- Home
- Entertainment
- TV Talk
- ಅರವಿಂದ್ ಹುಟ್ಟುಹಬ್ಬಕ್ಕೆ ದಿವ್ಯಾ ಉರುಡುಗ ಸ್ಪೆಷಲ್ ವಿಶ್... ಬೇಗ ಮದ್ವೆ ಊಟ ಹಾಕ್ಸಿ ಅಂತಿದ್ದಾರೆ ಫ್ಯಾನ್ಸ್!
ಅರವಿಂದ್ ಹುಟ್ಟುಹಬ್ಬಕ್ಕೆ ದಿವ್ಯಾ ಉರುಡುಗ ಸ್ಪೆಷಲ್ ವಿಶ್... ಬೇಗ ಮದ್ವೆ ಊಟ ಹಾಕ್ಸಿ ಅಂತಿದ್ದಾರೆ ಫ್ಯಾನ್ಸ್!
ಕನ್ನಡ ಕಿರುತೆರೆಯ ಜನಪ್ರಿಯ ನಟಿ ದಿವ್ಯಾ ಉರುಡುಗ ತಮ್ಮ ಆತ್ಮೀಯ ಸ್ನೇಹಿತ ಕೆಪಿ ಅರವಿಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಬಿಗ್ ಬಾಸ್ ಮೂಲಕ ಆರಂಭವಾದ ಈ ಜೋಡಿ ಪ್ರೇಮ ಕಥೆ ಇನ್ನು ಮುಂದುವರೆದಿದ್ದು, ಅಭಿಮಾನಿಗಳು ಮದುವೆ ಯಾವಾಗ ಅಂತಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್ 8 (Bigg Boss Season 8) ಹಾಗೂ 9 ರ ಮೂಲಕ ಸದ್ದು ಮಾಡಿದ ಬೆಡಗಿ ದಿವ್ಯಾ ಉರುಡುಗ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ತಮ್ಮ ಆತ್ಮೀಯ ಸ್ನೇಹಿತರಾದ ಕೆಪಿ ಅರವಿಂದ್ ಅವರಿಗೆ ಸ್ಪೆಷಲ್ ಆಗಿ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.
ಬಿಗ್ ಬಾಸ್ ಸೀಸನ್ 8 ರಲ್ಲಿ ರನ್ನರ್ ಅಪ್ ಆಗಿದ್ದವರು ಅರವಿಂದ್ ಕೆಪಿ (Aravind KP). ಇವರು ಅಂತಾರಾಷ್ಟ್ರೀಯ ಮಟ್ಟದ ಬೈಕರ್. ಬಿಗ್ ಬಾಸ್ ಸೀಸನ್ ನಲ್ಲಿ ಜೊತೆಯಾದ ಅರವಿಂದ್ ಹಾಗೂ ಕೆಪಿ ಸ್ನೇಹ, ನಂತರ ಪ್ರೀತಿಗೆ ತಿರುಗಿದ್ದು, ಇಬ್ಬರು ಕಳೆದ 4-5 ವರ್ಷಗಳಿಂದ ಜೋಡಿಯಾಗಿದ್ದಾರೆ. ಎಲ್ಲೂ ತಮ್ಮ ಪ್ರೀತಿ ಬಗ್ಗೆ ಓಪನ್ ಆಗಿ ಹೇಳಿಕೊಳ್ಳದೇ ಇದ್ದರೂ, ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಒಬ್ಬರಿಗೊಬ್ಬರು ಎಷ್ಟೊಂದು ಮುಖ್ಯ ಅನ್ನೋದನ್ನು ಹೇಳಿಕೊಳ್ಳುತ್ತಲೇ ಇರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಾಗಲಿ, ಯಾವುದೇ ಕಾರ್ಯಕ್ರಮದಲ್ಲಾಗಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅರವಿಂದ್ ಕೆಪಿ ಬೈಕ್ ರ್ಯಾಲಿಗಳಲ್ಲೂ ದಿವ್ಯಾ ಹಾಜರಿರುತ್ತಾರೆ. ಈಗಾಗಲೇ ದಿವ್ಯಾ (Divya Uruduga) ಸಂದರ್ಶನವೊಂದರಲ್ಲಿ ತಮಗೆ ಹೆಚ್ಚಿನ ಸಮಯ ಅರವಿಂದ್ ಜೊತೆ ಇರೋದಕ್ಕೆ ಇಷ್ಟ. ಅವರು ತಮ್ಮ ಜೀವನದ ಸ್ಪೆಷಲ್ ವ್ಯಕ್ತಿ ಅನ್ನೋದನ್ನು ಹೇಳಿದ್ದಾರೆ.
