ಬಿಗ್ ಬಾಸ್ ಕನ್ನಡ 11ರಲ್ಲಿ ಎಲಿಮಿನೇಟ್ ಆಗಿ ಹೋದ 14 ಸ್ಪರ್ಧಿಗಳಿಗೆ ಹಾಗೂ ಫೈನಲಿಸ್ಟ್ ಮತ್ತು 5ನೇ ರನ್ನರ್ ಅಪ್ ಭವ್ಯಾ ಗೌಡಗೆ ಸಿಕ್ಕ ಹಣವೆಷ್ಟು? ಇಲ್ಲಿದೆ ನೋಡಿ ಪೂರ್ಣ ಮಾಹಿತಿ..
ಬೆಂಗಳೂರು (ಜ.26): ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋದ ಸ್ಪರ್ಧಿಗಳಿಗೆ ಮೊದಲ ವಾರದ ಯಮುನಾ ಶ್ರೀನಿಧಿ ಅವರಿಂದ 14ನೇ ಸ್ಪರ್ಧಿ ಗೌತಮಿ ಜಾಧವ್ ಅವರಿಗೆ ಒಂದೇ ಮೊತ್ತವನ್ನು ಪಾವತಿಸಲಾಗಿದೆ. ಆದರೆ, ಬಿಗ್ ಬಾಸ್ ಫಿನಾಲೆಯಿಂದ 5ನೇ ರನ್ನರ್ ಅಪ್ ಆಗಿ ಹೊರಬಂದ ಭವ್ಯಾ ಗೌಡ ಅವರು ಇವರೆಲ್ಲರಿಗಿಂತ ಹೆಚ್ಚಿನ ಹಣ ಪಡೆದಿದ್ದಾರೆ. ಎಷ್ಟು ಹಣ ಎಂಬ ಮಾಹಿತಿ ಇಲ್ಲಿದೆ ನೋಡಿ..
ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧೆಯಲ್ಲಿ ಒಟ್ಟು 20 ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಮೊದಲ ವಾರ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿ ಹೊರಗೆ ಹೋದರೆ, ಕೊನೆಯದಾಗಿ 14ನೇ ಸ್ಪರ್ಧಿ ಗೌತಮಿ ಜಾಧವ್ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ, ಈ ಎಲ್ಲಾ ಸ್ಪರ್ಧಿಗಳಿಗೂ ಬಿಗ್ ಬಾಸ್ ಮನೆಯೊಂದ 4 ಜಾಹೀರಾತು ಸಂಸ್ಥೆಗಳಿಂದ 2 ಲಕ್ಷ ರೂ. ಮೌಲ್ಯದ ಬಹುಮಾನ ಕೊಡಲಾಗಿದೆ. ಅದರಲ್ಲಿ 1.5 ಲಕ್ಷ ರೂ. ನಗದು ಬಹುಮಾನ ಮತ್ತು 50 ಸಾವಿರ ರೂ. ಗಿಫ್ಟ್ ವೋಚರ್ ಕೊಡಲಾಗಿದೆ.
ಉಳಿದಂತೆ, ಮೊದಲೇ ಮಾಡಿಕೊಂಡ ಒಪ್ಪಂದದಂತೆ ಎಲ್ಲ ಸ್ಪರ್ಧಾಳುಗಳಿಗೆ ಇಂತಿಷ್ಟು ಎಂದು ಹಣ ನಿಗದಿಪಡಿಸಲಾಗಿದ್ದು, ಅದನ್ನು ಬಿಗ್ ಬಾಸ್ ಆಯೋಜನರು ಮತ್ತು ಚಾನೆಲ್ ವತಿಯಿಂದ ಪಾವತಿಸಲಾಗುತ್ತದೆ. ಆದರೆ, ವಕೀಲ ಜಗದೀಶ್ ಹಾಗೂ ನಟ ರಂಜಿತ್ ಸೂರ್ಯ ಇಬ್ಬರೂ ಬಿಗ್ ಬಾಸ್ ನಿಯಮ ಉಲ್ಲಂಘಿಸಿದ್ದರಿಂದ ಅವರನ್ನು ಮನೆಯಿಂದ ಮಧ್ಯದಲ್ಲಿಯೇ ಹೊರಗೆ ಹಾಕಲಾಗಿದೆ. ಇವರಿಗೆ ಯಾವುದೇ ನಗದು ಬಹುಮಾನ ಕೊಡಲಾಗಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಫೈನಲಿಸ್ಟ್‌ಗಳ ಪೈಕಿ ಅತಿಹೆಚ್ಚು ಮನರಂಜನೆ ನೀಡಿದ ಸ್ಪರ್ಧಿ ಯಾರು? ಇಲ್ಲಿದೆ ವೋಟಿಂಗ್ ಅಪ್ಡೇಟ್ಸ್!
