Asianet Suvarna News Asianet Suvarna News

BBK9; ನೀರು ಮಿತವಾಗಿ ಬಳಸಿ ಎಂದಿದ್ದೇ ತಪ್ಪಾಯ್ತಾ? ರೂಪೇಶ್ ನೀತಿ ಪಾಠಕ್ಕೆ ಸಿಡಿದೆದ್ದ ಪ್ರಶಾಂತ್ ಸಂಬರಗಿ

 ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಮತ್ತು ಸಂಬರಗಿ ಅವರ ಕಿತ್ತಾಟವೆ ಹೆಚ್ಚಾಗಿದೆ. ಇಬ್ಬರು ಸದಾ ಕಿತ್ತಾಡುತ್ತಿರುತ್ತಾರೆ. ಇವತ್ತಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದ್ದು ಇವತ್ತು ಸಹ ಪ್ರಶಾಂತ್ ಮತ್ತು ರೂಪೇಶ್ ನಡುವೆ ವಾಗ್ವಾದ ತಾರಕಕ್ಕೇರಿದೆ. 

Bigg Boss Kannada 9; prashanth sambargi angry on roopesh Rajanna statement of water sgk
Author
First Published Sep 28, 2022, 11:05 AM IST

ಬಿಗ್ ಬಾಸ್ ಕನ್ನಡ ಸೀಸನ್ 9 ಮೊದಲ ವಾರವೇ ಕಾರವೇರಿತ್ತು. ಒಟ್ಟು 18 ಮಂದಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಪ್ರತಿಯೊಬ್ಬರು ತಮ್ಮತಮ್ಮ ಆಟ ಪ್ರಾರಂಭ ಮಾಡದ್ದಾರೆ. ಟಾಸ್ಕ್ ಜೊತೆ  ಅಳು, ನಗು, ಕಿತ್ತಾಟ, ವಾಗ್ವಾದಕ್ಕೆ ಬಿಗ್ ಬಾಸ್ ಮೊದಲ ವಾರ ಸಾಕ್ಷಿ ಆಗಿದೆ. ಜೋಡಿ ಆಟ ಪ್ರಾರಂಭಿಸಿರುವ ಬಿಗ್ ಸ್ಪರ್ಧಿಗಳು ಪ್ರೇಕ್ಷಕರನ್ನು ಇಂಪ್ರೆಸ್ ಮಾಡಲು ವಿವಧ ಗಿಮಿಕ್ ಮಾಡುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು,  ಪ್ರೋಮದಲ್ಲಿ ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ಮತ್ತೆ ಕಿತ್ತಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಮತ್ತು ಸಂಬರಗಿ ಅವರ ಕಿತ್ತಾಟವೆ ಹೆಚ್ಚಾಗಿದೆ. ಇಬ್ಬರು ಸದಾ ಕಿತ್ತಾಡುತ್ತಿರುತ್ತಾರೆ. ಇವತ್ತಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದ್ದು ಇವತ್ತು ಸಹ ಪ್ರಶಾಂತ್ ಮತ್ತು ರೂಪೇಶ್ ನಡುವೆ ವಾಗ್ವಾದ ತಾರಕಕ್ಕೇರಿದೆ. 

ಡೈನಿಂಗ್ ಟೇಬಲ್ ನಲ್ಲಿ ಎಲ್ಲರೂ ಕುಳಿತಿದ್ದರು. ಆಗ ರೂಪೇಶ್ ರಾಜಣ್ಣ, ಕೆಲವರು ಲೋಟ ತೊಳಿಯುವಾಗ ನೀರು ಹಾಗೆ ಸುರಿಯುತ್ತಾ ಇರುತ್ತೆ. ನೀರನ್ನು ಮಿತವಾಗಿ ಬಳಸಿ ಎಂದು ಹೇಳಿದರು. ಇದಕ್ಕೆ ಅನುಪಮಾ ಯಾರು ಎಂದು ನೇರವಾಗಿ ಹೇಳಿ ಎಂದರು. ಆದರೆ ರೂಪೇಶ್ ಹೆಸರು ಹೀಳಿ ಅವಮಾನ ಮಾಡಲು ಇಲ್ಲಿ ಇಷ್ಟವಿಲ್ಲ ಎಂದರು. ಇದರಿಂದ ಗರಂ ಆದ ಪ್ರಶಾಂತ್ ಸಬರಗಿ ಎಲ್ಲರಿಗೂ ನೀತಿ ಪಾಠ ಹೇಳಿಕೊಡಿ, ಇಲ್ಲಿ ಯಾರಿಗೂ ನೀತಿ ಪಾಠ ಕೇಳಿ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.ಇದಕ್ಕೆ ಸುಮ್ಮನಿರದ ರೂಪೇಶ್ ನೀವು ಕಲಿತ್ತಿಲ್ಲ ಅನಿಸುತ್ತೆ ಎಂದರು. ಸಂಬರಗಿ ನೀರು ಉಳಿಸುತ್ತೀನಿ.. ನೀರು ಉಳಿಸುತ್ತೀನಿ ಅಂತ ತಮಟೆ ಹೊಡೆದು ಯಾಕೆ ಹೇಳಬೇಕು ಎಂದರು.

