ಇನ್ಮೇಲೆ ಯಾರು ಕೆರಳಿಸಿದ್ರೂ ಕೆರಳಲ್ಲ ಅಂದ್ರು ವಿನಯ್. ಬಿಗ್‌ಬಾಸ್ ಬೆಂಕಿ ಹಾಕ್ದೇ ಇರ್ತಾರಾ ಮಗಾ ಅಂತಿದ್ದಾರೆ ಫ್ಯಾನ್ಸ್
ಬಿಗ್‌ಬಾಸ್‌ನಲ್ಲಿ ಸದ್ಯ ರಂಗೇರ್ತಿರೋದು ವಿನಯ್ ಹೊಸ ನಡೆ. ಇನ್ಮೇಲೆ ಯಾರು ಎಷ್ಟೇ ಉರಿಸಿದ್ರೂ ಉರಿಯಲ್ವಂತೆ ವಿನಯ್. ಬಿಗ್ ಬಾಸ್ ಬೆಂಕಿ ಹಾಕದೇ ಇರ್ತಾರ ಮಗಾ ಅಂತಿದ್ದಾರೆ ಫ್ಯಾನ್ಸ್.
ಬಿಗ್‌ಬಾಸ್‌ನಲ್ಲಿ ಸದ್ಯ ರಂಗೇರ್ತಿರೋದು ವಿನಯ್ ಹೊಸ ನಡೆ. ಇದು ಮತ್ತೊಂದು ಗೇಮ್ ಸ್ಟ್ರಾಟೆಜಿನಾ ಅನ್ನೋ ಅನುಮಾನ ಎಲ್ರಿಗೂ ಇದೆ. ಬಟ್ ವಿನಯ್ ಮಾತ್ರ ಸಂತನ ಫೋಸಲ್ಲಿ 'ಇನ್ಮೇಲೆ ಯಾರು ಎಷ್ಟೇ ಕೆರಳಿಸಿದ್ರೂ ಕೆರಳಲ್ಲ. ಇನ್ನು ಮೇಲೆ ಏನಿದ್ರೂ ಹೆಲ್ದಿ ಆಟ, ಹೆಲ್ದಿ ನೋಟ, ಹೆಲ್ದಿ ಮೈಂಡ್‌ಸೆಟ್ ಅಂದುಬಿಟ್ಟಿದ್ದಾರೆ. ಅವರ ಈ ನಡೆ ದೊಡ್ಡ ಮನೆಯ ಉಳಿದ ಸದಸ್ಯರಿಗೆ ಅಚ್ಚರಿ ಮೂಡಿಸಿದೆ. ಯಾಕೆಂದರೆ ವಿನಯ್ ಆರಂಭದಿಂದಲೇ ತೋಳ್ಬಲ, ಮಾತಿನ ಬಲದಿಂದ ಮಿಂಚಿದವರು. ಅವರ ಕಟು ಮಾತು ಸಖತ್ ಫೇಮಸ್. ತನ್ನ ಟ್ರೇಡ್ ಮಾರ್ಕೇ ರೋಷಾವೇಶ ಆಗಿರುವಾಗ ಇದೀಗ ಮಹಾ ಸಾಧು ಮನುಷ್ಯನ ನೋಟದಲ್ಲಿ 'ನಾನಿನ್ನು ಕೆರಳಲ್ಲ, ವಿನಯ ಮೂರ್ತಿಯ ಹಾಗೆ ಹೆಸರಿಗೆ ಅನ್ವರ್ಥವಾಗಿರ್ತೇನೆ' ಅಂದರೆ ಯಾರಿಗಾದ್ರೂ ಶಾಕ್ ಆಗದೇ ಇರುತ್ತಾ?
