ಪ್ರಿ-ವೆಡ್ಡಿಂಗ್ ಫೋಟೋ ಶೂಟ್-ಗೆ ಬೇಂದ್ರೆ ಅವತಾರ
ಕನ್ನಡದ ವರಕವಿ ದ.ರಾ. ಬೇಂದ್ರೆಯವರ ಬದುಕನ್ನು ವಸ್ತುವಾಗಿರಿಸಿಕೊಂಡು ಫೋಟೋಶೂಟ್ | ಚೇತನಾ ದೇಸಾಯಿ ಮತ್ತು ನಿಖಿಲ್ ಮಗ್ಗಾವಿ ಜೋಡಿಯ ಫೋಟೋಸ್ ಮಾಡಿದೆ ಮೋಡಿ

ಜ್ಞಾನಪೀಠ ಪ್ರಶಸ್ತಿ ವಿಜೇತ, ಕನ್ನಡದ ವರಕವಿ ದ.ರಾ. ಬೇಂದ್ರೆಯವರ ಬದುಕನ್ನು ವಸ್ತುವಾಗಿರಿಸಿಕೊಂಡು ಮಾಡಲಾದ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿ ಯುವಜೋಡಿ ದ.ರಾ. ಬೇಂದ್ರೆಯವರ ಕವಿತೆಗಳಿಂದ ಆಯ್ದ ಪ್ರಣಯದ ಸಾರವನ್ನು ತಂದು ಛಾಯಾಚಿತ್ರಗಳ ಮೂಲಕ ಉತ್ತರ ಕರ್ನಾಟಕದ ಜೀವನ ಶೈಲಿಯನ್ನು ತೋರಿಸಿದ್ದಾರೆ.

ಏಪ್ರಿಲ್ 23 ರಂದು ವಿವಾಹವಾಗುತ್ತಿರುವ ಧಾರವಾಡದ ಚೇತನಾ ದೇಸಾಯಿ ಮತ್ತು ನಿಖಿಲ್ ಮಗ್ಗಾವಿ ಜೋಡಿಗೆ ಬೇಂದ್ರೆ ಹಾಗೂ ಅವರ ಕವಿತೆಗಳನ್ನಿಟ್ಟುಕೊಂಡು ಫೋಟೋಶೂಟ್ ಮಾಡಲು ಅನೇಕ ಕಾರಣಗಳಿದೆ. ಚೇತನಾ ಧಾರವಾಡದ ಸಾಧಂಕೇರಿಯಲ್ಲಿರುವ ಬೇಂದ್ರೆಯವರ ಮನೆಯ ನೆರೆಯ ನಿವಾಸಿಯಾಗಿದ್ದಾರೆ. ಅವರ ಕುಟುಂಬವು ತಲೆಮಾರುಗಳಿಂದ ಬೇಂದ್ರೆಯವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದೆ.

ಫೋಟೋ ಥೀಮ್ ಬೇಂದ್ರೆಯವರ ಕವಿತೆಗಳ ದಿನ ದಿನದ ಬಳಕೆಯನ್ನು ಪ್ರತಿನಿಧಿಸುತ್ತದೆ. ಅತ್ಯಂತ ವಿಶಿಷ್ಟ ಸಂಗತಿ ಎಂದರೆ ಬೇಂದ್ರೆಯವರು ಬಳಸುತ್ತಿದ್ದ ಸಾಂಪ್ರದಾಯಿಕ ಟೋಪಿ, ಛತ್ರಿ ಮತ್ತು ಗ್ರಾಮೋಫೋನ್‌ಗಳನ್ನು ಚಿತ್ರೀಕರಣಕ್ಕಾಗಿ ಕುಟುಂಬದಿಂದ ಎರವಲು ಪಡೆಯಲಾಯಿತು. ಯುವ ಆರ್ಟ್ ಸ್ಟುಡಿಯೋದ ಸಂಸ್ಥಾಪಕ ಮತ್ತು ಧಾರವಾಡದ ಛಾಯಾಗ್ರಾಹಕ ಹರ್ಷದ್ ಉದಯ್ ಕಾಮತ್ ಅವರ ಅನೇಕ ಥೀಮ್ ಆಧಾರಿತ ಫೊಟೋಶೂಟ್ ಗಳು ವೈರಲ್ ಆದ ನಂತರ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವವರಿಗೆ ನೆಚ್ಚಿನ ಛಾಯಾಗ್ರಾಹಕ ಎನಿಸಿದ್ದಾರೆ.

