ʼಬಿಗ್‌ ಬಾಸ್‌ ಕನ್ನಡ ಸೀಸನ್‌ 8ʼ ಸ್ಪರ್ಧಿಗಳಾದ ದಿವ್ಯಾ ಉರುಡುಗ, ಕೆಪಿ ಅರವಿಂದ್‌ ಅವರ ಮದುವೆ ಯಾವಾಗ ಅಂತ ಅವರು ಅಭಿಮಾನಿಗಳು ಕೇಳಿ, ಕೇಳಿ ಸುಸ್ತಾಗಿದ್ದಾರೆ. ಈಗ ಮದುವೆ ಯಾವಾಗ ಎಂದು ಈ ಜೋಡಿ ಹೇಳಿಕೊಂಡಿದೆ.  

2021ರಲ್ಲಿ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 8’ ಶೋ ಪ್ರಸಾರ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್‌ ಸ್ನೇಹ ಶುರುವಾಯ್ತು. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದರೂ ಕೂಡ, ಅಧಿಕೃತವಾಗಿ ಎಲ್ಲಿತೂ ತಾವು ಪ್ರೇಮಿಗಳು ಎಂದು ಹೇಳಿಕೊಂಡಿಲ್ಲ. ಈಗ ಅವರು ಮದುವೆ ಬಗ್ಗೆ ಅಪ್‌ಡೇಟ್ಸ್‌ ನೀಡಿದ್ದಾರೆ.

ಹೊರಗಡೆ ಕಮಿಟ್‌ ಆದ ಜೋಡಿಗಳು! 
ಹೌದು, ʼಬಿಗ್‌ ಬಾಸ್ʼ‌ ಮನೆಯಲ್ಲಿದ್ದಾಗ ಕೆಪಿ ಅರವಿಂದ್‌, ದಿವ್ಯಾ ಉರುಡುಗ ಪ್ರೀತಿಯಲ್ಲಿ ಬಿದ್ದಿದ್ದರು. “ಹೊರಗಡೆ ಹೋದ್ಮೇಲೆ ಒಂದಷ್ಟು ವಿಷಯ ಮಾತಾಡಿಕೊಂಡು ಆಮೇಲೆ ಡಿಸೈಡ್‌ ಮಾಡ್ತೀನಿ” ಎಂದು ಅರವಿಂದ್‌ ಅವರು ದೊಡ್ಮನೆಯಲ್ಲಿದ್ದಾಗಲೇ ಹೇಳಿಕೊಂಡಿದ್ದರು. ಆನಂತರದಲ್ಲಿ ದಿವ್ಯಾ, ಅರವಿಂದ್‌ ಅವರು ಕಮಿಟ್‌ ಆಗಿದ್ದಾರೆ. ದೊಡ್ಮನೆಯಲ್ಲಿದ್ದಾಗ ಸ್ನೇಹಿತರಾಗಿದ್ದವರು ಹೊರಗಡೆ ಬಂದ್ಮೇಲೆ ಶತ್ರುಗಳ ರೀತಿ ಇದ್ದವರೂ ಇದ್ದಾರೆ. ಹೊರಗಡೆ ಶತ್ರುಗಳಾಗಿದ್ದವರು ಒಳಗಡೆ ಹೋದ್ಮೇಲೆ ಸ್ನೇಹಿತರಾದವರು ಇದ್ದಾರೆ.

ಅರವಿಂದ್ ಹುಟ್ಟುಹಬ್ಬಕ್ಕೆ ದಿವ್ಯಾ ಉರುಡುಗ ಸ್ಪೆಷಲ್ ವಿಶ್... ಬೇಗ ಮದ್ವೆ ಊಟ ಹಾಕ್ಸಿ ಅಂತಿದ್ದಾರೆ ಫ್ಯಾನ್ಸ್!

ಮದುವೆ ಯಾವಾಗ? 
ಕೆಪಿ ಅರವಿಂದ್‌, ದಿವ್ಯಾ ಉರುಡುಗ ಅವರು ಯಾವಾಗ ಮದುವೆ ಆಗ್ತಾರೆ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಿರುತ್ತದೆ, ಆಗ ಇವರಿಬ್ಬರು ಎಸ್ಕೇಪ್‌ ಆಗಿದ್ದು ಇದೆ. ಇತ್ತೀಚೆಗೆ ಡಾಲಿ ಧನಂಜಯ, ಧನ್ಯತಾ ಅವರ ಮದುವೆಯಲ್ಲಿ ಭಾಗಿಯಾದ ಈ ಜೋಡಿ ಮದುವೆ ಯಾವಾಗ ಎಂದು ಹೇಳಿಕೊಂಡಿದ್ದಾರೆ.

