ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಸ್ಪರ್ಧಿಯೂ ಆಗಿರುವ ಹಂಸ ಅವರು ಹನುಮಂತ ಬಿಗ್ ಬಾಸ್ ಫಿನಾಲೆ ತಲುಪಿದ್ದನ್ನು ಮೀಸಲಾತಿಗೆ ಹೋಲಿಕೆ ಮಾಡಿ ಮಾತನಾಡಿದ್ದರು. ಇದು ಕಾಂಟ್ರವರ್ಸಿ ಸೃಷ್ಟಿ ಮಾಡಿತ್ತು. ಈಗ ಇವರು ಈ ಬಗ್ಗೆ ಕ್ಷಮೆ ಕೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಯಾರು ವಿಜೇತರಾಗುತ್ತಾರೆ ಎಂಬ ಕುತೂಹಲ ಜೋರಾಗಿದೆ. ಹೀಗಿರುವಾಗ ಹಂಸ ಅವರು ಹನುಮಂತ ಬಗ್ಗೆ ಮಾತನಾಡಿರೋದು ಸಾಕಷ್ಟು ಕಾಂಟ್ರವರ್ಸಿ ಹುಟ್ಟುಹಾಕಿದೆ. ಈಗ ಈ ಬಗ್ಗೆ ಹಂಸ ಅವರು ಸ್ಪಷ್ಟನೆ ನೀಡಿದ್ದಾರೆ.
ಹಂಸ ಅವರು ಹೇಳಿದ್ದೇನು?
“ಬಿಗ್ ಬಾಸ್ ಮನೆಯಲ್ಲಿ ಧನರಾಜ್, ಹನುಮಂತ ಆರಂಭದಲ್ಲಿ ಸೈಲೆಂಟ್ ಆಗಿದ್ದರು, ಅಷ್ಟೇ ಅಲ್ಲದೆ ಮೂಲೆಯಲ್ಲಿ ಇರುತ್ತಿದ್ದರು. ಈಗ ಹನುಮಂತ ಫಿನಾಲೆಗೆ ಬಂದಿದ್ದಾರೆ. ಜನರು ಯಾರನ್ನಾದರೂ ಇಷ್ಟಪಟ್ಟರೆ ಅವರನ್ನು ತಲೆ ಮೇಲೆ ಎತ್ತಿಕೊಂಡು ಮೆರೆಸ್ತಾರೆ ಅಂತ ಹೇಳ್ತಾರೆ. ಹಾಗೆಯೇ ಹನುಮಂತ ಅವರನ್ನು ಇಷ್ಟಪಡ್ತಿದ್ದಾರೆ. ಹನುಮಂತ ಪಕ್ಕಾ ಗ್ರಾಮೀಣ ಪ್ರತಿಭೆ, ಬಡತನದಲ್ಲಿ ಬೆಳೆದವರು. ಹಳ್ಳಿ ಪ್ರತಿಭೆಗಳಿಗೆ, ಬಡವರಾದವರು ಸುಲಭವಾಗಿ ರಿಯಾಲಿಟಿ ಶೋನಲ್ಲಿ ಗ್ರ್ಯಾಂಡ್ ಫಿನಾಲೆಗೆ ತಲುಪುತ್ತಾರೆ. ಹನುಮಂತನ ವಿಚಾರದಲ್ಲಿ ಸಿಂಪಥಿ ವರ್ಕ್ ಆಗಿದೆ ಅಂತ ಹೇಳಬಹುದು. ಶಾಲೆ-ಕಾಲೇಜುಗಳಲ್ಲಿ ಜನರಲ್ ಕ್ಯಾಟಗರಿಗೆ ಹೆಚ್ಚು ಶುಲ್ಕ ಕಟ್ಟಬೇಕು, ಆದರೆ ಉಳಿದ ಕ್ಯಾಟಗರಿಯವರು ಶುಲ್ಕ ಕಡಿಮೆ ಕಟ್ಟಬೇಕಾಗಿ ಬರುತ್ತದೆ. ಉದ್ಯೋಗದ ವಿಚಾರದಲ್ಲಿ ಜನರಲ್ ಕ್ಯಾಟಗರಿಯನ್ನು ಕಡೆಗಾಣಿಸಲಾಗುತ್ತದೆ. ಆದರೆ ಉಳಿದ ಕ್ಯಾಟಗರಿಗೆ ಮನ್ನಣೆ ಕೊಡುತ್ತಾರೆ. ರಿಯಾಲಿಟಿ ಶೋಗಳಲ್ಲಿಯೂ ಇದೇ ಥರ ಆಗುತ್ತದೆ. ಪೇಟೆಯಲ್ಲಿ ಬೆಳೆದವರು ಆರಾಮಾಗಿರ್ತಾರೆ ಅಂತ ಹೇಳೋದುಂಟು” ಎಂದು ಹಂಸ ಅವರು ಹೇಳಿದ್ದರು. ಹಂಸ ಅವರು ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ್ದು ಅನೇಕರಿಗೆ ಆಕ್ರೋಶ ತಂದಿದೆ. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು.
