ಬಿಗ್ ಬಾಸ್ ಮನೆಯ ಸ್ಪರ್ಧಿ ಸ್ಪಂದನಾಗೆ ಮತ ನೀಡುವಂತೆ ನಟಿ ಹೇಮಾ ಕೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಸ್ಪಂದನಾ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಕರಿಮಣಿ ಸೀರಿಯಲ್ ನಲ್ಲಿ ಸಾಹಿತ್ಯ ಹೆಸರಿನಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದಿದ್ದ ನಟಿ ಸ್ಪಂದನಾ ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳ ನಡುವೆ ಉಳಿವಿಗಾಗಿ ಹೋರಾಟ ನಡೆಸ್ತಿದ್ದಾರೆ. ಸ್ಪಂದನಾ, ಬಿಗ್ ಬಾಸ್ ಮನೆಯಲ್ಲಿರುವ ವೀಕ್ ಸ್ಪರ್ಧಿ ಎಂದೇ ಅನೇಕರು ಭಾವಿಸಿದ್ರು. ಟಾಸ್ಕ್ ಬಂದಾಗ ದೂರ ಸರಿಯುವ ಸ್ಪಂದನಾ ಸದಾ ಬೆಡ್ ಮೇಲೆ ಉರುಳಾಡ್ತಾ, ಟೈಂಪಾಸ್ ಮಾಡ್ತಾರೆ ಎನ್ನುವ ಆರೋಪ ಕೂಡ ಇದೆ. ಎಲ್ಲ ಕಡೆ ರಕ್ಷಿತಾ, ಗಿಲ್ಲಿ, ಅಶ್ವಿನಿ ಹೆಸರುಗಳೇ ಕೇಲಿ ಬರ್ತಿರೋದ್ರಿಂದ ಸ್ಪಂದನಾ ಉಳಿಸಲು ಅವರ ಅಭಿಮಾನಿಗಳಿಂದ ಸತತ ಪ್ರಯತ್ನ ನಡೆಯುತ್ತಿದೆ.

ಸ್ಪಂದನಾ ಪರ ಮತ ಯಾಚಿಸಿದ ನಟಿ ಹೇಮಾ

 ಕರಿಮಣಿ ಸೀರಿಯಲ್ ನಲ್ಲಿ ನಟಿ ಹೇಮಾ ಹಾಗೂ ಸ್ಪಂದನಾ ಒಟ್ಟಿಗೆ ನಟಿಸಿದ್ದರು. ಈಗ ನಟಿ ಹೇಮಾ, ಸ್ಪಂದನಾ ಪರ ವೋಟ್ ಕೇಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿರುವ ಹೇಮಾ, ನಟಿ ಸ್ಪಂದನಾಗೆ ಮತ ಹಾಕಿ ಎಂದಿದ್ದಾರೆ. ನನ್ನ ಪ್ರೀತಿಯ ಸಾಹಿತ್ಯ ಅಂದ್ರೆ ಸ್ಪಂದನಾ, ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡ್ತಿದ್ದಾರೆ. ಎಲ್ಲ ಟಾಸ್ಕ್ ನಲ್ಲೂ ಅವರು ಮಿಂಚುತ್ತಿದ್ದಾರೆ. ಅವರು ಬಿಗ್ ಬಾಸ್ ಫಿನಾಲೆಗೆ ಬಂದು ಗೆಲ್ಲಬೇಕು ಎನ್ನುವ ಆಸೆ ನನಗಿದೆ. ನಿಮಗೂ ಇದೆ ಅಲ್ವಾ? ಅವರಿಗೆ ಮತ ಹಾಕಿ ಅವರನ್ನು ಗೆಲ್ಲಿಸಿ ಅಂತ ಹೇಮಾ ಹೇಳಿದ್ದಾರೆ. ನಾನೂ ಸ್ಪಂದನಾಗೆ ಮತ ಹಾಕ್ತೇನೆ ಎಂದಿದ್ದಾರೆ.