"ಉತ್ತರ ಕರ್ನಾಟಕದ ಜೀವನವನ್ನು ಪ್ರದರ್ಶಿಸುವ ಥೀಮ್ ಮಾಡಲು ಜೋಡಿಯು ನಿರ್ಧರಿಸಿದ್ದರು. ಚೇತನಾ ಅವರು ಬೇಂದ್ರೆ ಅಜ್ಜನ ನೆರೆಮನೆಯವರಾಗಿದ್ದರಿಂದ ನಾವು ಬೇಂದ್ರೆ ಬರೆದ ಕವಿತೆಗಳ ಆಧಾರದ ಮೇಲೆ ಥೀಮ್ ಆಯ್ಕೆ ಮಾಡಲು ನಿರ್ಧರಿಸಿದೆವು."ಕಾಮತ್ ಹೇಳಿದರು.

ಈ ತಂಡವು ಬೇಂದ್ರೆ ಅವರ ಪ್ರಸಿದ್ಧ ಕವಿತೆಗಳಾದ "ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು" ಸೇರಿದಂತೆ ಅನೇಕ ಕವಿತೆಗಳನ್ನು ಆಯ್ಕೆ ಮಾಡಿಕೊಂಡಿದೆ. "ನಾನು ಈ ಹಿಂದೆ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಗಾಗಿ ಹಳ್ಳಿ ಆಧಾರಿತ ಥೀಮ್ ಅನ್ನು ಮಾಡಿದ್ದೆ. ಆದರೆಸಾಹಿತ್ಯ ಜಗತ್ತಿನ ವ್ಯಕ್ತಿಯನ್ನು ವಸ್ತುವಾಗಿಸಿಕೊಳ್ಳಲು ಯೋಜಿಸಿದ್ದು ಇದು ನನಗೂ ಹೊಸ ಸಂಗತಿಯಾಗಿದೆ. ಅಲ್ಲದೆ ಬೇಂದ್ರೆಯವರು ಸ್ವತಃ ಬಳಸಿದ್ದ ವಸ್ತುಗಳನ್ನು ನಮ್ಮ ಈ ಇವೆಂಟ್ ಗಾಗಿ ಬಳಸಲು ಅನುಮತಿಸಿದ್ದು ದೊಡ್ಡ ವಿಚಾರವಾಗಿದೆ."ಅವರು ಹೇಳಿದರು.

ಛಾಯಾಚಿತ್ರಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರ ಜೋಡಿ ಮತ್ತು ಅವರ ಕುಟುಂಬ ಫೋಟೋಗ್ರಫಿಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

"ನಾವು ಬೆಂದ್ರೆ ಅವರ ಮನೆಯ ನೆರೆಮನೆಯವರಾಗಿದ್ದು ಸಾಧಕನೇರಿಯ ನಮ್ಮ ಕುಟುಂಬಗಳು ತಲೆಮಾರುಗಳಿಂದ ಆತ್ಮೀಯ ಒಡನಾಟ ಹೊಂದಿವೆ. ನಾನು ಬೇಂದ್ರೆ ಅಜ್ಜನ ಸೊಸೆಯನ್ನು ಕಾಕು ಎಂದು ಸಂಬೋಧಿಸುತ್ತೇನೆ. ಬಾಲ್ಯದಲ್ಲಿ ನಾನು ಬೇಂದ್ರೆ ಅಜ್ಜನ ಬಗ್ಗೆ ಹೇಳುವ ಅಥವಾ ಚರ್ಚಿಸುವ ಕಥೆಗಳಿಂದ ಸ್ಫೂರ್ತಿ ಪಡೆದಿದ್ದೇನೆ. ಆದ್ದರಿಂದ ಬೇಂದ್ರೆ ಅಜ್ಜನಿಂದ ಸ್ಫೂರ್ತಿ ಪಡೆದು ಫೋಟೋಶೂಟ್ ಮಾಡಿಸಿಕೊಂಡಿದ್ದು ಹೆಮ್ಮೆಯ ಭಾವನೆ ತಂದಿದೆ." ಚೇತನಾ ದೇಸಾಯಿ ಹೇಳಿದರು..