ಬಾತ್‌ರೂಮ್‌ನಲ್ಲಿ ಅಪ್ಪ ಬಿದ್ದು ಧ್ವನಿ ಕಳೆದುಕೊಂಡರು, ಆಪರೇಷನ್ ಮಾಡಿಸಲು ಹಣ ಇಲ್ಲ: ಭವ್ಯಾ ಗೌಡ ಕಣ್ಣೀರು
ಬಿಗ್ ಬಾಸ್ ರಿಯಾಲಿಟಿ ಶೋಯಿಂದ ಗಳಿಸುವ ಹಣದಿಂದ ಫ್ಯಾಮಿಲಿಗೆ ಸಹಾಯವಾಗುತ್ತದೆ. ಭವ್ಯಾ ಗೌಡ ಹೇಳಿಕೊಂಡ ನೋವಿನ ಸಂಗತಿಗೆ ಕಣ್ಣೀರಿಟ್ಟ ವೀಕ್ಷಕರು...

ಬಿಗ್ ಬಾಸ್ ಸೀಸನ್ 11ರ ಫಿನಾಲೆ ವಾರಕ್ಕೆ ಕಿರುತೆರೆ ನಟಿ ಭವ್ಯಾ ಗೌಡ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಟ್ರೋಫಿಯನ್ನು ನೇರವಾಗಿ ನೋಡಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು ಎಂದು ಬಿಬಿ ಹೇಳಿದಾಗ ಭವ್ಯಾ ಗೌಡ ಹಂಚಿಕೊಂಡ ವಿಚಾರ ಇದು.
'ಬಿಗ್ ಬಾಸ್ ಟ್ರೋಫಿ ನೋಡಿದ ತಕ್ಷಣ ಏನು ಹೇಳಬೇಕು ಏನು ಎಕ್ಸ್‌ಪ್ರೆಸ್ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಖುಷಿಯಾಗುತ್ತಿದೆ ಏಕೆಂದರೆ ಜೀವನದಲ್ಲಿ ಸಿಕ್ಕಾಪಟ್ಟೆ ಕನಸು ಆಸೆಗಳನ್ನು ಹೊತ್ತುಕೊಂಡಿದ್ದೆ. ಏಲ್ಲೋ ಮಧ್ಯದಲ್ಲಿ ಕೈ ತಪ್ಪಿ ಹೋಗಿತ್ತು. ಮತ್ತೆ ಈ ಒಂದು ಚಾನೆಲ್ ಮುಖಾಂತರ ನನ್ನ ಜೀವನದ ಜರ್ನಿ ಶುರುವಾಗಿತ್ತು. ಇದರಲ್ಲಿ ಒಂದೇ ಇದ್ದಿದ್ದು...ಇದರಿಂದ ಬರುವ ಪೇಮೆಂಟ್‌ನಲ್ಲಿ ನನಗೆ ಏನು ಉಪಯೋಗವಾಗುತ್ತದೆ ಎಂದು. ಪೇಮೆಂಟ್ ವಿಚಾರ ಒಂದೇ ಯೋಚನೆ ಮಾಡಿದ್ದೀನಿ. ಆರ್ಥಿಕವಾಗಿ ನನಗೆ ಎಷ್ಟು ಸಹಾಯವಾಗುತ್ತದೆ ಅನ್ನೋ ಯೋಚನೆಯಲ್ಲಿ ಬಿಗ್ ಬಾಸ್ ಮನೆಗೆ ಬಂದಿದ್ದು. ಜೀವನ ಸಿಕ್ಕಾಪಟ್ಟೆ ದೊಡ್ಡ ಪಾಠ ಕಲಿಸಿದೆ. ಇದುವರೆಗೂ ನನ್ನ ವಯಸ್ಸಿಗೆ ಮೀರಿ ಯೋಚನೆ ಮಾಡಿದ್ದೀನಿ ನನ್ನ ವಯಸ್ಸಿಗೆ ಮೀರಿ ದುಡಿಮೆ ಮಾಡಿದ್ದೀನಿ, ವಯಸ್ಸಿಗೆ ಮೀರಿ frustration ತಗೊಂಡಿದ್ದೀನಿ ಟೆನ್ಶನ್ ತೆಗೆದುಕೊಂಡಿದ್ದೀನಿ. ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ನನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸಿತ್ತು. ನನಗಿಂತ ದೊಡ್ಡವರ ಜೊತೆ ಮಾತನಾಡಿಕೊಂಡು ಆಟದಲ್ಲಿ ಕಾಂಪಿಟೇಷನ್ ಕೊಟ್ಟು ಇಷ್ಟು ದೂರ ಬಂದಿದ್ದೀನಿ ಅಂದ್ರೆ ಸುಲಭದ ಕೆಲಸ ಅಲ್ಲ ಅನಿಸಿತ್ತು' ಎಂದು ಭವ್ಯಾ ಗೌಡ ಭಾವುಕರಾಗಿದ್ದಾರೆ.
