ಬ್ರೆಜಿಲ್‌ನ ಮೀರಿವೊನೆ ರೋಚಾ ಮೊರೇಸ್ ಎಂಬ ಮಹಿಳೆ ಬಟ್ಟೆ ಗೊಂಬೆಯನ್ನು ಮದುವೆಯಾಗಿದ್ದಾರೆ. ಒಂಟಿತನದಿಂದ ಬೇಸತ್ತಿದ್ದ ಆಕೆಗೆ ತಾಯಿಯೇ ಗೊಂಬೆ ತಯಾರಿಸಿಕೊಟ್ಟರು. ಆ ಗೊಂಬೆಯನ್ನೇ ಪ್ರೀತಿಸಿ ಮದುವೆಯಾದರು. ನಂತರ ತಾಯಿಯೇ ಗೊಂಬೆ ಮಕ್ಕಳನ್ನು ಮಾಡಿಕೊಟ್ಟರು. ಗಂಡನಿಂದ ತಾನು ಗರ್ಭಿಣಿಯಾಗಿದ್ದೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಗೊಂಬೆ ಗಂಡನಿಂದ ತಾನು ಸಂತೋಷವಾಗಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಗಂಡು-ಗಂಡು, ಹೆಣ್ಣು-ಹೆಣ್ಣು ಮದ್ವೆಯಾಗಿರೋದು ಕೇಳಿಯಾಯ್ತು, ಅಪ್ಪ-ಮಗಳ ಪ್ರೇಮ ಕಥೆನೂ ಆಗೋಯ್ತು, ಗಂಡಸರ ಸಹವಾಸವೇ ಬೇಡ ಎಂದು ಹೆಣ್ಣು ಮಕ್ಕಳು ತಮ್ಮನ್ನು ತಾವೇ ಮದುವೆಯಾಗಿ ಹನಿಮೂನ್​ ಹೋಗಾಯ್ತು... ಇದೀಗ ವಿಚಿತ್ರ ಎನ್ನುವ ಘಟನೆ ನಡೆದಿದೆ. ಇಲ್ಲಿ ಮಹಿಳೆಯೊಬ್ಬಳು ಗೊಂಬೆಯನ್ನು ಮದುವೆಯಾಗಿದ್ದು, ಈಕೆ ಈಗ ಎರಡು ಮಕ್ಕಳ ತಾಯಿಯಾಗಿದ್ದಾಳೆ! ಇದೇನು ಸಿನಿಮಾ ಕಥೆಯಲ್ಲ, ರಿಯಲ್​ ಆಗಿ ನಡೆದಿರೋ ಘಟನೆಯೇ. ಸುಳ್ಳು ಸುದ್ದಿಯೂ ಅಲ್ಲ ಮತ್ತೆ. ಈ ಮಹಿಳೆ ತನ್ನ ಗೊಂಬೆಯ ಗಂಡ ಮತ್ತು ಮಕ್ಕಳ ಜೊತೆಗೆ ಇರುವ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ. ಮಕ್ಕಳು ಕೂಡ ಥೇಟ್​ ಅಪ್ಪನಂತೆಯೇ ಇವೆ!

ಇದು ಬ್ರೆಜಿಲ್​ ಸ್ಟೋರಿ. ಈಕೆಯ ಹೆಸರು ಮೀರಿವೊನೆ ರೋಚಾ ಮೊರೇಸ್. ಒಂಟಿಯಾಗಿದ್ದ ಮಗಳಿಗೆ ಅವಳ ಅಮ್ಮ ಒಂದು ಗೊಂಬೆ ಮಾಡಿಕೊಟ್ಟರು. ಚಿಂದಿ ಬಟ್ಟೆಗಳಿಂದ ಈ ಗೊಂಬೆ ತಯಾರಿಸಿ ಕೊಟ್ಟರು. ಅದು ಗಂಡು ಗೊಂಬೆ. ಅದರ ಜೊತೆಯೇ ಕಾಲ ಕಳೆಯುತ್ತಿದ್ದ ಈ ಮಗಳಿಗೆ ಆ ಗೊಂಬೆಯ ಮೇಲೆ ಲವ್​ ಆಗೋಯ್ತು. ಅಷ್ಟಕ್ಕೂ ಈ ಗೊಂಬೆ ತಯಾರಿಸಿ ಕೊಡುವ ಹಿಂದೆ ಕಾರಣವೂ ಇದೆ. ಮೀರಿವೊನೆ ರೋಚಾ ಮೊರೇಸ್​ಗೆ ಡಾನ್ಸ್​ ಎಂದ್ರೆ ತುಂಬಾ ಇಷ್ಟ. ಆದರೆ ಒಬ್ಬಳೇ ಮಗಳಾಗಿದ್ದರಿಂದ ಸ್ನೇಹಿತರು ಯಾರೂ ಇಲ್ಲದಿದ್ದರಿಂದ ಮನೆಯಲ್ಲಿ ಒಬ್ಬಳೇ ಸಕತ್​ ಬೋರ್​ ಆಗ್ತಿದೆ ಎಂದು ಬೇಜಾರು ಮಾಡಿಕೊಳ್ಳುತ್ತಾ ಇದ್ದಳು. ಅದೇ ಕಾರಣಕ್ಕೆ ಆಟ ಆಡಿಕೋ ಹೋಗು ಎಂದು ಅಮ್ಮ ಒಂದು ಗೊಂಬೆ ಮಾಡಿಕೊಟ್ಟರೆ, ಅದರ ಮೇಲೆಯೇ ಲವ್​ ಆಗೋಯ್ತು ಈಕೆಗೆ. 

