BBK 11: ತ್ರಿವಿಕ್ರಮ್‌, ಮೋಕ್ಷಿತಾ ಪೈ ಬಗೆಗಿನ ಅತಿ ದೊಡ್ಡ ಸೀಕ್ರೇಟ್‌ ರಿವೀಲ್‌ ಮಾಡಿದ Bigg Boss

ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋ ಸ್ಪರ್ಧಿಗಳಾದ ಮೋಕ್ಷಿತಾ ಪೈ, ತ್ರಿವಿಕ್ರಮ್‌ ಅವರಿಗೆ ಗೊತ್ತಿಲ್ಲದ ವಿಷಯವೊಂದು ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿ ರಿವೀಲ್‌ ಆಗಿದೆ. ಹಾಗಾದರೆ ಏನದು? 
 

colors kannada bigg boss kannada season 11 fans calls trivikram and mokshitha as trimokshi

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11’ ಶೋನಲ್ಲಿ ಗ್ರ್ಯಾಂಡ್‌ ಫಿನಾಲೆ ಎಪಿಸೋಡ್‌ ಪ್ರಸಾರ ಆಗುತ್ತಿದೆ. ಈ ವೇಳೆ ಸ್ಪರ್ಧಿಗಳ ಹಾಸ್ಯ, ಅಳು, ಜಗಳ ಹೀಗೆ ಸಾಕಷ್ಟು ವಿಡಿಯೋಗಳನ್ನು ಪ್ಲೇ ಮಾಡಲಾಗಿತ್ತು. ಒಟ್ಟಿನಲ್ಲಿ ಫಿನಾಲೆ ಎಪಿಸೋಡ್‌ ಭರ್ಜರಿ ಮನರಂಜನಾತ್ಮಕವಾಗಿದೆ. ಹೀಗಿರುವಾಗ ತ್ರಿವಿಕ್ರಮ್‌, ಮೋಕ್ಷಿತಾ ಪೈಗೆ ಗೊತ್ತಿಲ್ಲದ ವಿಷಯವೊಂದು ಇಲ್ಲಿ ರಿವೀಲ್‌ ಆಗಿದೆ.

ವಿಷಯ ಗೊತ್ತಾಗಿದ್ದು ಯಾವಾಗ? 
ಹೌದು, ಮೋಕ್ಷಿತಾ ಪೈ, ತ್ರಿವಿಕ್ರಮ್‌ ಜೋಡಿಯನ್ನು ಜನರು ಇಷ್ಟಪಡ್ತಾರೆ ಅಂತ ಮಾತ್ರ ಇತ್ತೀಚೆಗೆ ಇವರಿಗೆ ಗೊತ್ತಾಗಿತ್ತು. ಒಂದೆರಡು ದಿನಗಳ ಹಿಂದೆ ದೊಡ್ಮನೆಯೊಳಗಡೆ ಮೋಕ್ಷಿತಾ ಪೈ ಅವರು ಅಭಿಮಾನಿಗಳನ್ನು ಭೇಟಿ ಮಾಡಿದಾಗ ಈ ವಿಷಯ ಗೊತ್ತಾಗಿತ್ತು. ಈಗ ಸಾಕ್ಷಿಯೂ ಸಿಕ್ಕಿದೆ.

Bigg Boss Kannada 11 ವಿಜೇತರಿಗೆ ಸಿಕ್ಕ ಮತ ಎಷ್ಟು? ಸೃಷ್ಟಿಯಾಯ್ತು ಇತಿಹಾಸ!

ವಿಡಿಯೋದಲ್ಲಿ ಏನಿತ್ತು? 
ಇಷ್ಟು ದಿನಗಳವರೆಗೆ ಮೋಕ್ಷಿತಾ ಪೈ, ತ್ರಿವಿಕ್ರಮ್‌ ಅವರು ಸಾಕಷ್ಟು ಬಾರಿ ಜಗಳ ಆಡಿಕೊಂಡಿದ್ದಾರೆ, ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ನಾಮಿನೇಟ್‌ ಕೂಡ ಮಾಡಿಕೊಂಡಿದ್ದಾರೆ. ಇನ್ನು ಮೋಕ್ಷಿತಾ ಪೈ ವಿರುದ್ಧ ತ್ರಿವಿಕ್ರಮ್‌, ತ್ರಿವಿಕ್ರಮ್‌ ವಿರುದ್ಧ ಮೋಕ್ಷಿತಾ ಪೈ ಅವರು ಕಠಿಣವಾದ ಶಬ್ದಗಳಿಂದಲೂ ಆರೋಪ ಮಾಡಿದ್ದರು. ಅಷ್ಟರಮಟ್ಟಿಗೆ ಇವರಿಬ್ಬರ ಮಧ್ಯೆ ಮನಸ್ತಾಪ ಇದೆ. ಹೀಗಿರುವಾಗ ಇವರ ಜಗಳ-ಮನಸ್ತಾಪದ ಮಧ್ಯೆಯೂ ಒಂದು ಸುಂದರ ಕ್ಷಣಗಳು ವೀಕ್ಷಕರ ಕಣ್ಣಿಗೆ ಬಿದ್ದಿವೆ. ಇವರಿಬ್ಬರಿಗೆ ತ್ರಿಮೋಕ್ಷಿ ಎಂದು ಹೆಸರು ಕೂಡ ಇಡಲಾಗಿದೆ. ಇದನ್ನು ಇವರ ಅಭಿಮಾನಿಗಳು ಈ ಜೋಡಿ ಮಧ್ಯೆ ಪ್ರೀತಿ ಅಥವಾ ಸ್ನೇಹ ಇದೆ ಎನ್ನುವ ಅರ್ಥದಲ್ಲಿ ವಿಡಿಯೋ ಎಡಿಟ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೋವನ್ನು ಈಗ ಫಿನಾಲೆ ವೇದಿಕೆ ಮೇಲೆ ಪ್ಲೇ ಮಾಡಲಾಗಿತ್ತು. ಅದನ್ನು ನೋಡಿ ಮನೆಯೊಳಗಡೆ ಇದ್ದ ಎಲ್ಲರೂ ಶಾಕ್‌ ಆಗಿದ್ದಾರೆ.