ಭವ್ಯಾ ಗೌಡ ಅಥವಾ ಮೋಕ್ಷಿತಾನೇ ವಿನ್ನರ್; ಬಿಗ್ ಬಾಸ್ ಟ್ರೋಫಿ ಕೊಟ್ಟ ಸುಳಿವು?
'ಬಿಗ್ ಬಾಸ್ ಟ್ರೋಫಿ ಜೊತೆಗೆ ಇದರಿಂದ ಬರುವ ದುಡ್ಡಿನಿಂದ ಉಪಯೋಗ ಇದೆ. ನಾನಂತು ಓದಲು ಆಗಿಲ್ಲ ನನ್ನ ತಂಗಿನ ಚೆನ್ನಾಗಿ ಓದಿಸಬೇಕು ಅಂತ. ನನ್ನ ಅಕ್ಕನಿಗೆ ಮದುವೆ ಮಾಡಬೇಕು ಅನ್ನೋದು ದೊಡ್ಡ ಆಸೆ. ಮದುವೆ ಆಗುವ ಕಾನ್ಸೆಪ್ಟ್‌ನ ತೆಗೆದು ಸೈಡ್‌ಗೆ ಇಟ್ಟು ನಾನು ಮದುವೆ ಆಗಲ್ಲ ನೀವು ಮದುವೆ ಮಾಡಬೇಕು ಅಂದ್ರೆ ಸಾಲ ಮಾಡುತ್ತೀರಿ ಅದು ನನಗೆ ಇಷ್ಟವಿಲ್ಲ. ಈಗಾಗಲೆ ಸಿಕ್ಕಾಪಟ್ಟೆ ಕಷ್ಟಗಳನ್ನು ನೋಡಿಕೊಂಡು ಬಂದಿದ್ದೀವಿ ಮತ್ತೆ ನನ್ನಿಂದ ಇನ್ನೂ ಕಷ್ಟ ಆಗೋದು ಬೇಡ ಅಂತ ಹೇಳಿದ್ದಾಳೆ. ಮತ್ತೊಂದು ವಿಚಾರ ಏನೆಂದರೆ ನಾವು ಯಾರೂ ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ತಂದೆ ಬಾತ್‌ರೂಮ್‌ನಲ್ಲಿ ಬಿದ್ದು ಕುತ್ತಿಗೆ ಬಳಿ ಕಟ್ ಆಗುತ್ತದೆ ಅದು ವೋಕಲ್ ಬಾಕ್ಸ್ (ವಾಯಿಸ್ ಬಾಕ್ಸ್)ಗೆ ಸಮಸ್ಯೆ ಆಗುತ್ತದೆ. ಆ ಸಮಯದಲ್ಲಿ ನಾನು ಹೈದರಾಬಾದ್ ಶೂಟಿಂಗ್‌ನಲ್ಲಿ ಇದ್ದೆ ನಾನು ಬೆಂಗಳೂರಿಗೆ ವಾಪಸ್ ಬರುವವರೆಗೂ ಯಾರೂ ಹೇಳಿರಲಿಲ್ಲ. ಆಮೇಲೆ ಹೇಳಿದ್ದರೂ ಆಸ್ಪತ್ರೆಗೆ ಹೋಗಲು ಕ್ಯಾಬ್‌ಗೆ ದುಡ್ಡು ಕೊಡಲು ಕೂಡ ನನ್ನ ಬಳಿ ಹಣ ಇರಲಿಲ್ಲ. ನಾನು ದುಡಿಯುತ್ತಿದ್ದೆ ಆದರೆ ಪೇಮೆಂಟ್ ಬಂದಿರಲಿಲ್ಲ' ಎಂದು ಭವ್ಯಾ ಗೌಡ ಹೇಳಿದ್ದಾರೆ.
