ʼಬಿಗ್ ಬಾಸ್ ಕನ್ನಡ 11ʼ ಶೋನಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ನಡುವೆ ಅಂದು ರಾತ್ರಿ ಏನು ಚರ್ಚೆ ಆಯ್ತು ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದಕ್ಕೀಗ ತ್ರಿವಿಕ್ರಮ್ ಉತ್ತರ ಕೊಟ್ಟಿದ್ದಾರೆ.
ʼಬಿಗ್ ಬಾಸ್ ಕನ್ನಡ 11ʼ ಮನೆಯಲ್ಲಿ ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದಾರೆ ಅಂತ ಸಂದರ್ಶನವೊಂದರಲ್ಲಿ ಚೈತ್ರಾ ಕುಂದಾಪುರ ಅವರು ಹೇಳಿದ್ದರು. ಆದರೆ ತ್ರಿವಿಕ್ರಮ್ ಮಾತ್ರ ಭವ್ಯಾ ಗೌಡಗೆ ನಾನು ಪ್ರಪೋಸ್ ಮಾಡಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಅಂದು ರಾತ್ರಿ ಏನು ಸಂಭಾಷಣೆ ನಡೆಯಿತು ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದಕ್ಕೆ ತ್ರಿವಿಕ್ರಮ್ ಉತ್ತರ ಏನು?
ಅಂದು ರಾತ್ರಿ ಏನು ನಡೆಯಿತು?
ಒಂದು ರಾತ್ರಿ ಎಲ್ಲರೂ ಮಲಗಿರುವಾಗ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರು ಮಾತನಾಡಿದ್ದಾರೆ. ಆ ವೇಳೆ ತ್ರಿವಿಕ್ರಮ್ ಅವರು “ನಿನ್ನ ಉತ್ತರ ಏನು?” ಎಂದು ಪ್ರಶ್ನೆ ಮಾಡಿದ್ದರು. ಆಗ ಭವ್ಯಾ ಅವರು, “ಇಲ್ಲಿ ಬೇಡ, ಎರಡು ದಿನ ಟೈಮ್ ಕೊಡಿ. ನೀವು ಗೆದ್ದು ಬಂದು ಈ ಪ್ರಶ್ನೆ ಕೇಳಿದ್ರೆ ನಾನು ಹು ಹೇಳುತ್ತಿದ್ದೆನೋ ಏನೋ!” ಎಂದು ಹೇಳಿದ್ದರು. ಬಹುಶಃ ತ್ರಿವಿಕ್ರಮ್ ಅವರು ಭವ್ಯಾ ಗೌಡಗೆ ಪ್ರಪೋಸ್ ಮಾಡಿರುತ್ತಾರೆ. ಇದಕ್ಕೆ ಭವ್ಯಾ ಗೌಡ ಅವರು ಹೊರಗಡೆ ಉತ್ತರ ಕೊಡುತ್ತಾರೆ. ಇದನ್ನು ʼಬಿಗ್ ಬಾಸ್ʼ ಪ್ರಸಾರ ಮಾಡಿಲ್ಲ. ಆದರೆ ಮುಂದುವರೆದ ಸಂಭಾಷಣೆಯನ್ನು ಪ್ರಸಾರ ಮಾಡಿದ್ದಾರೆ ಎಂದು ವೀಕ್ಷಕರು ಅಂದುಕೊಂಡಿದ್ದಾರೆ. ಈ ಬಗ್ಗೆ ತ್ರಿವಿಕ್ರಮ್ ಅವರು National Tv ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ರಸಿಕ ಟೈಟಲ್ ಸಿಕ್ಕಿದ್ದಕ್ಕೆ Bigg Boss Kannada 11 ರಜತ್ ಏನಂದ್ರು?
ರಾತ್ರಿ ನಡೆದ ಸಂಭಾಷಣೆ ಬಗ್ಗೆ ಏನಂದ್ರು?
“ಅಂದು ರಾತ್ರಿ ಎಲ್ಲರೂ ನಿದ್ದೆ ಮಾಡುತ್ತಿದ್ದರು. ನಾವು ಮಾತನಾಡುತ್ತಿರೋದು ಬೇರೆಯವರಿಗೆ ತೊಂದರೆ ಆಗಬಾರದು ಅಂತ ಸಣ್ಣದಾಗಿ ಮಾತನಾಡಿದ್ದೆವು. ಪ್ರಪೋಸ್ ಮಾಡೋದಿದ್ರೆ ನಾನು ಬಚ್ಚಿಟ್ಟು ಹೇಳಬೇಕು ಅಂತಿರಲಿಲ್ಲ, ಇಡೀ ಮನೆಯವರ ಮುಂದೆ ಹೇಳುತ್ತಿದ್ದೆ. ನಾನು ಈ ವಿಷಯದಲ್ಲಿ ಹೆದರುವ ಅಗತ್ಯ ಇಲ್ಲ. ಪ್ರಪೋಸ್ ಮಾಡೋದಿದ್ರೆ ಲೈಟ್ ಆಗಿ ಮಾಡುತ್ತಿರಲಿಲ್ಲ, ಇಡೀ ಮನೆಗೆ ಹೇಳಿಕೊಂಡು ಮಾಡ್ತಿದ್ದೆ, ಇಲ್ಯಾರೋ ಡಾಮಿನೇಟ್ ಮಾಡ್ತಾರೆ ಅಂತೆಲ್ಲ ನನಗೆ ಇರಲಿಲ್ಲ. ನನ್ನ ಅಪ್ಪ-ಅಮ್ಮ ಬಯ್ತಾರೆ ಅಂತನೂ ಇರಲಿಲ್ಲ. ನಾನು ಚಿಕನ್ ತಿನ್ನೋದು, ಸಿಗರೇಟ್ ಸೇದೋದು ಕೂಡ, ಕೆಟ್ಟ ಮಾತು ಹೇಳೋದನ್ನು ಕೂಡ ಮುಚ್ಚಿಟ್ಟಿಲ್ಲ. ನಾನು ಒಪನ್ ಆಗಿ ಮಾತಾಡುವ ವ್ಯಕ್ತಿ” ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ.
