ಬ್ಯಾಕ್ ಟು ಬ್ಯಾಕ್ ಪ್ರ್ಯಾಂಕ್ ಮಾಡಿ ಜೈಲು ಸೇರಿದ ರಾಕೇಶ್. ಸಹಾಯ ಪಡೆದ ಆರ್ಯವರ್ಧನ್ ಕೂಡ ಕೈ ಕೊಟ್ರಾ?
ಕಲರ್ಸ್ ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಈಗೀಗ ರೋಚಕವಾಗುತ್ತಿದೆ. ಪ್ರವೀಣರು ಮತ್ತು ನವೀನರು ಎನ್ನುವುದನ್ನೂ ಲೆಕ್ಕ ಮಾಡದೆ ಟಾಸ್ಕ್ ಮಾಡುತ್ತಿದ್ದಾರೆ. ಆದರೆ ಸಣ್ಣ ಪುಟ್ಟ ತಪ್ಪು ಮಾಡಿ ಸಿಕ್ಕಿಹಾಕಿಕೊಂಡಾಗ ವ್ಯತ್ಯಾಸ ಶುರು ಮಾಡುತ್ತಾರೆ. ಒಟ್ಟು ಸೀಸನ್9ರ prankster ಪಟ್ಟ ರಾಕೇಶ್ ಅಡಿಗ ಮತ್ತು ಅನುಪಮಾ ಗೌಡಗೆ ಸೇರಿದೆ. ಶುಕ್ರವಾರ ಬಂತು ಅಂದ್ರೆ ಸಾಕು ಈ ವಾರದ ಅತ್ಯುತ್ತಮ ಯಾರು, ಕಳಪೆ ಯಾರು ಜೊತೆಗೆ ಮುಂದಿನ ವಾರದ ಕ್ಯಾಪ್ಟರ್ ಯಾರು ಎಂದು ತಿಳಿದು ಬರುತ್ತದೆ.
ಈ ವಾರ ಎರಡು ಗುಂಪುಗಳನ್ನು ಮಾಡಲಾಗಿತ್ತು. ಒಂದು ತಂಡಕ್ಕೆ ದೀಪಿಕಾ ದಾಸ್ ಲೀಡರ್ ಮತ್ತೊಂದು ತಂಡಕ್ಕೆ ಅನುಪಮಾ ಗೌಡ ಲೀಡರ್. ವಾರವಿಡೀ ಬಿಗ್ ಬಾಸ್ ನೀಡಿದ್ದ ಟಾಸ್ಕ್ ಗೆದ್ದು ಅನುಪಮಾ ಗೌಡ ತಂಡ ವಿಜಯಶಾಲಿ ಆಗುತ್ತಾರೆ ಹಾಗೂ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ. 8 ಮಂದಿ ಇರುವ ಈ ತಂಡ ನಾಲ್ಕರನ್ನು ಮಾತ್ರ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಮಾಡಬೇಕಿತ್ತು. ಇವರಲ್ಲಿ ಆರ್ಯವರ್ಧನ್, ದಿವ್ಯಾ ಉರುಡುಗ, ಅಮೂಲ್ಯ ಗೌಡ ಮತ್ತು ದರ್ಶ್ ಚಂದ್ರಪ್ಪ ಸ್ಪರ್ಧಿಸಿದ್ದರು. ಆರ್ಯವರ್ಧನ್ ಸೀಸನ್ 9ರ ಎರಡನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಈ ವಾರದ ಕಳಪೆ ಯಾರು, ಅತ್ಯುತ್ತಮ ಯಾರು?
ಎರಡನೇ ವಾರ ಅತ್ಯುತ್ತಮನಾಗಿ ಆರ್ಯವರ್ಧನ್ ಪಡೆದರೆ ಕಳಪೆ ಪಟ್ಟ ರಾಕೇಶ್ ಕೈ ಸೇರಿದೆ.
BBK9 ಅದೇ ಬಟ್ಟೆ ಹಾಕಿದ್ರೆ ಬಟ್ಟೆ ಇಲ್ವಾ ಅಂತಿದ್ರು ಜನ; ಬಟ್ಟೆ ಕಳುಹಿಸಿದವರಿಗೆ ಥ್ಯಾಂಕ್ಸ್ ಹೇಳಿದ ನವಾಜ್
ರಾಕೇಶ್ ನಾಮಿನೇಟ್ ಆಗಲು ಕಾರಣವೇನು?
- ರಾಕೇಶ್ ಮಾಡಿರುವ ಪ್ರ್ಯಾಂಕ್‌ನ ಬಿಗ್ ಬಾಸ್ ಕೂಡ ತಮಾಷೆ ರೀತಿ ತೆಗೆದುಕೊಂಡಿರಬಹುದು ಆದರೆ ಆರೋಗ್ಯ ವಿಚಾರದಲ್ಲಿ ಮಾಡಿರುವ ಪ್ರ್ಯಾಂಕ್ ತಪ್ಪು. ನೀವು ಮಾಡುತ್ತಿರುವ ಪ್ರ್ಯಾಂಕ್‌ನಿಂದ ಪ್ರತಿಯೊಬ್ಬರು ನೋಡುತ್ತಿರುವ ದೃಷ್ಠಿ ಬದಲಾಗುತ್ತದೆ. ಇದರಿಂದ ನಿಮ್ಮನ್ನು ನೋಡುತ್ತಿರುವ ರೀತಿ ತಪ್ಪಾಗುತ್ತಿದೆ ರಾಕೇಶ್ ತಮಾಷೆಯಲ್ಲಿ ಪ್ರ್ಯಾಂಕ್ ಮಾಡಬೇಕು ಸೀರಿಯಸ್ ಆಗಿ ಮಾಡಬಾರು.