ಕೊನೆಗೆ ಅವನನ್ನೇ ಮದುವೆಯಾಗುವ ಆಸೆ ವ್ಯಕ್ತಪಡಿಸಿದಳು. ಅವಳ್ಯಾವ ರೀತಿಯ ಅಮ್ಮನೋ ಗೊತ್ತಿಲ್ಲ, ಅಥವಾ ಮದ್ವೆಯಾದರೆ ಮಗಳು ಬೇರೆ ಹೋಗ್ತಾಳೆ ಎನ್ನುವ ಭಯ ಅವಳಿಗಿತ್ತೋ ತಿಳಿದಿಲ್ಲ. ಒಟ್ಟಿನಲ್ಲಿ ಆ ಗೊಂಬೆಯ ಜೊತೆ ಮದುವೆಗೆ ಅಮ್ಮ ಒಪ್ಪಿಕೊಂಡಳು. ಇನ್ನೇನು ಧೂಮ್​ ಧಾಮ್​ ಮದುವೆನೂ ಆಯ್ತು. ತಾಯಿ-ಮಗಳ ಖುಷಿಗೆ ಪಾರವೇ ಇರಲಿಲ್ಲ. ಅಮ್ಮನ ಮನೆಯಲ್ಲಿಯೇ ಇರುತ್ತಿದ್ದ ಮಗಳು ಈ ಗೊಂಬೆ ಜೊತೆನೇ ಕಾಲ ಕಳೆಯುತ್ತಿದ್ದಳು. ಅದನ್ನ ತನ್ನ ಗಂಡ ಎಂದೇ ಭಾವಿಸಿದ್ದಳು. ನೋಡ ನೋಡುತ್ತಿದ್ದಂತೆಯೇ ವರ್ಷಗಳು ಉರುಳಿದ ಬಳಿಕ ಮೀರಿವೊನೆ ರೋಚಾ ಮೊರೇಸ್ ಇಬ್ಬರು ಮಕ್ಕಳ ತಾಯಿಯಾಗಿದ್ದಾಳೆ. ಹಾಗೆಂದು ಇವು ಅವಳಿ ಜವಳಿ ಮಕ್ಕಳಲ್ಲ. ಮಗುವಾಗುವ ಮುನ್ನ ತಾನು ಈ ಗೊಂಬೆಯಿಂದ ಗರ್ಭವತಿ ಎಂದೂ ಶೇರ್​ ಮಾಡಿಕೊಂಡಿದ್ದಳು ಮೀರಿವೊನೆ ರೋಚಾ ಮೊರೇಸ್. ಅದೇ ರೀತಿ ಎರಡನೆಯ ಬಾರಿಯೂ ಗರ್ಭ ಧರಿಸಿರುವುದಾಗಿ ಹೇಳಿದ್ದಳು. ಈಗ ಸೇಮ್​ ಟು ಸೇಮ್​ ಅಪ್ಪನನ್ನೇ ಹೋಗುವ ಎರಡು ಮಕ್ಕಳ ತಾಯಿಯಾಗಿದ್ದಾಳೆ ಈಕೆ!

ಕುಂಭಮೇಳದಲ್ಲಿ ಪ್ರೇತಗಳ ಸ್ನಾನ ಸಿಸಿಟಿವಿಯಲ್ಲಿ ಸೆರೆ? ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ ಈ ವೈರಲ್​ ವಿಡಿಯೋ!