BBK9 ಕನ್ನಡ ವಿಷಯ ಬಂದ್ರೆ ಪ್ರಶಾಂತ್‌ ಸಂಬರಗಿಗೆ ** ಉರಿ; ಬಣ್ಣ ಬಯಲು ಮಾಡಿದ ರೂಪೇಶ್ ರಾಜಣ್ಣ

ಪ್ರಶಾಂತ್ ಮಾತಿಗೆ ತಿರುಗೇಟು ನೀಡಿದ ರೂಪೇಶ್, ನಾನು ಆ ರೀತಿ ಯಾರು ಮಾಡ್ತಾ ಇದ್ದಾರೆ ಅವರಿಗೆ ಮಾತ್ರ ನಾನು ಹೇಳುತ್ತಿರುವುದು ಎಂದು ಜೋರಾಗಿ ಕೂಗಾಡಿದರು. ಸುಮ್ಮನಿರದ ಪ್ರಶಾಂತ್ ಎಲ್ಲರೂ ಮನುಷ್ಯರೆ ಇರೋದು ಇಲ್ಲಿ, ಯಾರು ರಾಕ್ಷಸರಲ್ಲ ಎಂದು ಜೋರಾಗಿ ಕಿರುಚಿದರು. ಒಳ್ಳೆಯದನ್ನು ಹೇಳಿದ್ರೆ ತೆಗೆದುಕೊಳ್ಳಲ್ಲ ಎಂದು ರೂಪೇಶ್ ಪ್ರತಿಕ್ರಿಯೆ ನೀಡಿದ್ರು. ಆದರೆ ಪ್ರಶಾಂತ್ ಚೇರ್ ಮೇಲೆ ಹತ್ತಿ ನಿಂತು ಸಮಾಜವನ್ನು ತಿದ್ದುವುದಕ್ಕೆ ಬರೋರು ಮೊದಲು ತಮ್ಮನ್ನು ತಾವು ತಿದ್ದಿಕೊಳ್ಳಬೇಕು ಎಂದು ರೂಪೇಶ್‌ಗೆ ಹೇಳಿದರು. ಇಬ್ಬರ ನಡುವಿನ ವಾಗ್ವಾದದಲ್ಲಿ ಬಿಗ್ ಮನೆಯ ಉಳಿದ ಸ್ಪರ್ಧಿಗಳು ಗಪ್ ಚುಪ್ ಆಗಿದ್ದರು.

BBK9 ಎರಡೇ ದಿನಕ್ಕೆ 12 ಮಂದಿ ನಾಮಿನೇಟ್; ಕಾರಣ ಕೇಳಿ ಹಾಸ್ಯ ಮಾಡಿದ ನೆಟ್ಟಿಗರು!

ಬಿಗ್ ಬಾಸ್ ಸೀಸನ್ 9 ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಲ್ಲಿ ಪ್ರವೀಣರಾಗಿರುವ ಮೊದಲ ಸೀಸನ್ ರನ್ನರ್ ಅಪ್ ಅರುಣ್ ಸಾಗರ್ ನಂತರದ ಸೀಸನ್‌ಗಳಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಾದ ದೀಪಿಕಾ ದಾಸ್, ದಿವ್ಯಾ ಉರುಡುಗ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಅನುಪಮಾ ಗೌಡ, ಆರ್ಯವರ್ಧನ್, ರಾಕೇಶ್ ಅಡಿಗ ಹಾಗೂ ನವೀನರಾದ ನಟಿ ಮಯೂರಿ, ನವಜ್, ದರ್ಶ್ ಚಂದ್ರಪ್ಪ, ನಟಿ ಅಮೂಲ್ಯಾ, ವಿನೋದ್ ಗೊಬ್ರಗಾಲ, ನಟಿ ನೇಹಾ ಗೌಡ, ಬೈಕರ್ ಐಶ್ವರ್ಯ ಪಿಸೆ, ರೂಪೇಶ್ ರಾಜಣ್ಣ, ನಟಿ ಕಾವ್ಯಶ್ರೀ ಗೌಡ. ಇವರಲ್ಲಿ ಮೊದಲ ವಾರ ಯಾರು ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. 


 

Follow Us:
Download App:
  • android
  • ios