ಕ್ಷಮೆ ಕೇಳಿದ ಹಂಸ
“ನಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಂದು ಹೇಳಿಕೆ ಭಾರೀ ಚರ್ಚೆ ಆಗ್ತಿದೆ. ಖಂಡಿತವಾಗಿಯೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ನನ್ನ ಮಾತನ್ನು ಕೆಲವರು ಬೇರೆ ಬೇರೆ ರೀತಿ ಅರ್ಥ ಮಾಡಿಕೊಂಡು, ಬೇರೆ ಬೇರೆ ತಿರುವು ಕೊಡುತ್ತಿದ್ದಾರೆ. ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದೆಯೋ ಅವರಿಗೆಲ್ಲರಿಗೂ ನಾನು ಕ್ಷಮೆ ಕೇಳುವೆ. ದಯವಿಟ್ಟು ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ, ದೊಡ್ಡ ಮನಸ್ಸು ಮಾಡಿ ನನ್ನನ್ನು ಕ್ಷಮಿಸಿ” ಎಂದು ಹಂಸ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ಈ ಪೋಸ್ಟ್‌ನ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
Bigg Boss Kannada 11 ಮುಗಿಯುತ್ತಿದ್ದಂತೆ ವೀಕ್ಷಕರಿಗೆ ಎರಡು ಬಂಪರ್ ಉಡುಗೊರೆ ಕೊಟ್ಟ ಕಲರ್ಸ್ ವಾಹಿನಿ!
ವೀಕ್ಷಕರು ಏನಂದ್ರು?
ದಿನೇಶ್‌ಕುಮಾರ್ ಎನ್ನುವವರು ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು. “ಹಂಸ ತಲೆಯಲ್ಲಿ ಜಾತಿಯ ವಿಷ, ಬಡವರ ಕುರಿತು ಅಸಹನೆ, ಗ್ರಾಮೀಣ ಜನರ ಬಗ್ಗೆ ಹೊಟ್ಟೆ ಉರಿ ಇರೋದು ಎಲ್ಲವೂ ಹೊರಗೆ ಬಂದಿದೆ. ತಾವು ಒಂದು ಮೀಸಲಾತಿಯ ಫಲಾನುಭವಿ ಆಗಿದ್ದರೂ ಕೂಡ, ದಲಿತರಿಗೆ ಕೊಡುವ ಮೀಸಲಾತಿಯ ಬಗ್ಗೆ ಇರುವ ಅಸಹನೆ ಹಂಸಳ ಮಾತಲ್ಲಿ ಕಾಣಿಸಿದೆ. ಇವರ ರೀತಿ ಮಾತಾಡುವ ಒಂದು ದೊಡ್ಡ ವರ್ಗವೇ ಇದೆ.
BBK 11: ತ್ರಿವಿಕ್ರಮ್, ಮೋಕ್ಷಿತಾ ಪೈ ಬಗೆಗಿನ ಅತಿ ದೊಡ್ಡ ಸೀಕ್ರೇಟ್ ರಿವೀಲ್ ಮಾಡಿದ Bigg Boss
ಹನುಮಂತ ದಲಿತ ಸಮುದಾಯದ ಹುಡುಗ. ಬಿಗ್ ಬಾಸ್‌ನವರಿಗೆ ನನ್ನನ್ನು ಕರೆಸಿಕೊಳ್ಳಿ ಅಂತ ಅವರು ಹೇಳಿರಲಿಲ್ಲ. ಕಡಿಮೆ ಆಗುತ್ತಿದ್ದ ಟಿಆರ್‌ಪಿಯನ್ನು ಹೆಚ್ಚು ಮಾಡಲು ಹನುಮಂತನನ್ನೇ ಶೋನವ್ರು ಕರೆಸಿಕೊಂಡಿದ್ದರು. ಆ ಶೋ ಹೇಗೆ ನಡೆಯುತ್ತೆ ಅಂತ ಹನುಮಂತಗೆ ಗೊತ್ತಿರಲಿಲ್ಲ.
ಆರಂಭದಲ್ಲಿ ಎರಡು ವಾರ ಹನುಮಂತಗೆ ಅಲ್ಲಿ ಇರೋದು ಕಷ್ಟ ಆಗಿತ್ತು. ಬಿಗ್ ಬಾಸ್ ಶೋ ಎನ್ನೋದು ಮಾನವನ ವಿಕೃತಿಗಳ ನಡುವಿನ ಸಂಘರ್ಷದ ಆಟ ಆಗಿ ಬದಲಾಗಿದೆ. ಈ ಆಟದಲ್ಲಿ ನಾನಿಲ್ಲ ಅಂತ ಹನುಮಂತ ಇದ್ದ. ಯಾರ ಜೊತೆಯೂ ಈತ ಕಾಲು ಕೆರೆದು ಜಗಳಕ್ಕೆ ಹೋಗಲಿಲ್ಲ, ಯಾರನ್ನೂ ಕೂಡ ದ್ವೇಷಿಸಲಿಲ್ಲ, ಡ್ರಾಮಾ ಮಾಡಲಿಲ್ಲ. ಹನುಮಂತಗೆ ಬಿಗ್ ಬಾಸ್ ಶೋನ ಫಾರ್ಮಾಟ್ ಗೊತ್ತಿಲ್ಲ, ಆದರೂ ಅವನು ತನ್ನ ಆಟ ಆಡಿದ. "ನಾನು ಸುಮ್ಮನೆ ಕಾರಣ ಕೊಡಲ್ಲ. ಮನಸಿಗೆ ಬಂದ್ರೆ ಮಾತ್ರ ಹೇಳುವೆ" ಎಂದು ನೇರವಾಗಿಯೇ ಕಿಚ್ಚ ಸುದೀಪ್ ಬಳಿ ಹನುಮಂತ ಹೇಳಿದ್ದುಂಟು.