ಅಲ್ಲೇ ಇರೋದು ಟ್ವಿಸ್ಟ್​. ಹಾಗಂತ ಮೀರಿವೊನೆ ರೋಚಾ ಮೊರೇಸ್ ಏನೂ ಬೇರೆಯವರ ಜೊತೆ ಸಂಬಂಧ ಹೊಂದಿಲ್ಲ ಮತ್ತೆ. ಅದು ಆ ಗೊಂಬೆಯದ್ದೇ ಮಕ್ಕಳು. ಅದು ಹೇಗೆ ಅಂದುಕೊಂಡ್ರಾ? ಮದುವೆಯಾದ ಮೇಲೆ ಮಕ್ಕಳಿಲ್ಲ ಎನ್ನುವ ಕೊರಗು ಮಗಳಿಗೆ ಕಾಡಿದ್ದ ಹಿನ್ನೆಲೆಯಲ್ಲಿ ಅವಳ ಅಮ್ಮ ಅಪ್ಪನನ್ನೇ ಹೋಲುವ ಎರಡು ಮಕ್ಕಳನ್ನು ಬಟ್ಟೆಯಿಂದ ಮಾಡಿ ಕೊಟ್ಟಿದ್ದಾಳೆ. ಅದನ್ನು ರೆಡಿ ಮಾಡುವ ಸಂದರ್ಭದಲ್ಲಿ ಮಗಳು ತಾನು ಗರ್ಭವತಿ ಎಂದು ಅನೌನ್ಸ್​ ಮಾಡಿದ್ದಳು. ಒಂದು ಮಗು ಆದ ಮೇಲೆ ಅದಕ್ಕೆ ಆಡಲು ಇನ್ನೊಬ್ಬರು ಬೇಕು ಎಂದು ಎನ್ನಿಸಿದ್ದರಿಂದ ಮತ್ತೊಂದು ಗೊಂಬೆ ಮಾಡಿ ಕೊಟ್ಟಿದ್ದಾಳೆ. 

ಮದುವೆಯ ಬಗ್ಗೆ ಮಾತನಾಡಿದ್ದ ಮಹಿಳೆ, ಮದುವೆಯಾದಾಗಿನಿಂದ ತುಂಬಾ ಖುಷಿಯಾಗಿದ್ದೇನೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ನಡೆಸುತ್ತಿರುವ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ಅವನು ವಾದ ಮಾಡುವುದಿಲ್ಲ ಮತ್ತು ಅವನು ಅರ್ಥಮಾಡಿಕೊಳ್ಳುತ್ತಾನೆ. ಮಾರ್ಸೆಲೊ ಒಬ್ಬ ಮಹಾನ್ ಮತ್ತು ನಿಷ್ಠಾವಂತ ಪತಿ. ಅವನು ಅಂತಹ ವ್ಯಕ್ತಿ ಮತ್ತು ಎಲ್ಲಾ ಮಹಿಳೆಯರು ಅವನನ್ನು ಅಸೂಯೆಪಡುತ್ತಾರೆ” ಎಂದು ಮೀರಿವೊನೆ ರೋಚಾ ಮೊರೇಸ್ ಹೇಳಿದ್ದಾಳೆ. ಅವನು ತುಂಬಾ ಉತ್ತಮ ಗುಣಗಳನ್ನು ಹೊಂದಿದ್ದಾನೆ. ಆದರೆ ಅವನ ಏಕೈಕ ನ್ಯೂನತೆಯೆಂದರೆ ಅವನು ಸೋಮಾರಿಯಾಗಿದ್ದಾನೆ. ಅವನು ಕೆಲಸ ಮಾಡುವುದಿಲ್ಲ. ನಾನೊಬ್ಬಳೇ ಎಲ್ಲವನ್ನೂ ನಿಭಾಯಿಸುತ್ತೇನೆ ಎಂದೂ ಹೇಳಿದ್ದಾಳೆ. ಹಲವು ವಿವಾಹಿತೆಯರು 'ನೀನೇ ಲಕ್ಕಿ ಕಣೆ' ಎಂದರೆ, ಕೆಲವರು ಅಮ್ಮ-ಮಗಳು ಇಬ್ಬರಲ್ಲಿ ಯಾರು ಹುಚ್ಚರೋ ಗೊತ್ತಿಲ್ಲ ಎನ್ನುತ್ತಿದ್ದಾರೆ! 

ಪಬ್​ಡಾನ್ಸ್​ ಇಷ್ಟ ಎನ್ನುತ್ತಲೇ ಹಾಟ್​ ಅವತಾರ ಬಿಚ್ಚಿಟ್ಟ ನಿವೇದಿತಾ ಗೌಡ: ಕಣ್ಣರಳಿಸಿ ನೋಡಿದ ನೆಟ್ಟಿಗರು!