Asianet Suvarna News Asianet Suvarna News

ಪ್ರೀತಿ ಅಂದ್ರೇನು ಅಂತ ನಿವೇದಿತಾ ಗೌಡಗೆ ಈಗ ಗೊತ್ತಾಯ್ತಂತೆ! ಮೂರು ವರ್ಷ ಬೇಕಾಯ್ತಾ ಕೇಳ್ತಿದ್ದಾರೆ ಫ್ಯಾನ್ಸ್​

ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಜೊತೆ ಜೊತೆಯಲಿ ಹಾಡಿಗೆ ರೀಲ್ಸ್​ ಮಾಡಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. ಅದರ ವಿಡಿಯೊ ವೈರಲ್​ ಆಗಿದೆ. 
 

Nivedita Gowda reels for the song jyoteyali jyote jyoteyali from Geeta film suc
Author
First Published Dec 31, 2023, 4:02 PM IST

1981ರಲ್ಲಿ ತೆರೆ ಕಂಡ ಶಂಕರ್​ನಾಗ್​ ಅಭಿನಯದ ಗೀತಾ ಚಿತ್ರದ ಜೊತೆಯಲಿ ಜೊತೆಜೊತೆಯಲಿ ಹಾಡು ಇಂದಿಗೂ ಸೂಪರ್​ಹಿಟ್​ ಹಾಡುಗಳಲ್ಲಿ ಒಂದು. ಹಲವರು ಇಂದಿಗೂ ಈ ಹಾಡನ್ನು ಗುನುಗುನಿಸುತ್ತಲೇ ಇರುತ್ತಾರೆ. ಕಾಲ ಎಷ್ಟೇ ಬದಲಾದರೂ, ಹಲವು ಹಿಟ್​ ಹಾಡುಗಳು ಯಾವತ್ತಿಗೂ ಎಲ್ಲರ ಫೆವರೆಟ್​ ಆಗಿಯೇ ಇರುತ್ತದೆ. ಇಂದಿನ ಅರ್ಥವೇ ಆಗದ ಎಷ್ಟೋ ಹಾಡುಗಳು ಕ್ಷಣಿಕವಾಗಿದ್ದರೆ, 70-80-90ರ ದಶಕಗಳ ನೂರಾರು ಹಾಡುಗಳು ಇಂದಿಗೂ ಎಲ್ಲರ ಬಾಯ ತುದಿಯಲ್ಲಿಯೇ ಇದೆ. ಅಂಥ ಹಾಡುಗಳಲ್ಲಿಲ ಒಂದು ಜೊತೆಯಲಿ ಜೊತೆಜೊತೆಯಲಿ... ಈ ಹಾಡಿಗೆ ಇದೀಗ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್​ ಮಾಡಿದ್ದಾರೆ. 

ಈ ಹಾಡಿನಲ್ಲಿ ಬರುವ ಪ್ರೀತಿ ಎಂದರೇನು ಎಂದು ಈಗ ಅರಿತೆ ನಾ... ಎನ್ನುತ್ತಿದ್ದಂತೆಯೇ ನಿವೇದಿತಾ ಫ್ಯಾನ್ಸ್​ ಓಹೊ ಈಗ ಪ್ರೀತಿಯ ಅರ್ಥ ಆಯ್ತಾ? ಮದ್ವೆಯಾಗಿ ಮೂರು ವರ್ಷ ಆದ್ಮೇಲೆ ಈಗ ಗೊತ್ತಾಯ್ತಾ ಎಂದು ಕಾಲೆಳೆಯುತ್ತಿದ್ದಾರೆ. ಈ ರೀಲ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದರಲ್ಲಿ ನಿವೇದಿತಾ ಮುದ್ದಾಗಿ ಕಾಣಿಸುವ ಕಾರಣ, ಅನೇಕ ಮಂದಿ ಇದೇ ರೀತಿ ಸದಾ ಕಾಣಿಸುತ್ತಿರಿ ಎಂದಿದ್ದರೆ, ಮಿನಿ, ಮಿಡಿ, ಷಾರ್ಟ್ಸ್​ ಎಲ್ಲಾ ಬಿಟ್ಟು ಹೀಗೆ ಕಾಣಿಸಿಕೊಳ್ಳಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. 

ಅಬ್ಬಬ್ಬಾ ಸೊಂಟ ಬಳುಕಿಸಿ ಮೋಡಿ ಮಾಡೋ ಬಿಗ್​ಬಾಸ್​ ಬೆಡಗಿ ನಿವೇದಿತಾ ಇಷ್ಟು ಚೆಂದ ಹಾಡ್ತಾರಾ?

ಅಂದಹಾಗೆ, ಸದ್ಯ  ಸೋಷಿಯಲ್​ ಮೀಡಿಯಾದಲ್ಲಿಯೇ ಹೆಚ್ಚು ಸದ್ದು ಮಾಡುತ್ತಿರುವ ನಟಿಯರ ಪೈಕಿ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಒಬ್ಬರು. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.      ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಮೊನ್ನೆಯಷ್ಟೇ ಹಾಡೊಂದನ್ನು ಹಾಡಿ ಎಲ್ಲರ ಮನ ಗೆದ್ದಿದ್ದರು ನಿವ್ವಿ.  ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡುತ್ತಿದ್ದ ನಿವೇದಿತಾ  ಸಹೋದರನ ಜೊತೆ ಸೇರಿ ಹಾಡಿದ ಹಾಡು ಕೇಳಿ ಫ್ಯಾನ್ಸ್​ ಖುಷಿಯಾಗಿದ್ದರು.  ಯಾವುದೇ ಡ್ರೆಸ್​ ಹಾಕಿದರೂ ಸಕತ್​ ಕ್ಯೂಟ್​ ಆಗಿ ಕಾಣಿಸೋ ನಿವೇದಿತಾ ಅವರು  ಹಾಡು ಹೇಳುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿ ಹೋಗಿತ್ತು. ತಮಿಳಿನ ಹಾಡಿಗೆ ಸಕತ್​ ಧ್ವನಿ ನೀಡಿದ್ದಾರೆ  ನಿವೇದಿತಾ. ಸಹೋದರ ಮತ್ತು ನಾನು ಸಿಂಗರ್​ ಅಲ್ಲ, ಸುಮ್ಮನೇ ಈ ವಿಡಿಯೋ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೂ ಇವರ ಮಧುರ ಕಂಠಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

ನನ್ನ ಹೊಸ ಹೇರ್​ ಕಲರ್​ ನೋಡಿದ್ರಾ ಅಂತ ನಿವೇದಿತಾ ಕೇಳಿದ್ರೆ ನೋಡಿದ್ದೇ ಬೇರೆ ಅನ್ನೋದಾ ಟ್ರೋಲಿಗರು!

Follow Us:
Download App:
  • android
  • ios