'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ  ಆಶಿಕಾ ಚಂದ್ರಪ್ಪ ಬಿಗ್ ಬಾಸ್‌ ಸೀಸನ್ 5ರಲ್ಲಿ ಸ್ಪರ್ಧಿಸಿ ಕಿರುತೆರೆ ವೀಕ್ಷಕರ ಮನೆ ಮಗಳಾದರು. 

ಬಿಗ್‌ಬಾಸ್‌ ಸ್ಪರ್ಧಿ ಆಶಿತಾ ಈಗ ಬ್ಯುಸಿನೆಸ್‌ ಐಕಾನ್ ; ಆನ್‌ಲೈನಲ್ಲಿ ಸಿಗುತ್ತೆ ಟ್ರೆಂಡಿ ಬಟ್ಟೆಗಳು

ಮಾರ್ಚ್‌ 31ರಂದು ರೋಹನ್ ರಾಘವೇಂದ್ರ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಬೆಂಗಳೂರಿನ ಅಂಗನಾ ಕೋರ್ಟ್‌ಯಾರ್ಡ್‌ನಲ್ಲಿ ಬೆಳಗ್ಗೆ 9.30ಕ್ಕೆ  ಧಾರೆ ಕಾರ್ಯಕ್ರಮವಿತ್ತು.  ರೋಹನ್ ವೃತ್ತಿ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಆದರೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಕೆಲವೇ ಕೆಲವು ಆಪ್ತರನ್ನು ಮಾತ್ರ ಶುಭ ಕಾರ್ಯಕ್ಕೆ ಆಹ್ವಾನಿಸಲಾಗಿತ್ತು. 

ಕೆಲವು ತಿಂಗಳಿಂದ ಆಫ್‌ಸ್ಕ್ರೀನ್‌ ಇರುವ ಆಶಿತಾ ಮದುವೆ ಬಗ್ಗೆ ಯಾವ ಸುಳಿವನ್ನೂ ಸಹ ನೀಡಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ನಿರ್ದೇಶಕ ಪನ್ನಗ ಭರಣ ಹಾಗೂ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅಪ್ಲೋಡ್ ಮಾಡಿದ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. 

ಪ್ರಿ-ವೆಡ್ಡಿಂಗ್ ಫೋಟೋ ಶೂಟ್-ಗೆ ಬೇಂದ್ರೆ ಅವತಾರ 

ಅಭಿನಯ ಹೊರತು ಪಡಿಸಿ, ಆಶಿತಾ ಬ್ಯುಸಿನೆಸ್ ವುಮೆನ್ ಸಹ ಹೌದು. ತಮ್ಮದೇ ಬಟ್ಟೆ ಬ್ರ್ಯಾಂಡ್‌ವೊಂದರ ಒಡತಿ.  ಇನ್‌ಸ್ಟಾಗ್ರಾಂನಲ್ಲಿ ಈ ಬಟ್ಟೆಗಳ ಪೇಜ್‌ ಕೂಡ ತುಂಬಾನೇ ಫೇಮಸ್. ತಮ್ಮ ಪತಿಯನ್ನು ಆಶಿತಾ ಅವರೇ ಪರಿಚಯಿಸಿ ಕೊಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. Anyways, ಪಿ ಮ್ಯಾರಿಡ್‌ ಲೈಕ್‌ ಬ್ಯೂಟಿಫುಲ್ ಲೇಡಿ ಆಶಿತಾ....