ಆಗ ಬೆಡ್ರೂಮ್, ಈಗ ಬಾತ್ರೂಮ್! ಫ್ರೆಂಡ್ ಜೊತೆ ನಿವೇದಿತಾ ಖುಲ್ಲಂ ಖುಲ್ಲಾ ವಿಡಿಯೋಗೆ ನೆಟ್ಟಿಗರು ಶಾಕ್...
ಬಿಗ್ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡ ಅವರು, ಸ್ನೇಹಿತೆ ಜೊತೆ ರೀಲ್ಸ್ ಮಾಡಿದ್ದು, ಅದಕ್ಕೆ ಏನೆಲ್ಲಾ ಕಮೆಂಟ್ಸ್ ಬರುತ್ತಿವೆ ನೋಡಿ!
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್ಲೆಸ್ ಮಟ್ಟಿಗೂ ಬಂದು ನಿಂತಿದ್ದಾರೆ. ಅದರಲ್ಲಿಯೂ ಕೆಲ ತಿಂಗಳುಗಳಿಂದ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್ ಶುರುವಿಟ್ಟುಕೊಂಡಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಮೇಲೆ ಸ್ನೇಹಿತೆಯ ಜೊತೆಗೆ ರೀಲ್ಸ್ ಹೆಚ್ಚಾಗಿದೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ!
ಇದೀಗ ನಿವೇದಿತಾ ಅದೇ ಸ್ನೇಹಿತೆಯ ಜೊತೆ ಇನ್ನೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಇವರಿಬ್ಬರು ಡಾನ್ಸ್ ಮಾಡಿರುವುದು ದೇವರಿಗೇ ಪ್ರೀತಿ ಎನ್ನುವ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಈ ವಿಡಿಯೋದಲ್ಲಿ ಈ ಇಬ್ಬರು ಸ್ನೇಹಿತೆಯರು ಬಾತ್ರೂಮ್ನಲ್ಲಿ ಮೈಚಳಿ ಬಿಟ್ಟು ಡಾನ್ಸ್ ಮಾಡಿದ್ದಾರೆ. ಇಲ್ಲಿಯವರೆಗೆ ಡೀಸೆಂಟ್ ಬಟ್ಟೆ ಧರಿಸುತ್ತಿದ್ದ ಅವರ ಸ್ನೇಹಿತೆ ಕೂಡ ನಿವೇದಿತಾ ಹಾದಿಯನ್ನೇ ಹಿಡಿದಿದ್ದಾರೆ! ಕೆಲ ದಿನಗಳ ಹಿಂದೆ ಇದೇ ಸ್ನೇಹಿತೆ ಜೊತೆ ಬೆಡ್ರೂಮ್ನಲ್ಲಿ ನಿವೇದಿತಾ ತುಂಟಾಟವಾಡಿದ್ದರು. ಸುಮ್ಮನೇ ಸ್ನೇಹಿತೆಯನ್ನು ಅಪ್ಪಿಕೊಂಡಿದ್ದರು. ಇಬ್ಬರೂ ಸ್ನೇಹಿತೆಯರು ತುಂಬಾ ಕ್ಲೋಸ್ ಫ್ರೆಂಡ್ಸ್ ರೀತಿಯಲ್ಲಿ ನಗುತ್ತಿದ್ದಾರೆ. ಆದರೆ ಇದಕ್ಕೂ ನೆಟ್ಟಿಗರು ಸುಮ್ಮನೇ ಬಿಟ್ಟಿಲ್ಲ. ಬೆಡ್ರೂಮ್ನಲ್ಲಿ ಈ ಪರಿಯ ಚೆಲ್ಲಾಟ ಮಾಡಿದ್ರೆ ಇದನ್ನು ಏನು ಅಂದುಕೊಳ್ಳಬೇಕು ಎಂದು ಪ್ರಶ್ನಿಸಿದ್ರು. ಅದರಲ್ಲಿಯೂ ನಿವೇದಿತಾ ಸ್ನೇಹಿತೆಯ ಬಟ್ಟೆಯ ಬಟನ್ ಬಿಚ್ಚುವಂತೆ ಮಾಡಿದ್ದು, ಇದಕ್ಕೆ ಸಕತ್ ನೆಗೆಟಿವ್ ಕಮೆಂಟ್ಸ್ ಬಂದಿತ್ತು. ಇನ್ನು ಕೆಲವರು ಇಬ್ಬರು ಸ್ನೇಹಿತೆಯರು ಸುಮ್ಮನೇ ಎಂಜಾಯ್ ಮಾಡಬಾರದಾ? ಅದಕ್ಕೂ ಕೆಟ್ಟ ಕಮೆಂಟ್ಸ್ ಯಾಕೆ ಎಂದು ಕಮೆಂಟ್ಸ್ ಹಾಕುತ್ತಿರುವವರ ವಿರುದ್ಧ ಕಿಡಿ ಕಾರಿದ್ದೂ ಇದೆ.
ಆದರೆ ಇದೀಗ ಇವರ ರೀಲ್ಸ್ ಒಂದು ಹಂತವನ್ನು ಮೀರಿ ಹೋಗಿದೆ. ಇಬ್ಬರೂ ಮಾಡಿರುವ ರೀಲ್ಸ್ ನೋಡಿ ಸಿಕ್ಕಾಪಟ್ಟೆ ಕೆಟ್ಟ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವಂಥ ಅಸಂಬದ್ಧ ಕಮೆಂಟ್ ಹಾಕಲಾಗುತ್ತಿದೆ. ನಿವೇದಿತಾ ಚಂದನ್ ಶೆಟ್ಟಿ ಅವರನ್ನು ಬಿಟ್ಟಿರುವುದಕ್ಕೆ ಇದೇ ಕಾರಣ ಎಂದು ಹಲವರು ಹೇಳುತ್ತಿದ್ದಾರೆ! ಚಂದನ್ ಶೆಟ್ಟಿ ಈಕೆಯನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುವುದು ಬಹುತೇಕರ ಅಭಿಪ್ರಾಯ. ಅದೇನೇ ಇದ್ದರೂ ಇಬ್ಬರೂ ಬೆಸ್ಟ್ಫ್ರೆಂಡ್ ಎನ್ನುವಂತಿದ್ದಾರೆ. ಇದರ ನಡುವೆಯೇ, ನಿವೇದಿತಾ ಚಿತ್ರಗಳಲ್ಲಿಯೂ ಬಿಜಿಯಾಗಿದ್ದಾರೆ.
ಸ್ನೇಹಿತೆ ಜೊತೆ ಬೆಡ್ರೂಮ್ನಲ್ಲಿ ನಿವೇದಿತಾ ಗೌಡ ಇದೇನಿದು? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!
ಅಂದಹಾಗೆ, ಈ ಸ್ನೇಹಿತೆಯ ಹೆಸರು ವಾಣಿ ಜಿ.ಎಸ್. ಈ ಹೊಸ ಗೆಳತಿ ಯಾರು ಎಂಬ ಬಗ್ಗೆ ಅಭಿಮಾನಿಗಳು ತಡಕಾಡುತ್ತಿದ್ದಾರೆ. ವಾಣಿ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್ಸ್ಟಾಗ್ರಾಮ್ನಲ್ಲಿ ಇದಾಗಲೇ ಹಲವಾರು ರೀಲ್ಸ್ ಮಾಡಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ, ವಿಚ್ಛೇದನದ ಬಳಿಕ, ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ.