ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಗ್ರ್ಯಾಂಡ್‌ ಫಿನಾಲೆ ಸ್ಪರ್ಧಿಗಳಿಗೆ ದೊಡ್ಡ ಆಫರ್‌ ನೀಡಲಾಗಿತ್ತು. ಆದರೆ ಆ ಆಫರ್‌ನ್ನು ಸ್ಪರ್ಧಿಗಳು ತಿರಸ್ಕಾರ ಮಾಡಿದ್ದಾರೆ. ಏನದು? 

‘ಬಿಗ್‌ ಬಾಸ್ ಕನ್ನಡ ಸೀಸನ್‌ 11’‌ ಮನೆಯಲ್ಲಿ ಗ್ರ್ಯಾಂಡ್‌ ಫಿನಾಲೆ ಪ್ರಸಾರ ಆಗುತ್ತಿದೆ. ಈ ವೇಳೆ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಿಗೆ ಒಂದು ಆಫರ್‌ ಕೊಟ್ಟಿದ್ದರು. ಇಪ್ಪತ್ತು ಲಕ್ಷ ರೂಪಾಯಿ ಸೂಟ್‌ಕೇಸ್‌ ಪಡೆದುಕೊಂಡು ಈಗಲೇ ಮನೆಯಿಂದ ಹೊರಗಡೆ ಹೋಗಬೇಕು ಅಥವಾ ಟ್ರೋಫಿ ಪಡೆಯುತ್ತೀವಿ ಎಂದಾದರೆ ಹಾಗೆ ಇರಬೇಕು ಎಂದು ಹೇಳಲಾಗಿತ್ತು.

ತಿರಸ್ಕಾರ ಮಾಡಿದ ಸ್ಪರ್ಧಿಗಳು! 
ಅಲ್ಲಿದ್ದ ಎಲ್ಲ ಸ್ಪರ್ಧಿಗಳು ಇಪ್ಪತ್ತು ಲಕ್ಷ ರೂಪಾಯಿ ಸೂಟ್‌ಕೇಸ್‌ ತಿರಸ್ಕರಿಸಿದ್ದಾರೆ. ಟ್ರೋಫಿ ಪಡೆಯುತ್ತೇವೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಜನರ ಪ್ರೀತಿ ಮುಂದೆ ಇಪ್ಪತ್ತು ಲಕ್ಷ ರೂಪಾಯಿ ಯಾವುದು ಲೆಕ್ಕ ಅಲ್ಲ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. “ಸಾಕಷ್ಟು ಸಿನಿಮಾ ಆಫರ್‌ ಇವೆ. ಬಿಗ್‌ ಬಾಸ್‌ ಶೋಗಿಂತ ಜಾಸ್ತಿ ಅಲ್ಲಿ ದುಡಿಯಬಹುದು. ಆದರೆ ಜನರಿಗೆ ಹತ್ತಿರ ಆಗಲು ಬಿಗ್‌ ಬಾಸ್‌ ಒಳ್ಳೆಯ ವೇದಿಕೆ. ಜನರ ಪ್ರೀತಿ ಸಿಗೋದು ತುಂಬ ಕಷ್ಟ. ನಾನು ಇಲ್ಲಿಯವರೆಗೆ ಬಂದಿರೋದು ತುಂಬ ಖುಷಿ ಕೊಟ್ಟಿದೆ” ಎಂದು ಉಗ್ರಂ ಮಂಜು ಅವರು ಹೇಳಿದ್ದರು. ಒಟ್ಟಿನಲ್ಲಿ ಎಲ್ಲ ಸ್ಪರ್ಧಿಗಳು ಸೂಟ್‌ಕೇಸ್‌ ತಿರಸ್ಕಾರ ಮಾಡಿದ ಹಾಗೆ ಆಯ್ತು. 

ಬಿಗ್ ಬಾಸ್ ಫಿನಾಲೆಯಲ್ಲಿ 'ತಾಯ್ನಾಡು' ಪದಕ್ಕೆ ಅಗೌರವ; ರಜತ್ ಹಾಗೂ ಕಿಚ್ಚನ ಮಾತಿನ ಮರ್ಮವೇನು?

ಟ್ರೋಫಿ ಪಡೆಯೋರು ಯಾರು?
ಅಂದಹಾಗೆ ಟ್ರೋಫಿ ಪಡೆದವರಿಗೆ ಐವತ್ತು ಲಕ್ಷ ರೂಪಾಯಿ ಹಣದ ಜೊತೆಗೆ ಇನ್ನೂ ಬೆಲೆಬಾಳುವ ಒಂದಷ್ಟು ಬಹುಮಾನಗಳು ಸಿಗಲಿವೆ. ಇನ್ನು ಗೆದ್ದವರಿಗೆ ಈ ಬಾರಿ ಐದು ಕೋಟಿಗೂ ಅಧಿಕ ಮತ ಬಿದ್ದಿದೆಯಂತೆ. ಒಟ್ಟಿನಲ್ಲಿ ಯಾರು ಟ್ರೋಫಿ ಪಡೆಯುತ್ತಾರೆ? ಯಾರು ರನ್ನರ್‌ ಅಪ್‌ ಆಗುತ್ತಾರೆ ಎಂಬ ಕುತೂಹಲ ಶುರುವಾಗಿದೆ.

ಮೀಸಲಾತಿ ವಿಷ್ಯ ಇಲ್ಲಿಗೆ ಬಿಟ್ಟುಬಿಡಿ, ದೊಡ್‌ ಮನಸ್ಸು ಮಾಡಿ ನನ್ನ ಕ್ಷಮಿಸಿ: ಬಿಗ್‌ ಬಾಸ್‌ ಹಂಸ

ಯಾರು ಯಾರು ಓಟದಲ್ಲಿದ್ದಾರೆ? 
ಉಗ್ರಂ ಮಂಜು ಅವರು ಎಲಿಮಿನೇಟ್‌ ಆಗಿದ್ದಾರೆ. ಇನ್ನು ಮೋಕ್ಷಿತಾ ಪೈ, ತ್ರಿವಿಕ್ರಮ್‌, ಹನುಮಂತ, ರಜತ್‌ ನಡುವೆ ಯಾರು ಟ್ರೋಫಿ ಪಡೆಯುತ್ತಾರೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ಹನುಮಂತ, ರಜತ್‌ ಅವರು ಆಟ ಶುರುವಾದ ನಂತರ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರೂ ಕೂಡ, ಹೊಸ ತಿರುವು, ರೂಪ ಕೊಟ್ಟರೂ ಎನ್ನಬಹುದು. ಒಟ್ಟಿನಲ್ಲಿ ಇಷ್ಟು ʼಬಿಗ್‌ ಬಾಸ್ʼ‌ ಸೀಸನ್‌ಗಳು ಒಂದು ಕಡೆಯಾದರೆ, ಈ ಸೀಸನ್‌ ಇನ್ನೊಂದು ಕಡೆ ಎನ್ನಬಹುದು. ಆರಂಭದಲ್ಲಿ ಬರೀ ಜಗಳ, ವಾದ-ವಿವಾದ ತುಂಬಿದ್ದ ಈ ಮನೆಯಲ್ಲಿ ಆಮೇಲೆ ಮನರಂಜನೆ ತುಂಬಿತು ಎನ್ನಬಹುದು. ರಜತ್‌ ಪಂಚ್‌ ಡೈಲಾಗ್‌, ಹನುಮಂತನ ಮುಗ್ಧ ಮಾತುಗಳಿಂದ ಈ ಸೀಸನ್‌ಗೆ ಇನ್ನಷ್ಟು ರೋಚಕತೆ ಸಿಕ್ಕಿದೆ ಎಂದು ಹೇಳಬಹುದು.

BBK 11: ತ್ರಿವಿಕ್ರಮ್‌, ಮೋಕ್ಷಿತಾ ಪೈ ಬಗೆಗಿನ ಅತಿ ದೊಡ್ಡ ಸೀಕ್ರೇಟ್‌ ರಿವೀಲ್‌ ಮಾಡಿದ Bigg Boss

ಗ್ರ್ಯಾಂಡ್‌ ಫಿನಾಲೆಯಲ್ಲಿ ಮಾಜಿ ಸ್ಪರ್ಧಿಗಳು! 
ಅಂದಹಾಗೆ ಈ ಬಾರಿ ಫಿನಾಲೆಯಲ್ಲಿ ಜಗದೀಶ್‌, ಭವ್ಯಾ ಗೌಡ ಅವರ ಅನುಪಸ್ಥಿತಿ ಇದೆ. ಕೋಡಿಗೆಹಳ್ಳಿಯಲ್ಲಿ ನಡೆದ ಗಲಾಟೆ ವಿಚಾರಕ್ಕೆ ಜಗದೀಶ್‌ ಅವರು ಸದ್ಯ ಪೊಲೀಸ್‌ ಠಾಣೆಯಲ್ಲಿದ್ದಾರೆ. ಅಂದಹಾಗೆ ರಂಜಿತ್‌, ಅನುಷಾ ರೈ, ಧರ್ಮ ಕೀರ್ತಿರಾಜ್‌, ಹಂಸ ನಾರಾಯಣಸ್ವಾಮಿ, ಯಮುನಾ ಶ್ರೀನಿಧಿ, ಚೈತ್ರಾ ಕುಂದಾಪುರ, ಗೋಲ್ಡ್‌ ಸುರೇಶ್‌, ಧನರಾಜ್‌ ಆಚಾರ್‌, ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಸಿಂಧೋಗಿ, ಶೋಭಾ ಶೆಟ್ಟಿ, ತುಕಾಲಿ ಮಾನಸಾ, ಗೌತಮಿ ಜಾಧವ್‌ ಅವರು ಫಿನಾಲೆ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. 

ಕಿಚ್ಚ ಸುದೀಪ್‌ಗೆ ಭಾವುಕ ಕ್ಷಣ ಇದು!
ಕಿಚ್ಚ ಸುದೀಪ್‌ ಅವರು ಈಗಾಗಲೇ ಹತ್ತು ʼಬಿಗ್‌ ಬಾಸ್ʼ‌ ಸೀಸನ್‌ಗಳನ್ನು ನಿರೂಪಣೆ ಮಾಡಿದ್ದಾರೆ. ಇನ್ನು ಹನ್ನೊಂದನೇ ಸೀಸನ್‌ ಕೂಡ ಯಶಸ್ವಿಯಾಗಿ ಅಂತ್ಯ ಆಗಲಿದೆ. ಈ ಸೀಸನ್‌ ನಂತರದಲ್ಲಿ ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡೋದಿಲ್ವಂತೆ.