ಸ್ನೇಹಿತೆ ಜೊತೆ ಬೆಡ್ರೂಮ್ನಲ್ಲಿ ನಿವೇದಿತಾ ಗೌಡ ಇದೇನಿದು? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!
ಸ್ನೇಹಿತೆ ಜೊತೆ ಬೆಡ್ರೂಮ್ನಲ್ಲಿ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಮಾಡಿದ್ದಾರೆ. ಆದರೆ ಇದರ ವಿಡಿಯೋ ನೋಡಿ ಫ್ಯಾನ್ಸ್ ಶಾಕ್ ಆಗಿದ್ದೇಕೆ?
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳುಗಳಿಂದ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್ ಶುರುವಿಟ್ಟುಕೊಂಡಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಮೇಲೆ ಸ್ನೇಹಿತೆಯ ಜೊತೆಗೆ ರೀಲ್ಸ್ ಹೆಚ್ಚಾಗಿದೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್ ಜಾಸ್ತಿಯಾಗುತ್ತಿವೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ... ಹೀಗೆ ಏನೇನೋ ಕಮೆಂಟ್ಸ್ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದ್ಯಾವುದಕ್ಕೂ ಇದುವರೆಗೆ ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ!
ಇದೀಗ ಅದೇ ಸ್ನೇಹಿತೆಯ ಜೊತೆ ಬೆಡ್ರೂಮ್ನಲ್ಲಿ ನಿವೇದಿತಾ ತುಂಟಾಟವಾಡಿದ್ದಾರೆ. ಸುಮ್ಮನೇ ಸ್ನೇಹಿತೆಯನ್ನು ಅಪ್ಪಿಕೊಂಡಿದ್ದಾರೆ. ಇಬ್ಬರೂ ಸ್ನೇಹಿತೆಯರು ತುಂಬಾ ಕ್ಲೋಸ್ ಫ್ರೆಂಡ್ಸ್ ರೀತಿಯಲ್ಲಿ ನಗುತ್ತಿದ್ದಾರೆ. ಆದರೆ ಇದಕ್ಕೂ ನೆಟ್ಟಿಗರು ಸುಮ್ಮನೇ ಬಿಟ್ಟಿಲ್ಲ. ಬೆಡ್ರೂಮ್ನಲ್ಲಿ ಈ ಪರಿಯ ಚೆಲ್ಲಾಟ ಮಾಡಿದ್ರೆ ಇದನ್ನು ಏನು ಅಂದುಕೊಳ್ಳಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಅದರಲ್ಲಿಯೂ ನಿವೇದಿತಾ ಸ್ನೇಹಿತೆಯ ಬಟ್ಟೆಯ ಬಟನ್ ಬಿಚ್ಚುವಂತೆ ಮಾಡಿದ್ದು, ಇದಕ್ಕೆ ಸಕತ್ ನೆಗೆಟಿವ್ ಕಮೆಂಟ್ಸ್ ಬರುತ್ತಿದೆ. ಇನ್ನು ಕೆಲವರು ಇಬ್ಬರು ಸ್ನೇಹಿತೆಯರು ಸುಮ್ಮನೇ ಎಂಜಾಯ್ ಮಾಡಬಾರದಾ? ಅದಕ್ಕೂ ಕೆಟ್ಟ ಕಮೆಂಟ್ಸ್ ಯಾಕೆ ಎಂದು ಕಮೆಂಟ್ಸ್ ಹಾಕುತ್ತಿರುವವರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಸ್ನೇಹಿತೆ ಜೊತೆ ನಿವೇದಿತಾ ರೀಲ್ಸ್ ಮಾಡಿ ಕಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದರು. ಯಾವುದಕ್ಕೂ ಹೆದರಾಕೆ ಈಗ ಹೀಗೇಕೆ ಮಾಡಿದ್ದಾರೆ ಎನ್ನುವುದು ಮಾತ್ರ ತುಂಬಾ ಕುತೂಹಲ ಎನಿಸಿತ್ತು.
ಬಿಂದಾಸ್ ನಿವೇದಿತಾಗೆ ಇದೇನಾಯ್ತು? ಗೆಳತಿ ಜತೆ ಲವ್ಸಾಂಗ್ ಮಾಡಿ ಕಮೆಂಟ್ ಸೆಕ್ಷನ್ನೇ ಆಫ್ ಮಾಡಿಬಿಟ್ರಲ್ಲಾ?
ಅಂದಹಾಗೆ, ಈ ಸ್ನೇಹಿತೆಯ ಹೆಸರು ವಾಣಿ ಜಿ.ಎಸ್. ಈ ಹೊಸ ಗೆಳತಿ ಯಾರು ಎಂಬ ಬಗ್ಗೆ ಅಭಿಮಾನಿಗಳು ತಡಕಾಡುತ್ತಿದ್ದಾರೆ. ವಾಣಿ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್ಸ್ಟಾಗ್ರಾಮ್ನಲ್ಲಿ ಇದಾಗಲೇ ಹಲವಾರು ರೀಲ್ಸ್ ಮಾಡಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ, ವಿಚ್ಛೇದನದ ಬಳಿಕ, ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ.
ಚಂದನ್ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್ಗಳೇ ಹರಿದಾಡುತ್ತಿವೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಕಳೆದ ಬಾರಿ ಕಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದ ಕಾರಣ, ಇದೀಗ ಅದರ ಬಗ್ಗೆನೇ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಚಂದನ್ ಶೆಟ್ಟಿ ಹುಟ್ಟುಹಬ್ಬಕ್ಕೆ ನಿವೇದಿತಾ ಹೀಗೆ ವಿಷ್? ವಿಡಿಯೋ ನೋಡಿ ತಲೆ ಬಿಸಿ ಮಾಡ್ಕೊಂಡ ಫ್ಯಾನ್ಸ್!