ಬಿಗ್‌ಬಾಸ್ ಕನ್ನಡ 11: ಟಾಸ್ಕ್ ಸೋತು ನರಕ ನಿವಾಸಿಗಳ ಬಾಣಸಿಗರಾದ ಸ್ವರ್ಗ ನಿವಾಸಿಗಳು!
ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಎರಡನೇ ವಾರದ ಕಿಚ್ಚು ಶುರುವಾಗಿದೆ. ನಾಮಿನೇಶನ್ ಪ್ರಕ್ರಿಯೆಗೂ ಮುನ್ನ ನಡೆದ ಟಾಸ್ಕ್‌ನಲ್ಲಿ ಸ್ವರ್ಗ ವಾಸಿಗಳು ಸೋತಿದ್ದಾರೆ. ಇದರಿಂದಾಗಿ ನರಕ ವಾಸಿಗಳಿಗೆ ಭರ್ಜರಿ ಊಟ ಸಿಕ್ಕಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 11 ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ನಾಮಿನೇಶ್ ನಲ್ಲಿ ಈವರೆಗೆ ನಾಲ್ಕು ಮಂದಿ ನಾಮಿನೇಟ್ ಆಗಿದ್ದು, ನಾಳಿನ ಎಪಿಸೋಡ್ ನಲ್ಲಿ ಉಳಿದ ಸ್ಪರ್ಧಿಗಳಲ್ಲಿ ಎಷ್ಟು ಮಂದಿ ನಾಮಿನೇಟ್ ಆಗಲಿದ್ದಾರೆಂದು ಕಾದು ನೋಡಬೇಕಿದೆ. ನಾಮಿನೇಷನ್ ಗೂ ಮುನ್ನ ಬಿಗ್‌ಬಾಸ್ ಒಂದು ಟಾಸ್ಕ್ ನೀಡಿದ್ದರು. ಹುಷಾರ್ ಹುಷಾರ್ ಹುಷಾರ್ ಸಾರ್ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ನಲ್ಲಿ ಬಾಲ್ ಅನ್ನು ಝಿಗ್ ಝ್ಯಾಗ್‌ನಲ್ಲಿ ಬ್ಯಾಲೆನ್ಸ್ ಮಾಡಿ ತಂದು ಬಾಕ್ಸ್ ನಲ್ಲಿ ಹಾಕಬೇಕಿತ್ತು. ನರಕ ವಾಸಿಗಳಿಂದ ಮೂರು ಜನ ಮತ್ತು ಸ್ವರ್ಗ ವಾಸಿಗಳಿಂದ ಮೂರು ಜನ ಈ ಟಾಸ್ಕ್ ಆಡಬೇಕಿತ್ತು.
ಅದರಂತೆ ಸ್ವರ್ಗ ನಿವಾಸಿಗಳಿಂದ ಧರ್ಮ, ರಂಜಿತ್ ಮತ್ತು ಉಗ್ರಂ ಮಂಜು ಆಡಿದರು. ನರಕ ನಿವಾಸಿಗಳಿಂದ ಸುರೇಶ್ , ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ ಆಡಿದ್ದರು. ಧನ್‌ರಾಜ್ ಮತ್ತು ಜಗದೀಶ್ ಅವರು ಆಟದ ಉಸ್ತುವಾರಿ ವಹಿಸಿದ್ದರು. ಈ ಗೇಮ್ ನಲ್ಲಿ ಕೂಡ ನಿಯಮ ಪಾಲನೆ ಬಗ್ಗೆ ಚರ್ಚೆ ನಡೆಯಿತು.
ಬಿಗ್‌ಬಾಸ್ ನರಕ-ಸ್ವರ್ಗದಲ್ಲಿ ನಾಮಿನೇಷನ್ ಕಿಚ್ಚು, ಚರ್ಚೆ ಸೋತು ಮಸಿ ಹಚ್ಚಿಸಿಕೊಂಡವರು ಇವರೇ ನೋಡಿ!