ಉತ್ತರ ಕೊಟ್ಟ ಕೆಪಿ ಅರವಿಂದ್!‌ 
ಧನಂಜಯ ಹಾಗೂ ಧನ್ಯತಾ ಅವರ ಮದುವೆ ಡೇಟ್‌ ಶೀಘ್ರದಲ್ಲಿಯೇ ಅಂತೆ. ಹೌದು, ಖಾಸಗಿ ವಾಹಿನಿಯೊಂದು “ನಿಮ್ಮ ಮದುವೆ ಯಾವಾಗ” ಎಂದು ಪ್ರಶ್ನೆ ಮಾಡಿತ್ತು. ಆಗ ಕೆಪಿ “ಶೀಘ್ರದಲ್ಲಿಯೇ” ಎಂದು ಹೇಳಿದೆ. ಇನ್ನು ದಿವ್ಯಾ ಉರುಡುಗ ಅವರಿಗೆ “ನಿಮ್ಮ ಮದುವೆ ಯಾವಾಗ?” ಎಂದು ಪ್ರಶ್ನೆ ಮಾಡಲಾಗಿದೆ. ಆಗ ದಿವ್ಯಾ, ಕೆಪಿ ಅರವಿಂದ್‌ ನಕ್ಕಿದ್ದಾರೆ. ಈ ಮೂಲಕ ತಾವಿಬ್ಬರು ಮದುವೆ ಆಗುತ್ತಿರೋದಾಗಿ ಹೇಳಿಕೊಂಡಿದ್ದಾರೆ. ಇನ್ನೊಂದು ಕಡೆ “ನಿಮಗೆ ಹೇಳದೆ ಮದುವೆ ಆಗೋದಿಲ್ಲ. ಅತಿ ಶೀಘ್ರದಲ್ಲಿ ಮದುವೆ” ಎಂದು ಹೇಳಿದ್ದಾರೆ.

ಥೈಯ್ಲೆಂಡ್‌ನಲ್ಲಿ ದಿವ್ಯಾ ಉರುಡಗ ಒಬ್ಬರೇ, ಅರವಿಂದ್ ಸರ್ ಎಲ್ಲಿ ಕೇಳ್ತಿದ್ದಾರೆ ಫ್ಯಾನ್ಸ್!

ಚೈತ್ರಾ ವಾಸುದೇವನ್‌ ಮರು ಮದುವೆ! 
ನಿರೂಪಕಿ ಚೈತ್ರಾ ವಾಸುದೇವನ್‌ ಅವರು ಎರಡನೇ ಮದುವೆ ಆಗುತ್ತಿದ್ದಾರೆ. ಮಾರ್ಚ್‌ ತಿಂಗಳಿನಲ್ಲಿ ಈ ಮದುವೆ ನಡೆಯಲಿದೆ. ಈಗಾಗಲೇ ಚೈತ್ರಾ ಚಿತ್ರರಂಗದ ಗಣ್ಯರಿಗೆ ಮದುವೆ ಆಹ್ವಾನ ನೀಡಿದ್ದಾರೆ. ಈಗ ದಿವ್ಯಾ ಉರುಡುಗ, ಕೆಪಿ ಅರವಿಂದ್‌ ಕೂಡ ಮದುವೆಗೆ ರೆಡಿ ಆಗಿದ್ದಾರೆ. ದಿವ್ಯಾ ಉರುಡುಗ ಅವರು ʼನಿನಗಾಗಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕೆಪಿ ಅರವಿಂದ್‌ ಅವರು ಮೋಟಾರ್‌ಸ್ಪೋರ್ಟ್ಸ್‌ ಕಡೆಗೆ ಗಮನ ಕೊಡುತ್ತಿದ್ದಾರೆ.

ಮೂರು ವರ್ಷಗಳ ಲವ್‌ ಸ್ಟೋರಿ! 
ಕಳೆದ ಮೂರು ವರ್ಷಗಳಲ್ಲಿ ಯಾರದ್ದೇ ಮದುವೆ ಇರಲೀ, ಪ್ರೀಮಿಯರ್‌ ಶೋ ಇರಲೀ, ಅದರಲ್ಲಿ ದಿವ್ಯಾ ಉರುಡುಗ, ಕೆಪಿ ಅರವಿಂದ್‌ ಅವರು ಭಾಗಿಯಾಗಿದ್ದರು. ಈ ಮೂಲಕ ಅವರು ತಾವು ಲವ್‌ನಲ್ಲಿರೋದು ಪಕ್ಕಾ, ಮದುವೆ ಆಗ್ತಿರೋದು ಪಕ್ಕಾ ಎಂದು ಹೇಳಿಕೊಂಡಿದ್ದರು. 

ಇನ್ನು ʼಪಾರುʼ ಧಾರಾವಾಹಿ ನಟಿ ಮಾನ್ಸಿ ಜೋಶಿ, ʼಬ್ರಹ್ಮಗಂಟುʼ ಧಾರಾವಾಹಿ ನಟ ಅಭಿಜಿತ್‌ ಸಿಂಗ್‌ ಅವರು ಮದುವೆಯಾಗಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಬ್ಬರಾದ ಮೇಲೆ ಒಬ್ಬರು ಮದುವೆ ಆಗುತ್ತಿದ್ದಾರೆ. ಈ ನೆಪದಲ್ಲಿ ಎಲ್ಲರೂ ಸೇರುತ್ತಿದ್ದಾರೆ.