ʼಮೀಸಲಾತಿ, ಸಿಂಪಥಿಯಿಂದಲೇ ಹನುಮಂತ Bigg Boss ಫಿನಾಲೆ ತಲುಪಿದ್ದುʼ : ಹಂಸ ಹೇಳಿಕೆಗೆ ಆಕ್ರೋಶ ಹೊರಹಾಕಿದ ವೀಕ್ಷಕರು!

ತ್ರಿವಿಕ್ರಮ್‌, ಮೋಕ್ಷಿತಾ ಪೈ ಪ್ರತಿಕ್ರಿಯೆ ಏನು? 
“ನಾನು, ಮೋಕ್ಷಿತಾ ಪೈ ಅವರು ತುಂಬ ಅಂತರ ಕಾಯ್ದುಕೊಂಡಿದ್ದೇವೆ. ಈ ಮನೆಯಲ್ಲಿ ನಾನು ದೂರ ಇರೋದು ಅಂದ್ರೆ ಅದು ಮೋಕ್ಷಿತಾ ಅವರಿಂದ” ಎಂದು ತ್ರಿವಿಕ್ರಮ್‌ ಅವರೇ ಕಿಚ್ಚ ಸುದೀಪ್‌ ಮುಂದೆ ಹೇಳಿದ್ದಾರೆ. ಇನ್ನು ಉಗ್ರಂ ಮಂಜು ಅವರು “ಈ ರೀತಿ ಏನೂ ಇಲ್ಲ. ವೀಕ್ಷಕರು ಇದ್ದಲ್ಲಿ ಒಂದು ಒಳ್ಳೆಯ ಕ್ಷಣಗಳನ್ನು ಎಡಿಟ್‌ ಮಾಡಿ ಹಾಕಿದ್ದಾರೆ ಅಷ್ಟೇ” ಎಂದು ಹೇಳಿದ್ದಾರೆ. ʼವಿಡಿಯೋದಲ್ಲಿ ಇರುವ ಹಾಗೆ ಏನೂ ಇಲ್ಲʼ ಅಂತ ಮೋಕ್ಷಿತಾ ಪೈ ಅವರು ತಲೆ ಅಲ್ಲಾಡಿಸಿದ್ದಾರೆ. ಅಂದಹಾಗೆ ಭವ್ಯಾ ಗೌಡ ಅವರು “ಈ ವಿಡಿಯೋ ಚೆನ್ನಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. 

BBK 11: ರಿಯಲ್‌ ಮಾವ ಗಣೇಶ್‌ ಕಾಸರಗೋಡು ಹೀಗ್ಯಾಕೆ ಪೋಸ್ಟ್‌ ಮಾಡಿದ್ರು? ಪ್ರತಿಕ್ರಿಯೆ ಕೊಟ್ಟ ಗೌತಮಿ ಜಾಧವ್!‌

ವಿಜೇತರು ಯಾರು?
ʼಬಿಗ್‌ ಬಾಸ್ ಕನ್ನಡ ಸೀಸನ್‌ 11ʼ ಶೋನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇದೆ. ಫಿನಾಲೆಗೆ ತಲುಪಿರುವ ಆರು ಸ್ಪರ್ಧಿಗಳಲ್ಲಿ ಮೊದಲಿಗೆ ಭವ್ಯಾ ಗೌಡ ಔಟ್‌ ಆಗಿದ್ದಾರೆ. ಅಂದಹಾಗೆ ತ್ರಿವಿಕ್ರಮ್‌, ಮೋಕ್ಷಿತಾ ಪೈ, ಹನುಮಂತ, ಉಗ್ರಂ ಮಂಜು, ರಜತ್‌ ಅವರಲ್ಲಿ ಯಾರು ವಿನ್‌ ಆಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಅಂದಹಾಗೆ ವಿಜೇತರಿಗೆ ಐವತ್ತು ಲಕ್ಷ ರೂಪಾಯಿ ಜೊತೆಗೆ ಇನ್ನೂ ಹಲವು ಬಹುಮಾನಗಳು ಸಿಗಲಿವೆ. ಒಟ್ಟಿನಲ್ಲಿ ಈ ಸೀಸನ್‌ ಯಶಸ್ವಿ ಹಂತ ತಲುಪಿದ್ದು, ಕೊನೆಯ ಹಂತದಲ್ಲಿದೆ. ಇನ್ನು ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡಲಿರುವ ಕೊನೆಯ ಸೀಸನ್‌ ಇದಾಗಿರಲಿದೆ. ಅಂದಹಾಗೆ ಇದು ವೀಕ್ಷಕರಿಗೂ, ನಟ ಕಿಚ್ಚ ಸುದೀಪ್‌ಗೂ ಒಂದು ಭಾವನಾತ್ಮಕ ಕ್ಷಣ ಎನ್ನಬಹುದು. 
 

Latest Videos
Follow Us:
Download App:
  • android
  • ios