10 ಜನರ ಎನರ್ಜಿ ನರೇಶ್‌ಗೆ ಇದೆ, ನಾವೆಲ್ಲರೂ ಸುಸ್ತಾಗಿ ಬಿಡುತ್ತೀವಿ: ಪವಿತ್ರಾ ಲೋಕೇಶ್ ಹೇಳಿಕೆ ವೈರಲ್
'ಆ ಸಮಯದಲ್ಲಿ ನಾನು ಯಾರನ್ನೂ ಬೇಡಿದರೂ ನಂಬಿ ಹಣ ಕೊಡುತ್ತಿರಲಿಲ್ಲ. ಎಷ್ಟೋ ಸಲ ನೋವಿದ್ದರೂ ಅಪ್ಪ ಆಟೋದಲ್ಲಿ ಬಂದಿದ್ದಾರೆ. ತಂದೆ ಧ್ವನಿಗೆ ಟ್ರೈನಿಂಗ್ ಕೊಡಬೇಕು ಎಂದಿದ್ದರು. ಅಪ್ಪ ತುಂಬಾ ಚೆನ್ನಾಗಿ ಹಾಡು ಹೇಳುತ್ತಾರೆ...ದಿನ ಬಳಗ್ಗೆ ದೇವರ ಹಾಡು ಹಾಕೋಂಡು ಹಾಡುತ್ತಿದ್ದರು. ಎಲ್ಲೋ ಅಪ್ಪನ ವಾಯ್ಸ್ ಸರಿ ಮಾಡಿಸಲು ಆಗಲಿಲ್ಲ ಅನ್ನೋ ಬೇಸರ ಇದೆ. ವಾಯ್ಸ್ ಆ ರೀತಿ ಆಗಿರುವುದರಿಂದ ಎಲ್ಲಿಗೆ ಕರೆದರೂ ಅಪ್ಪ ಬರಲು ಹಿಂಚರಿಯುತ್ತಾರೆ. ನಿನ್ನನ್ನು ಜನರು ನೋಡುವ ರೀತಿ ಬೇರೆ ಆಗುತ್ತದೆ ಎನ್ನುತ್ತಾರೆ. ಅವತ್ತು ನನ್ನ ಬಳಿ ಹಣ ಇದ್ದಿದ್ರೆ ಅಪ್ಪ ಚೆನ್ನಾಗಿ ಮಾತನಾಡಬಹುದು ಹಾಡ ಬಹುದು ಅನಿಸುತ್ತದೆ. ಈ ವೇದಿಕೆ ಮೂಲಕ ನನಗೆ ಏನು ಬರುತ್ತೆ ಅದರಿಂದ ನನ್ನ ಫ್ಯಾಮಿಲಿ ಕನಸು ಈಡೇರಿಸಲು ಸಹಾಯ ಆಗುತ್ತದೆ' ಎಂದಿದ್ದಾರೆ ಭವ್ಯಾ.
ಏನೇ ಇದ್ರೂ ಅವಳಿ-ಜವಳಿಗೆ ಒಂದೇ ಅನಿಸುತ್ತಾ?; ಅದ್ವಿತಿ ಶೆಟ್ಟಿ- ಅಶ್ವಿತಿ ಶೆಟ್ಟಿ ಬಿಚ್ಚಿಟ್ಟ ಗುಟ್ಟು