ಏನೇ ಇದ್ರೂ ಅವಳಿ-ಜವಳಿಗೆ ಒಂದೇ ಅನಿಸುತ್ತಾ?; ಅದ್ವಿತಿ ಶೆಟ್ಟಿ- ಅಶ್ವಿತಿ ಶೆಟ್ಟಿ ಬಿಚ್ಚಿಟ್ಟ ಗುಟ್ಟು
ಅವಳಿ-ಜವಳಿ ಸಹೋದರಿಯರಿಗೆ ಯಾವಾಗಲೂ ಒಂದೇ ಅನಿಸುತ್ತಾ? ಸ್ಟಾರ್ ನಟಿ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ಹೇಳಿರುವ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ....

'ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ.

ಟ್ವಿನ್ ಸಿಸ್ಟರ್ ಸದಾ ಒಟ್ಟಿಗೆ ಇರುತ್ತಾರೆ ಒಂದೇ ರೀತಿ ಡ್ರೆಸ್ ಧರಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಒಂದೇ ರೀತಿ ಫೀಲ್ ಆಗುತ್ತಾ? ಆಯ್ಕೆಗಳು ಒಂದೇ ತರುತ್ತಾ ಎಂದು ಹಂಚಿಕೊಂಡಿದ್ದಾರೆ.

ತೆರೆಯ ಮೇಲೆ ತೋರಿಸಿಷ್ಟು ನಮಗೆ ಒಂದೇ ರೀತಿ ಅನಿಸುವುದಿಲ್ಲ ಆದರೆ ಸಣ್ಣ ಪುಟ್ಟ ವಿಚಾರಗಳಲ್ಲಿ ಮ್ಯಾಚ್ ಅಗಿದೆ. ನಮ್ಮಿಬ್ಬರ ಮೂಡ್ ಸ್ವಿಂಗ್, ತಿನ್ನಲು ಆಸೆ ಪಡುವ ಆಹಾರಗಳು ಒಂದೇ ಇರುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಸ್ಕೂಲ್ ದಿನಗಳಿಂದ ನಮ್ಮ ಟ್ವಿನ್ಸ್ ಜರ್ನಿ ಅದ್ಭುತವಾಗಿದೆ. ನಮಗೆ ತುಂಬಾ ಅಟೆನ್ಶನ್ ಸಿಕ್ಕಿದೆ. ಆಗ ಅಷ್ಟಾಗಿ ಅಟೆನ್ಶನ್ ಇಷ್ಟವಾಗುತ್ತಿರಲಿಲ್ಲ. ಒಂದು ಪಾಯಿಂಟ್ ಆದ ಮೇಲೆ ನಾವು ತುಂಬಾ ವಿಭಿನ್ನ ಎಂದು ಅರ್ಥವಾಗಲು ಶುರುವಾಗಿತ್ತು'

'ಅದೆಷ್ಟೂ ವಿಚಾರಗಳಲ್ಲಿ ನಮಗೆ ಬೆಸ್ಟ್ ಫ್ರೆಂಡ್ ಬೇಕು ಅನಿಸಿರಲಿಲ್ಲ. ಹುಟ್ಟಿದ ಕ್ಷಣದಿಂದ ನಮ್ಮೊಟ್ಟಿಗೆ ಒಬ್ಬರು ಸದಾ ಇರುತ್ತಾರೆ ಅವರೇ ನಮ್ಮ ಬೆಸ್ಟ್ ಫ್ರೆಂಡ್ ಆಗಿರುತ್ತಾರೆ'

'ನಮ್ಮ ಜರ್ನಿ ಕೂಡ ಸಂಪೂರ್ಣವಾಗಿ ಒಂದೇ ರೀತಿಯಲ್ಲಿದೆ. ಸ್ಕೂಲ್, ಕ್ರೀಡೆ, ಕೆಲಸ, ಮಾಡಲಿಂಗ್. ಅಷ್ಟೇ ಯಾಕೆ ಮೊದಲ ಸಿನಿಮಾ ಕೂಡ ಒಟ್ಟಿಗೆ ನಟಿಸಿದ್ದೀವಿ'

'ನಮ್ಮಿಬ್ಬರ ನಡುವೆ ಎಂದೂ ಕಾಂಪಿಟೇಷನ್ ಹುಟ್ಟಿಕೊಳ್ಳವ ಪರಿಸ್ಥಿತಿ ಎದುರಾಗಲಿಲ್ಲ ಏಕೆಂದರೆ ನಮ್ಮ ಪೋಷಕರು ನಮ್ಮನ್ನು ಸಮನಾಗಿ ಬೆಳೆಸಿದ್ದಾರೆ. ಜನರು ಕಂಪೇರ್ ಮಾಡುತ್ತಾರೆ ಆದರೆ ನಮಗೆ ಏನೂ ಅನಿಸುವುದಿಲ್ಲ' ಎಂದಿದ್ದಾರೆ ಟ್ವಿನ್ಸ್ ಸಿಸ್ಟರ್ಸ್.