ಅಪ್ಪನ ಕೈನಲ್ಲಿ ಏಟು ತಿಂದ ಗಿಲ್ಲಿಗೆ ಅಮ್ಮ ಮಾಡಿಸಿದ್ರು ಎಣ್ಣೆ ಸ್ನಾನ

ಸ್ಪಂದನಾ ಮೇಲೆ ಆರೋಪ 

ನಾಲ್ಕು ಜನರನ್ನು ಬಿಟ್ರೆ ಉಳಿದವರ ಜೊತೆ ಸ್ಪಂದನಾ ಮಾತನಾಡೋದು ಅಪರೂಪ. ಅಲ್ಲಿ ಇಲ್ಲಿ ಒಮ್ಮೊಮ್ಮೆ ಕಾಣಿಸಿಕೊಂಡ್ರೂ ಸ್ಪಂದನಾ ಈವರೆಗೆ ಬಂದಿದ್ದಾರೆ ಅಂದ್ರೆ ಅವರಿಗೆ ಫ್ಯಾನ್ ಫಾಲೋವರ್ಸ್ ಹೆಚ್ಚಿದ್ದಾರೆ ಎಂದೇ ಅರ್ಥ. ಸ್ಪಂದನಾ ಬಗ್ಗೆ ಜಾಹ್ನವಿ ಒಂದು ಆರೋಪ ಮಾಡಿದ್ರು. ಕಲರ್ಸ್ ಕನ್ನಡದ ಹುಡುಗಿ ಎಂಬ ಪಟ್ಟ ಸ್ಪಂದನಾಗೆ ಅಲ್ಲಿಂದ್ಲೇ ಬಂದಿದೆ. ಗಿಲ್ಲಿ ಸ್ಪಂದನಾಗೆ ಕಳ್ಳ ಪುಟ್ಟಿ ಅಂತ ಹೆಸರಿಟ್ಟಿದ್ದಾರೆ.

ನಾಮಿನೇಷನ್‌ ಬಿಸಿ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಬರ್ತಿದ್ದಾರೆ. ಈಗಾಗಲೇ ರಕ್ಷಿತಾ, ರಾಶಿಕಾ, ಸೂರಜ್, ಧನುಷ್, ಅಶ್ವಿನಿ ಗೌಡ ಕುಟುಂಬಸ್ಥರು ಮನೆಗೆ ಬಂದಿದ್ದಾರೆ. ಇಂದು ಗಿಲ್ಲಿ ಹಾಗೂ ಧ್ರುವಂತ್ ಫ್ಯಾಮಿಲಿ ಮನೆಗೆ ಬರುವ ಸಾಧ್ಯತೆ ಇದೆ. ಸ್ಪಂದನಾ ಹಾಗೂ ಕಾವ್ಯ ವೇಟಿಂಗ್ ನಲ್ಲಿದ್ದಾರೆ. ಬಿಗ್ ಬಾಸ್ ಈ ಬಾರಿ ಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದರು. ಅದ್ರಲ್ಲಿ ಕಾವ್ಯ, ಅಶ್ವಿನಿ ಹಾಗೂ ರಕ್ಷಿತಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ರು. ಕಾವ್ಯ ಬಿಟ್ಟು ಉಳಿದವರೆಲ್ಲ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದಾರೆ. ಸ್ಪಂದನಾ ಕೂಡ ನಾಮಿನೇಟ್ ಆಗಿದ್ದಾರೆ.

ದೇವರ ನೆನೆಸ್ಕೊಂಡೇ ಈ ಹಾರರ್‌ ವೆಬ್‌ ಸಿರೀಸ್‌ ನೋಡಿ, IMDBಯಲ್ಲೂ ಭರ್ಜರಿ ರೇಟಿಂಗ್‌

 ಹಿಂದಿನ ವಾರವೇ ಕಿಚ್ಚ ಸುದೀಪ್ ಮುಂದಿನ ವಾರ ಎಲಿಮಿನೇಷನ್ ಗ್ಯಾರಂಟಿ ಎಂದಿದ್ರು. ಒಂದು, ಎರಡು, ಮೂರು ಎಷ್ಟು ಬೇಕಾದ್ರೂ ಆಗ್ಬಹುದು ಎನ್ನುವ ಎಚ್ಚರಿಕೆ ನೀಡಿದ್ದರು. ಹಾಗಾಗಿ ಸ್ಪರ್ಧಿಗಳ ಎದೆಯಲ್ಲಿ ಸಣ್ಣ ಭಯ ಕಾಡ್ತಿದೆ. ಈ ಬAರಿ ಯಾರು ಮನೆಗೆ ಹೋಗ್ತಾರೆ ಎನ್ನುವ ಪ್ರಶ್ನೆ ಇದೆ. ಮೂರು ವಾರಗಳಿಂದ ಯಾವುದೇ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿಲ್ಲ. ಜನವರಿ 18ಕ್ಕೆ ಬಿಗ್ ಬಾಸ್ ಮುಗಿಯುವ ಸಾಧ್ಯತೆ ಇದೆ. ಹಾಗಾಗಿ ಇನ್ನೆಷ್ಟು ದಿನ ಉಳಿದಿಲ್ಲವಾದ್ರಿಂದ ಬಿಗ್ ಬಾಸ್ ಮನೆಯಿಂದ ಈ ವಾರ ಎರಡು ಇಲ್ಲ ಮೂರು ಸ್ಪರ್ಧಿಗಳು ಒಟ್ಟಿಗೆ ಹೊರಗೆ ಹೋದ್ರೆ ಅಚ್ಚರಿ ಇಲ್ಲ.

View post on Instagram