜಾಗವನ್ನು ಓಡಾಡಿದ್ದೇನೆ, ಮನೆ ಕಟ್ಟಿದ್ದೇನೆ, ತೋಟ ಮಾಡಿಕೊಂಡಿದ್ಧೇನೆ. ಆದರೆ ಎಲ್ಲಾ ಕಡೆ ಓಡಾಡುತ್ತೇನೆ, ಎಂಜಾಯ್ ಮಾಡುತ್ತೇನೆಯೇ ಹೊರತೂ ನಾನು ಯಾವುದನ್ನೂ ಶಾಶ್ವತ ಸ್ಥಾನ ಎಂದುಕೊಂಡಿಲ್ಲ. 

I am on my way home says bollywood actress Kangana Ranaut srb
Author
First Published Dec 31, 2023, 4:23 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿರುವ ವೇಳೆಯಲ್ಲಿ ನಟಿ ಕಂಗನಾ ತಾವು ಈ ವರ್ಷದಲ್ಲಿ ಏನು ಕಲಿತುಕೊಂಡೆ ಎಂಬುದನ್ನು ಪೋಸ್ಟ್ ಮೂಲಕ ಹೇಳಿದ್ದಾರೆ. ಕಂಗನಾ ಸದ್ಯ ಎಮರ್ಜನ್ಸಿ ಚಿತ್ರದ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಆಗಬೇಕಿದ್ದ ಕಂಗನಾ ನಟನೆಯ ಎಮರ್ಜನ್ಸಿ ಚಿತ್ರವು ಮುಂದಿನ ವರ್ಷಕ್ಕೆ, ಅಂದರೆ 2024ಗೆ ಮುಂದೂಡಲ್ಪಟ್ಟಿದೆ. 

ಸದ್ಯ ಕಂಗನಾ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ನಟಿ ಕಂಗನಾ 'ನಾನು ಈ ವರ್ಷ ಬಹಳಷ್ಟನ್ನು ಕಲಿತುಕೊಂಡೆ. ನಾವು ನಮ್ಮ ದೇಹವನ್ನು ಮೀರಿದವರು. ಈ ದೇಹವನ್ನು ಹೊರತುಪಡಿಸಿಯೂ ನಮಗೆ ಜೀವವಿದೆ. ಆದರೆ ಅದು ಪ್ರಕೃತಿಯಲ್ಲಿ ಹರಡಿಕೊಂಡಿದೆ. ನಮಗೆ ಈ ದೇಹ, ಇನ್ನೊಂದು ದೇಹ, ಮತ್ತೊಂದು ದೇಹ ಹೀಗೆ ಸಿಗುತ್ತಲೇ ಇರುತ್ತದೆ. ನಾವು ಈ ದೇಹವನ್ನು ನಮ್ಮ ಮನೆ ಎಂದು ಭಾವಿಸಬಾರದು. ಇದು ನಮ್ಮ ಮನೆಯಲ್ಲ, ಬದಲಿಗೆ ಒಂದು ನಿಲ್ದಾಣ ಅಷ್ಟೇ. 

ಡಿವೋರ್ಸ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಇಷಾ ಕೊಪ್ಪೀಕರ್; ಇಂದರ್ ಕುಮಾರ್ ನೆನಪು ಮರೆಯಾಗಿಲ್ಲವೇ?