ಕೊನೆಗೆ ಒಂದೊಂದು ಬಾಲ್ ಹಾಕಿ ಆಟ ಟೈ ಆಯ್ತ. ಆದ್ರೆ ಸ್ವರ್ಗ ನಿವಾಸಿಗಳು ಟಾಸ್ಕ್ ಮುಗಿಸಲು 24 ನಿಮಿಷ 48 ಸೆಕೆಂಡ್ ತೆಗೆದುಕೊಂಡರು. ನರಕ ನಿವಾಸಿಗಳ ತಂಡ ಗೇಮ್ ಮುಗಿಸಲು 21 ನಿಮಿಷ 40 ಸೆಕೆಂಡ್‌ಗಳನ್ನು ತೆಗೆದುಕೊಂಡು ಟಾಸ್ಕ್ ಗೆದ್ದರು. ಹೀಗಾಗಿ ಟಾಸ್ಕ್ ಸೋತ ಸ್ವರ್ಗ ನಿವಾಸಿಗಳು ನರಕ ನಿವಾಸಿಗಳಿಗೆ ಮೂರು ಹೊತ್ತು ಕೇಳಿದ ಊಟ ತಯಾರಿಸಿ ಕೊಡಬೇಕಿತ್ತು. ಹೀಗಾಗಿ ಒಂದು ವಾರದಿಂದ ಗಂಜಿ ಊಟದಲ್ಲಿದ್ದ ನರಕ ನಿವಾಸದ ಸ್ಪರ್ಧಿಗಳು ಚಪಾತಿ ಮತ್ತು ಅನ್ನ ಮಾಡಿಸಿಕೊಂಡು ಭರ್ಜರಿ ಊಟ ಮಾಡಿದರು.
ಇದಕ್ಕೂ ಮುನ್ನ ಕ್ಯಾಪ್ಟನ್ ಹಂಸ ಅವರು ಕ್ಯಾಮರಾದ ಬಳಿ ಬಂದು ನರಕವಾಸಿಗಳಿಗೆ ಉತ್ತಮ ಊಟ ಕಳುಹಿಸಿ ಕೊಡುವಂತೆ ಮನವಿ ಮಾಡಿಕೊಂಡರು. ಅದರಂತೆ ಬಿಗ್ಬಾಸ್ ಬೆಳಗ್ಗಿನ ಉಪಹಾರ ಕೂಡ ಗಂಜಿ ನೀಡದೆ, ರೈಸ್ ಬಾತ್ ಕಳುಹಿಸಿ ಕೊಟ್ಟರು.
ಸಂಜನಾ ಆನಂದ್ ಜೊತೆಗೆ ಚಂದನ್ ಶೆಟ್ಟಿ ಮದುವೆ, ಸ್ಪಷ್ಟನೆ ಕೊಟ್ಟ ನಟಿ!
ಜಗದೀಶ್ ಸಿಎಂ ಆದ್ರೆ ಧನ್‌ರಾಜ್ ಪಿಎ!: ಇನ್ನು ಬಾತ್ ರೂಂ ಕ್ಲೀನ್ ಮಾಡುತ್ತಿದ್ದ ಜಗದೀಶ್ ಅವರ ಬಳಿ ಬಂದು ಧನ್‌ರಾಜ್ ಮಾತನಾಡುತ್ತಿದ್ದಾಗ, ನೀವು ನಿಜವಾಗಲು ಸಿಎಂ ಆಗ್ತೀರಾ ಅಂತ ಕೇಳಿದರು. ಇದಕ್ಕೆ ಹೌದು ಎಂದು ಉತ್ತರಿಸಿದ ಜಗದೀಶ್ ಹೌದು ಆಗೇ ಆಗ್ತೀನಿ, ನೀನೇ ನನ್ನ ಪಿಎ, ಕಾರು, 1.5 ಲಕ್ಷ ವೇತನ ಎಂದು ಹೇಳಿದರು.