ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮದುವೆ ವದಂತಿಗಳಿಗೆ ನಟಿ ಸಂಜನಾ ಆನಂದ್ ಸ್ಪಷ್ಟನೆ ನೀಡಿದ್ದಾರೆ. ಚಂದನ್ ಶೆಟ್ಟಿ ಜೊತೆಗಿನ ಮದುವೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಯ ಮದುವೆ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿದೆ. ಇದಕ್ಕೆ ಸ್ವತಃ ಸಂಜನಾ ಆನಂದ್‌ ಅವರು ಸ್ಪಷ್ಟನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ನಿವೇದಿತಾ ಗೌಡರಿಂದ ದೂರ ಆಗಿರುವ ಚಂದನ್ ಶೆಟ್ಟಿ, ಸದ್ಯ ಸಿನೆಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಆದರೆ ಚಂದನ್‌ ಎರಡನೇ ಮದುವೆ ಆಗುತ್ತಿದ್ದಾರೆಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿದ್ದು, ಕನ್ನಡ ನಟಿ ಸಂಜನಾ ಆನಂದ್ ಅವರು ಚಂದನ್ ಬಾಳಿಗೆ ಬೆಳಕಾಗಿ ಬರಲಿದ್ದಾರೆಂದು ಸುದ್ದಿ ಹಬ್ಬಿತ್ತು. ಈ ಸುದ್ದಿಯನ್ನು ಅನೇಕ ಮಂದಿ ನಿಜ ಎಂದುಕೊಂಡಿದ್ದರು ಕೂಡ.

ಬಿಗ್‌ಬಾಸ್‌ ಮನೆ ಮೃಗಾಲಯವಾದ್ರೆ, ಯಾರು ಯಾವ ಪ್ರಾಣಿ, ಧನ್‌ರಾಜ್ ಉತ್ತರಕ್ಕೆ ಕಿಚ್ಚ ನಕ್ಕು ನಕ್ಕು ಸುಸ್ತು!

ಇನ್ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ಕೊಟ್ಟಿರುವ ಸಂಜನಾ ಆನಂದ್, ಚಂದನ್ ಶೆಟ್ಟಿ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು, ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇಷ್ಟರಮಟ್ಟಿಗೆ ಹಬ್ಬಲು ಕಾರಣ ಏನು ಎಂದು ನೋಡುತ್ತಾ ಹೋದರೆ,ಚಂದನ್ ಶೆಟ್ಟಿ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನಾಗಿದ್ದು, ಸಂಜನಾ ಆನಂದ್ ಕೂಡ ಇದೇ ಚಿತ್ರದಲ್ಲಿ ನಟಿಸಿದ್ದಾರೆ. ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಚಂದನ್ ಮತ್ತು ಸಂಜನಾ ಆನಂದ್ ಅವರ ಈ ಹಾಡು ಒಂದು ವರ್ಷದ ಹಿಂದೆಯೇ ಯೂಟ್ಯೂಬ್‌ನಲ್ಲಿ ಬಿಡುಗಡೆಯೂ ಆಗಿದೆ. ಈ ಹಾಡಿನಲ್ಲಿ ಇವರ ಕೆಮೆಸ್ಟ್ರೀಯನ್ನೂ ನೋಡಿರುವ ಕೆಲವರು ಈಗ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನೂ ಹಬ್ಬಿಸಿದ್ದಾರೆ ಎಂಬ ಅನುಮಾನ ಸ್ಯಾಂಡಲ್‌ವುಡ್ ಅಂಗಳದಲ್ಲಿದೆ.

ಬಚ್ಚನ್ ಕುಟುಂಬಕ್ಕೆ ಐಶ್ವರ್ಯಾ ರೈ ದುರಾದೃಷ್ಟವಂತರೇ? ಸೊಸೆಯ ಜಾತಕದ ಬಗ್ಗೆ ಅಮಿತಾಬ್ ಪ್ರತಿಕ್ರಿಯೆ

ಚಂದನ್ ಶೆಟ್ಟಿ ಸದ್ಯಕ್ಕೆ ಬ್ಯಾಚುಲರ್ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನ, ಹಾಡು, ಅಭಿನಯ ಎಂದು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ದುಬೈ ಪ್ರವಾಸ ಕೂಡ ಹೋಗಿದ್ದರು.