ಬಿಗ್ ಬಾಸ್ ಸೀಸನ್ 11ರ 6 ಫೈನಲಿಸ್ಟ್‌ಗಳ ಪೈಕಿ ನಟಿ ಭವ್ಯಾ ಗೌಡ ಅವರು 5ನೇ ರನ್ನರ್ ಅಪ್ ಆಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಭವ್ಯಾ ಗೌಡ ಅವರಿಗೆ ಬಿಗ್ ಬಾಸ್ ಕಾರ್ಯಕ್ರಮದ ಜಾಹೀರಾತು ಸಂಸ್ಥೆಗಳಿಂದ ಒಟ್ಟು 3.5 ಲಕ್ಷ ರೂ. ಮೌಲ್ಯದ ಬಹುಮಾನವನ್ನು ನೀಡಲಾಗಿದೆ. ಇದರಲ್ಲಿ ಶ್ರೀಕೃಷ್ಣ ಹಳ್ಳಿ ತುಪ್ಪ ಸಂಸ್ಥೆಯಿಂದ ಕಡೆಯಿಂದ 2 ಲಕ್ಷ ರೂ. ನಗದು, ಸುದರ್ಶನ್ ಸಿಲ್ಕ್ಸ್ ಮಳಿಗೆಯಿಂದ 1 ಲಕ್ಷ ರೂ. ನಗದು , ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆಯಿಂದ 50 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗಿದೆ. ಈ ಹಣದ ಜೊತೆ 117 ದಿನ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವುದಕ್ಕೆ ಮೊಲದೇ ಮಾಡಿಕೊಂಡ ಒಪ್ಪಂದದಂತೆ ಹಣವನ್ನು ಸಂಭಾವನೆ ರೂಪದಲ್ಲಿ ಪಡೆದುಕೊಳ್ಳಲಿದ್ದಾರೆ.
ಫೈನಲಿಸ್ಟ್‌ಗೂ, ಎಲಿಮಿನೇಟರ್ಸ್‌ಗೂ ಇರುವ ವ್ಯತ್ಯಾಸ: ಬಿಗ್ ಬಾಸ್ ಮನೆಯಿಂದ ಪ್ರತಿ ವಾರ ಎಲಿಮಿನೇಟ್ ಆಗಿ ಹೊರಗೆ ಹೋಗಿರುವ ಸ್ಪರ್ಧಿಗಳಿಗೆ 1.5 ಲಕ್ಷ ರೂ. ನಗದು ಹಾಗೂ 50 ಸಾವಿರ ಮೌಲ್ಯದ ಗಿಫ್ಟ್ ವೋಚರ್ ಸೇರಿ 2 ಲಕ್ಷ ರೂ. ಮೌಲ್ಯದ ಬಹುಮಾನ ಕೊಡಲಾಗಿದೆ. ಆದರೆ, ಫೈನಲಿಸ್ಟ್ ಆಗಿ 5ನೇ ರನ್ನರ್ ಅಪ್ ಪಟ್ಟವನ್ನು ಅಲಂಕರಿಸಿ ಮನೆಯಿಂದ ಹೊರಬಂದ ಭವ್ಯಾ ಗೌಡ ಅವರಿಗೆ 3.5 ಲಕ್ಷ ರೂ. ಮೌಲ್ಯದ ನಗದು ಬಹುಮಾನ ಸಿಕ್ಕಿದೆ. ಒಟ್ಟಾರೆ ಫೈನಲಿಸ್ಟ್‌ಗೂ, ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಗೆ 1.5 ಲಕ್ಷ ರೂ. ವ್ಯತ್ಯಾಸವಿದೆ. ಆದರೆ, ಇದಕ್ಕೆ ಮನರಂಜನಾ ತೆರಿಗೆ ಎಂದು ಇಂತಿಷ್ಟು ಹಣ ಕಡಿತವಾಗಿ ಉಳಿದ ಹಣ ಅವರ ಖಾತೆಗೆ ಸೇರಲಿದೆ.
ಇದನ್ನೂ ಓದಿ: ಮೀಸಲಾತಿ ವಿಷ್ಯ ಇಲ್ಲಿಗೆ ಬಿಟ್ಟುಬಿಡಿ, ದೊಡ್ ಮನಸ್ಸು ಮಾಡಿ ನನ್ನ ಕ್ಷಮಿಸಿ: ಬಿಗ್ ಬಾಸ್ ಹಂಸ