ʼತ್ರಿವಿಕ್ರಮ್ ಜೊತೆ ತನ್ನ ಅಕ್ಕ ದಿವ್ಯಾ ಗೌಡ ಮದುವೆ ಮಾಡಿಸೋಣ ಅಂತ Bigg Boss ಮನೇಲಿ ಮಾತಾಡಿದ್ದೆʼ: ಭವ್ಯಾ ಗೌಡ!
ಮಚ್ಚು ಹಿಡ್ಕೊಂಡ್ ಕೂತವರು ಯಾರು?
“ಬೇರೆ ವಿಷಯಗಳ ಬಗ್ಗೆ ಮಾತನಾಡುವಾಗ ಬಂದಿರುವ ವಿಷಯ ಅಷ್ಟೇ. ಚೈತ್ರಾ ಕುಂದಾಪುರ ಅವರು ಏನು ಹೇಳಿದ್ದಾರೆ ಎನ್ನೋದನ್ನು ನಾನು ಅವರ ಹತ್ರ ಮಾತಾಡಿ ತಿಳಿದುಕೊಳ್ತೀನಿ. ನನಗೆ ಯಾವ ಗರ್ಲ್‌ಫ್ರೆಂಡ್ ಇಲ್ಲ. ಅನುಷಾ ಮನೆಯೊಳಗಡೆ ಬಂದಾಗ ನನ್ನ ಫ್ರೆಂಡ್ಸ್ ಬಗ್ಗೆ ಕೇಳಿದ್ದೆ, ನನ್ನ ಫ್ರೆಂಡ್ಸ್ ಮಚ್ಚು ಹಿಡ್ಕೊಂಡು ಕೂತಿದ್ದಾರೆ ಎಂದು ಅವಳು ಹೇಳಿದ್ದಾಳೆ. ಅನುಷಾ ತುಮಕೂರಿನವರು, ನನಗೆ ಅವಳು ಚಿಕ್ಕ ವಯಸ್ಸಿನಿಂದಲೂ ಗೊತ್ತಿದೆ” ಎಂದು ತ್ರಿವಿಕ್ರಮ್ ಹೇಳಿದ್ದಾರೆ.
BBK 11: ಭವ್ಯಾಗೊಂದೇ ಅಲ್ಲ, ಅನುಗೆ ಐ ಲವ್ ಯು ಅಂದಿದ್ದೆ: ನಟ ತ್ರಿವಿಕ್ರಮ್ ಮುಕ್ತ ಮಾತು!
ಭವ್ಯಾ ಗೌಡರನ್ನು ಮದುವೆ ಆಗೋದಿಲ್ಲ.!
“ಭವ್ಯಾ ಗೌಡ ನನ್ನ ಜ್ಯೂನಿಯರ್. ನನಗೂ, ಅವಳಿಗೂ ವಯಸ್ಸಿನ ಅಂತರ ಇದೆ, ನನಗಿಂತ ಅವಳು ಚಿಕ್ಕವಳು. ನಾನು ಭವ್ಯಾಳನ್ನು ಮದುವೆ ಆಗೋದಿಲ್ಲ. ಯಾರು ಏನೇ ಅಂದುಕೊಂಡ್ರೂ ಪರವಾಗಿಲ್ಲ. ನಾವಿಬ್ಬರೂ ಸ್ನೇಹಿತರು ಅಷ್ಟೇ” ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ.
ಹನುಮಂತ ಅವರು ʼಬಿಗ್ ಬಾಸ್ ಕನ್ನಡ 11ʼ ಶೋ ಟ್ರೋಫಿ ಗೆದ್ದಿದ್ದಾರೆ. ಇನ್ನು ತ್ರಿವಿಕ್ರಮ್‌ಗೆ ರನ್ನರ್ ಅಪ್ ಪಟ್ಟ ಸಿಕ್ಕಿದೆ. ಇನ್ನು ರಜತ್ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ. ತ್ರಿವಿಕ್ರಮ್ ಅವರು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಇಂಗಿತ ಹೊಂದಿದ್ದಾರೆ.