ಬಿಗ್ ಬಾಸ್ ಮನೆಯಲ್ಲಿ ಇದ್ದಕ್ಕಿದ್ದ ಹಾಗೇ ಆಗಿರುವ ಜ್ಞಾನೋದಯ ಆಗಿ ಹೋಗಿದೆಯಾ ಅಂತ ವೀಕ್ಷಕರು ಮಾತಾಡಿಕೊಳ್ತಿದ್ದಾರೆ. ದೊಡ್ಡ ಮನೆಯಲ್ಲಿ ದಿನಗಳು ಉರುಳುತ್ತಿವೆ. ಫೈನಲ್ ರೌಂಡ್ ಹತ್ತಿರ ಬರುತ್ತಿದೆ. ಮನೆಯೊಳಗೆ ಇರುವ ಪ್ರತಿಯೊಬ್ಬರಲ್ಲೂ ತಾನೇ ಗೆಲ್ಲುವುದು ಎಂಬ ಗಟ್ಟಿ ನಂಬಿಕೆ ಇದೆ. ಹೀಗಾಗಿ ಯಾರ ಮುಖದಲ್ಲೂ ಆತಂಕದ ವಾತಾವರಣ ಕಾಣಿಸುತ್ತಿಲ್ಲ. ಈ ಸೀಸನ್ ಆರಂಭದಿಂದ ಒಂದು ಕ್ಷಣ ಎಪಿಸೋಡ್ ಗಳನ್ನು ಮೆಲುಕು ಹಾಕಿದರೆ ಬರೀ ಕಿತ್ತಾಟ, ಅಗ್ರೆಸ್ಸಿವ್ ಆಟ, ರೂಲ್ಸ್ ಬ್ರೇಕ್‌ಗಳನ್ನೇ ಮಾಡಲಾಗಿದೆ. ಇನ್ಮುಂದೆ ಜನ ಕಡಿಮೆಯಾಗುತ್ತಿದ್ದಾರೆ. ಇರುವವರ ನಡುವೆ ಬಾಂಧವ್ಯ ಗಟ್ಟಿಯಾಗುತ್ತದೆ. ಹೀಗಾಗಿ ಕಿತ್ತಾಟಗಳು ಕಡಿಮೆಯಾಗಲೇಬೇಕು. ಇದೇ ಸಮಯದಲ್ಲಿ ವಿನಯ್ ಕೂಡ ಅಗ್ರೆಸ್ಸಿವ್ ಆಟ ಆಡುವುದಿಲ್ಲ ಎಂದಿದ್ದಾರೆ.
ಔಟ್ ಆಗಿದ್ದ ಮೈಕೇಲ್ ಮತ್ತೆ ಬಂದ್ರು, ಅವಿನಾಶ್ ಕಥೆ ಏನು; ಅಂದ್ರೆ ಫೇಕ್ ಡಬಲ್ ಎಲಿಮಿನೇಶನ್ನಾ?!
ಹಾಗೆ ನೋಡಿದರೆ ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಆಟ (game) ಕಳೆಯುವುದು ಅಷ್ಟು ಸುಲಭವಲ್ಲ. ಹೊರಗಿನ ಪ್ರಪಂಚದ ಸಂಪರ್ಕವೇ (connection) ಇರುವುದಿಲ್ಲ. ತಮ್ಮವರು ಅನಿಸಿಕೊಂಡ ಕಂಪ್ಯಾನಿಯನ್, ತಂದೆ - ತಾಯಂದಿರ ಮುಖವನ್ನೂ ನೋಡಕ್ಕಾಗಲ್ಲ, ಬೆಸ್ಟ್ ಫ್ರೆಂಡ್ಸ್ ಗಳ ಸಹಕಾರ ಇರುವುದಿಲ್ಲ. ಒಳಗೆ ಇರುವವರೇ ಕುಟುಂಬದವರು, ಸ್ನೇಹಿತರು. ಅದರೊಳಗೂ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿ. ಸ್ನೇಹಿತರಾದವರೇ ಕೊನೆಯಲ್ಲಿ ದುಷ್ಮನ್‌ಗಳಾಗುತ್ತಾರೆ. ಹೊರಗೆ ಆದರೆ ದುಷ್ಮನ್ ಗಳಾದರೆ ಅವರ ಮುಖವನ್ನೇ ನೋಡದೆ ದೂರ ಉಳಿಯಬಹುದು. ಆದರೆ ಬಿಗ್ ಬಾಸ್ ಮನೆಯಲ್ಲಿ ಆ ರೀತಿ ಆಗಲ್ಲ. ದಿನಗಳು ಉರುಳುತ್ತಿದ್ದಂತೆ ಇದು ವಿನಯ್‌ಗೆ ರಿಯಲೈಸ್ (realise) ಆಗಿರುವ ಹಾಗಿದೆ. ಅದಕ್ಕೆ ಮನೆಯವರೆಲ್ಲಾ ಅತ್ಯಾಶ್ಚರ್ಯ ಪಡುವಂತೆ ಪ್ರಾಮೀಸ್ (promise) ಮಾಡಿದ್ದಾರೆ.