ನಾನು ಈ ವರ್ಷ ಮೈಲುಗಟ್ಟಲೆ ಜಾಗವನ್ನು ಓಡಾಡಿದ್ದೇನೆ, ಮನೆ ಕಟ್ಟಿದ್ದೇನೆ, ತೋಟ ಮಾಡಿಕೊಂಡಿದ್ಧೇನೆ. ಆದರೆ ಎಲ್ಲಾ ಕಡೆ ಓಡಾಡುತ್ತೇನೆ, ಎಂಜಾಯ್ ಮಾಡುತ್ತೇನೆಯೇ ಹೊರತೂ ನಾನು ಯಾವುದನ್ನೂ ಶಾಶ್ವತ ಸ್ಥಾನ ಎಂದುಕೊಂಡಿಲ್ಲ. ನನ್ನ ಮನೆ ಇದ್ಯಾವುದೂ ಅಲ್ಲ, ನನ್ನ ಶಾಶ್ವತವಾದ ಮನೆ ಬೇರೆಯೇ ಇದೆ ಎಂಬ ಅರಿವು ನನಗೆ ಇದೆ. ನಿಮ್ಮಲ್ಲಿ ಯಾರಿಗಾದರೂ ನೀವಿರುವ ಮನೆ, ಜಾಗ, ಹುದ್ದೆ ಯಾವುದೂ ನಿಮ್ಮದಲ್ಲ ಎನಿಸಿದ್ದರೆ ಖಂಡಿತವಾಗಿಯೂ ನೀವು ನಿಮ್ಮ ನಿಜವಾದ ಮನೆ ಕಡೆ ಪ್ರಯಾಣ ಬೆಳೆಸಿದ್ದೀರಿ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ' ಎಂದಿದ್ದಾರೆ ನಟಿ ಕಂಗನಾ ರಣಾವತ್. 

ಸಾರಥಿ ಸಾರಥ್ಯದಲ್ಲಿ ಹೊಸ ವರ್ಷಕ್ಕೆ ಶಿವರಾಜ್‌ಕುಮಾರ್ ಹೊಸ ಸಿನಿಮಾ ಘೋಷಣೆ!

ಅಂದಹಾಗೆ, ನಟಿ ಕಂಗನಾ ರಣಾವತ್ ಅವರು ಸದ್ಯ ಎಮರ್ಜನ್ಸಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರೆ. ಸಿನಿಮಾ ಕೆರಿಯರ್‌ಗೆ ಸಂಬಂಧಪಟ್ಟು ಹೇಳುವುದಾದರೆ ಈ ವರ್ಷ ಕಂಗನಾ ಪಾಲಿಗೆ ಅಷ್ಟೇನೂ ಚೆನ್ನಾಗಿ ಇರಲಿಲ್ಲ ಎನ್ನಬಹುದು. ಕಂಗನಾ ನಟನೆಯ ಚಂದ್ರಮುಖಿ-2 ಹಾಗು ತೇಜಸ್‌ ಸಿನಿಮಾಗಳು ಅಷ್ಟೇನೂ ಚೆನ್ನಾಗಿ ಗಳಿಸಿಲ್ಲ. ಆದರೆ, ಕಂಗನಾ ಕೆಲಸವಿಲ್ಲದೇ ಖಾಲಿ ಕುಳಿತಿಲ್ಲ. 

ಡಂಕಿ ನಟಿ ತಾಪ್ಸಿ ಪನ್ನು ನಟ ಶಾರುಖ್ ಖಾನ್ ಬಗ್ಗೆ ಹೀಗೆ ಹೇಳಿದ್ರು; ಊಹಿಸಲೂ ಅಸಾಧ್ಯವಾದ ಮಾತುಗಳು!

ತಮಿಳುನಾಡಿನ ಕೊಯಮುತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಯೋಗ ಸೆಂಟರ್‌ಗೆ ಆಗಾಗ ಭೇಟಿ ನೀಡುವ ಕಂಗನಾ, ಆಧ್ಯಾತ್ಮದ ಹಾದಿಯಲ್ಲಿ ಹಂತಹಂತವಾಗಿ ಸಾಗುತ್ತಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಈಗ ಕಂಗನಾ ಮಾಡಿರುವ ಪೋಸ್ಟ್‌ ಕೂಡ ಅವರ ನಡೆ ಆಧ್ಯಾತ್ಮದ ಕಡೆ ಇದೆ ಎಂಬುದಕ್ಕೆ ಪುಷ್ಟಿ ನೀಡುವಂತಿದೆ. 

Follow Us:
Download App:
  • android
  • ios