ಇದೀಗ ತಮ್ಮ ಲೈಫ್ ನ ಸ್ಪೆಷಲ್ ವ್ಯಕ್ತಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಿವ್ಯಾ ಉರುಡುಗ ಇನ್’ಸ್ಟಾಗ್ರಾಂನಲ್ಲಿ ಇಬ್ಬರು ಜೊತೆಯಾಗಿರುವ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಹ್ಯಾಪಿ ಬರ್ತ್ ಡೇ ಕೆಪಿ ಸರ್, ನೀವು ಹೋದಲ್ಲೆಲ್ಲಾ ನಿಮ್ಮ ಈ ನಗು ಹೀಗೆ ಹರಡುತ್ತಿರಲಿ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಅರವಿಂದ್ ನಿನ್ನ ನಗುವಿನಿಂದ ನನ್ನ ಜೀವನವನ್ನು ತುಂಬಿರೋದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ.
ಈ ಮುದ್ದಾದ ಜೋಡಿಯನ್ನು ನೋಡಿ ಅಭಿಮಾನಿಗಳು ಹಾರೈಸಿದ್ದು, ಇಬ್ಬರ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ. ಮುದ್ದಾದ ಜೋಡಿ, ಪ್ರೀತಿಗೆ ನಿಜವಾದ ಅರ್ಥವೇ ನೀವಿಬ್ಬರು, ಬಿಗ್ ಬಾಸ್ 8 ರಿಂದ ಇಲ್ಲಿವರೆಗೂ ನಿಮ್ಮಿಬ್ಬರ ಪ್ರೀತಿ ಹೆಚ್ಚುತ್ತಲೇ ಸಾಗಿದೆ, ನೀವಿಬ್ಬರು ಬೆಸ್ಟ್ ಜೋಡಿ ಎಂದು ಹಾರೈಸಿದ್ದಾರೆ. ಇನ್ನೂ ಕೆಲವರು ಆದಷ್ಟು ಬೇಗ ಮದುವೆ ಊಟ ಹಾಕಿಸಿ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.
2021 ರ ಫೆಬ್ರುವರಿ ತಿಂಗಳಲ್ಲಿ ಆರಂಭವಾದ ಬಿಗ್ ಬಾಸ್ ಸೀಸನ್ 8 ರಲ್ಲಿ ಅರವಿಂದ್- ದಿವ್ಯಾ ಉರುಡುಗ ನಡುವೆ ಪ್ರೀತಿಯ ಬೆಸುಗೆ ಬೆಸೆದಿತ್ತು, ಈ ಜೋಡಿ ಅಭಿಮಾನಿಗಳ ಮೆಚ್ಚಿನ ಜೋಡಿ ಕೂಡ ಹೌದು. ಇಬ್ಬರು ಜೊತೆಯಾಗಿ ಅರ್ಧಂಬರ್ಧ ಪ್ರೇಮ ಕಥೆ ಎನ್ನುವ ಸಿನಿಮಾ ಕೂಡ ಮಾಡಿದ್ದರು. ಈ ಜೋಡಿಯನ್ನು ಹೆಚ್ಚಾಗಿ ಜನ ಕೇಳುವ ಪ್ರಶ್ನೆಯೇ ಮದುವೆ ಯಾವಾಗ ಅನ್ನೋದು. ಆದರೆ ಇಬ್ಬರೂ ಕೂಡ ಇಲ್ಲಿವರೆಗೂ ಅದಕ್ಕೆ ಉತ್ತರ ನೀಡಿಲ್ಲ.
ಇನ್ನು ಕರಿಯರ್ ವಿಷ್ಯಕ್ಕೆ ಬರೋದಾದ್ರೆ ದಿವ್ಯಾ ಉರುಡುಗ ಸದ್ಯ ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚನಾ ಆಗಿ ಅಭಿನಯಿಸುತ್ತಿದ್ದಾರೆ. ಇನ್ನು ಅರವಿಂದ್ ಕೆಪಿ ಸದ್ಯ ಬೈಕ್ ರ್ಯಾಲಿಗಳಲ್ಲೇ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.