ಥೈಯ್ಲೆಂಡ್‌ನಲ್ಲಿ ದಿವ್ಯಾ ಉರುಡಗ ಒಬ್ಬರೇ, ಅರವಿಂದ್ ಸರ್ ಎಲ್ಲಿ ಕೇಳ್ತಿದ್ದಾರೆ ಫ್ಯಾನ್ಸ್!
ಬಿಗ್ ಬಾಸ್ ಎರಡು ಸೀಸನ್ ಗಳ ಮೂಲಕ ಜನರ ಫೇವರಿಟ್ ಆಗಿರುವ ನಟಿ ದಿವ್ಯಾ ಉರುಡುಗ ಸದ್ಯ ಥೈಲ್ಯಾಂಡ್ ನಲ್ಲಿ ಎಂಜಾಯ್ ಮಾಡುತ್ತಾ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸೋಶಿಯಲ್ ಮೀಡೀಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ದಿವ್ಯಾ ಉರುಡುಗ (Divya Uruduga) ಕಳೆದ ಒಂದು ವಾರಗಳಿಂದ ವಿದೇಶದಲ್ಲಿ ಏಕಾಂತವಾಗಿ ಎಂಜಾಯ್ ಮಾಡ್ತಿರೋ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ಹೌದು, ಬಿಗ್ ಬಾಸ್ (Bigg Boss) ಖ್ಯಾತಿ ಡಿಯು, ದಿವ್ಯಾ ಉರುಡುಗ ಥೈಲ್ಯಾಂಡ್, ಫುಕೇಟ್ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದು, ಅಲ್ಲಿಂದ ಸುಂದರ ತಾಣಗಳಲ್ಲಿ ವಿವಿಧ ಪೋಸ್ ನೀಡುತ್ತಾ ಫೋಟೋ ತೆಗೆಸಿಕೊಂಡು ಇನ್ ಸ್ಟಾಗ್ರಂ ನಲ್ಲಿ ಶೇರ್ ಮಾಡಿದ್ದಾರೆ.
ದಿವ್ಯಾ ಉರುಡುಗ ಫೋಟೋ ನೋಡಿದ್ರೆ, ಸೋಲೋ ಟ್ರಿಪ್ (solo trip) ಮಾಡಿದ್ದಂಗೆ ಕಾಣಿಸ್ತಿದೆ, ಆದ್ರೆ ಇತ್ತೀಚೆಗೆ ದಿವ್ಯಾ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಅವರು ತಮ್ಮ ಬೆಸ್ಟ್ ಫ್ರೆಂಡ್ಸ್ ಗರ್ಲ್ಸ್ ಗ್ಯಾಂಗ್ (Girls Gang) ಜೊತೆ ವಿದೇಶ ಟ್ರಿಪ್ ಮಾಡಿ, ಭರ್ಜರಿ ಶಾಪಿಂಗ್ (Shoping) ಮಾಡಿ ಎಂಜಾಯ್ ಮಾಡಿದ್ದಾರೆ.
ದಿವ್ಯಾ ಒಬ್ಬರೇ ಇರೋ ಫೋಟೊಗಳನ್ನು ನೋಡಿ, ಅಭಿಮಾನಿಗಳಂತೂ ಮೇಡಂ ಅರವಿಂದ್ ಸರ್ ಎಲ್ಲಿದ್ದಾರೆ? ನಿಮ್ಮ ಮದ್ವೆ ಯಾವಾಗ ಅಂತ ಕಾಮೆಂಟ್ ಮೂಲಕ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ಇನ್ನು ಡಿಯು ಮುದ್ದಾ ಫೋಟೋಗಳನ್ನು ನೋಡಿ ಮುದ್ದು ಗೊಂಬೆ ನೀನು, ನಿನ್ನ ನಗು ಒಂದು ಸಾಕು, ಫೋಟೋಗಳಿಗೆ ಬ್ರೈಟ್ ನೆಸ್ ನೀಡೋದಕ್ಕೆ, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಾ ಎಂದೆಲ್ಲಾ ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 8 ಮತ್ತು 9ರಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದ ದಿವ್ಯಾ ಉರುಡುಗ, ಎರಡು ಸೀಸನ್ ಗಳಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಜನಮನ ಗೆದ್ದಿದ್ದರು. ಆ ಮೂಲಕವೇ ಸಾಕಷ್ಟು ಅಭಿಮಾನಿಗಳ ಬಳಗವನ್ನು ಪಡೆದಿದ್ದಾರೆ.
ಕರಿಯರ್ ಗಿಂತ ಹೆಚ್ಚಾಗಿ ತಮ್ಮ ಪರ್ಸನಲ್ ಲೈಫ್ ನಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ದಿವ್ಯಾ ಉರುಡುಗ, ಇತ್ತೀಚೆಗಷ್ಟೇ ಕೆ.ಪಿ ಅರವಿಂದ್ (KP Aravind) ಜೊತೆಗೆ ಅರ್ಧಬರ್ಧ ಪ್ರೇಮಕತೆ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಸದಾ ಜೊತೆಗಿರುವ ಈ ಜೋಡಿ ನೋಡಿ, ಅಭಿಮಾನಿಗಳು ಬೇಗ ಮದ್ವೆ ಆಗಿ ಅಂತಿದ್ದಾರೆ.