- ರಾಕೇಶ್ ಆರೋಗ್ಯ ವಿಚಾರದಲ್ಲಿ ತಮಾಷೆ ಮಾಡಿದ್ದು ಬೇಸರ ಆಯ್ತು.
- ರಾಕೇಶ್ ನಿಮ್ಮನ್ನು ನೀವು ಕೆಳಗೆ ಹಾಕಿಕೊಂಡು ಬೇರೆ ಅವರನ್ನು ಬೆಳಸಬೇಡಿ. ಬೇರೆ ಅವರನ್ನು ನಗಿಸಬೇಕು ಅಂದ್ರೆ ಬೇರೆ ರೀತಿ ಪ್ರಯೋಗ ಮಾಡಿ ಪ್ರ್ಯಾಂಕ್ ಒಂದೇ ದಾರಿ ಅಲ್ಲ.
- ಪ್ರ್ಯಾಂಕ್ ಮಾಡಿ ಅದಕ್ಕೆ ಸೂತ್ರಧಾರನಾಗಿರುವ ರಾಕೇಶ್
- ರಾಕೇಶ್ ಪದೇ ಪದೇ ಪ್ರ್ಯಾಂಕ್‌ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಗೆಮ್‌ನಲ್ಲಿ ತೊಡಗಿಸಿಕೊಳ್ಳಬೇಕು.
- ರಾಕೇಶ್ ಚೆನ್ನಾಗಿ ಟಾಸ್ಕ್ ಮಾಡಿದ್ದರೂ ಪ್ರ್ಯಾಂಕ್ ನೆಗೆಟಿವ್ ಮಾರ್ಕ್ ಕೊಡುತ್ತಿದೆ. ಪದೇ ಪದೇ ಪ್ರ್ಯಾಂಕ್ ಮಾಡಿದರೆ ಅದು ನಾಟಕ ಅನಿಸುತ್ತದೆ.
BBK9; ಕಾಲ್ಬುಡಕ್ಕೆ ಕೊಚ್ಚೆ ಬಂತೆಂದು ಹೀಗೆ ಮಾತಾಡಬಾರದು, ಅರುಣ್ ಸಾಗರ್ ಆಕ್ರೋಶ
ಬಿಗ್ ಬಾಸ್ ಅಪ್ಡೇಟ್ಸ್:
ಪ್ರವೀಣರು:
ಅರುಣ್ ಸಾಗರ್
ದೀಪಿಕಾ ದಾಸ್
ದಿವ್ಯಾ ಉರುಡುಗ
ಪ್ರಶಾಂತ್ ಸಂಬರ್ಗಿ
ರೂಪೇಶ್ ಶೇಟ್ಟಿ
ಸಾನ್ಯಾ ಅಯ್ಯರ್
ಅನುಪಮಾ ಗೌಡ
ಆರ್ಯವರ್ಧನ್ ಗುರೂಜಿ
ರಾಕೇಶ್ ಅಡಿಗ
ನವೀನರು
ನಟಿ ಮಯೂರಿ
ನವಾಜ್
ದರ್ಶ್ ಚಂದ್ರಪ್ಪ
ನಟಿ ಅಮೂಲ್ಯ ಗೌಡ
ವಿನೋದ್ ಗೊಬ್ರಗಾಲ
ನಟಿ ನೇಹಾ ಗೌಡ
ಬೈಕರ್ ಐಶ್ವರ್ಯ ಪಿಸೆ
ರೂಪೇಶ್ ರಾಜಣ್ಣ
ನಟಿ ಕಾವ್ಯಶ್ರೀ ಗೌಡ
ಮೊದಲನೇ ಕ್ಯಾಪ್ಟನ್ ಆಗಿ ವಿನೋದ್ ಗೋಬ್ರಗಾಲ ಇಡೀ ವಾರವನ್ನು ಅದ್ಭುತವಾಗಿ ನಡೆಸಿಕೊಂಡು ಹೋಗಿದ್ದಾರೆ. ಮೊದಲ ವಾರ ಬಿಗ್ ಬಾಸ್ ಮನೆಯಿಂದ ಬೈಕರ್ ಐಶ್ವರ್ಯ ಪಿಸೆ ಕಡಿಮೆ ವೋಟ್‌ಗಳಿಂದ ಹೊರ ಬಂದಿದ್ದಾರೆ. ಈಗ ಎರಡನೇ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆಂದು ಕಾದು ನೋಡಬೇಕಿದೆ.
