ಸೆಕ್ಸ್ ನಿರಾಕರಿಸಿದ ರೆಸೆಪ್ಶನಿಸ್ಟ್ ಹತ್ಯೆ, ಪುತ್ರನ ಕರ್ಮಕಾಂಡಕ್ಕೆ ಬಿಜೆಪಿ ನಾಯಕನ ತಲೆದಂಡ!
ಉತ್ತರಖಂಡ ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರನ ಹೊಟೆಲ್ ಹಾಗೂ ರೆಸಾರ್ಟ್ ರೆಸೆಪ್ಶನಿಸ್ಟ್ ಹತ್ಯೆ ಪ್ರಕರಣದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 19ರ ಹರೆಯದ ರೆಸೆಪ್ಶನಿಸ್ಟ್‌ಗೆ ಹೊಟೆಲ್‌ಗೆ ಬರುವ ಅತಿಥಿಗಳ ಜೊತೆಗೆ ಸೆಕ್ಸ್‌ಗೆ ಒತ್ತಾಯಿಸಿರುವ ಅಂಶ ಬೆಳಕಿಗೆ ಬಂದಿದೆ. ಇದನ್ನು ನಿರಾಕರಿಸಿ, ಕರ್ಮಕಾಂಡ ಬಯಲು ಮಾಡಲು ಹೊರಟ ರೆಸೆಪ್ಶನಿಸ್ಟ್ ಅಂಕಿತಾ ಹತ್ಯೆಯಾಗಿದ್ದಾಳೆ. ಈ ಕುರಿತು ಸ್ಫೋಟಕ ಮಾಹಿತಿ ಇಲ್ಲಿದೆ.
ಉತ್ತರಖಂಡ(ಸೆ.24); ಅಂಕಿತಾ ಭಂಡಾರಿ ಹತ್ಯೆ ಉತ್ತರಖಂಡದಲ್ಲಿ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಉತ್ತರಖಂಡ ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರ ಪುಲ್ಕಿತ್ ಆರ್ಯಗೆ ಸೇರಿದ್ದ ಹೋಟೆಲ್ ಹಾಗೂ ರೆಸಾರ್ಟ್‌ನಲ್ಲಿ 19ರ ಹರೆಯದ ರೆಸೆಪ್ಶನಿಸ್ಟ್ ಅಂಕಿತಾ ಭಂಡಾರಿ ಹತ್ಯೆಯಾಗಿದೆ. ಈ ಹತ್ಯೆ ಹಿಂದಿನ ಪ್ರಮುಖ ಆರೋಪಿ ಪುಲ್ಕಿತ್ ಆರ್ಯ ಈಗಾಗಲೇ ಜೈಲು ಸೇರಿದ್ದಾನೆ. ಆದರೆ ಈ ಪ್ರಕರಣದ ಒಂದೊಂದೇ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಅಂಕಿತಾ ಭಂಡಾರಿ ಹತ್ಯೆ ಹಿಂದಿನ ಕಾರಣಗಳು ಬಹಿರಂಗವಾಗಿದೆ. ಪುಲ್ಕಿತ್ ಆರ್ಯ ತನ್ನ ರೆಸಾರ್ಟ್‌ಗೆ ಆಗಮಿಸುವ ದೊಡ್ಡ ಕುಳಗಳ ಜೊತೆ ಸೆಕ್ಸ್‌ಗೆ ಸಹಕರಿಸುವಂತೆ ಅಂಕಿತಾ ಭಂಡಾರಿಗೆ ಸೂಚಿಸಿದ್ದಾನೆ. ಇದಕ್ಕೆ ವಿರೋಧಿಸಿದ ಅಂಕಿತಾ ಎಲ್ಲಾ ನಾಟಕವನ್ನು ಬಯಲು ಮಾಡುವುದಾಗಿ ಎಚ್ಚರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪುಲ್ಕಿತ್ ಇಬ್ಬರು ಸಹದ್ಯೋಗಿಗಳ ಜೊತೆ ಅಂಕಿತಾ ಭಂಡಾರಿ ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದಕ್ಕೆ ಪೂರಕ ದಾಖಲೆಗಳು ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರಿಷಿಕೇಶಿಯ ಪೌರಿ ಜಿಲ್ಲೆಯಲ್ಲಿರುವ ಪುಲ್ಕಿತ್ ಆರ್ಯಗೆ(Pulkit Arya) ಸೇರಿದ್ದ ಹೊಟೆಲ್ ಹಾಗೂ ರೆಸಾರ್ಟ್‌ಗೆ(Hotel) ಅಂಕಿತಾ ಭಂಡಾರಿ(Ankita Bhandari) ಸೆಪ್ಟೆಂಬರ್ ತಿಂಗಳಲ್ಲಿ ರೆಸಪ್ಶೆನಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆದರೆ ಪುಲ್ಕಿತ್ ತನ್ನ ಪ್ರಭಾವ, ಅಧಿಕಾರ ಬಳಸಿಕೊಂಡು, ಅಂಕಿತಾ ಭಂಡಾರಿಯನ್ನು ರೆಸಾರ್ಟ್‌ಗೆ ಬರುವ ಅತಿಥಿಗಳ(Guest) ಜೊತೆ ಸೆಕ್ಸ್‌ಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ತಾನೂ ಈ ಕೆಲಸ ಮಾಡುವುದಿಲ್ಲ. ಇಷ್ಟೇ ಅಲ್ಲ ತನಗೆ ಈ ಕೆಲಸವೂ ಬೇಡ ಎಂದು ಖಡಕ್ ಆಗಿ ಪುಲ್ಕಿತ್ ಆರ್ಯಗೆ ಹೇಳಿದ್ದಳು.
