ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಒಟ್ಟು 8 ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಕ್ಯಾಪ್ಟನ್‌ ಹಂಸ ಅವರ ನೇರ ನಾಮಿನೇಷನ್‌ ಮತ್ತು ಸ್ವರ್ಗ - ನರಕ ವಾಸಿಗಳ ನಡುವಿನ ವಾದ ವಿವಾದಗಳ ನಂತರ ಹಂಸಾ ಅವರ ಆಯ್ಕೆ ಮೇಲೆ ನಾಮಿನೇಶನ್ ಆಗಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಮೊದಲ ದಿನ ನಾಲ್ವರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದರು. ಕ್ಯಾಪ್ಟನ್‌ ಹಂಸ ಅವರು ಗೋಲ್ಡ್‌ ಸುರೇಶ್‌ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು ಇನ್ನು ಸ್ವರ್ಗದಿಂದ ತ್ರಿವಿಕ್ರಮ್, ಧನ್‌ರಾಜ್‌ ನರಕದಿಂದ ಅನುಷಾ ರೈ, ಮತ್ತು ಸುರೇಶ್ ಎರಡನೇ ವಾರಕ್ಕೆ ಮೊದಲ ಎಪಿಸೋಡ್‌ ನಲ್ಲಿ ನಾಮಿನೇಟ್‌ ಆಗಿದ್ದರು. ಮನೆಯಿಂದ ಹೊರಹೋಗಲು ಈ ವಾರ ತ್ರಿವಿಕ್ರಮ್, ಧನ್‌ರಾಜ್‌, ಐಶ್ವಯಾ, ರಂಜಿತ್‌, ಅನುಷಾ ರೈ, ಸುರೇಶ್, ಜಗದೀಶ್, ಮತ್ತು ಮಾನಸ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದಾರೆ.

ಸಂಜನಾ ಆನಂದ್ ಜೊತೆಗೆ ಚಂದನ್ ಶೆಟ್ಟಿ ಮದುವೆ, ಸ್ಪಷ್ಟನೆ ಕೊಟ್ಟ ನಟಿ!

ಎರಡನೇ ವಾರದ ಎರಡನೇ ದಿನ ಕೂಡ ನಾಮಿನೇಷನ್ ಪ್ರಕ್ರಿಯೆಯ ವಾದ ಪ್ರತಿವಾದ ಮುಂದುವರೆಯಿತು. ಇದರಲ್ಲಿ ನರಕದಿಂದ ಮಾನಸ ಮತ್ತು ಮೋಕ್ಷಿತಾ ಪೈ ವಾದ ಮಾಡಿ ಹಂಸಾ ಅವರು ಮಾನಸ ಅವರನ್ನು ನಾಮಿನೇಟ್ ಮಾಡಿದ್ದರು. ಅದರಂತೆ ಜಗದೀಶ್ ಮತ್ತು ಶಿಶಿರ್ ನಡುವೆ ವಾದ ನಡೆಯಿತು. ಜಗದೀಶ್ ನಾಮಿನೇಟ್ ಆದರು. ಭವ್ಯಾ ಮತ್ತು ಐಶ್ವಯಾ ನಡುವೆ ವಾದ ಆಲಿಸಿದ ಹಂಸಾ ಐಶ್ವರ್ಯಾ ಅವರನ್ನು ನಾಮಿನೇಟ್ ಮಾಡಿದರು. ರಂಜಿತ್‌ ಮತ್ತು ಗೌತಮಿ ಜಾಧವ್ ನಡುವಿನ ವಾದ ಆಲಿಸಿದ ಹಂಸಾ ಅವರು ರಂಜಿತ್ ಅವರನ್ನು ನಾಮಿನೇಟ್ ಮಾಡಿದರು. ನನಗೋಸ್ಕರ ಆಡಿ ಕ್ಯಾಪ್ಟನ್‌ ಆಗಲು ಅವರು ಕಾರಣ ರಂಜಿತ್ ಹೌದು ಆದ್ರೆ ನಿಮ್ಮದೇ ಆದ ಡಿಸಿಶನ್ ತೆಗೆದುಕೊಳ್ಳಬಹುದಿತ್ತು ಎಂದು ಕಾರಣ ನೀಡಿದ್ರು ಹಂಸ.

ಬಿಗ್‌ಬಾಸ್‌ ಕನ್ನಡ 11: ಟಾಸ್ಕ್‌ ಸೋತು ನರಕ ನಿವಾಸಿಗಳ ಬಾಣಸಿಗರಾದ ಸ್ವರ್ಗ ನಿವಾಸಿಗಳು!

ಎರಡನೇ ವಾರ ಮನೆಯಿಂದ ಹೊರ ಹೋಗಲು ಸ್ವರ್ಗದಿಂದ ತ್ರಿವಿಕ್ರಮ್, ಧನ್‌ರಾಜ್‌ , ಐಶ್ವಯಾ, ರಂಜಿತ್‌ ಮತ್ತು ನರಕದಿಂದ ಅನುಷಾ ರೈ, ಸುರೇಶ್, ಜಗದೀಶ್, ಮಾನಸ ನಾಮಿನೇಟ್‌ ಆಗಿ ಮಸಿ ಹಚ್ಚಿಸಿಕೊಂಡರು. ಒಟ್ಟು 8 ಮಂದಿ ಮನೆಯಿಂದ ಹೊರ ಹೋಗಲು ಮನೆಯವರು ಆಯ್ಕೆ ಮಾಡಿದ್ದಾರೆ.