ಬಿಗ್‌ ಬಾಸ್ ಕನ್ನಡ 11 ಇಂದು ಮುಕ್ತಾಯವಾಗಲಿದೆ. 50 ಲಕ್ಷ ರೂ. ಗೆದ್ದು ಟ್ರೋಫಿಯನ್ನು ಯಾರು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲಕ್ಕೆ  ಇನ್ನೂ ಬಾಕಿ ಇರುವಾಗಲೇ  ಗ್ರೇ ಏರಿಯಾ . ಮಂಜು 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಮನೆಯಿಂದ ಹೊರಬಂದಿದ್ದಾರೆ.

ಬಿಗ್‌ ಬಾಸ್ ಕನ್ನಡ 11 ಇಂದು ಮುಕ್ತಾಯವಾಗುತ್ತಿದೆ. 50 ಲಕ್ಷ ರೂ ಗೆದ್ದು ಟ್ರೋಫಿಯನ್ನು ಯಾರು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಶನಿವಾರ ಸಂಚಿಕೆ ಯಶಸ್ವಿಯಾಗಿ ಮುಕ್ತಾಯವಾಗಿ ಭವ್ಯಾ ಗೌಡ ಮನೆಯಿಂದ ಔಟ್‌ ಆಗಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಭಾನುವಾರದ ಸಂಚಿಕೆಗೆ ಮೋಕ್ಷಿತಾ, ಮಂಜು, ತ್ರಿವಿಕ್ರಮ್ , ರಜತ್‌ ಮತ್ತು ಹನುಮಂತ ಅವರು ಕಾಲಿಟ್ಟಿದ್ದರು. ಇದೀಗ ಭಾನುವಾರದ ಸಂಚಿಕೆಯಲ್ಲಿ ಮೊದಲನೆಯದಾಗಿ ಮಂಜು ಅವರು ಮನೆಯಿಂದ ಹೊರಬಂದು 4 ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬಿಗ್ ಬಾಸ್ ಫಿನಾಲೆಯಲ್ಲಿ 'ತಾಯ್ನಾಡು' ಪದಕ್ಕೆ ಅಗೌರವ; ರಜತ್ ಹಾಗೂ ಕಿಚ್ಚನ ಮಾತಿನ ಮರ್ಮವೇನು?

ಈ ಮೂಲಕ ಈ ಸೀಸನ್‌ ನಲ್ಲಿ ಕಪ್‌ ಗೆಲ್ಲುವ ಗ್ರೇ ಏರಿಯಾ ಕಿಂಗ್ ಕನಸು ನನಸಾಗದೆ ಉಳಿದಿದೆ. ಜೊತೆಗೆ ವೀಕ್ಷಕರಿಗೂ ಬೇಸರ ಆಗಿದೆ. ಬಿಗ್‌ ಬಾಸ್ ಕನ್ನಡ 11 ಇಂದು ಮುಕ್ತಾಯವಾಗುತ್ತಿದೆ. 50 ಲಕ್ಷ ರೂ ಗೆದ್ದು ಟ್ರೋಫಿಯನ್ನು ಯಾರು ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲಕ್ಕೆ ಕೊನೆಯಲ್ಲಿ ತೆರೆ ಬೀಳಲಿದೆ.

ಬಿಗ್ ಬಾಸ್ 5ನೇ ರನ್ನರ್ ಅಪ್ ಭವ್ಯಾ ಗೌಡ ಸಿಕ್ಕ ಹಣವೆಷ್ಟು? ಬಾಕಿ 14 ಸ್ಪರ್ಧಿಗಳಿಗೆ ಸಿಕ್ಕಿದ್ದೆಷ್ಟು?

ಸೀಸನ್‌ ಫುಲ್‌ ತಾಯಿಗಾಗಿ ಈ ಆಟಕ್ಕೆ ಬಂದಿರುವೆ ಎನ್ನುತ್ತಲೇ ಬಂದಿರುವ ಉಗ್ರಂ ಮಂಜು ಮನೆಯಿಂದ ಹೊರ ಬಂದ ಮೇಲೆ ಕಪ್‌ ಗೆಲ್ಲುವ ಅಮ್ಮನ ಆಸೆ ಈಡೇರಲಿಲ್ಲ ಎಂದರು. ನಾನು ಕಪ್‌ ಗೆದ್ದಿಲ್ಲ ಆದರೆ ಅಣ್ಣನ (ಸುದೀಪ್) ಸಿನೆಮಾದಲ್ಲಿ ಅಭಿನಯಿಸಿ ಗೆದ್ದಿದ್ದೇನೆ ಅಮ್ಮ ಎಂದು ಗ್ಯಾಲರಿಯಲ್ಲಿದ್ದ ತಾಯಿಗೆ ಹೇಳಿದರು. ಕಪ್‌ ಗೆಲ್ಲಿಲ್ಲದ್ದಕ್ಕೆ ಕಿಂಚಿತ್ ಬೇಜಾರು ಇಲ್ಲ ಎಂದರು. ಇನ್ನು ಸುದೀಪ್‌ ಕೂಡ ಈ ಸೀಸನ್‌ ನೀವಿಲ್ಲದಿದ್ದರೆ ಕಂಪ್ಲೀಟ್‌ ಆಗುತ್ತಿರಲಿಲ್ಲ. ಈ ಶೋಗೆ ಕಳೆ ತಂದಿದ್ದೀರಿ ಎಂದರು. 

ಮೀಸಲಾತಿ ವಿಷ್ಯ ಇಲ್ಲಿಗೆ ಬಿಟ್ಟುಬಿಡಿ, ದೊಡ್‌ ಮನಸ್ಸು ಮಾಡಿ ನನ್ನ ಕ್ಷಮಿಸಿ: ಬಿಗ್‌ ಬಾಸ್‌ ಹಂಸ

ಇನ್ನು ಶೋ ನಲ್ಲಿ ವಿವಿಧ ಸ್ಪಾನ್ಸರ್ ಕಡೆಯಿಂದ ಬಹುಮಾನ ರೂಪದಲ್ಲಿ ಸಿಕ್ಕಿದ 3.50 ಲಕ್ಷವನ್ನು ದಾನ ಮಾಡಲು ಮಂಜು ಮುಂದಾದರು. ಈ ವೇಳೆ ತಡೆದ ಸುದೀಪ್‌ ಅದನ್ನು ನಾನು ಕೊಡುತ್ತೇನೆ. ಈ ಹಣವನ್ನು ನಿಮ್ಮ ತಂದೆ ಇಟ್ಟುಕೊಳ್ಳಲಿ ಎಂದರು. ದಾನ ಮಾಡಬೇಕು ಎಲ್ಲವನ್ನೂ ದಾನ ಮಾಡಬಾರದು ಎಂದು ಬುದ್ಧಿ ಹೇಳಿದರು ಕಿಚ್ಚ.