Receptionist Murder Case ಬಂಧಿತ ಬಿಜೆಪಿ ನಾಯಕನ ಪುತ್ರನ ರೆಸಾರ್ಟ್ ಧ್ವಂಸಕ್ಕೆ ಸಿಎಂ ಆದೇಶ!
ಇದರಿಂದ ಆಕ್ರೋಶಗೊಂಡ ಪುಲ್ಕಿತ್ ಆರ್ಯ ಆಕೆಯನ್ನು ಪೌರಿಯಿಂದ ರಿಷಿಕೇಶಿಗೆ ಕರೆಸಿಕೊಂಡಿದ್ದಾನೆ. ರಿಷಿಕೇಶಿಯಲ್ಲಿರುವ ರೆಸಾರ್ಟ್‌ಗೆ ಕರೆಸಿಕೊಂಡು ಈ ಕುರಿತು ವಾಗ್ವದ ನಡೆದಿದೆ. ಈ ವೇಳೆ ಪುಲ್ಕಿತ್ ಆರ್ಯ ಇಬ್ಬರು ಗೆಳೆಯರ ಜೊತೆ ಆಕೆಯನ್ನ ಪಕ್ಕದಲ್ಲೇ ಹರಿಯುತ್ತಿದ್ದ ನೀರಿನ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆ.
ಸೆಪ್ಟೆಂಬರ್ 18 ರಂದು ಈ ಘಟನೆ ನಡೆದಿದೆ. ಆಂಕಿತಾ ಭಂಡಾರಿ ಕಾಣೆಯಾಗಿದ್ದಾರೆ ಎಂದು ಆಕೆಯ ತಂದೆ ವೀರೇಂದ್ರ ಸಿಂಗ್ ಭಂಡಾರಿ ದೂರು ದಾಖಲಿಸಿದ್ದಾಳೆ. ಇಷ್ಟೇ ಅಲ್ಲ ಪುಲ್ಕಿತ್ ಆರ್ಯ ಮಗಳಿಗೆ ಕಿರುಕುಳ ನೀಡುತ್ತಿರುವು ವಿಚಾರವನ್ನು ಪೊಲೀಸರಿಗೆ ಹೇಳಿದ್ದಾರೆ. ಇತ್ತ ಪೊಲೀಸರು ತನಿಖೆಯಲ್ಲಿ ಪುಲ್ಕಿತ್ ಆರ್ಯನ ಕೈವಾಡ ಬಯಲಾಗಿದೆ. ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಇಂದು(ಸೆ.24) ಅಂಕಿತಾ ಮೃತದೇಹ ಪತ್ತೆ ಹಚ್ಚಿ ಹೊರತೆಗಿದ್ದಾರೆ.
ಧಾರವಾಡ: ಮಹಿಳೆಗೆ ಲೈಂಗಿಕ ಕಿರುಕುಳ, ಕಾಂಗ್ರೆಸ್ ಮುಖಂಡನ ಬಂಧನ
ಅಂಕಿತಾ ಭಂಡಾರಿ ಹತ್ಯೆ ಪ್ರಕರಣಲ್ಲಿ ಪುಲ್ಕಿತ್ ಆರ್ಯ ಬಂಧನಕ್ಕೊಳಗಾಗಿದ್ದರೆ, ಪುಲ್ಕಿತ್ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಪುಲ್ಕಿತ್ ತಂದೆ, ಬಿಜೆಪಿ ನಾಯಕ ವಿನೋದ್ ಆರ್ಯರನ್ನು ಬಿಜೆಪಿ ಉಚ್ಚಾಟಿಸಿದೆ. ಪುಲ್ಕಿತ್ ಆರ್ಯಗೆ ಸೇರಿದ್ದ ಹೊಟೆಲ್ ಹಾಗೂ ರೆಸಾರ್ಟ್ ಅಕ್ರಮ ಎಂದು ಧ್ವಂಸಗೊಳಿಸಲು ಸಿಎಂ ಪುಷ್ಕರ್ ಸಿಂಗ್ ಧಮಿ ಆದೇಶ ನೀಡಿದ್ದಾರೆ. ಇತ್ತ ತಮ್ಮದೇ ಪಕ್ಷದವರಾಗಿದ್ದರೂ ಕಠಿಣ ಶಿಕ್ಷೆ ಎದುರಿಸಲೇಬೇಕು. ಯಾರನ್ನೂ ಬಿಡುವುದಿಲ್ಲ. ಉತ್ತರಖಂಡದ ಹೆಣ್ಣುಮಕ್ಕಳ ಸುರಕ್ಷತೆ ಸರ್ಕಾರದ ಜವಾಬ್ದಾರಿಯಾಗಿದೆ. ಇದೊಂದು ಕಹಿ ಘಟನೆ ನಡೆದಿದೆ. ಇದರ ಹಿಂದಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತಂದೆಯನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ತಡೆಯಲು ಕಾನೂನಿನಲ್ಲಿ ಕೆಲ ತಿದ್ದುಪಡಿ ಮಾಡಲಾಗುವುದು ಎಂದು ಪುಷ್ಕರ್ ಸಿಂಗ್ ಧಮಿ ಹೇಳಿದ್ದಾರೆ