ಅಷ್ಟಕ್ಕೂ ಅಲ್ಲೇನು ಮ್ಯಾಜಿಕ್ ನಡೀತು ಅಂತೀರಾ.. ಅಂಥಾದ್ದೇನೂ ಆಗಲಿಲ್ಲ. ನಮ್ರತಾ, ವಿನಯ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಅಡುಗೆ ಮನೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ವಿನಯ್ ಇದ್ದಕ್ಕಿದ್ದ ಹಾಗೇ ಇನ್ಮುಂದೆ ಅಗ್ರೆಸ್ಸಿವ್ ಆಗಿ ಆಡುವುದಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ಎಲ್ಲರಿಗೂ ಶಾಕ್ ಆಗಿದೆ. ನಮ್ರತಾ ಪ್ರಾಮೀಸ್ ಕೂಡ ಮಾಡಿಸಿಕೊಂಡಿದ್ದಾರೆ. ಪ್ರಾಮೀಸ್ ಮಾಡಿದ ವಿನಯ್ ಕಂಡು ತನಿಷಾ 'ಬಾರೋ.. ಬಾ' ಅಂತ ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ನಮ್ರತಾ, ಇಷ್ಟು ದಿನ ನಾವು ಸಾಫ್ಟ್ (soft)ಆಗಿ ಇದ್ವಿ. ಇನ್ಮುಂದೆ ನಾವೆಲ್ಲಾ ಅಗ್ರೆಸ್ಸಿವ್ ಆಗಿ ಆಡೋಣಾ ಅಂತ ಹೇಳಿ ಕಾಲೆಳೆದಿದ್ದಾರೆ. ವಿನಯ್ ಅವರಿಗೆ ಎಷ್ಟು ಕಾಡುವುದಕ್ಕೆ ಸಾಧ್ಯವೋ ಅಷ್ಟು ಕಾಡಿದ್ದಾರೆ. ಬಳಿಕ ವಿನಯ್ ಮೈಕಲ್ ಗೆ ಥ್ಯಾಂಕ್ಸ್ ಹೇಳಿದ್ದಾರೆ. ವಿನಯ್ ಈ ಮಾತಿಗೆ ಮೈಕಲ್ ಸ್ಪೂರ್ತಿಯಾಗಿದ್ದಾರೆ. ನಿನ್ನೆ ಡಬಲ್ ಎಲಿಮಿನೇಷನ್ ಎನ್ನಲಾಗಿತ್ತು. ಮೈಕಲ್ ಕೂಡ ಔಟ್ ಆಗಿದ್ದಾರೆ ಎನ್ನಲಾಗಿತ್ತು. ಈಗ ಇದ್ದಕ್ಕಿಂದ ಹಾಗೇ ಪ್ರತ್ಯಕ್ಷರಾಗಿ ವಿನಯ್‌ಗೆ ಸ್ಪೂರ್ತಿಯಾಗಿದ್ದಾರೆ.
Amrutadhare: ಭೂಮಿ ಗೌತಮ್ ನಡುವೆ ಪ್ರೇಮ ಅರಳಿದೆ! ಇದನ್ನೂ ಕನಸು ಅಂತ ತೋರಿಸಬೇಡ್ರೋ ಅಂತಿದ್ದಾರೆ ಫ್ಯಾನ್ಸ್!
ಇದೆಲ್ಲ ಸರಿ, ಆದರೆ ಒಂದು ವೇಳೆ ಬಿಗ್ ಬಾಸ್ ಅಗ್ರೆಸ್ಸಿವ್ ಆಗಿ ಆಡುವ ಆಟವನ್ನೇ ಕೊಟ್ಟರೂ ಕೂಲ್ ಆಗಿರುತ್ತಾರಾ ಎಂಬುದನ್ನು ನೋಡಬೇಕಿದೆ. ವೀಕ್ಷಕರಂತೂ 'ಮಗಾ, ನೀನು ಕೂಲಾಗಿರ್ತೀನಿ ಅಂದ್ರೂ ಬಿಗ್ ಬಾಸ್ ಬಿಡ್ಬೇಕಲ್ಲಾ, ಬೆಂಕಿ ಬೆಂಕಿ ಹಾಕ್ತಾರೆ. ಕೆರಳಲೇ ಬೇಕು' ಅಂತೆಲ್ಲ ಕಾಮೆಂಟ್ ಮಾಡ್ತಿದ್ದಾರೆ.